ನಾಲ್ಕೂಕಾಲು ಕಟ್ಟಿ ರಸ್ತೆಯಲ್ಲಿ ಸಾಯಲು ಬಿಟ್ಟಿದ್ದನಾಯಿಯನ್ನು ರಕ್ಷಿಸಿದ ಹೃದಯವಂತರು
Uncategorized, ಮೈಸೂರು

ನಾಲ್ಕೂಕಾಲು ಕಟ್ಟಿ ರಸ್ತೆಯಲ್ಲಿ ಸಾಯಲು ಬಿಟ್ಟಿದ್ದನಾಯಿಯನ್ನು ರಕ್ಷಿಸಿದ ಹೃದಯವಂತರು

August 30, 2019

ಮೈಸೂರು,ಆ.29-ನಾಲ್ಕೂಕಾಲುಗಳನ್ನು ಬಿಗಿಯಾಗಿ ಕಟ್ಟಿ ಸಾಯಲು ರಸ್ತೆಯಲ್ಲಿ ಬಿಟ್ಟಿದ್ದ ನಾಯಿಯೊಂದನ್ನು ಮೈಸೂರಿನ ಚಾಮುಂಡಿಬೆಟ್ಟದ ರಸ್ತೆಯಲ್ಲಿ ರಕ್ಷಿಸಲಾಗಿದೆ.

ಅದೃಷ್ಟವಶಾತ್ ಈ ನಾಯಿಯನ್ನು ಹೃದಯವಂತ ವ್ಯಕ್ತಿಯೊಬ್ಬರು ದತ್ತು ಪಡೆದುಕೊಂಡಿದ್ದಾರೆ. ಚಿಕಿತ್ಸೆ ಯನ್ನೂ ಕೊಡಿಸಿದ್ದಾರೆ. ಮೈಸೂರಿನ ಅಜಿತ್ ತಂಡೂರ್ ಬುಧವಾರ ಚಾಮುಂಡಿಬೆಟ್ಟದ ರಸ್ತೆಯಲ್ಲಿ ವಾಯುವಿಹಾರ ನಡೆಸುತ್ತಿದ್ದಾಗ ಸಂಕಷ್ಟಕ್ಕೆ ಸಿಲುಕಿದ್ದ ನಾಯಿಯನ್ನು ಕಂಡು ರಕ್ಷಿಸಿದ್ದಾರೆ.

`ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಅವರು, ಜನನಿಬಿಡ ಸ್ಥಳದಲ್ಲಿ ನಾಲ್ಕೂಕಾಲು ಕಟ್ಟಿ ಹಾಕಿದ್ದ ನಾಯಿ ಯನ್ನು ನೋಡಿ ಆಶ್ಚರ್ಯವಾಯಿತು. ಕಾಲುಗಳನ್ನು ಬಿಗಿಯಾಗಿ ಕಟ್ಟಿದ್ದರಿಂದ ನಾಯಿಗೆ ಮುಂದೆ ಹೋಗಲು ಸಾಧ್ಯವಾಗುತ್ತಿರಲಿಲ್ಲ. ತಕ್ಷಣ ಹತ್ತಿರ ಮನೆಯೊಂದರ ವಾಚ್‍ಮನ್ ಬಳಿ ಹೋಗಿ ಬ್ಲೇಡ್ ಪಡೆದುಕೊಂಡು ದಾರವನ್ನು ತುಂಡರಿಸಿದೆ. ನನ್ನ ವಾಹನವನ್ನು ತೆಗೆದು ಕೊಂಡು ಬರುವವರೆಗೆ ನಾಯಿಯನ್ನು ನೋಡಿಕೊಳ್ಳಿ ಎಂದು ವಾಚ್‍ಮನ್‍ಗೆ ಹೇಳಿದೆ’’.

ವಾಹನ ತೆಗೆದುಕೊಂಡು ಬರುವಷ್ಟರಲ್ಲಿ ನಾಯಿ ಕಾಣೆ ಯಾಗಿತ್ತು. ನಂತರ ನಾಯಿಯನ್ನು ರಸ್ತೆಯುದ್ದಕ್ಕೂ ಹುಡು ಕಲು ಆರಂಭಿಸಿದೆ. ದೂರದಲ್ಲಿ ಕುಂಟುತ್ತಾ ಸಾಗಿದ್ದ ಆ ನಾಯಿ ಸಿಕ್ಕಿತು. ಬಿಗಿಯಾಗಿ ಕಟ್ಟಿದುದ್ದರಿಂದ ನಾಯಿಯ ಕಾಲಿನ ಚರ್ಮ ಕಿತ್ತು ಬಂದು, ನಿಜ ವಾಗಲೂ ನೋವು ಮತ್ತು ಭಯ ದಲ್ಲಿತ್ತು. ನಾಯಿಯ ದೇಹದ ಹಲ ವೆಡೆ ಗಾಯಗಳಾಗಿತ್ತು. ಹಾಗಾಗಿ ನಾನು ನಾಯಿಯನ್ನು ಎತ್ತಿ ನನ್ನ ವಾಹನದಲ್ಲಿ ಕುಳ್ಳಿರಿಸಿಕೊಂಡು ಮನೆಗೆ ಕರೆದುಕೊಂಡು ಬಂದೆ’’ ಎಂದರು.

