ಮೈಸೂರು, ಡಿ.1(ಆರ್‍ಕೆ)- ಅಪಘಾತ ಮಾಡಿ ಪರಾರಿ ಯಾಗುತ್ತಿದ್ದೀರೆಂದು ಧಮಕಿ ಹಾಕಿ ಬೆದರಿಸಿ ಸಂದಾನದ ನೆಪದಲ್ಲಿ ವಾಹನ ಸವಾರರಿಂದ ಹಣ ದೋಚುತ್ತಿದ್ದ ಜಮೀರ್ ಮತ್ತು ಜಮೀಲ್ ಅಹಮದ್ ಜೈಲಿನಿಂದ ಚಾಮೀನಿನ ಮೇಲೆ ಹೊರಬಂದ ನಂತರವೂ ಅದೇ ಚಾಳಿ ಮುಂದುವರಿಸಿದ್ದರು. ಈ ಹಿಂದೆ 2017ರ ನವೆಂಬರ್ 8ರಂದು ಮೈಸೂರಿನ ಕುವೆಂಪು ನಗರದ ವಿಶ್ವಮಾನವ ಜೋಡಿ ರಸ್ತೆಯಲ್ಲಿ ಕೆಫೆ ಬಿರಿಯಾನಿ ಹೋಟೆಲ್ ಮಾಲೀಕ ಶ್ರೀನಿವಾಸ್ ಅವರ ಕಾರನ್ನು ಅಡ್ಡಗಟ್ಟಿ ಅಪಘಾತ ಮಾಡಿ ನಿಲ್ಲಿಸದೇ ಬಂದಿದ್ದೀರೆಂದು ಬಾಯಿಗೆ ಬಂದಂತೆ ಮಾತನಾಡಿ ಚಿಕಿತ್ಸೆಗೆ ಹಣಕೊಡುವಂತೆ…
ವಿಚಾರಣೆಗೆ ತ್ವರಿತಗತಿ ನ್ಯಾಯಾಲಯ: ಸಿಎಂ ಕೆಸಿಆರ್
December 2, 2019ಹೈದರಾಬಾದ್, ಡಿ.1- ತೆಲಂಗಾಣದ ರಾಜಧಾನಿ ಹೈದರಾ ಬಾದ್‍ನ ಶಾನ್‍ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ 26 ವರ್ಷದ ಪಶು ವೈದ್ಯೆಯ ಸಾಮೂಹಿಕ ಅತ್ಯಾಚಾರ-ಹತ್ಯೆ ಪ್ರಕರಣದ ವಿಚಾರಣೆಗೆ `ತ್ವರಿತಗತಿ ನ್ಯಾಯಾ ಲಯ’ ಸ್ಥಾಪಿಸಲಾಗುವುದು ಎಂದು ತೆಲಂ ಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಭಾನುವಾರ ಪ್ರಕಟಿಸಿದ್ದಾರೆ. ಪಶುವೈದ್ಯೆಯ ಅತ್ಯಾಚಾರ-ಹತ್ಯೆ ಕೃತ್ಯ ಬಲು ಅಮಾನವೀಯ, ಅಷ್ಟೇ ಭಯಾನಕ ಎಂದು ಮುಖ್ಯಮಂತ್ರಿ ಕೆಸಿಆರ್ ಪ್ರತಿಕ್ರಿಯಿಸಿದ್ದಾರೆ. ನ.27ರ ಬುಧವಾರ ರಾತ್ರಿ ಘಟನೆ ನಡೆದ (ನಾಲ್ಕು ದಿನಗಳ) ಬಳಿಕ ಇದೇ ಮೊದಲ ಬಾರಿಗೆ ಅವರು ಪ್ರತಿಕ್ರಿಯೆ…
ಇಂದು ಶ್ರೀ ಸುಬ್ರಹ್ಮಣ್ಯ ಷಷ್ಠಿ
