ಮೈಸೂರು,ಡಿ.15(ಎಂಟಿವೈ)- `ಸಮಸ್ಯಾಪೂರ್ಣ ವಯಸ್ಸು’ ಎಂದು ಕರೆಯುವ ಹದಿಹರೆಯದಲ್ಲಿ ಎಚ್ಚರಿಕೆಯಿಂದ ಇರುವ ಅಗತ್ಯವಿದೆ ಎಂದು ಮನೋ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಪ್ರೊ. ಸೋಮಣ್ಣ ಕಿವಿಮಾತು ಹೇಳಿದ್ದಾರೆ. ಮೈಸೂರು ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಪಿ.ಜಿ. ಬ್ಲಾಕ್‍ನಲ್ಲಿ ಜಿಲ್ಲಾ ಪಂಚಾ ಯಿತಿ, ಆಯುಷ್ ಇಲಾಖೆ ಹಾಗೂ ಕಾಲೇಜಿನ ಮನೋವಿಜ್ಞಾನ ವಿಭಾಗದ ಸಹಯೋಗ ದೊಂದಿಗೆ ಶುಕ್ರವಾರ ‘ಹದಿ ಹರೆಯದ ಸಮಸ್ಯೆಗಳ ನಿವಾರಣೆ ಮತ್ತು ಮನೋಲ್ಲಾಸದ ಮಾರ್ಗಗಳು’ ವಿಷಯದ ಕಾರ್ಯಾಗಾರ ವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಎಳೆತನ ಹಾಗೂ ಹಿರಿಯತನದ ನಡುವಿನ ವಯಸ್ಸು…
ಶ್ರವಣದೋಷವುಳ್ಳ ಮಕ್ಕಳ ಸರ್ಕಾರಿ ಶಾಲೆಯಲ್ಲಿ ಹಳೆಯ ವಿದ್ಯಾರ್ಥಿಗಳ ಸಂಭ್ರಮ
December 16, 2019ಮೈಸೂರು,ಡಿ.15(ಆರ್‍ಕೆಬಿ)- ಮೈಸೂ ರಿನ ತಿಲಕ್‍ನಗರದ ಶ್ರವಣದೋಷವುಳ್ಳ ಮಕ್ಕಳ ಸರ್ಕಾರಿ ಶಾಲೆಯ ಆವರಣದಲ್ಲಿ ಭಾನುವಾರ ಶಾಲೆಯ ಹಳೆಯ ವಿದ್ಯಾರ್ಥಿ ಗಳು ಸಮ್ಮಿಲನಗೊಂಡು ಸಂಭ್ರಮಿಸಿದರು. ಅಪರೂಪಕ್ಕೆ ಒಂದೆಡೆ ಸೇರಿದ ತಮ್ಮ ಶಿಕ್ಷಕರು, ಗೆಳೆಯ, ಗೆಳತಿಯರನ್ನು ಕಂಡು ಹರ್ಷಗೊಂಡರು. ಸಂಕೇತ ಭಾಷೆಯಲ್ಲಿ ಪರಸ್ಪರ ಉಭಯಕುಶಲೋಪರಿ ನಡೆಸಿ ದರು. ಹತ್ತಾರು ವರ್ಷಗಳಿಗಿಂತ ಮುಂಚೆ ತಮಗೆ ಪಾಠ ಹೇಳಿಕೊಟ್ಟ ಗುರುಗಳನ್ನು ಕಂಡು ಕಾಲಿಗೆರಗಿ ನಮಸ್ಕರಿಸಿದರು. ಶ್ರವಣದೋಷವುಳ್ಳ ಮಕ್ಕಳ ಸರ್ಕಾರಿ ಶಾಲೆಯ ಹಳೆಯ ವಿದ್ಯಾರ್ಥಿ ಗಳ ಸಂಘ ಆಯೋಜಿಸಿದ್ದ ಹಳೆಯ ವಿದ್ಯಾರ್ಥಿ ಗಳ ಸಮಾಗಮ- ಸಮ್ಮಿಲನ…
