ಮೈಸೂರು,ಡಿ.13(ವೈಡಿಎಸ್)- ಶ್ರವಣ ದೋಷ ಸಮಸ್ಯೆಯುಳ್ಳ ಮಕ್ಕಳ ನೆರವಿ ಗಾಗಿ ಸೇವಾ ಯುಕೆ ಸಂಸ್ಥೆ ಹಮ್ಮಿ ಕೊಂಡಿರುವ `ರಿಕ್ಷಾ ರನ್-2019’ ಯಾತ್ರೆ ಗುರುವಾರ ಮೈಸೂರು ಆಗಮಿಸಿತು. ಗುರುವಾರ ಸಂಜೆ ಮೈಸೂರಿಗೆ ಆಗ ಮಿಸಿದ ದಿವ್ಯಾಂಗ ಜನಸಮುದಾಯಕ್ಕೆ ನೆರವಾಗುವಂತೆ ಅರಿವು ಮೂಡಿಸುವ `ರಿಕ್ಷಾ ರನ್’ ಯಾತ್ರೆ ಅನ್ನು ಮೈಸೂರು-ನಂಜನಗೂಡು ರಸ್ತೆಯ ಉತ್ತನಹಳ್ಳಿ ವೃತ್ತದ ಬಳಿ ವಾದ್ಯಮೇಳದೊಂದಿಗೆ ಶಾಸಕ ಎಸ್.ಎ.ರಾಮದಾಸ್ ಮತ್ತು ಮೇಯರ್ ಪುಷ್ಪಲತಾ ಜಗನ್ನಾಥ್ ಸ್ವಾಗತಿಸಿದರು. ನಂತರ 30 ಆಟೋರಿಕ್ಷಾಗಳಲ್ಲಿ ಆಗ ಮಿಸಿದ 22 ಮಂದಿ ಮಹಿಳೆಯರು ಸೇರಿ ದಂತೆ…
ಮೈಸೂರಿನ ಫಿಲೋಮಿನಾ ಚರ್ಚ್‍ನಲ್ಲಿ ಡಿ.21, 22ರಂದು ಕ್ರಿಸ್ಮಸ್ ಕಾರ್ನಿವಲ್ ಸಂಭ್ರಮ
December 14, 2019ಮೈಸೂರು, ಡಿ.13(ಪಿಎಂ)- ಕ್ರಿಸ್ಮಸ್ ಹಬ್ಬದ ಅಂಗವಾಗಿ ಹ್ಯೂಮನ್ ವಿಂಗ್ಸ್ ಫೌಂಡೇಷನ್ ವತಿಯಿಂದ ಮೈಸೂರಿನ ಸೆಂಟ್ ಫಿಲೋಮಿನಾ ಚರ್ಚ್‍ನಲ್ಲಿ ಇದೇ ಪ್ರಥಮ ಬಾರಿಗೆ ಡಿ.21 ಮತ್ತು 22ರಂದು ಕ್ರಿಸ್ಮಸ್ ಕಾರ್ನಿವಲ್ ಹಾಗೂ ವೆಸ್ಟರ್ನ್ ಕಾರ್ಲೋಸ್ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕಾರ್ಯಕ್ರಮದ ಮುಖ್ಯ ವ್ಯವಸ್ಥಾಪಕ ರೆ.ಫಾ.ಸ್ಟ್ಯಾನೆ ಡಿ.ಅಲ್ಮೇಡಾ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರ ವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಎರಡೂ ದಿನಗಳು ಬೆಳಿಗ್ಗೆ 10ರಿಂದ ರಾತ್ರಿ 8ರವರೆಗೆ ಕಾರ್ಯಕ್ರಮಗಳು ನಡೆಯಲಿವೆ. ಚರ್ಚ್ ನಲ್ಲಿ ಈ ರೀತಿಯ…
ಮೈಸೂರಿನ ಏಕೈಕ `ನಿರಾಶ್ರಿತ ಮಹಿಳೆಯರ ಆಶ್ರಯ ತಾಣ’ಕ್ಕೆ ಬೀಗ!
