ಮೈಸೂರು,ಆ.30-ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವತಿ ಯಿಂದ ಸೆ.2ರಂದು ಗಣೇಶ ವಿಗ್ರಹಗಳ ವಿಸರ್ಜನೆಗಾಗಿ 3 ಪರಿಸರ ಸ್ನೇಹಿ ಸಂಚಾರಿ ವಾಹನಗಳನ್ನು ವ್ಯವಸ್ಥೆ ಮಾಡಲಾಗಿದೆ. ಮೊದಲನೇ ವಾಹನವು ಸಂಜೆ 4ರಿಂದ 5.15ರವರಗೆ ಮೇಟಗಳ್ಳಿ, ಆರಕ್ಷಕ ಠಾಣೆ ಹತ್ತಿರ, ಸಂಜೆ 5.30 ರಿಂದ 6.45 ವಿಜಯನಗರ 2ನೇ ಹಂತದ ಕೆ.ಡಿ. ಸರ್ಕಲ್ ಹತ್ತಿರ, ಸಂಜೆ 7ರಿಂದ 8.15 ಒಂಟಿಕೊಪ್ಪಲ್ ಚಂದ್ರಮೌಳೇಶ್ವರ ದೇª Àಸ್ಥಾನ/ ಮಾತೃಮಂಡಳಿ ಹತ್ತಿರ ರಾತ್ರಿ 8.30ರಿಂದ 10.30 ಕುಕ್ಕರಹಳ್ಳಿಕೆರೆ ಮುಖ್ಯದ್ವಾರ ದಲ್ಲಿ ನಿಲುಗಡೆಯಾಗಲಿದೆ ಈ ವಾಹನಕ್ಕೆ…
ಚಾರ್ಮಾಡಿ ಘಾಟ್‍ನಲ್ಲಿ ವಾಹನ ಸಂಚಾರಕ್ಕೆ ಮತ್ತೆ ಬ್ರೇಕ್
August 31, 2019ಚಿಕ್ಕಮಗಳೂರು, ಆ.30- ಚಾರ್ಮಾಡಿ ಘಾಟ್ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಮತ್ತೆ ಬ್ರೇಕ್ ಹಾಕಲಾಗಿದೆ. ಚಿಕ್ಕಮಗಳೂರು ಜಿಲ್ಲಾಧಿಕಾರಿ ಬಗಾದಿ ಗೌತಮ್ ಅವರು ನಿನ್ನೆಯಷ್ಟೇ ಆದೇಶ ಹೊರಡಿಸಿ, ಶುಕ್ರವಾರದಿಂದ ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಲಘು ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದರು. ಆದರೆ ಸದ್ಯ ಪೆÇಲೀಸರು ನೀಡಿರುವ ವರದಿಯಲ್ಲಿ ಗುಡ್ಡ ಕುಸಿಯುವ ಸಾಧ್ಯತೆ ಇದೆ. ಚಾರ್ಮಾಡಿ ಘಾಟ್ ಸಹಜ ಸ್ಥಿತಿಗೆ ಬರಲು ಇನ್ನಷ್ಟು ದಿನಗಳು ಬೇಕಾಗುತ್ತದೆ ಎಂದು ತಿಳಿಸಲಾಗಿದೆ. ಪೆÇಲೀಸರ ವರದಿ ಪಡೆದ ಡಿಸಿ ಬಗಾದಿ ಗೌತಮ್ ಅವರು, ಎಲ್ಲಾ…
ವಿಭಿನ್ನ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಿ: ವಿ.ಸೋಮಣ್ಣ
