ಬುಡಕಟ್ಟು ಅಕಾಡೆಮಿ ಸ್ಥಾಪಿಸಿ, ವಿಶೇಷ ಸ್ಥಾನಮಾನ ನೀಡಿ
ಮೈಸೂರು

ಬುಡಕಟ್ಟು ಅಕಾಡೆಮಿ ಸ್ಥಾಪಿಸಿ, ವಿಶೇಷ ಸ್ಥಾನಮಾನ ನೀಡಿ

August 31, 2019

ಮೈಸೂರು, ಆ.30(ಆರ್‍ಕೆಬಿ)- ಬುಡಕಟ್ಟು ಜನಾಂಗವನ್ನು ಕಡೆಗಣಿಸುವುದನ್ನು ಬಿಟ್ಟು ಸರ್ಕಾರ ಪ್ರತ್ಯೇಕ ಬುಡಕಟ್ಟು ಅಕಾಡೆಮಿ ಸ್ಥಾಪಿಸಿ, ಬುಡಕಟ್ಟು ಜನಾಂಗದವರಿಗೆ ವಿಶೇಷ ಸ್ಥಾನಮಾನ ಕಲ್ಪಿಸಬೇಕು ಎಂದು ಬೆಂಗಳೂರು ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಡಾ.ಎಸ್.ಬಾಲಾಜಿ ಆಗ್ರಹಿಸಿದರು.

ಮೈಸೂರಿನ ಕುವೆಂಪುನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮೈಸೂರು ಜಿಲ್ಲಾ ಕನ್ನಡ ಜಾನ ಪದ ಪರಿಷತ್ ಶುಕ್ರವಾರ ಆಯೋಜಿಸಿದ್ದ `ವಿಶ್ವ ಬುಡ ಕಟ್ಟು ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿ ದರು. ಬುಡಕಟ್ಟು ಜನಾಂಗವನ್ನು ಸರ್ಕಾರ ಕಡೆಗಣಿಸು ತ್ತಿದೆ. ಕರ್ನಾಟಕದಲ್ಲಿ 13 ಜಾನಪದ ಅಕಾಡೆಮಿ ಅಧ್ಯಕ್ಷ ರಾಗಿದ್ದಾರೆ. ಆದರೆ ಒಬ್ಬರೂ ಬುಡಕಟ್ಟು ಅಧ್ಯಕ್ಷರಿಲ್ಲ. ಆದ್ದರಿಂದ ಸರ್ಕಾರ ಪ್ರತ್ಯೇಕ ಬುಡಕಟ್ಟು ಅಕಾಡೆಮಿ ಸ್ಥಾಪನೆ ಮಾಡಬೇಕು ಎಂದು ಒತ್ತಾಯಿಸಿದರು.

ಬುಡಕಟ್ಟು ಜಾನಪದ ಕಲಾವಿದರಿಗೆ ಯಾವುದೇ ಸ್ಥಾನಮಾನ ನೀಡದೆ ಮೂಲೆಗುಂಪು ಮಾಡ ಲಾಗುತ್ತಿದೆ. ನಗರೀಕರಣದೊಂದಿಗೆ ಅಂಟಿಕೊಳ್ಳದೇ ಕಲಾವಿದರು ನೈಜತೆ ಉಳಿಸಿಕೊಂಡಿದ್ದಾರೆ ಎಂದರು. ಈ ವರ್ಷ ಬುಡಕಟ್ಟು ದಿನಾಚರಣೆ ಅಂಗವಾಗಿ ಹೊಸಪೇಟೆ ತಾಲೂಕಿನ ಕೆಲವು ವಿದ್ಯಾರ್ಥಿಗಳು, ಹಂಪಿ ವಿವಿಯ ಹಲವು ವಿದ್ಯಾರ್ಥಿಗಳನ್ನು ಒಳ ಗೊಂಡ ಯುವ ಘಟಕ ಉದ್ಘಾಟನೆ ಮಾಡಲಾಗು ತ್ತಿದೆ ಎಂದರು. ಬುಡಕಟ್ಟು ಜನರ ಕುರಿತು ಹೆಚ್ಚಿನ ಸಂಶೋ ಧನೆಗಳು ನಡೆಯಬೇಕು. ಪದವಿಪೂರ್ವ ಶಿಕ್ಷಣದಲ್ಲಿ ಜಾನಪದ ಐಚ್ಛಿಕ ವಿಷಯವಾಗಿ ಸೇರಿಸುವ ಕುರಿತು ಹೋರಾಟ ನಡೆಸಲಾಗುವುದು ಎಂದು ಹೇಳಿದರು.

ಸಾಹಿತಿ ಡಿ.ಎನ್.ಕೃಷ್ಣಮೂರ್ತಿ ಮಾತನಾಡಿ, ಪುರಾತನ ಇತಿಹಾಸವುಳ್ಳ ಜಾನಪದ ಸಂಸ್ಕøತಿ ನಾಗರಿ ಕತೆ ಬೆಳೆದಂತೆಲ್ಲ ಬದಲಾವಣೆಯ ಮಾರ್ಗ ಕಂಡು ಕೊಂಡು, ಪರಿವರ್ತನೆಯ ಹಾದಿಯಲ್ಲಿ ಸಾಗಿ ಬಂದಿದೆ. 21ನೇ ಶತಮಾನದಲ್ಲಿ ಆಧುನಿಕ ಯುಗದಲ್ಲಿ ಕೆಲಸ ಕ್ಕಿಂತಲೂ ಅಧಿಕ ಮಂದಿ ಹಾಡಿಯಲ್ಲಿದ್ದಾರೆ. ಶೇ.8.6 ಮಂದಿ ಕಾಡು ಬಿಟ್ಟು ಬರುತ್ತಿಲ್ಲ. ಅವರ ಸಂಸ್ಕøತಿ ಉಳಿಸಿ ನಾಗರಿಕತೆಗೆ ಬಂದು ನಮ್ಮ ಜೀವನ ನಡೆಸಲು ಆಗು ತ್ತದೋ ಇಲ್ಲವೋ ಎಂಬ ಭಾವನೆ ಅವರಲ್ಲಿರ ಬಹುದು. ಅವರು ಇರುವಲ್ಲಿಯೇ ಅವರಿಗೆ ಸೌಲಭ್ಯ ಕಲ್ಪಿಸಿ ಶಿಕ್ಷಣ ನೀಡಬೇಕು ಎಂದು ಒತ್ತಾಯಿಸಿದರು.

ಇದೇ ಸಂದರ್ಭದಲ್ಲಿ ಬುಡಕಟ್ಟು ಜನಾಂಗದ ಸಾಧಕ ರಾದ ಪಿರಿಯಾಪಟ್ಟಣದ ಜಾನಕಮ್ಮ, ಹೆಚ್.ಡಿ. ಕೋಟೆಯ ಪಾರ್ವತಿ, ಹುಣಸೂರು ತಾಲೂಕಿನ ಸೃಜನಾರನ್ನು ಸನ್ಮಾನಿಸಲಾಯಿತು.

Translate »