December 14, 2019ಮೈಸೂರು, ಡಿ.13(ಎಂಟಿವೈ)- ಮೈಸೂರಿನ ದೇವರಾಜ ಮೊಹಲ್ಲಾದ ಬಿಡಾರಂ ಕೃಷ್ಣಪ್ಪ ರಸ್ತೆಯ ಗಾಡಿಚೌಕದಲ್ಲಿ ಕಳೆದ ಎಂಟು ವರ್ಷಗಳ ಹಿಂದೆ ನಗರ ಪಾಲಿಕೆ ಆರಂಭಿಸಿದ್ದ `ನಿರಾಶ್ರಿತ ಮಹಿಳೆಯರ ಆಶ್ರಯ ತಾಣ’ವನ್ನು ಈಗ ಶಾಶ್ವತವಾಗಿ ಮುಚ್ಚಲಾಗಿದೆ. ಒಂದೆಡೆ ನಿರಾಶ್ರಿತ ಮಹಿಳೆಯರ ಸಂಖ್ಯೆ ಇಳಿಮುಖವಾಗಿದ್ದುದು, ಇನ್ನೊಂದೆಡೆ ನಿರ್ವಹಣೆ ವೆಚ್ಚ ಹೆಚ್ಚಾಗಿದ್ದರಿಂದ ನಿರಾಶ್ರಿತ ಮಹಿಳೆಯರ ಆಶ್ರಯ ತಾಣಕ್ಕೆ ಬೀಗ ಹಾಕಲಾಗಿದೆ. ಪ್ರಸ್ತುತ ಇಲ್ಲಿದ್ದ ಇಬ್ಬರು ಮಹಿಳೆಯರನ್ನು ವಿಜಯನಗರ ದಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಹಿಳೆಯರ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಆ ಮೂಲಕ…
ಇಂದಿನಿಂದ ಸುತ್ತೂರಿನಲ್ಲಿ ಕೃಷಿ ಸಂಶೋಧನೆ, ಅಭಿವೃದ್ಧಿ ವಿಸ್ತರಣೆ ಕುರಿತ ಅಂತಾರಾಷ್ಟ್ರೀಯ ಸಮಾವೇಶ
December 14, 2019ಮೈಸೂರು,ಡಿ.13(ಪಿಎಂ)-ಸುತ್ತೂರಿನ ಕೃಷಿ ವಿಜ್ಞಾನ ಕೇಂದ್ರ (ಕೆವಿಕೆ), ಬೆಂಗಳೂರಿನ ಭಾರತೀಯ ಕೃಷಿ ಅನುಸಂಧಾನ ಪರಿಷತ್ತು (ಐಸಿಎಆರ್-ಅಟಾರಿ), ಕೊಯಮ ತೂರಿನ ಕೃಷಿ ವಿಶ್ವವಿದ್ಯಾನಿಲಯದ ವಿಸ್ತರಣಾ ಶಿಕ್ಷಣ ಸಂಘದ (ಇಇಎಸ್) ಸಂಯುಕ್ತಾಶ್ರಯದಲ್ಲಿ ಡಿ.14ರಿಂದ 16ರವರೆಗೆ `ಕೃಷಿ ಸಂಶೋಧನೆ ಮತ್ತು ಅಭಿವೃದ್ಧಿ ವಿಸ್ತರಣೆ’ ಕುರಿತಂತೆ ಸುತ್ತೂರಿನಲ್ಲಿ ಮೂರು ದಿನಗಳ ಅಂತಾರಾಷ್ಟ್ರೀಯ ಸಮಾವೇಶ ಏರ್ಪಡಿಸಲಾಗಿದೆ ಎಂದು ಕೆವಿಕೆ ಮುಖ್ಯಸ್ಥೆ ಡಾ.ಅರುಣ್‍ಬಾಲಮಟ್ಟಿ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುತ್ತೂರಿನ ಕೆವಿಕೆ ಭಾರತ ಸರ್ಕಾರದಿಂದ (ಐಸಿಎಆರ್) 1994ರಲ್ಲಿ ಮಂಜೂರಾಗಿದ್ದು, ಇದೀಗ…
