ನವದೆಹಲಿ, ಆ. 31- ಅಕ್ರಮ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು 2ನೇ ದಿನವಾದ ಶನಿವಾರವೂ ನಿರಂತರವಾಗಿ ವಿಚಾರಣೆ ನಡೆಸಿದರು. ಸೋಮವಾರ ಬೆಳಿಗ್ಗೆ 11 ಗಂಟೆಗೆ ಮತ್ತೇ ವಿಚಾರಣೆಗೆ ಹಾಜರಾಗುವಂತೆ ಅಧಿಕಾರಿ ಗಳು ಡಿಕೆಶಿಗೆ ಸಮನ್ಸ್ ನೀಡಿದ್ದಾರೆ. ಸೋಮವಾರ ಗೌರಿ-ಗಣೇಶ ಹಬ್ಬವಿರುವ ಕಾರಣ ವಿಚಾರಣೆಗೆ ಹಾಜರಾಗುವು ದರಿಂದ ವಿನಾಯಿತಿ ನೀಡುವಂತೆ ಶಿವಕುಮಾರ್ ಮಾಡಿದ ಮನವಿಯನ್ನು ಅಧಿಕಾರಿಗಳು ನಿರಾಕರಿಸಿದ್ದಾರೆ. ಶುಕ್ರವಾರ ರಾತ್ರಿ ಇಡಿ ವಿಚಾರಣೆ ಮುಗಿಸಿ ದೆಹಲಿ…
ಬಾಲಚಂದ್ರ ಜಾರಕಿಹೊಳಿ ಕೆಎಂಎಫ್ ನೂತನ ಅಧ್ಯಕ್ಷ
September 1, 2019ಬೆಂಗಳೂರು, ಆ. 31(ಕೆಎಂಶಿ)- ಜೆಡಿಎಸ್ ಮುಖಂಡ, ಮಾಜಿ ಸಚಿವ ಹೆಚ್.ಡಿ. ರೇವಣ್ಣ ಕರ್ನಾಟಕ ಸಹಕಾರಿ ಹಾಲು ಉತ್ಪಾ ದಕರ ಮಹಾಮಂಡಳಿ (ಕೆಎಂಎಫ್) ಅಧ್ಯಕ್ಷ ರಾಗುವ ಕನಸಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ ತಣ್ಣೀರೆರಚಿದ್ದಾರೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಕೆಎಂಎಫ್ ಅಧ್ಯಕ್ಷರಾಗಲು ನಿರ್ದೇಶಕರನ್ನು ಬೆನ್ನ ಹಿಂದೆ ಕಟ್ಟಿಕೊಂಡು ತಿರುಗಿದ್ದ ರೇವಣ್ಣನಿಗೆ ಇಂದು ನಡೆದ ಚುನಾವಣೆಯಲ್ಲಿ ಆ ನಿರ್ದೇಶಕರೇ ನಿಲುವು ಬದಲಾಯಿಸಿದರು. ಅಧ್ಯಕ್ಷರಾಗಲು ಅನುಮೋದಕರು ಮತ್ತು ಸೂಚಕರು ಇಲ್ಲದಿರುವುದರಿಂದ ರೇವಣ್ಣ ನಾಮಪತ್ರ ಸಲ್ಲಿಸದ ಕಾರಣ ಮಾಜಿ ಸಚಿವ ಹಾಗೂ…
ದಸರಾ ವೆಬ್‍ಸೈಟ್, ಪೋಸ್ಟರ್ ಬಿಡುಗಡೆ
September 1, 2019ಮೈಸೂರು, ಆ.31(ಆರ್‍ಕೆ)- ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹಾಗೂ ಶಾಸಕ ಎಸ್.ಎ.ರಾಮದಾಸ್ ಅವರು ಇಂದು ಮೈಸೂರಿನ ಜಲದರ್ಶಿನಿ ಅತಿಥಿಗೃಹದಲ್ಲಿ ದಸರಾ ವೆಬ್‍ಸೈಟ್ ಹಾಗೂ ಪ್ರಚಾರ ಪೋಸ್ಟರ್ ಬಿಡುಗಡೆ ಮಾಡಿದರು. 2019ರ ಮೈಸೂರು ದಸರಾ ಮಹೋತ್ಸವ ಕುರಿತು ಎಲ್ಲಾ ಮಾಹಿತಿಗಳನ್ನು ಕನ್ನಡ, ಇಂಗ್ಲಿಷ್, ಅರೇಬಿಕ್, ಚೈನಿಸ್, ಡಚ್, ಫ್ರೆಂಚ್, ಜರ್ಮನ್, ಇಟಲಿಯನ್, ಪೋರ್ಚುಗೀಸ್, ರಷ್ಯನ್, ಸ್ಪಾನಿಷ್ ಸೇರಿದಂತೆ ಒಟ್ಟು 12 ಭಾಷೆಗಳಲ್ಲಿ ಪ್ರವಾಸಿಗರಿಗೆ ವೆಬ್‍ಸೈಟ್‍ನಲ್ಲಿ ನೀಡಲಾಗುವುದು ಎಂದು ಸಚಿವರು ತಿಳಿಸಿದರು. ಕಂಪ್ಯೂಟರ್, ಮೊಬೈಲ್, ಟ್ಯಾಬ್ ಕಂಪಾಟಿಬಲ್ ಮೂಲಕವೂ…