ನಾರಾಯಣ ಮುಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸಮಗ್ರ ತೂಕ ಇಳಿಸುವಿಕೆಯ ಕ್ಲಿನಿಕ್ ಆರಂಭ
December 16, 2019ಮೈಸೂರು, ಡಿ. 15- ವಿಶ್ವ ಬೊಜ್ಜು ಒಕ್ಕೂಟದ ವರದಿಯ ಪ್ರಕಾರ, ಸ್ಥೂಲಕಾಯ ದಿಂದ ಬಳಲುತ್ತಿರುವ ಜನರ ವಿಷಯದಲ್ಲಿ ಭಾರತವು ವಿಶ್ವದಲ್ಲೇ ಎರಡನೇಸ್ಥಾನದಲ್ಲಿದೆ. ನಮ್ಮ ದೇಶದಲ್ಲಿ ಜನರು ಅಸ್ವಸ್ಥಗೊಳ್ಳಲು ಸ್ಥೂಲಕಾಯತೆ ಮುಖ್ಯ ಕಾರಣವಾಗಿದೆ. ಈ ಸಮಸ್ಯೆಗೆ ಸೂಕ್ತವಾದ ಚಿಕಿತ್ಸೆ ಹಾಗೂ ಪರಿಹಾರವಿದ್ದರೂ ಸಹ ಜನರಲ್ಲಿ ಅರಿವಿನ ಸಮಸ್ಯೆ ಮತ್ತು ಗುಣಮಟ್ಟದ ವೈದ್ಯಕೀಯ ಸೇವೆಗಳಿಗೆ ಸರಿಯಾದ ಮಾರ್ಗಗಳು ಸಿಗದ ಕಾರಣದಿಂದಾಗಿ ಹಲವಾರು ಪ್ರಕರಣಗಳು ಸೂಕ್ತ ವೈದ್ಯಕೀಯ ರೋಗ ನಿರ್ಣಯ ಕೈಗೊಳ್ಳಲಾಗದೆ ಚಿಕಿತ್ಸೆಗಳು ಬಾಕಿ ಉಳಿದೆವೆ. ಈ ಅಂತರವನ್ನು ನಿವಾರಿಸುವ ಪ್ರಯತ್ನ…
ಎಸ್‍ಎಸ್‍ಎಲ್‍ಸಿ ಫಲಿತಾಂಶ ಸುಧಾರಣೆಗೆ ಸಂಕಲ್ಪ
December 16, 2019ಮೈಸೂರು, ಡಿ.15(ಎಸ್‍ಬಿಡಿ)- ಎಸ್‍ಎಸ್‍ಎಲ್‍ಸಿ ಪರೀಕ್ಷೆ ಫಲಿತಾಂಶ ಸುಧಾರಣೆಗೆ ಮೈಸೂರು ಜಿಲ್ಲೆಯಲ್ಲಿ ವಿಶಿಷ್ಟ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಕಳೆದ 2018-19ನೇ ಸಾಲಿನಲ್ಲಿ ಮೈಸೂರು ಜಿಲ್ಲೆ 17ನೇ ಸ್ಥಾನಕ್ಕೆ ಕುಸಿದಿತ್ತು. ಪ್ರಸಕ್ತ 2019-20ನೇ ಸಾಲಿನಲ್ಲಿ ಟಾಪ್ 10ರೊಳಗೆ ಸ್ಥಾನ ಪಡೆಯಬೇಕೆಂಬ ಗುರಿ ಯೊಂದಿಗೆ ಇದೇ ಮೊದಲ ಬಾರಿಗೆ `ಆಕಾಶವಾಣಿ ಫೋನ್ ಇನ್’ ಸೇರಿದಂತೆ 20 ಅಂಶಗಳ ಕಾರ್ಯಕ್ರಮ ರೂಪಿಸಲಾಗಿದ್ದು, ಈ ನಿಟ್ಟಿನಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು(ಡಿಡಿಪಿಐ), ಶಿಕ್ಷಕರಿಗೆ ಸೂಚನೆ ನೀಡಿದ್ದಾರೆ. ಡಿ.17ರಿಂದ ಫೋನ್ ಇನ್:…