ವಿಶೇಷಚೇತನರಿಗೆ ಅವರ ಅಗತ್ಯಗಳನ್ನು ಸಮರ್ಪಕವಾಗಿ ಕಲ್ಪಿಸಿದರೆ ಪ್ರಜಾಪ್ರಭುತ್ವಕ್ಕೆ ಅರ್ಥ
December 14, 2019ಮೈಸೂರು, ಡಿ.13(ಪಿಎಂ)- ವಿಶೇಷಚೇತನರಿಗೆ ಅವರ ಅಗತ್ಯತೆಗಳನ್ನು ಸಮರ್ಪಕವಾಗಿ ಕಲ್ಪಿಸಿದರೆ ಮಾತ್ರ ಪ್ರಜಾಪ್ರಭುತ್ವ ನಿಜವಾಗಿಯೂ ಅರ್ಥಪೂರ್ಣ ವಾಗುತ್ತದೆ ಎಂದು ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಇಲಾಖೆಯ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಡಿ.ಜೆ.ಮಮತಾ ಅಭಿಪ್ರಾಯಪಟ್ಟರು. ಮೈಸೂರಿನ ಜೆಎಸ್‍ಎಸ್ ಆಸ್ಪತ್ರೆಯ ಶ್ರೀ ರಾಜೇಂದ್ರ ಸಭಾಂಗಣದಲ್ಲಿ ಜೆಎಸ್‍ಎಸ್ ಕಾಲೇಜ್ ಆಫ್ ಫಿಜಿ ಯೋಥೆರಪಿ ಮತ್ತು ಜೆಎಸ್‍ಎಸ್ ಫಿಜಿಕಲ್ ಮೆಡಿಷನ್ ಅಂಡ್ ರಿಯಾಬಿಲೇಟೆಷನ್ ಸೆಂಟರ್ (ಜೆಎಸ್‍ಎಸ್- ಪಿಎಂಆರ್‍ಸಿ) ವತಿಯಿಂದ ಶುಕ್ರವಾರ ಹಮ್ಮಿ ಕೊಂಡಿದ್ದ ವಿಶ್ವ ಅಂಗವಿಕಲರ ದಿನ ಹಾಗೂ ಜೆಎಸ್‍ಎಸ್-ಪಿಎಂಆರ್‍ಸಿ 2ನೇ ವಾರ್ಷಿಕೋತ್ಸವ…
ಹದಿಹರೆಯ ಸಮಸ್ಯಾಪೂರ್ಣ ವಯಸ್ಸು: ಪ್ರೊ. ಸೋಮಣ್ಣ
December 14, 2019ಮೈಸೂರು, ಡಿ.13(ಎಂಟಿವೈ)- `ಸಮಸ್ಯಾಪೂರ್ಣ ವಯಸ್ಸು’ ಎಂದು ಕರೆಯುವ ಹದಿಹರೆಯದಲ್ಲಿ ಎಚ್ಚರಿಕೆಯಿಂದ ಇರುವ ಅಗತ್ಯವಿದೆ ಎಂದು ಮನೋ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಪ್ರೊ. ಸೋಮಣ್ಣ ಕಿವಿಮಾತು ಹೇಳಿದ್ದಾರೆ. ಮೈಸೂರು ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಪಿ.ಜಿ. ಬ್ಲಾಕ್‍ನಲ್ಲಿ ಜಿಲ್ಲಾ ಪಂಚಾ ಯಿತಿ, ಆಯುಷ್ ಇಲಾಖೆ ಹಾಗೂ ಕಾಲೇಜಿನ ಮನೋವಿಜ್ಞಾನ ವಿಭಾಗದ ಸಹಯೋಗ ದೊಂದಿಗೆ ಶುಕ್ರವಾರ ‘ಹದಿ ಹರೆಯದ ಸಮಸ್ಯೆಗಳ ನಿವಾರಣೆ ಮತ್ತು ಮನೋಲ್ಲಾಸದ ಮಾರ್ಗಗಳು’ ವಿಷಯದ ಕಾರ್ಯಾಗಾರ ವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಎಳೆತನ ಹಾಗೂ ಹಿರಿಯತನದ ನಡುವಿನ…