ಮೈಸೂರು ರಾಜ ಮಾರ್ಗದಲ್ಲಿ ಸಚಿವ ಸೋಮಣ್ಣ ರೌಂಡ್ಸ್
September 1, 2019ಮೈಸೂರು,ಆ.31(ಆರ್‍ಕೆ)-ದಸರಾ ಸಿದ್ಧತಾ ಕಾರ್ಯದಲ್ಲಿ ಸಕ್ರಿಯರಾಗಿರುವ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಇಂದು ಬೆಳ್ಳಂಬೆಳಿಗ್ಗೆ ಮೈಸೂರಿನ ರಾಜಮಾರ್ಗದಲ್ಲಿ ಪಾದಯಾತ್ರೆ ನಡೆಸಿ, ಸ್ಥಿತಿ-ಗತಿಯನ್ನು ಪರಿಶೀಲಿಸಿದರು. ಬೆಳಿಗ್ಗೆ 6.30ಕ್ಕೆ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂದಿನಿಂದ ಪಾದಯಾತ್ರೆ ಆರಂಭಿಸಿದ ಸೋಮಣ್ಣ, ಬೆಳಿಗ್ಗೆ 9.30ಕ್ಕೆ ಬನ್ನಿ ಮಂಟಪದ ಪಂಜಿನ ಕವಾಯತು ಮೈದಾನ ತಲುಪಿದರು. ಸಚಿವರಿಗೆ ಸಂಸದ ಪ್ರತಾಪ್ ಸಿಂಹ, ಶಾಸಕ ಎಲ್. ನಾಗೇಂದ್ರ, ಮೇಯರ್ ಪುಷ್ಟಲತಾ ಜಗನ್ನಾಥ್ ಹಾಗೂ ಉಪ ಮೇಯರ್ ಶಫಿ ಅಹ್ಮದ್ ಸಾಥ್ ನೀಡಿದರು. ಡಸ್ಟ್‍ಬಿನ್ ಬದಲಿಸಿ: ಮುಖ್ಯಮಂತ್ರಿ…
ಪಂಜಿನ ಕವಾಯಿತು ಮೈದಾನದ ಅಭಿವೃದ್ಧಿಗೆ 30 ಕೋಟಿ ಅನುದಾನ ಕಲ್ಪಿಸಿ
September 1, 2019ಮೈಸೂರು,ಆ.31(ಆರ್‍ಕೆ)- ಮಳೆ ಯಿಂದ ರಕ್ಷಣೆ ಪಡೆಯಲು ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಂಗಣ ವನ್ನಾಗಿ ಬನ್ನಿಮಂಟಪದ ಪಂಜಿನ ಕವಾ ಯಿತು ಮೈದಾನ ಅಭಿವೃದ್ಧಿ ಪಡಿಸಲು 30 ಕೋಟಿ ರೂ. ಅನುದಾನ ಕೊಡಿಸಿ ಎಂದು ಶಾಸಕ ತನ್ವೀರ್ ಸೇಟ್ ಅವರು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರಿಗೆ ಇಂದಿಲ್ಲಿ ಮನವಿ ಮಾಡಿದರು. ಅರಮನೆಯಿಂದ ಜಂಬೂ ಸವಾರಿ ಸಾಗುವ ರಾಜಮಾರ್ಗದುದ್ದಕ್ಕೂ ಕಾಲ್ನ ಡಿಗೆ ಮೂಲಕ ಸಾಂಕೇತಿಕವಾಗಿ ಪರಿ ಶೀಲನೆ ನಡೆಸಿ ಬನ್ನಿಮಂಟಪ ತಲುಪಿದ ಸಚಿವರನ್ನು ಪಂಜಿನ ಕವಾಯಿತು ಮೈದಾನದಲ್ಲಿ ಸಂಪರ್ಕಿಸಿದ…
ಋಣ ಪರಿಹಾರ ಕಾಯ್ದೆ ಸೌಲಭ್ಯಕ್ಕೆ ಮುಗಿಬಿದ್ದ ಜನ