December 2, 2019ಮೈಸೂರು, ಡಿ.1(ಆರ್‍ಕೆ)- ನಾಳೆ (ಡಿ.2) ಶ್ರೀ ಸುಬ್ರಹ್ಮಣ್ಯ ಷಷ್ಠಿ ಮಹೋತ್ಸವ ನಡೆ ಯಲಿದೆ. ಷಷ್ಠಿ ಅಂಗ ವಾಗಿ ಸಿದ್ದಲಿಂಗಪುರ ಬಳಿ ಬೆಂಗಳೂರು-ಮೈಸೂರು ಹೆದ್ದಾರಿ ಯಲ್ಲಿರುವ ಶ್ರೀ ಸುಬ್ರ ಹ್ಮಣ್ಯೇಶ್ವರ ದೇವ ಸ್ಥಾನ ದಲ್ಲಿ ವಿಶೇಷ ಪೂಜಾ ಕೈಂಕರ್ಯ ನಡೆಯಲಿದೆ. ಸೋಮವಾರ ಮುಂಜಾನೆ 4 ಗಂಟೆಯಿಂದ ದೇವರಿಗೆ ಅಭಿಷೇಕ, ಅರ್ಚನೆ, ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಲಿದೆ. ಸಾವಿ ರಾರು ಭಕ್ತರು ದೇವರ ದರ್ಶನಕ್ಕೆ ತೆರಳುವುದರಿಂದ ಅಲ್ಲಿ ಬ್ಯಾರಿಕೇಡ್ ಅಳವಡಿಸಿ ಸೂಕ್ತ ವ್ಯವಸ್ಥೆ ಮಾಡಿರುವ ಮೈಸೂರು ತಹಶೀಲ್ದಾರ್ ಟಿ.ರಮೇಶ…
ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್ ಆಗಿ ಕಾಂಗ್ರೆಸ್‍ನ ನಾನಾ ಪಟೋಲೆ ಅವಿರೋಧ ಆಯ್ಕೆ
December 2, 2019ಮುಂಬೈ: ಮಹಾರಾಷ್ಟ್ರ ವಿಧಾನ ಸಭೆಯ ನೂತನ ಸ್ಪೀಕರ್ ಆಗಿ ಕಾಂಗ್ರೆಸ್ ಮುಖಂಡ ನಾನಾ ಪಟೋಲೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಪಕ್ಷದ ನಾನಾ ಪಟೋಲೆ ಜೊತೆಗೆ ಬಿಜೆಪಿ ಶಾಸಕ ಕಿಷನ್ ಎಸ್ ಕಥೋರೆ ಕೂಡ ಸ್ಪೀಕರ್ ಹುದ್ದೆಯ ಆಕಾಂಕ್ಷಿಯಾಗಿದ್ದರು. ಆದರೆ, ಕೊನೆ ಕ್ಷಣದಲ್ಲಿ ಬಿಜೆಪಿ ಸ್ಪರ್ಧೆಯಿಂದ ಹಿಂದೆ ಸರಿದ ಹಿನ್ನೆಲೆಯಲ್ಲಿ ನಾನಾ ಪಟೋಲೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪಟೋಲೆ ವಿದರ್ಭ ಜಿಲ್ಲೆಯ ಸಕೋಳಿ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದು, ಪಕ್ಷದ ಹಿರಿಯ ಧುರೀಣ ರಾಗಿದ್ದಾರೆ. ಸ್ಪೀಕರ್‍ನ್ನು ಅವಿರೋಧವಾಗಿ ಆಯ್ಕೆ ಮಾಡಬೇಕೆಂದು ಸರ್ವಪಕ್ಷ…
ಈರುಳ್ಳಿ ಬೆಲೆ ತಗ್ಗಿಸಲು ಆಮದು ಹೆಚ್ಚಳಕ್ಕೆ ಕೇಂದ್ರದ ಕ್ರಮ