August 31, 2019ಮೈಸೂರು,ಆ.30-ನಾಡಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸ ಲಾಗುವುದು. ಅದಕ್ಕಾಗಿ ಪ್ರತ್ಯೇಕ ಸಮಿತಿ ಗಳನ್ನು ರಚಿಸಿ, ಅಧಿಕಾರಿಗಳನ್ನು ನೇಮಿಸ ಲಾಗಿದೆ. ಅಧಿಕಾರಿಗಳು ಪ್ರಾಮಾಣಿಕವಾಗಿ ಸಮಿತಿಯಲ್ಲಿ ಕರ್ತವ್ಯ ನಿರ್ವಹಿಸಿ ಹಾಗೂ ವಿಭಿನ್ನ ರೀತಿಯ ಕಾರ್ಯಕ್ರಮ ಗಳನ್ನು ಆಯೋಜಿಸಬೇಕು ಎಂದು ವಸತಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಅವರು ಹೇಳಿದರು. ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ಸಭಾಂಗಣದಲ್ಲಿ ಇಂದು ಆಯೋಜಿಸ ಲಾಗಿದ್ದ ದಸರಾ ಉಪ ಸಮಿತಿಗಳ ರಚನೆ ಸಭೆಯಲ್ಲಿ ಅವರು ಮಾತನಾಡಿದರು. ಹಿಂದಿನ ದಸರಾ ಮಹೋತ್ಸವಗಳಲ್ಲಿ ನಡೆದ…
ಅಂದದ ಸರ್ಕಾರಿ ಭವನಕ್ಕೆ ಹದಗೆಟ್ಟ ಮಹಾದ್ವಾರದ ಮೂಲಕ ದಸರಾಗೆ ಸ್ವಾಗತ!
August 31, 2019ಮೈಸೂರು,ಆ.30(ಎಸ್‍ಬಿಡಿ)-ಈ ಬಾರಿ ದಸರಾ ಮಹೋತ್ಸವಕ್ಕೆ ಬೆಂಗಳೂರು ಕಡೆಯಿಂದ ಬರುವ ಪ್ರವಾಸಿಗರಿಗೆ ವಿಶೇಷ ರೀತಿಯ ಸ್ವಾಗತ ಕಾದಿದೆ. ಅಂಬೇಡ್ಕರ್ ವೃತ್ತ(ಎಫ್‍ಟಿಎಸ್ ಸರ್ಕಲ್)ದಿಂದ ಗ್ರಾಮಾಂತರ ಬಸ್ ನಿಲ್ದಾಣದ ಕಡೆಗೆ ಸ್ವಲ್ಪ ದೂರ ಕ್ರಮಿಸುತ್ತಿದ್ದಂತೆ ರಸ್ತೆ ಮಧ್ಯೆ ಒಂಟಿಯಾಗಿ ನಿಂತಿರುವ ವಿರೂಪ ಸ್ಮಾರಕವೊಂದು ಸ್ವಾಗತ ಕೋರಲಿದೆ. ಜೊತೆ ಜೊತೆಗೆ ಪಾರಂಪರಿಕ ನಗರಿಯ ನಿರ್ಲಕ್ಷ್ಯ ವ್ಯವಸ್ಥೆಯನ್ನೂ ಎತ್ತಿ ತೋರಿಸಲಿದೆ. ಹೌದು, ಅಭಿವೃದ್ಧಿ ನೆಪದಲ್ಲಿ ಮೈಸೂರು-ಬೆಂಗ ಳೂರು ಮುಖ್ಯರಸ್ತೆ ಕಡೆಗಿರುವ ಸರ್ಕಾರಿ ಅತಿಥಿ ಗೃಹದ ಸ್ವಾಗತ ಕಮಾನು(ಆರ್ಚ್) ಕೆರೆದು ಹಾಳು ಮಾಡಲಾಗಿದ್ದು, ಹೆದ್ದಾರಿ ಮಧ್ಯೆ…
ಚಾಮುಂಡಿಬೆಟ್ಟದ ವಿವಿಧ ಕಾಮಗಾರಿಗಳ 20 ದಿನದಲ್ಲಿ ಪೂರ್ಣಗೊಳಿಸಲು ಸೂಚನೆ