September 1, 2019ಮೈಸೂರು,ಆ.31(ಎಂಟಿವೈ)-ಮೈತ್ರಿ ಸರ್ಕಾರದ ಅವಧಿಯಲ್ಲಿ ಜಾರಿಗೆ ಬಂದ `ಋಣ ಪರಿಹಾರ ಕಾಯ್ದೆ’ ಸೌಲಭ್ಯ ಪಡೆ ಯಲು ಜಿಲ್ಲೆಯ ವಿವಿಧೆಡೆಯಿಂದ ನಗರಕ್ಕೆ ಧಾವಿಸುತ್ತಿರುವ ಜನರು ಮೈಸೂರು ಜಿಲ್ಲಾ ಧಿಕಾರಿ ಕಚೇರಿಯಲ್ಲಿನ ಉಪ ವಿಭಾಗಾ ಧಿಕಾರಿ ಕಚೇರಿಗೆ ಅರ್ಜಿ ಸಲ್ಲಿಸಲು ಮುಗಿ ಬೀಳುತ್ತಿದ್ದಾರೆ. ದಿನಕ್ಕೆ 2500ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆಯಾಗುತ್ತಿವೆ. ಖಾಸಗಿ ಲೇವಾದೇವಿದಾರರ ಹಾವಳಿ ತಡೆಗಟ್ಟುವುದರೊಂದಿಗೆ ಆರ್ಥಿಕವಾಗಿ ಜರ್ಝರಿತಗೊಂಡಿರುವ ಬಡ ಹಾಗೂ ಮಧÀ್ಯಮ ವರ್ಗದ ಜನರಿಗೆ ನೆರವಾಗ ಲೆಂದು ಹಿಂದಿನ ಸರ್ಕಾರ `ಕರ್ನಾಟಕ ಋಣ ಪರಿಹಾರ ಕಾಯ್ದೆ-2018’ ಜಾರಿಗೆ ತಂದಿತು. ಕಾಯ್ದೆಗೆ…
ಕರ್ನಾಟಕ ಋಣ ಪರಿಹಾರ ಕಾಯ್ದೆ ವ್ಯಾಪ್ತಿಯಿಂದ ತಮ್ಮನ್ನು ಕೈಬಿಡುವಂತೆ ಪಾನ್ ಬ್ರೋಕರ್ಸ್ ಮನವಿ
September 1, 2019ಮೈಸೂರು,ಆ.31(ಎಂಟಿವೈ)-ಸರ್ಕಾರಕ್ಕೆ ಎಲ್ಲಾ ಬಗೆಯ ತೆರಿಗೆ ಪಾವತಿಸಿ ಕಾನೂನು ಬದ್ಧವಾಗಿ ವ್ಯವಹಾರ ನಡೆ ಸುತ್ತಿರುವುದರಿಂದ ಕರ್ನಾಟಕ ಋಣ ಪರಿಹಾರ ಕಾಯ್ದೆ- 2018ರ ವ್ಯಾಪ್ತಿಗೆ ಪಾನ್ ಬ್ರೋಕರ್‍ಗಳನ್ನು ಸೇರಿಸದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪಾನ್ ಬ್ರೋಕರ್ಸ್ ಅಸೋಸಿಯೇಷನ್ ಮನವಿ ಸಲ್ಲಿಸಿದೆ. ಈ ಹಿಂದಿನ ಸರ್ಕಾರ ಜಾರಿಗೆ ತಂದಿರುವ ಕರ್ನಾ ಟಕ ಋಣ ಪರಿಹಾರ ಕಾಯ್ದೆಯಡಿ ಪಾನ್ ಬ್ರೋಕರ್ಸ್ ಗಳಲ್ಲಿ ಗಿರಿವಿ ಇಟ್ಟಿರುವ ಆಭರಣಗಳು ಬರಲಿರುವ ಹಿನ್ನೆಲೆಯಲ್ಲಿ ಈಗಾಗಲೇ ಮೈಸೂರು ಸೇರಿದಂತೆ ರಾಜ್ಯದೆಲ್ಲೆಡೆ ಆಕಾಂಕ್ಷಿಗಳು ಋಣ ಪರಿಹಾರ ಕಾಯ್ದೆಯಡಿ ಗಿರಿವಿ ಇಟ್ಟಿರುವ…
ವಿದ್ಯಾರ್ಹತೆ ನಿರ್ಬಂಧ ತೆರವು: ಇಂದಿನಿಂದ ಚಾಲನಾ ಪರಿಣಿತರೆಲ್ಲರಿಗೂ ಪರವಾನಗಿ
September 1, 2019ಮೈಸೂರು,ಆ.31(ಎಂಟಿವೈ)- ವಾಹನ ಚಾಲನಾ ಪರವಾನಗಿ ನೀಡಲು ಕಡ್ಡಾಯ ವಿದ್ಯಾರ್ಹತೆಯ ಮಾನದಂಡ ತೆಗೆದು ಹಾಕುವಂತೆ ನಡೆಸಿದ ನಾಲ್ಕು ವರ್ಷಗಳ ಹೋರಾ ಟಕ್ಕೆ ಜಯ ಸಂದಿದ್ದು, ಕೇಂದ್ರ ಸರ್ಕಾರ ನಿಯಮವನ್ನು ಸಡಿಲ ಗೊಳಿಸಿ ಆದೇಶ ಹೊರಡಿಸಿದೆ. ಸೆ. 1ರಿಂದ ಜಾರಿಗೆ ಬರುವಂತೆ ಚಾಲನೆಯಲ್ಲಿ ಪರಿ ಣತಿ ಹೊಂದಿರುವವರಿಗೆಲ್ಲಾ ಪರವಾನಗಿ ನೀಡಲಿದೆ ಎಂದು ಶಾಸಕ ಎಸ್.ಎ. ರಾಮದಾಸ್ ತಿಳಿಸಿದ್ದಾರೆ. ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ವಾಹನ ಚಾಲನಾ ಪರವಾನಗಿ ನೀಡಲು 8ನೇ ತರಗತಿ ವಿದ್ಯಾರ್ಹತೆ ಕಡ್ಡಾಯಗೊ ಳಿಸಲಾಗಿತ್ತು….