ಸಾಮಾಜಿಕ ಜಾಲತಾಣದಲ್ಲಿ ಚಿತ್ರಗಳು: ಬಳಿಕ ಅಜಿತ್ ತಂಡೂರ್ ಅವರು ನಾಯಿಯ ಚಿತ್ರದೊಂದಿಗೆ ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣದ ರನ್ನರ್ಸ್ ಗ್ರೂಪ್‍ನಲ್ಲಿ ಬರೆದಾಗ, ಸಹೃದಯಿಯೊಬ್ಬರು ಮುಂದೆ ಬಂದು ಆ ನಾಯಿಯ ಆರೈಕೆ ಮಾಡುವುದಾಗಿ ತಮ್ಮ ಇಂಗಿತ ವ್ಯಕ್ತಪಡಿಸಿದರು. ಬಳಿಕ ಅವರು ಆ ನಾಯಿಗೆ ಪಶು ವೈದ್ಯರೊಬ್ಬರಿಂದ ಚಿಕಿತ್ಸೆ ಕೊಡಿಸಿ ತನ್ನ ಸ್ನೇಹಿತನ ಕಂಪನಿಯ ಮೈದಾನದಲ್ಲಿ ಸ್ವಚ್ಛಂದವಾಗಿ ಓಡಾಡಲು ಬಿಟ್ಟಿರುವುದನ್ನು ನೋಡಿ ನನಗೆ ತುಂಬಾ ಸಂತೋಷವಾಗಿದೆ ಎಂದು `ಮಿತ್ರ’ನೊಂದಿಗೆ ಮಾಹಿತಿ ನೀಡಿದರು.ನಾಯಿಯ ಕಾಲುಗಳನ್ನು ಕಟ್ಟಿ ರಸ್ತೆಯಲ್ಲಿ ಬಿಟ್ಟಿದ್ದ ಕ್ರೂರಿ ಗಳು ಯಾರೆಂಬುದು ಮಾತ್ರ ಈವರೆಗೂ ತಿಳಿದುಬಂದಿಲ್ಲ.

ನಾಯಿಗಳ ದತ್ತು ಸ್ವೀಕಾರ: ಮೈಸೂರಿನ ಬೋಗಾದಿ ರಸ್ತೆಯ ರೂಪಾನಗರ, ಎಸ್‍ಬಿಎಂ ಬಡಾವಣೆಯಲ್ಲಿರುವ ಪೀಪಲ್ ಫಾರ್ ಅನಿಮಲ್ (ಪಿಎಫ್‍ಎ), ಮೈಸೂರು ಘಟ ಕವು 150 ನಾಯಿಗಳನ್ನು ರಕ್ಷಿಸಿ, ಸಲಹುತ್ತಿದೆ. ಇನ್ನೂ ಹೆಚ್ಚಿನ ನಾಯಿಗಳನ್ನು ದತ್ತು ಸ್ವೀಕರಿಸಲು ಸಿದ್ಧವಾಗಿದೆ. ಪಿಎಫ್‍ಎ ಒಂದು ಲಾಭರಹಿತ ಸಂಸ್ಥೆಯಾಗಿದ್ದು, ಅನಾಥ, ರೋಗಪೀಡಿತ ಬೆಕ್ಕು, ನಾಯಿಗಳಿಗೆ ಆಶ್ರಯ ನೀಡುತ್ತಿದೆ.

ಪಿಎಫ್‍ಎ ವ್ಯವಸ್ಥಾಪಕ ಟ್ರಸ್ಟಿ ಸವಿತಾ ನಾಗಭೂಷಣ್ ಮಾತನಾಡಿ, “ನಾವು ದತ್ತು ತೆಗೆದುಕೊಂಡ ಎಲ್ಲಾ ಪ್ರಾಣಿ ಗಳನ್ನು ಮನೆಗಳಲ್ಲಿ ಇರಿಸಲು ಪ್ರಯತ್ನಿಸುತ್ತೇವೆ. ನಾಯಿಗಳು, ಪಪ್ಪೀಸ್, ಬೆಕ್ಕು ದತ್ತು ನೀಡುವುದಕ್ಕೆ ಮೊದಲು ಅವು ಗಳನ್ನು ಪರೀಕ್ಷಿಸಿ ಚುಚ್ಚುಮದ್ದು ಮತ್ತು ಚಿಕಿತ್ಸೆ ನೀಡಲಾಗು ವುದು. ಈ ಸೇವೆಯನ್ನು ಕಳೆದ 9 ವರ್ಷಗಳಿಂದ ಮಾಡು ತ್ತಿದ್ದೇನೆ. ಪ್ರಾಣಿಗಳನ್ನು ದತ್ತುಪಡೆದುಕೊಳ್ಳಲು ಮುಂದೆ ಬರುವವರನ್ನು ಸ್ವಾಗತಿಸುತ್ತೇನೆ. ಹಾಗೂ ಮೂಕ ಜೀವಿಗಳಿಗೆ ಈ ಜಗತ್ತನ್ನು ಉತ್ತಮ ಸ್ಥಳವನ್ನಾಗಿ ಮಾಡಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ ಎಂದರು. ಯಾರಾದರೂ ಪ್ರಾಣಿ ಗಳನ್ನು ರಕ್ಷಿಸಬೇಕು ಎಂದು ಭಾವಿಸಿದರೆ ಪಿಎಫ್‍ಎ ದೂ. 0821-2598213, ಮೊ. 9845654429 ಸಂಪರ್ಕಿಸಿ.

Translate »