August 31, 2019ಮೈಸೂರು,ಆ.30(ಎಂಟಿವೈ)-ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಶುಕ್ರವಾರ ಬೆಳಿಗ್ಗೆ ಚಾಮುಂಡಿಬೆಟ್ಟದಲ್ಲಿ ಮಲ್ಟಿಲೆವೆಲ್ ಪಾರ್ಕಿಂಗ್ ಕಟ್ಟಡ ಹಾಗೂ ವಾಣಿಜ್ಯ ಸಂಕೀರ್ಣ ಕಾಮಗಾರಿ ಪರಿಶೀಲಿಸಿ, ಬಾಕಿ ಕಾಮಗಾರಿಯನ್ನು ಸೆ.18ರೊಳಗೆ ಪೂರ್ಣಗೊಳಿಸುವಂತೆ ಸೂಚಿಸಿದರು. ಚಾಮುಂಡಿಬೆಟ್ಟಕ್ಕೆ ಬರುವ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆ 79.72 ಕೋಟಿ ರೂ. ವೆಚ್ಚದಲ್ಲಿ 8 ಎಕರೆ ಪ್ರದೇಶದಲ್ಲಿ 650 ಕಾರು ಸೇರಿದಂತೆ ಇನ್ನಿತರೆ ವಾಹನಗಳ ನಿಲುಗಡೆಗೆ ಮೂರು ಮಹಡಿಯ ಪಾರ್ಕಿಂಗ್ ಕಟ್ಟಡ ನಿರ್ಮಿಸಲಾಗುತ್ತಿದೆ. ಈ ಕಟ್ಟಡದಲ್ಲಿ ಬೆಟ್ಟದಲ್ಲಿನ ರಸ್ತೆ ಬದಿ ವ್ಯಾಪಾರಿಗಳಿಗಾಗಿ…
ಬಿ-ಖರಾಬಿನಿಂದ ನಮಗೆ ಮುಕ್ತಿ ನೀಡಿ…ಕುರುಬಾರಹಳ್ಳಿ ಸರ್ವೆ ನಂ.4, ಆಲನಹಳ್ಳಿ ಸರ್ವೆ ನಂ.41ರ ನಿವಾಸಿಗಳಿಂದ ಸಂಸದ ಪ್ರತಾಪ್ ಸಿಂಹರಿಗೆ ಮನವಿ
August 31, 2019ಮೈಸೂರು,ಆ.29-ಕೆಲ ವರ್ಷದ ಹಿಂದೆ ಮೈಸೂರು ಜಿಲ್ಲಾಧಿಕಾರಿಗಳಾಗಿದ್ದ ಸಿ.ಶಿಖಾ ಅವರ ಆದೇಶದಿಂದ ಸಂಕಷ್ಟಕ್ಕೆ ಸಿಲುಕಿರುವ ಮೈಸೂರಿನ ಕುರುಬಾರಹಳ್ಳಿ ಸರ್ವೆ ನಂ.4 ಹಾಗೂ ಆಲನಹಳ್ಳಿ ಸರ್ವೆ ನಂ.41ರ ನಿವಾಸಿ ಗಳ ಸಮಸ್ಯೆ ಬಗೆಹರಿಸುವಂತೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರಿಗೆ ಸಿದ್ಧಾರ್ಥನಗರದ ಸಮಾಜ ಸೇವಾ ಟ್ರಸ್ಟ್ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ಆವರಣದಲ್ಲಿ ಸಂಸದರನ್ನು ಭೇಟಿ ಮಾಡಿದ ಟ್ರಸ್ಟ್‍ನ ಪದಾಧಿಕಾರಿಗಳು, ಕಳೆದ ಆರು ವರ್ಷಗಳ ಹಿಂದೆ ಜಿಲ್ಲಾಧಿಕಾರಿ ಗಳಾಗಿದ್ದ ಸಿ.ಶಿಖಾ ಅವರು ಈ ಸರ್ವೆ ನಂಬರ್‍ಗಳ…
ಬುಡಕಟ್ಟು ಅಕಾಡೆಮಿ ಸ್ಥಾಪಿಸಿ, ವಿಶೇಷ ಸ್ಥಾನಮಾನ ನೀಡಿ