3 ನಿವೇಶನ ಪಡೆದ ವ್ಯಕ್ತಿಗೆ ಮುಡಾ ನೋಟಿಸ್
December 14, 2019ಮೈಸೂರು, ಡಿ.14(ಆರ್‍ಕೆ)- ವಾಸ್ತವಾಂಶ ಮರೆಮಾಚಿ ಕಾನೂನು ಬಾಹಿರವಾಗಿ 3 ನಿವೇಶನ ಪಡೆದಿರುವ ಎಂ.ಎನ್.ರಾಮಕೃಷ್ಣಗೆ ಮುಡಾ ವಿಶೇಷ ತಹಶೀಲ್ದಾರ್ ನೋಟಿಸ್ ಜಾರಿ ಮಾಡಿದ್ದಾರೆ. ನಿವೇಶನಕ್ಕೆ ಅರ್ಜಿ ಸಲ್ಲಿಸುವಾಗ `ಕರ್ನಾಟಕದ ಯಾವುದೇ ನಗರಾಭಿವೃದ್ಧಿ ಪ್ರಾಧಿಕಾರದಲ್ಲಾಗಲೀ ಅಥವಾ ಸಂಘ-ಸಂಸ್ಥೆಗಳಿಂದಾಗಲೀ ನಿವೇಶನ/ಮನೆಯನ್ನು ಪಡೆದುಕೊಂಡಿರುವುದಿಲ್ಲ ಎಂದು ಪ್ರಮಾಣ ಪತ್ರ ಸಲ್ಲಿಸಿ ಒಂದಕ್ಕಿಂತ ಹೆಚ್ಚು ನಿವೇಶನಗಳನ್ನು ಪಡೆದುಕೊಂಡಿರುವುದರಿಂದ ನಿವೇಶನ ಹಂಚಿಕೆ ನಿಯಮದಡಿ ಕಾನೂನು ಬಾಹಿರವಾಗಿದೆ ಎಂದು ನೋಟಿಸ್‍ನಲ್ಲಿ ತಿಳಿಸಲಾಗಿದೆ. ಪಡೆದುಕೊಂಡಿರುವ ನಿವೇಶನಗಳ ಮಂಜೂರಾತಿಯನ್ನು ಏಕೆ ರದ್ದುಗೊಳಿಸಬಾರದು ಹಾಗೂ ನಿಮ್ಮ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳುವ…
ಪ್ರತಿ ಪಂಚಾಯತ್ ವ್ಯಾಪ್ತಿಯಲ್ಲಿ ಶೇ.40 ರಿಯಾಯ್ತಿ ದರದ ಔಷಧಿ ವ್ಯಾಪಾರ ಮಳಿಗೆ
December 13, 2019ಬೆಂಗಳೂರು, ಡಿ.12(ಕೆಎಂಶಿ)- ಗ್ರಾಮೀಣ ಭಾಗದಲ್ಲಿ ಬಡ ಮತ್ತು ಮಧ್ಯಮ ವರ್ಗದ ರೋಗಿಗಳಿಗೆ ಶೇ.40ರಷ್ಟು ರಿಯಾ ಯಿತಿ ದರದಲ್ಲಿ ಔಷಧಿಗಳನ್ನು ಪೂರೈಸುವ ಔಷಧಿ ಅಂಗಡಿ ಗಳನ್ನು ಪ್ರತಿ ಪಂಚಾಯತ್ ವ್ಯಾಪ್ತಿಯಲ್ಲಿ ಪ್ರಾರಂಭಿಸುವ ಮಹತ್ವದ ತೀರ್ಮಾನವನ್ನು ರಾಜ್ಯ ಸರ್ಕಾರ ಕೈಗೊಂಡಿದೆ. ಜೆನರಿಕ್ ಔಷಧಿಗೂ, ಈ ಮಳಿಗೆಗಳಿಗೂ ಸಂಬಂಧ ವಿಲ್ಲ. ನೇರವಾಗಿ ಔಷಧಿ ಕಂಪನಿಗಳಿಂದ ಔಷಧಿ ಖರೀ ದಿಸಿ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುವುದು. ಮೊದಲ ಹಂತದಲ್ಲಿ ಹೋಬಳಿ ಕೇಂದ್ರಗಳಲ್ಲೂ ನಂತರ ರಾಜ್ಯದ 6030 ಪಂಚಾಯಿತಿಗಳಲ್ಲೂ, ಮಳಿಗೆಗಳನ್ನು ಪ್ರಾರಂಭಿಸಲು ತೀರ್ಮಾನಿಸಿದೆ. ಪ್ರಾಯೋಗಿಕವಾಗಿ…
