ಮೈಸೂರು,ಆ.31-ಮೈಸೂರಿನಲ್ಲಿ ಸೆಪ್ಟೆಂಬರ್ 29ರಿಂದ ನವ ರಾತ್ರಿ ಹಬ್ಬದ ಸಂಭ್ರಮ ಆರಂಭಕ್ಕೆ ಸಿದ್ಧವಾಗುತ್ತಿರುವ ಸಂದರ್ಭ ದಲ್ಲೇ ರೇಡಿಯಂಟ್ ಸ್ಪೋಟ್ರ್ಸ್ ಆಯೋಜಿಸಿ ರುವ ‘ಸೆಲೆಬ್ರೇಟ್ ಲೈಫ್’ ಮೈಸೂರು ಹಾಫ್ ಮ್ಯಾರಥಾನ್ 10ಏ ಮತ್ತು 6ಏ ಓಟ, ನಡಿಗೆ ಸ್ಪರ್ಧೆಯ ಮೊದಲನೆಯ ಆವೃತ್ತಿಯು ಸೆ.8ರಂದು 10 ಗಂಟೆಗೆ ಮೈಸೂರು ಅರಮನೆ ಉತ್ತರ ದ್ವಾರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಆರಂಭಗೊಳ್ಳಲಿದೆ. ಇನ್ನು ಮುಂದೆ ಪ್ರತೀ ವರ್ಷ ಏರ್ಪಡಿಸಲಿ ರುವ ಈ ಕಾರ್ಯಕ್ರಮವು ಓಟ ಮತ್ತು ನಡಿಗೆಯನ್ನು ದಿನನಿತ್ಯದ ಚಟುವಟಿಕೆಗಳ ಒಂದು ಭಾಗವಾಗಿಸಿಕೊಳ್ಳಲು…
ಕೆಲ ಎಟಿಎಂಗಳಲ್ಲಿ ಇಂದಿನಿಂದ ಒಟಿಪಿ ನಮೂದಿಸಿದರೆ ಮಾತ್ರ ಹಣ ಡ್ರಾ
September 1, 2019ನವದೆಹಲಿ, ಆ.31-ಎಟಿಎಂ ಕಾರ್ಡ್‍ಗಳು ಮತ್ತು ಪಿನ್‍ಗಳನ್ನು ಕದ್ದು ಅವು ಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 1ರಿಂದ ಹೊಸ ನಿಯಮ ಜಾರಿಗೆ ಬರಲಿದೆ. ಎಟಿಎಂನಲ್ಲಿ 5 ಸಾವಿರ ರೂ. ಗಿಂತ ಹೆಚ್ಚು ಹಣ ಡ್ರಾ ಮಾಡುವುದಾದರೆ ನೀವು ರಿಜಿಸ್ಟರ್ ಮಾಡಿಸಿರುವ ಮೊಬೈಲ್ ನಂಬರ್‍ಗೆ ಒಂದು ಒಟಿಪಿ ಬರಲಿದೆ. ಆ ಒಟಿಪಿ ನಂಬರ್‍ನ್ನು ಎಟಿಎಂನಲ್ಲಿ ನಮೂದಿಸಿದರೆ ಮಾತ್ರ ಹಣ ವಿತ್ ಡ್ರಾ ಮಾಡಲು ಸಾಧ್ಯ. ಇಲ್ಲದಿದ್ದರೆ ಹಣ ವಿತ್ ಡ್ರಾ ಮಾಡಲು ಸಾಧ್ಯವಿಲ್ಲ. ಸೆಪ್ಟೆಂಬರ್ 1ರಿಂದ…
ಮಹಾನ್ ಪರಾಕ್ರಮಿ ಟಿಪ್ಪು ಸುಲ್ತಾನ್