ಅಸ್ಸಾಂನಿಂದ ಮೈಸೂರು ಮೃಗಾಲಯಕ್ಕೆ ಕಪ್ಪು ಚಿರತೆ, ಹೆಣ್ಣು ಘೇಂಡಾಮೃಗ, ಹೂಲಾಕ್ ಗಿಬ್ಬನ್ ಆಗಮನ
December 16, 2019ಮೈಸೂರು,ಡಿ.15(ಎಂಟಿವೈ)-ಅಸ್ಸಾಂನ ಗುವಾಹಟಿಗೆ ಜಿರಾಫೆ ಯೊಂದನ್ನು ಕೊಂಡೊಯ್ದು ದಾಖಲೆ ನಿರ್ಮಿಸಿದ್ದ ಮೈಸೂರು ಮೃಗಾಲಯಕ್ಕೆ ಇಂದು ಗುವಾಹಟಿ ಮೃಗಾಲಯದಿಂದ ಒಂದು ಹೆಣ್ಣು ಘೇಂಡಾಮೃಗ, ಹೂಲಾಕ್ ಗಿಬ್ಬನ್ ಜೋಡಿ ಹಾಗೂ ಒಂದು ಕಪ್ಪು ಹೆಣ್ಣು ಚಿರತೆಯನ್ನು ತರಲಾಗಿದೆ. ಪ್ರಾಣಿ ವಿನಿಮಯ ಯೋಜನೆಯಡಿ 14 ತಿಂಗಳ ಚಾಮರಾಜೇಂದ್ರ ಹೆಸರಿನ ಜಿರಾಫೆಯನ್ನು 3200 ಕಿ.ಮೀ. ರಸ್ತೆ ಮಾರ್ಗ ದಲ್ಲಿ ಟ್ರಕ್‍ನಲ್ಲಿ ಕೊಂಡೊಯ್ದು ದಾಖಲೆ ಬರೆದಿದ್ದ ಮೃಗಾಲಯಕ್ಕೆ ಪರ್ಯಾಯ ವಾಗಿ ಗುವಾಹಟಿ ಮೃಗಾಲಯ ನಾಲ್ಕು ಪ್ರಾಣಿಗಳನ್ನು ನೀಡಿದೆ. 8 ವರ್ಷದ ದೀಪು (ಗಂಡು ಗಿಬ್ಬನ್), ಮುನ್ನಿ…
ಬಿಎಸ್‍ವೈ ಮುಂದೆ ಸವಾಲುಗಳ ಸಾಲು ಸಾಲು…
December 15, 2019ಸಂಪುಟದಿಂದ ಯಾರನ್ನು ಕೈಬಿಡುವುದು, ಯಾರ ‘ಕೈ’ ಹಿಡಿದು ಸಂಪುಟಕ್ಕೆ ಸೇರಿಸಿಕೊಳ್ಳುವುದು ಎಂಬುದೆಲ್ಲ ಯಕ್ಷಪ್ರಶ್ನೆಯಂತೆ ಕಾಣುತ್ತಿದೆ. ಸಚಿವರಾಗುವ ಕನಸು ಕಾಣುತ್ತಿರುವವರಿಗೆ ನಿಗಮ- ಮಂಡಳಿಗಳ ಅಧ್ಯಕ್ಷ ಸ್ಥಾನ ಬೇಕಾಗಿಲ್ಲ. ಗೂಟದ ಕಾರು, ವಿಧಾನಸೌಧದ ಕೊಠಡಿ ಬೇಕೇಬೇಕು. ಈಗ ವಿಧಾನಸೌಧದಲ್ಲಿ ಕೊಠಡಿಗಳೂ ಖಾಲಿ ಇಲ್ಲ. ಏಕೆಂದರೆ ಎಲ್ಲವನ್ನೂ ಮುಖ್ಯಮಂತ್ರಿಗಳ ಸಲಹೆಗಾರರೇ ಆಕ್ರಮಿಸಿಕೊಂಡಿದ್ದಾರೆ. ಎಲ್ಲರಿಗೂ ಸಚಿವ ಸ್ಥಾನ ಕೊಡಲಾಗದಿದ್ದರೆ, ಪ್ರತಿ ಸಚಿವರಿಗೆ ಒಬ್ಬೊಬ್ಬ ಸಲಹೆಗಾರರನ್ನು ನೇಮಿಸಿ ಅವರಿಗೂ ಸಚಿವ ಸ್ಥಾನಮಾನ ಕೊಟ್ಟರೂ ಆಶ್ಚರ್ಯವಿಲ್ಲ. ಹಿಂದಿನ ಸರ್ಕಾರದಲ್ಲಿ ಈ ಪ್ರಯೋಗ ಸ್ವಲ್ಪಮಟ್ಟಿಗೆ ನಡೆದಿದೆ. ಒಟ್ಟಾರೆ…
ಶೇ.25 ಆಹಾರ ಉತ್ಪನ್ನ ವ್ಯರ್ಥ; ಸಂಸ್ಕರಣೆಗೆ ಆದ್ಯತೆ ಅಗತ್ಯ