December 2, 2019ನವದೆಹಲಿ,ಡಿ.1- ಈರುಳ್ಳಿ ಬೆಲೆ ತಗ್ಗು ವಂತೆ ಮಾಡಲು ಕೇಂದ್ರ ಸರ್ಕಾರ ವಿದೇಶದಿಂದ ಈರುಳ್ಳಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡಿ ಕೊಳ್ಳಲು ಮುಂದಾಗಿದೆ. ಈಜಿಪ್ಟ್‍ನಿಂದ ಈರುಳ್ಳಿ ಭಾರತಕ್ಕೆ ಆಮದಾಗುತ್ತಿದೆ. ಟರ್ಕಿಯಿಂದಲೂ ಹೆಚ್ಚುವರಿಯಾಗಿ ಆಮದು ಮಾಡಿಕೊಳ್ಳಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈಜಿಪ್ಟ್‍ನಿಂದ 6090 ಟನ್ ಮತ್ತು ಟರ್ಕಿಯಿಂದ 11 ಸಾವಿರ ಟನ್ ಈರುಳ್ಳಿ ಆಮದು ಮಾಡಿಕೊಳ್ಳಲಾಗುವುದು ಎಂದು ಸರ್ಕಾರದ ಮೂಲಗಳು ಹೇಳಿವೆ. ಡಿಸೆಂಬರ್ 2 ಅಥವಾ 3ನೇ ವಾರದ ವೇಳೆಗೆ ಈ ಈರುಳ್ಳಿ ಭಾರತದ ಮಾರುಕಟ್ಟೆಗಳಲ್ಲಿ ಲಭ್ಯವಾಗ ಲಿದೆ. ಈರುಳ್ಳಿ…
ನಾಳೆಯಿಂದ ಮೊಬೈಲ್ ಕರೆ ದರ ಏರಿಕೆ!
December 2, 2019ಮುಂಬೈ,ಡಿ.1- ದರ ಏರಿಕೆ ಎಂಬುದು ದೇಶದ ಜನಸಾಮಾನ್ಯರಿಗೆ ಒಂದಲ್ಲ ಒಂದು ರೀತಿಯಲ್ಲಿ ಪೆಟ್ಟು ನೀಡುತ್ತಲೇ ಇದೆ. ಇತ್ತೀಚೆಗೆ ಈರುಳ್ಳಿ, ಪೆಟ್ರೋಲ್ ದರ ಏರಿಕೆಯಾಗಿದ್ದರಿಂದ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿತ್ತು. ಈಗ ಎಲ್ಲರ ಪ್ರೀತಿಯ ಮೊಬೈಲ್ ಫೋನ್ ಸರದಿ. ಏರ್‍ಟೆಲ್, ಐಡಿಯಾ-ವೊಡಾಫೋನ್ ಮತ್ತು ರಿಲಯನ್ಸ್ ಜಿಯೋ ಕಂಪೆನಿ ಗಳು ಕರೆ ದರ ಏರಿಕೆಗೆ ಮುಂದಾಗಿವೆ. ಖಾಸಗಿ ಟೆಲಿಕಾಂ ಕಂಪೆನಿಗಳು ಕಳೆ ದೆರಡು ತ್ರೈಮಾಸಿಕಗಳಲ್ಲಿ ಹೆಚ್ಚು ನಷ್ಟ ಅನುಭವಿಸಿದ್ದರಿಂದ ನಷ್ಟ ಸರಿದೂಗಿಸಿ ಕೊಳ್ಳಲು ಕರೆ ದರ ಹೆಚ್ಚಳದ ಮಾತನಾಡಿದ್ದವು. ಅದರಂತೆ…
ಆರೋಗ್ಯ, ಸಾರಿಗೆ, ಆರ್ಥಿಕ ಸಹಾಯ ಸೌಲಭ್ಯ ವಿಸ್ತರಣೆಗೆ ಕಟ್ಟಡ ಕಾರ್ಮಿಕರ ಆಗ್ರಹ