August 31, 2019ಮೈಸೂರು, ಆ.30(ಆರ್‍ಕೆಬಿ)- ಬುಡಕಟ್ಟು ಜನಾಂಗವನ್ನು ಕಡೆಗಣಿಸುವುದನ್ನು ಬಿಟ್ಟು ಸರ್ಕಾರ ಪ್ರತ್ಯೇಕ ಬುಡಕಟ್ಟು ಅಕಾಡೆಮಿ ಸ್ಥಾಪಿಸಿ, ಬುಡಕಟ್ಟು ಜನಾಂಗದವರಿಗೆ ವಿಶೇಷ ಸ್ಥಾನಮಾನ ಕಲ್ಪಿಸಬೇಕು ಎಂದು ಬೆಂಗಳೂರು ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಡಾ.ಎಸ್.ಬಾಲಾಜಿ ಆಗ್ರಹಿಸಿದರು. ಮೈಸೂರಿನ ಕುವೆಂಪುನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮೈಸೂರು ಜಿಲ್ಲಾ ಕನ್ನಡ ಜಾನ ಪದ ಪರಿಷತ್ ಶುಕ್ರವಾರ ಆಯೋಜಿಸಿದ್ದ `ವಿಶ್ವ ಬುಡ ಕಟ್ಟು ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿ ದರು. ಬುಡಕಟ್ಟು ಜನಾಂಗವನ್ನು ಸರ್ಕಾರ ಕಡೆಗಣಿಸು ತ್ತಿದೆ. ಕರ್ನಾಟಕದಲ್ಲಿ 13 ಜಾನಪದ ಅಕಾಡೆಮಿ…
ಕಾವೇರಿಗೆ ಸಿಎಂ ಯಡಿಯೂರಪ್ಪ ಬಾಗಿನ
August 30, 2019ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಕೆಆರ್‍ಎಸ್‍ನಲ್ಲಿ ಜೀವನದಿಗೆ ಭಕ್ತಿ ಸಮರ್ಪಣೆ ಮಂಡ್ಯ, ಆ.29(ನಾಗಯ್ಯ,ವಿನಯ್)- ಜೀವನದಿ ಕಾವೇರಿಗೆ ಗುರುವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಾಗಿನ ಸಮರ್ಪಿಸಿದರು. ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮೈಸೂರಿನಿಂದ ಕೆಆರ್‍ಎಸ್‍ಗೆ ಆಗಮಿಸಿದ ಅವರು, ಮಧ್ಯಾಹ್ನ 12.50ರ ಅಭಿಜಿನ್ ಶುಭಲಗ್ನದಲ್ಲಿ ಕಾವೇರಿಗೆ ಪೂಜೆ ಸಲ್ಲಿಸಿ, ಸಂಪ್ರದಾಯದಂತೆ ಬಾಗಿನ ಅರ್ಪಿಸಿದರು. ಮೊರದಲ್ಲಿ ಸೀರೆ, ಕುಪ್ಪಸ(ರವಿಕೆ ಕಣ),ಹೂ, ಹಣ್ಣು, ಕಾಯಿ, ಬಳೆ, ಅರಿಶಿಣ, ಕುಂಕುಮ, ಅಕ್ಕಿ ಇತರೆ ಸಾಮಗ್ರಿಗಳನ್ನೊಳ ಗೊಂಡ 20 ಜೊತೆ ಬಾಗಿನವನ್ನು ವಿಧಿ…
ಕೋರ್ಟ್ ಆದೇಶದ ಬೆನ್ನ ಹಿಂದೆಯೇ ಡಿಕೆಶಿಗೆ ಇಡಿ ಸಮನ್ಸ್