ನಮ್ಮದು ಅತಿಥಿ ದೇವೋಭವಃ ಸಂಸ್ಕೃತಿ
September 1, 2019ಮೈಸೂರು,ಆ.31(ಎಂಟಿವೈ)- ರಾಜ್ಯ ದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಕೆಲವರು ಕಾರಣರಾಗಿದ್ದಾರೆ. ಪಕ್ಷಕ್ಕೆ ಹೊಸದಾಗಿ ಬಂದಿರುವ ಅತಿಥಿಗಳಿಗೆ ಆದ್ಯತೆ ನೀಡಲಾಗುತ್ತಿದೆ. ಇದರಿಂದ ನನಗೆ ಸಚಿವ ಸ್ಥಾನ ಸಿಕ್ಕಿಲ್ಲ ಎಂಬ ನೋವು, ಬೇಸರ ಇಲ್ಲ. ದಸರಾ ಕಾರ್ಯಕ್ರಮ ಗಳಲ್ಲಿ ಇನ್ನು ಮುಂದೆ ಸಕ್ರಿಯವಾಗಿ ಪಾಲ್ಗೊಳ್ಳುತ್ತೇನೆ ಎಂದು ಶಾಸಕ ಎಸ್.ಎ. ರಾಮದಾಸ್ ತಿಳಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭÀವನ ದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅತಿಥಿ ದೇವೋ ಭÀವಃ ಎನ್ನುವ ಸಂಸ್ಕøತಿ ನಮ್ಮದು. ಹೀಗಾಗಿ ಪಕ್ಷಕ್ಕೆ ಬರುವ ಅತಿಥಿಗಳಿಗೆ…
ಹುಬ್ಬಳ್ಳಿ ಟೈಗರ್ಸ್ ಕೆಪಿಎಲ್ ಚಾಂಪಿಯನ್
September 1, 2019ಮೈಸೂರು,ಆ.31(ವೈ.ಡಿ.ಶೇಖರ್)- ಬಳ್ಳಾರಿ ಟಸ್ಕರ್ಸ್ ವಿರುದ್ಧ ಹುಬ್ಬಳ್ಳಿ ಟೈಗರ್ಸ್ 8 ರನ್‍ಗಳ ಜಯ ಸಾಧಿಸುವ ಮೂಲಕ 8ನೇ ಆವೃತ್ತಿಯ ಕೆಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಅಲ್ಲದೇ ಇದೇ ಪ್ರಥಮ ಬಾರಿಗೆ ಟ್ರೋಫಿ ಗೆದ್ದ ಸಾಧನೆ ಮಾಡಿತು. ಇಲ್ಲಿನ ಮಾನಸ ಗಂಗೋತ್ರಿಯ ಗ್ಲೈಡ್ಸ್ ಮೈದಾನದಲ್ಲಿ ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಹುಬ್ಬಳ್ಳಿ ಟೈಗರ್ಸ್ ನಿಗದಿತ 20 ಓವರ್‍ಗಳಲ್ಲಿ 6ವಿಕೆಟ್ ಕಳೆದುಕೊಂಡು 152ರನ್‍ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತ್ತು. ತಂಡದ ಪರ ಇನ್ನಿಂಗ್ಸ್ ಆರಂಭಿಸಿದ ಮಹಮ್ಮದ್…