September 1, 2019ಮೈಸೂರು, ಆ.31(ಪಿಎಂ)- ಬ್ರಿಟಿಷ್ ಸಾಮ್ರಾಜ್ಯ ವಿಸ್ತರಣೆಗೆ ಪ್ರಬಲ ಪೆಟ್ಟು ನೀಡಿದ ಮಹಾನ್ ಪರಾಕ್ರಮಿ ಟಿಪ್ಪು ಸುಲ್ತಾನ್. ಇಂತಹ ಮೇರು ವ್ಯಕ್ತಿತ್ವದ ಟಿಪ್ಪು ಜಯಂತಿ ಯನ್ನು ಸರ್ಕಾರ ರದ್ದುಗೊಳಿಸಿತು ಎಂದು ಮಂಗಳೂರು ಮತ್ತು ಗೋವಾ ವಿಶ್ವವಿದ್ಯಾ ನಿಲಯಗಳ ವಿಶ್ರಾಂತ ಕುಲಪತಿ ಪ್ರೊ.ಬಿ.ಶೇಖ್ ಅಲಿ ಬೇಸರ ವ್ಯಕ್ತಪಡಿಸಿದರು. ಮೈಸೂರು ವಿವಿಯ ಇತಿಹಾಸ ಅಧ್ಯಯನ ವಿಭಾಗ ಮತ್ತು ಟಿಪ್ಪು ಸುಲ್ತಾನ್ ಅಧ್ಯಯನ ಪೀಠದ ಜಂಟಿ ಆಶ್ರಯದಲ್ಲಿ ವಿಭಾಗದ ಸಭಾಂಗಣದಲ್ಲಿ `ಪೂರ್ವ ವಸಾಹತುಶಾಹಿ ಕರ್ನಾಟಕ ಇತಿಹಾಸದ ಮರು ಪರಿಶೀಲನೆ; ಟಿಪ್ಪು ಯುಗದ ಪ್ರಾಮುಖ್ಯತೆ’…
ಗಣೇಶ ಚತುರ್ಥಿ, ಮೊಹರಂ ಹಿನ್ನೆಲೆ: ಮೈಸೂರಲ್ಲಿ ಪೊಲೀಸರಿಗೆ ಸೌಹಾರ್ದ ಸಭೆ
September 1, 2019ಮೈಸೂರು,ಆ.31(ಆರ್‍ಕೆ)- ಗೌರಿ-ಗಣೇಶ ಹಾಗೂ ಮೊಹರಂ ಹಬ್ಬದ ಹಿನ್ನೆಲೆಯಲ್ಲಿ ಮೈಸೂರು ನಗರ ಪೊಲೀ ಸರು ಶನಿವಾರ ಸೌಹಾರ್ದ ಶಾಂತಿ ಸಭೆ ನಡೆಸಿದರು. ಮೈಸೂರಿನ ಲಲಿತ ಮಹಲ್ ರಸ್ತೆಯಲ್ಲಿರುವ ಪೊಲೀಸ್ ಭವನದಲ್ಲಿ ಏರ್ಪಡಿಸಿದ್ದ ಶಾಂತಿ ಸಭೆಯ ಅಧ್ಯಕ್ಷತೆ ವಹಿ ಸಿದ್ದ ಕಾನೂನು ಸುವ್ಯವಸ್ಥೆ ಡಿಸಿಪಿ ಎಂ.ಮುತ್ತುರಾಜ್ ಅವರು, ಗೌರಿ-ಗಣೇಶ ಪ್ರತಿಷ್ಠಾಪಿಸಿ ವಿಸರ್ಜನೆ ಮೆರ ವಣಿಗೆ ವೇಳೆ ಶಾಂತಿ-ಸುವ್ಯವಸ್ಥೆ ಕಾಪಾಡಬೇಕು ಎಂದರು. ಗಣಪತಿ ಪ್ರತಿಷ್ಠಾಪನೆ, ಪೂಜೆ ನೆಪದಲ್ಲಿ ಚಂದಾ ವಸೂಲಿ, ಬಲವಂತ ಮಾಡುವುದು ಅಪರಾಧವಾಗಿದ್ದು, ರಾತ್ರಿ 10 ಗಂಟೆ ನಂತರ ಧ್ವನಿವರ್ಧಕ…
ಅಕ್ರಮ ಬಿಪಿಎಲ್ ಕಾರ್ಡ್‍ದಾರರಿಗೆ ಕೊನೆ ಅವಕಾಶ