December 15, 2019ಮೈಸೂರು, ಡಿ. 14(ಎಸ್‍ಬಿಡಿ)- ಆಹಾರ ಉತ್ಪನ್ನ ಸಂಸ್ಕರಣೆಗೆ ಆದ್ಯತೆ ನೀಡುವ ಅಗತ್ಯವಿದೆ ಎಂದು ಇಂಡಿಯನ್ ಇನ್ಸ್‍ಟಿ ಟ್ಯೂಟ್ ಆಫ್ ಸೈನ್ಸ್‍ನ ಸಾಲಿಡ್ ಸ್ಟೇಟ್ ಅಂಡ್ ಸ್ಟ್ರಕ್ಚರಲ್ ಕೆಮಿಸ್ಟ್ರಿ ವಿಭಾಗದ ಪೆÇ್ರ. ಗೌತಮ್ ಆರ್.ದೇಸಿರಾಜು ಗಮನ ಸೆಳೆದರು. ಮೈಸೂರಿನ ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ (ಸಿಎಫ್‍ಟಿಆರ್‍ಐ) ವತಿಯಿಂದ ಆಯೋಜಿಸಿರುವ ಮೂರು ದಿನಗಳ 7ನೇ ಜೈವಿಕ ಸಂಸ್ಕರಣ ಸಮ್ಮೇ ಳನದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಭಾರತದಲ್ಲಿ ಆಹಾರ ಸಂಸ್ಕರಣೆ ವಿಚಾರ ದಲ್ಲಿ ನಿರ್ಲಕ್ಷ್ಯ ವಹಿಸಲಾಗಿದೆ. ಪರಿಣಾಮ ಶೇ….
`ವೃತ್ತಿ ರಂಗಭೂಮಿ ಸಾಹಿತ್ಯ’ ಸಮಗ್ರ ಕೃತಿಗಾಗಿ ತಜ್ಞರ ಸಮಿತಿ ರಚನೆ
December 15, 2019ಮೈಸೂರು,ಡಿ.14(ಎಸ್‍ಪಿಎನ್)- ಕನ್ನಡ ಪುಸ್ತಕ ಪ್ರಾಧಿಕಾರ ವತಿಯಿಂದ `ವೃತ್ತಿ ರಂಗಭೂಮಿ ಸಾಹಿತ್ಯ’ದ ಸಮಗ್ರ ಕೃತಿಯನ್ನು ಹೊರತರಲು ತಜ್ಞರ ಸಮಿತಿ ರಚಿಸ ಲಾಗಿದೆ ಎಂದು ಅದರ ಅಧ್ಯಕ್ಷ ಡಾ.ಎಂ.ಎನ್.ನಂದೀಶ್ ಹಂಚೆ ತಿಳಿಸಿದರು. ಮೈಸೂರು ಕಲಾಮಂದಿರ ಆವರಣದ ಕಿರುರಂಗ ಮಂದಿರದಲ್ಲಿ `ಅನನ್ಯ ಪುಸ್ತಕಗಳು; ಪ್ರಕಾಶಕರು’ ಮತ್ತು `ಪರಸ್ವರ ಆರ್ಟ್ ಫೌಂಡೇಶನ್’ ಸಹಯೋಗದೊಂದಿಗೆ ಆಯೋಜಿಸಿದ್ದ `ದ ಪೇಯಿಂಗ್ ಗೆಸ್ಟ್’ ನಾಟಕ ಪ್ರದರ್ಶನ ಹಾಗೂ `ರಂಗೋತ್ರಿ’ ಕೃತಿ ಅನಾವರಣ ಕಾರ್ಯಕ್ರಮ ದಲ್ಲಿ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು. ವೃತ್ತಿ ರಂಗಭೂಮಿ ಸಾಹಿತ್ಯದ ಸಮಗ್ರ ಕೃತಿಯನ್ನು ಹಲವು…
ಬೀದಿಬದಿ ವ್ಯಾಪಾರಿಗಳಿಗಾಗಿ 29 ಸ್ಥಳ ಗುರುತಿಸಿದ ಪಾಲಿಕೆ