December 2, 2019ಮೈಸೂರು,ಡಿ.1(ಆರ್‍ಕೆ)- ಆರೋಗ್ಯ, ಸಾರಿಗೆ, ಆರ್ಥಿಕ ಸಹಾಯ ಹಾಗೂ ಪಿಂಚಣಿ ಸೌಲಭ್ಯಗಳನ್ನು ಸರ್ಕಾರ ವಿಸ್ತರಿ ಸಬೇಕೆಂದು ಕಟ್ಟಡ ಕಾರ್ಮಿಕರು ಇಂದಿಲ್ಲಿ ಸರ್ಕಾರವನ್ನು ಆಗ್ರಹಿಸಿದ್ದಾರೆ. ಕರ್ನಾಟಕ ಸಂಯುಕ್ತ ಕಟ್ಟಡ ಕಾರ್ಮಿ ಕರ ಸಂಘದ ಆಶ್ರಯದಲ್ಲಿ ಮೈಸೂರಿನ ಶ್ರೀ ಹರ್ಷ ರಸ್ತೆಯಲ್ಲಿರುವ ಗೋವರ್ಧನ ಹೋಟೆಲ್‍ನಲ್ಲಿ ನಡೆದ ಸಮಾವೇಶದಲ್ಲಿ ತಮಗೆ ಸೌಲಭ್ಯ ನೀಡಬೇಕೆಂದು ಆಗ್ರಹಿಸಿ ನಾಳೆ(ಡಿ.2) ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಲು ಕಟ್ಟಡ ಕಾರ್ಮಿ ಕರು ನಿರ್ಧರಿಸಿದರು. ಎಐಯುಟಿಯುಸಿ ಮೈಸೂರು ಜಿಲ್ಲಾ ಸಮಿತಿ ಜಿಲ್ಲಾಧ್ಯಕ್ಷ ಯಶೋಧರ್ ಅಧ್ಯಕ್ಷತೆ ವಹಿಸಿದ್ಧ ಸಮಾವೇಶದಲ್ಲಿ ಕಾರ್ಮಿಕರ…
ಸಂಶೋಧನೆ ಮೂಲಕ ಮೈಸೂರು ವಿವಿಗೆ ಹೆಸರು ತನ್ನಿ
December 2, 2019ಮೈಸೂರು,ಡಿ.1(ಆರ್‍ಕೆಬಿ)- ವಿದ್ಯಾರ್ಥಿಗಳು ಮಾಡುವ ಸಂಶೋಧನೆಗಳ ಪುಸ್ತಕ ತರುತ್ತಿದ್ದೇವೆ ಎಂಬುದು ಒಂದು ಭಾಗವಾದರೆ, ವಿವಿಯ ಪ್ರಗತಿ ತೋರಿಸಲು ಉತ್ತಮ ಸಂಶೋಧನಾ ಲೇಖನಗಳನ್ನು ನ್ಯಾಕ್ ಅಥವಾ ಇನ್ನಾವುದೇ ಸಂಸ್ಥೆಗಳು ಕೇಳುತ್ತವೆ. ಇದರಿಂದ ವಿವಿಗೆ ಮತ್ತು ವಿಭಾಗಕ್ಕೆ ಒಳ್ಳೆಯ ಹೆಸರು ಬರಲು ಸಾಧ್ಯ. ಈ ಬಗ್ಗೆ ವಿದ್ಯಾರ್ಥಿಗಳು ಗಮನ ಹರಿಸಬೇಕು ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ತಿಳಿಸಿದರು. ಮೈಸೂರು ಮಾನಸಗಂಗೋತ್ರಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬಿಎಂಶ್ರೀ ಸಭಾಂಗಣದಲ್ಲಿ `ಸಂವಿಧಾನ ದಿನಾಚರಣೆ ಹಾಗೂ ಸಂವಿಧಾನ ಪ್ರಸ್ತಾವನೆ ಅನಾ ವರಣ’ ಕಾರ್ಯಕ್ರಮಕ್ಕೆ…
ಮಂಗಳಮ್ಮರ `ದಿವ್ಯ ಶಿಕ್ಷಣ ದೀವಿಗೆ-ಶ್ರೀಮಾತೆ’, ಲೀಲಾಪ್ರಕಾಶ್‍ರ `ಕನ್ನಡ ಪಂಚರಾತ್ರಮ್’ ಕೃತಿ ಬಿಡುಗಡೆ