September 1, 2019ಬೆಂಗಳೂರು,ಆ.31-ಅಕ್ರಮವಾಗಿ ಬಿಪಿಎಲ್ ಕಾರ್ಡ್ ದುರು ಪಯೋಗಪಡಿಸಿಕೊಂಡು, ಪಡಿತರ ಧಾನ್ಯ ಪಡೆಯುತ್ತಿರುವವರ ವಿರುದ್ಧ ಸರ್ಕಾರ ಕ್ರಮಕ್ಕೆ ಮುಂದಾಗಿದೆ. ಹೀಗಾಗಿ ಅಕ್ರಮ ಬಿಪಿಎಲ್ ಕಾರ್ಡ್‍ದಾರರು ಕ್ರಮ ತೆಗೆದುಕೊಳ್ಳುವ ಮೊದಲು ಕಾರ್ಡ್ ಗಳನ್ನು ಹಿಂದಿರುಗಿಸುವಂತೆ, ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ. ಈ ಕುರಿತು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಪ್ರಕಟಣೆ ಹೊರಡಿಸಿದ್ದು, ಇದೊಂದು ಎಚ್ಚರಿಕೆಯ ಸಂದೇಶ. ಆರ್ಥಿಕವಾಗಿ ದುರ್ಬಲರಿರುವ ಕುಟುಂಬ ಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ನೀಡುತ್ತಿರುವ ಬಿಪಿಎಲ್ ಪಡಿತರವನ್ನು ಕೆಲವು ಸದೃಢ ಕುಟುಂಬಗಳು ಸುಳ್ಳು ಮಾಹಿತಿ…
ಜನ್ಮಕೊಟ್ಟ ಮಗುವನ್ನೇ ಹತ್ಯೆಗೈದ ಪಾಪಿ ತಂದೆಗೆ ಜೀವಾವಧಿ ಶಿಕ್ಷೆ
September 1, 2019ಮೈಸೂರು,ಆ.31(ಎಸ್‍ಬಿಡಿ)-ಪತ್ನಿ ಮೇಲಿನ ಕೋಪಕ್ಕೆ ಏನೂ ಅರಿಯದ ತನ್ನ ಎರಡೂವರೆ ವರ್ಷದ ಮಗುವನ್ನು ಬ್ಲೇಡ್‍ನಿಂದ ಕೊಯ್ದು ಹತ್ಯೆ ಮಾಡಿದ್ದ ಪಾಪಿ ತಂದೆಗೆ ಮೈಸೂರಿನ 4ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾ ವಧಿ ಶಿಕ್ಷೆ ವಿಧಿಸಿದೆ. ತಿ.ನರಸೀಪುರ ತಾಲೂಕು ತಲಕಾಡು ಗ್ರಾಮದ ಹೇಮಂತ್ ಕುಮಾರ್ ತಾನು ಜನ್ಮ ನೀಡಿದ ಮಗಳನ್ನೇ ಕೊಂದ ಪಾಪಿ. ಈತ ಪತ್ನಿ ಪವಿತ್ರಾ ಹಾಗೂ ಮಗಳು ರಿತ್ಯನ್ಯಾಳೊಂದಿಗೆ ಮೈಸೂರಿನ ಹೂಟಗಳ್ಳಿ ಹೊನ್ನೇಗೌಡ ಬ್ಲಾಕ್‍ನಲ್ಲಿ ವಾಸವಿದ್ದ. ಸಂಸಾರದಲ್ಲಿ ಅನ್ಯೊನ್ಯತೆ ಇರಲಿಲ್ಲ. ಸಣ್ಣ ವಿಚಾರಕ್ಕೂ ದಂಪತಿ…
ಇಡಿಯಿಂದ ಸತತ 5.30ಗಂಟೆ ಡಿಕೆಶಿ ವಿಚಾರಣೆ