ಪರಿಶಿಷ್ಟ ಪಂಗಡಕ್ಕೆ ಪರಿವಾರ, ತಳವಾರ ಸಮುದಾಯಗಳ ಸೇರ್ಪಡೆ ವಿಧೇಯಕಕ್ಕೆ ರಾಜ್ಯಸಭೆ ಅಂಗೀಕಾರ
December 13, 2019ನವದೆಹಲಿ, ಡಿ.12-ಕಳೆದ ಮೂರೂ ವರೆ ದಶಕಕ್ಕೂ ಅಧಿಕ ಕಾಲದಿಂದ ಪರಿ ವಾರ ಮತ್ತು ತಳವಾರ ಸಮುದಾಯ ಗಳು ನಡೆಸುತ್ತಿದ್ದ ಹೋರಾಟಕ್ಕೆ ಫಲ ದೊರಕುವ ಕಾಲ ಸನ್ನಿಹಿತವಾಗಿದೆ. ಇಂದು ರಾಜ್ಯಸಭೆಯಲ್ಲಿ ಪರಿವಾರ ಮತ್ತು ತಳವಾರ ಸಮುದಾಯಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಸಂಬಂ ಧಿತ ವಿಧೇಯಕ ಅಂಗೀಕಾರವಾಗಿದೆ. ಇದರೊಂದಿಗೆ ಮೈಸೂರು, ಚಾಮರಾಜ ನಗರ, ಮಂಡ್ಯ, ಹಾಸನ ಸೇರಿದಂತೆ ರಾಜ್ಯ ದಾದ್ಯಂತ ಇರುವ ಸುಮಾರು 20 ಲಕ್ಷ ಪರಿವಾರ ಮತ್ತು ತಳವಾರ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಸವಲತ್ತು ಲಭಿಸುವ ದಿನಗಳು ಸಮೀಪಿಸಿವೆ….
ಬೆಂಬಲ ಬೆಲೆಯಡಿ ಭತ್ತ, ರಾಗಿ, ಜೋಳ ಖರೀದಿ
December 13, 2019ಬೆಂಗಳೂರು, ಡಿ.12(ಕೆಎಂಶಿ)- ಮಧ್ಯ ವರ್ತಿಗಳ ಹಾವಳಿಯಿಂದ ರೈತರನ್ನು ಪಾರು ಮಾಡಲು ಭತ್ತ, ರಾಗಿ ಹಾಗೂ ಜೋಳ ವನ್ನು ಬೆಂಬಲ ಬೆಲೆಯಡಿ ಖರೀದಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಂಪು ಟದ ಉಪ ಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಂಡಿದ್ದು, ಸಾಮಾನ್ಯ ಭತ್ತ ಪ್ರತಿ ಕ್ವಿಂಟಾಲ್‍ಗೆ 1815 ರೂ., ಎ-ಗ್ರೇಡ್ ಭತ್ತಕ್ಕೆ 1835 ರೂ., ನಿಗದಿ ಮಾಡಿದೆ. ರಾಗಿ ಪ್ರತಿ ಕ್ವಿಂಟಾಲ್‍ಗೆ 3150 ರೂ. ದರದಲ್ಲಿ ಖರೀದಿ ಮಾಡಲು ತೀರ್ಮಾನಿಸಿದ್ದರೆ, ಬಿಳಿ…