December 15, 2019ಮೈಸೂರು,ಡಿ.14(ವೈಡಿಎಸ್)-ನಗರದ ಬೀದಿಬದಿ ವ್ಯಾಪಾರಿಗಳಿಗೆ ಜೀವನೋ ಪಾಯ ಕಲ್ಪಿಸಲು ಮುಂದಾಗಿರುವ ಮೈಸೂರು ಮಹಾನಗರ ಪಾಲಿಕೆ, ಅದಕ್ಕಾಗಿ ನಗರದ 29 ಕಡೆ ವ್ಯಾಪಾರಿ ಸ್ಥಳಗಳನ್ನು ಗುರುತಿಸಿದೆ. ಕೇಂದ್ರ ಸರ್ಕಾರದ 2009, 2014, 2019ರ ಬೀದಿಬದಿ ವ್ಯಾಪಾರಿಗಳ ಕಾಯ್ದೆ ಪ್ರಕಾರ ಹಾಗೂ ಸುಪ್ರಿಂಕೋರ್ಟ್‍ನ ನಿರ್ದೇಶನಗಳ ಅನುಸಾರ ನಗರದ ಬೀದಿಬದಿ ವ್ಯಾಪಾರಿಗಳಿಗೆ ಜೀವನೋಪಾಯ ಕಲ್ಪಿಸಲು ಪಾಲಿಕೆಯು `ನಗರ ಜೀವನೋ ಪಾಯ ಸಮಿತಿ’ ರಚಿಸಿದೆ. ಈ ಸಮಿತಿಯು ಈಗಾಗಲೇ ನಗರಾದ್ಯಂತ 29 ವ್ಯಾಪಾರಿ ಸ್ಥಳಗಳು ಮತ್ತು 14 ವ್ಯಾಪಾರ ನಿರ್ಬಂಧಿತ ಸ್ಥಳಗಳನ್ನು ಗುರುತಿಸಿದೆ. ಈ…
ಮೂವರು ಸುಲಿಗೆಕೋರರ ಸೆರೆ; 3 ಬೈಕ್, ಬೆಳ್ಳಿ ಚೈನ್ ವಶ
December 15, 2019ಮೈಸೂರು,ಡಿ.14(ಎಸ್‍ಪಿಎನ್)-ನಿರ್ಜನ ಪ್ರದೇಶದಲ್ಲಿ ಓಡಾಡುವ ವ್ಯಕ್ತಿಗಳನ್ನು ಪರಿಚಯ ಮಾಡಿಕೊಂಡು ಸುಲಿಗೆ ಮಾಡುತ್ತಿದ್ದ ಮೂವರು ಸುಲಿಗೆಕೋರರನ್ನು ದೇವರಾಜ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಬಂಧಿತರಿಂದ ಮೂರು ಬೈಕ್ ಹಾಗೂ ಬೆಳ್ಳಿ ಚೈನ್ ವಶಪಡಿಸಿಕೊಂಡಿದ್ದಾರೆ. ಮೈಸೂರಿನ ವಿಜಯನಗರ 2ನೇ ಹಂತದ ನಿವಾಸಿ ಕಾರ್ತಿಕ್ ಅಲಿಯಾಸ್ ಕರಿಯ(23), ವಿನಾಯಕನಗರದ ನಿವಾಸಿ ಆನಂದ ಅಲಿಯಾಸ್ ನೇಪಾಳಿ(22), ಬೆಳವಾಡಿಯ ಅಮೃತೇಶ್ವರ ನಗರದ ನಿವಾಸಿ ಶಿವಕುಮಾರ್ ಅಲಿಯಾಸ್ ಶಿವಪ್ರಸಾದ್(19) ಬಂಧಿತರು. ವಿವರ:ಡಿ.4ರಂದು ಮಂಜುನಾಥ್ ಎಂಬುವವರು ಹೊಳೆನರಸೀಪುರಕ್ಕೆ ಹೋಗ ಲೆಂದು ಬೆಂಗಳೂರಿನಿಂದ ಮೈಸೂರಿಗೆ ರೈಲಿನಲ್ಲಿ ಬಂದಿದ್ದರು. ಹೊಳೆನರಸೀಪುರ ರೈಲು ಹೊರಡುವುದು…