August 31, 2019ನವದೆಹಲಿ, ಆ.30- ಅಕ್ರಮ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯದ (ಇಡಿ) ಜಂಟಿ ಆಯುಕ್ತೆ ಮೋನಿಕಾ ಶರ್ಮಾ ನೇತೃತ್ವದ ಐವರು ಅಧಿಕಾರಿಗಳು ಐದೂವರೆ ಗಂಟೆ ಗಳ ಕಾಲ ತೀವ್ರ ವಿಚಾರಣೆಗೊಳಪಡಿಸಿದರು. ವಿಚಾರಣೆ ಮುಗಿಸಿ ಹೊರಬಂದ ಡಿಕೆಶಿ ಸುದ್ದಿಗಾರರ ಜೊತೆ ಮಾತನಾಡಿ, ವಿಚಾ ರಣೆ ಈಗ ತಾನೇ ಆರಂಭವಾಗಿದೆ. ಇಂದು ಸಂಜೆ 6 ಗಂಟೆಯಿಂದ ರಾತ್ರಿ 11.30ರವ ರೆಗೆ ಅಧಿಕಾರಿಗಳು ನನ್ನನ್ನು ವಿಚಾರಣೆ ನಡೆಸಿದ್ದಾರೆ. ನಾಳೆ ಬೆಳಿಗ್ಗೆ 11 ಗಂಟೆಗೆ ಬರುವಂತೆ…
ಕೆಆರ್‍ಎಸ್ ಸುತ್ತಮುತ್ತ ಗಣಿಗಾರಿಕೆ ಸಂಪೂರ್ಣ ಬಂದ್
August 31, 2019ಮಂಡ್ಯ, ಆ.30(ನಾಗಯ್ಯ)-ಕೃಷ್ಣರಾಜಸಾಗರ ಅಣೆ ಕಟ್ಟೆಯ ಸುತ್ತಮುತ್ತ 20 ಕಿಲೋಮೀಟರ್ ಗಣಿಗಾರಿಕೆಯನ್ನು ಬಂದ್ ಮಾಡಲಾಗಿದೆ. ಪಾಂಡವಪುರ ತಾಲೂಕಿನ ಬೇಬಿ ಬೆಟ್ಟ ಸೇರಿದಂತೆ ಕೆಆರ್‍ಎಸ್ ಸುತ್ತ್ತಮುತ್ತ ನಡೆಯುತ್ತಿದ್ದ ಎಲ್ಲಾ ಗಣಿಗಾರಿಕೆಗಳನ್ನು ಪೂರ್ಣ ಬಂದ್ ಮಾಡಿ ಜಿಲ್ಲಾಧಿ ಕಾರಿ ಡಾ.ಎಂ.ವಿ.ವೆಂಕಟೇಶ್ ಆದೇಶ ಹೊರಡಿಸಿದ್ದಾರೆ. ಸಂಸದೆ ಸುಮಲತಾ ಅಂಬರೀಶ್ ಅವರು ಸಂಸತ್‍ನಲ್ಲಿ ಇದರ ಬಗ್ಗೆ ದನಿ ಎತ್ತಿದ್ದರು. ಅಲ್ಲದೆ ಸ್ಥಳೀಯವಾಗಿಯೂ ರೈತರು, ಪ್ರಗತಿಪರರು, ಕೆಆರ್‍ಎಸ್ ಹಿತರಕ್ಷಣಾ ಹೋರಾಟ ಸಮಿತಿ ಮುಖಂಡರು ಸೇರಿದಂತೆ ಹಲವು ಮಂದಿ ಕೆಆರ್‍ಎಸ್ ಅಣೆಕಟ್ಟೆಗೆ ಅಪಾಯಕಾರಿಯಾಗಿರುವ ಗಣಿಗಾರಿಕೆಯನ್ನು ಸ್ಥಗಿತಗೊಳಿಸುವಂತೆ ನಿರಂತರವಾಗಿ…
ಈ ಬಾರಿ ಮೈಸೂರು ದಸರಾ ಕಾರ್ಯಕ್ರಮಗಳು ವೈಶಿಷ್ಟ್ಯಪೂರ್ಣ, ಪಾರದರ್ಶಕ