December 2, 2019ಮೈಸೂರು,ಡಿ.1(ವೈಡಿಎಸ್)-ಯಾದವ ಗಿರಿಯ ಶ್ರೀ ರಾಮಕೃಷ್ಣ ಆಶ್ರಮದ ಸಭಾಂ ಗಣದಲ್ಲಿ ಸಿ.ಎಸ್.ಮಂಗಳಮ್ಮ ವಿರಚಿತ `ದಿವ್ಯ ಶಿಕ್ಷಣ ದೀವಿಗೆ-ಶ್ರೀಮಾತೆ’ ಹಾಗೂ ಪ್ರವಚನ ಪಟು ಕೆ.ಲೀಲಾ ಪ್ರಕಾಶ್ ಅವರ `ಕನ್ನಡ ಪಂಚರಾತ್ರಮ್’ ಕೃತಿಗಳನ್ನು ಲೋಕಾರ್ಪಣೆಗೊಳಿಸಲಾಯಿತು. ಡಾ.ಕೆ.ಕೃಷ್ಣಮೂರ್ತಿ ಸಂಶೋಧನ ಪ್ರತಿ ಷ್ಠಾನ, ವಿದ್ಯುತ್ ಪ್ರಕಾಶನ ಸಂಯುಕ್ತಾ ಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಪುಸ್ತಕಗಳನ್ನು ಬಿಡುಗಡೆಗೊಳಿಸಿದರು. ನಂತರ ಮಾತ ನಾಡಿ, ದಿವ್ಯ ಶಿP್ಷÀಣ ದೀವಿಗೆ-ಶ್ರೀಮಾತೆ ಕೃತಿಯು ದಿವ್ಯತ್ರಯ ಸಾಹಿತ್ಯಕ್ಕೆ ಒಳ್ಳೆಯ ಕೊಡುಗೆ. ದಿವ್ಯತ್ರಯ ಸಾಹಿತ್ಯ ಕನ್ನಡ, ಇಂಗ್ಲಿಷ್, ಬೇರೆ ಬೇರೆ ಭಾಷೆಗಳಲ್ಲಿದ್ದು, ಅಗಾಧವಾಗಿ…
ಸಾಧಕರಿಗೆ `ಆಚಾರ್ಯ ಶ್ರೀ ವಿದ್ಯಾರಣ್ಯ ರಾಜ್ಯೋತ್ಸವ’ ಪ್ರಶಸ್ತಿ ಪ್ರದಾನ
December 2, 2019ಮೈಸೂರು, ಡಿ.1(ಎಸ್‍ಪಿಎನ್)- ವಿವಿಧ ಕ್ಷೇತ್ರದ ಹತ್ತು ಮಂದಿ ಸಾಧಕರಿಗೆ `ಆಚಾರ್ಯ ಶ್ರೀ ವಿದ್ಯಾರಣ್ಯ ರಾಜೋ ತ್ಸವ’ ಪ್ರಶಸ್ತಿಯನ್ನು ಡಾ.ರಾಜಶೇಖರ ಆಸ್ಪತ್ರೆ ಸಂಸ್ಥಾಪಕ ಡಾ.ಹೆಚ್.ಬಿ.ರಾಜ ಶೇಖರ್ ನೀಡಿ, ಗೌರವಿಸಿದರು. ಮೈಸೂರು ರೋಟರಿ ಐಡಿಯಲ್ ಜಾವಾ ಸಭಾಂಗಣದಲ್ಲಿ ಹಿಮಾಲಯ ಫೌಂಡೇ ಷನ್ ವತಿಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ `ಆಚಾರ್ಯ ಶ್ರೀ ವಿದ್ಯಾರಣ್ಯ ರಾಜ್ಯೋತ್ಸವ ಪ್ರಶಸ್ತಿ’ ಯನ್ನು ಪ್ರದಾನ ಮಾಡಿದರು. ಭಜನಾ ಕ್ಷೇತ್ರದ ವೆಂಕಟರಾಮಯ್ಯ, ಮೈಸೂರು ಸಾಂಪ್ರದಾಯಿಕ ಚಿತ್ರಕಲಾ ಕ್ಷೇತ್ರದ ಮೀರಾ ಕುಮಾರ್, ಶಿಕ್ಷಣ ಕ್ಷೇತ್ರದ ವಿ.ಶ್ರೀಕಂಠಸ್ವಾಮಿ ದೀಕ್ಷಿತ್, ಜ್ಯೋತಿಷ್ಯ…