August 30, 2019ಬೆಂಗಳೂರು, ಆ.29(ಕೆಎಂಶಿ)- ಅಕ್ರಮ ಹಣ ಪತ್ತೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಜಾರಿ ನಿರ್ದೇಶನಾಲಯ (ಇಡಿ) ನೀಡಿದ್ದ ಸಮನ್ಸ್ ರದ್ದು ಪಡಿಸುವಂತೆ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಇಂದು ಹೈಕೋರ್ಟ್ ವಜಾ ಮಾಡಿದ ಬೆನ್ನಲ್ಲೇ ಇಡಿ ಅಧಿಕಾರಿಗಳು ವಿಚಾರಣೆಗೆ ಶುಕ್ರವಾರ ಬೆಳಿಗ್ಗೆ 10.30ಕ್ಕೆ ಹಾಜ ರಾಗುವಂತೆ ಡಿ.ಕೆ. ಶಿವಕುಮಾರ್ ಅವರಿಗೆ ಗುರು ವಾರ ರಾತ್ರಿ ಸಮನ್ಸ್ ಜಾರಿ ಮಾಡಿದ್ದಾರೆ. ಹೈಕೋರ್ಟ್ ಆದೇಶ ಹೊರ ಬೀಳುತ್ತಿದ್ದಂತೆಯೇ ಡಿ.ಕೆ. ಶಿವ ಕುಮಾರ್ ರಹಸ್ಯ ಸ್ಥಳಕ್ಕೆ ತೆರಳಿದ್ದರು. ಅವರು ಮುಂದಿನ…
ನಾಲ್ಕೂಕಾಲು ಕಟ್ಟಿ ರಸ್ತೆಯಲ್ಲಿ ಸಾಯಲು ಬಿಟ್ಟಿದ್ದನಾಯಿಯನ್ನು ರಕ್ಷಿಸಿದ ಹೃದಯವಂತರು
August 30, 2019ಮೈಸೂರು,ಆ.29-ನಾಲ್ಕೂಕಾಲುಗಳನ್ನು ಬಿಗಿಯಾಗಿ ಕಟ್ಟಿ ಸಾಯಲು ರಸ್ತೆಯಲ್ಲಿ ಬಿಟ್ಟಿದ್ದ ನಾಯಿಯೊಂದನ್ನು ಮೈಸೂರಿನ ಚಾಮುಂಡಿಬೆಟ್ಟದ ರಸ್ತೆಯಲ್ಲಿ ರಕ್ಷಿಸಲಾಗಿದೆ. ಅದೃಷ್ಟವಶಾತ್ ಈ ನಾಯಿಯನ್ನು ಹೃದಯವಂತ ವ್ಯಕ್ತಿಯೊಬ್ಬರು ದತ್ತು ಪಡೆದುಕೊಂಡಿದ್ದಾರೆ. ಚಿಕಿತ್ಸೆ ಯನ್ನೂ ಕೊಡಿಸಿದ್ದಾರೆ. ಮೈಸೂರಿನ ಅಜಿತ್ ತಂಡೂರ್ ಬುಧವಾರ ಚಾಮುಂಡಿಬೆಟ್ಟದ ರಸ್ತೆಯಲ್ಲಿ ವಾಯುವಿಹಾರ ನಡೆಸುತ್ತಿದ್ದಾಗ ಸಂಕಷ್ಟಕ್ಕೆ ಸಿಲುಕಿದ್ದ ನಾಯಿಯನ್ನು ಕಂಡು ರಕ್ಷಿಸಿದ್ದಾರೆ. `ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಅವರು, ಜನನಿಬಿಡ ಸ್ಥಳದಲ್ಲಿ ನಾಲ್ಕೂಕಾಲು ಕಟ್ಟಿ ಹಾಕಿದ್ದ ನಾಯಿ ಯನ್ನು ನೋಡಿ ಆಶ್ಚರ್ಯವಾಯಿತು. ಕಾಲುಗಳನ್ನು ಬಿಗಿಯಾಗಿ ಕಟ್ಟಿದ್ದರಿಂದ ನಾಯಿಗೆ ಮುಂದೆ ಹೋಗಲು ಸಾಧ್ಯವಾಗುತ್ತಿರಲಿಲ್ಲ. ತಕ್ಷಣ…