August 31, 2019ಮೈಸೂರು,ಆ.30(ಎಂಟಿವೈ)- ನಾಡಹಬ್ಬ ದಸರಾ ಮಹೋತ್ಸವ ಪಾರಂಪರಿಕ ಆಚರಣೆ ಯಾಗಿದ್ದು, ನವರಾತ್ರಿಯ ವೇಳೆ ನಡೆಯುವ ಎಲ್ಲಾ ಕಾರ್ಯಕ್ರಮಗಳು ವೈಶಿಷ್ಟ್ಯ ಹಾಗೂ ಪಾರ ದರ್ಶಕವಾಗಿರುವಂತೆ ಆಚರಿಸಲು ಪಕ್ಷಾತೀತ ವಾಗಿ ಸಲಹೆ ಪಡೆಯು ತ್ತೇನೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ತಿಳಿಸಿದ್ದಾರೆ. ಮೈಸೂರಿನ ಸರ್ಕಾರಿ ಅತಿಥಿ ಗೃಹದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶ ದಲ್ಲಿಯೇ ಮೈಸೂರಿನಲ್ಲಿ ಮಾತ್ರ ಪಾರಂಪರಿಕ ದಸರಾ ಮಹೋತ್ಸವವನ್ನು ಆಚರಿಸಲಾಗುತ್ತಿದೆ. ತಾಯಿ ಚಾಮುಂಡೇಶ್ವರಿ ಅನುಗ್ರಹದಿಂದ ಈ ಬಾರಿ ದಸರಾ ಮಹೋತ್ಸವ ಆಚರಿಸುವ ಹೊಣೆಗಾರಿಕೆ ನನಗೆ…
ಮುಖ್ಯಮಂತ್ರಿಗಳಿಂದ ಸೆ.20ರಂದು ಚಾಮುಂಡಿಬೆಟ್ಟದ ಮಲ್ಟಿಲೆವೆಲ್ ಪಾರ್ಕಿಂಗ್ ಕಟ್ಟಡ ಉದ್ಘಾಟನೆ
August 31, 2019ಮೈಸೂರು, ಆ.30(ಎಂಟಿವೈ)- ದಸರಾ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಚಾಮುಂಡಿಬೆಟ್ಟಕ್ಕೆ ಬರುವ ಭಕ್ತರ ಅನುಕೂಲಕ್ಕಾಗಿ ಸೆ.20ರಂದು ಬೆಟ್ಟದ ಮೇಲೆ ನಿರ್ಮಿಸಿರುವ ಮಲ್ಟಿಲೆವೆಲ್ ಪಾರ್ಕಿಂಗ್ ಕಟ್ಟಡ ಉದ್ಘಾಟನೆ ಹಾಗೂ ವಾಣಿಜ್ಯ ಸಂಕಿರ್ಣಕ್ಕೆ ಬೀದಿ ಬದಿ ವ್ಯಾಪಾರಿ ಗಳನ್ನು ಸ್ಥಳಾಂತರ ಮಾಡಲು ಕ್ರಮ ಕೈ ಗೊಳ್ಳಲಾಗಿದೆ ಎಂದು ಮೈಸೂರು ಜಿಲ್ಲಾ ಉಸ್ತು ವಾರಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ. ಚಾಮುಂಡಿಬೆಟ್ಟದಲ್ಲಿ ಪತ್ರಕರ್ತರೊಂದಿಗೆ ಮಾತ ನಾಡಿದ ಅವರು, ಸಿದ್ದರಾಮಯ್ಯ ಮುಖ್ಯಮಂತ್ರಿ ಯಾಗಿದ್ದ ವೇಳೆ ಚಾಮುಂಡಿಬೆಟ್ಟದಲ್ಲಿ ಮಲ್ಟಿಲೆವೆಲ್ ಪಾರ್ಕಿಂಗ್ ಕಟ್ಟಡ ನಿರ್ಮಿಸಲು ಕ್ರಮ ಕೈಗೊಂಡಿ ದ್ದರು. ಇಂತಹ…










