ಬೆಂಗಳೂರು,ಆ.31-ಅಕ್ರಮವಾಗಿ ಬಿಪಿಎಲ್ ಕಾರ್ಡ್ ದುರು ಪಯೋಗಪಡಿಸಿಕೊಂಡು, ಪಡಿತರ ಧಾನ್ಯ ಪಡೆಯುತ್ತಿರುವವರ ವಿರುದ್ಧ ಸರ್ಕಾರ ಕ್ರಮಕ್ಕೆ ಮುಂದಾಗಿದೆ. ಹೀಗಾಗಿ ಅಕ್ರಮ ಬಿಪಿಎಲ್ ಕಾರ್ಡ್‍ದಾರರು ಕ್ರಮ ತೆಗೆದುಕೊಳ್ಳುವ ಮೊದಲು ಕಾರ್ಡ್ ಗಳನ್ನು ಹಿಂದಿರುಗಿಸುವಂತೆ, ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಕುರಿತು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಪ್ರಕಟಣೆ ಹೊರಡಿಸಿದ್ದು, ಇದೊಂದು ಎಚ್ಚರಿಕೆಯ ಸಂದೇಶ. ಆರ್ಥಿಕವಾಗಿ ದುರ್ಬಲರಿರುವ ಕುಟುಂಬ ಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ನೀಡುತ್ತಿರುವ ಬಿಪಿಎಲ್ ಪಡಿತರವನ್ನು ಕೆಲವು ಸದೃಢ ಕುಟುಂಬಗಳು ಸುಳ್ಳು ಮಾಹಿತಿ ನೀಡಿ ಪಡೆದುಕೊಂಡು, ಸರ್ಕಾರಕ್ಕೆ ವಂಚನೆ ಮಾಡಿದ್ದಾರೆ. ಹೀಗಾಗಿ ಇದೀಗ ರಾಜ್ಯ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ ಎಂದು ತಿಳಿಸಿದೆ.
ಇನ್ನೂ ಯಾವ ಯಾವ ರೀತಿಯಲ್ಲಿ ಬಿಪಿಎಲ್ ಕಾರ್ಡ್ ವಂಚನೆ ನಡೆಯುತ್ತಿದೆ ಎಂಬುದನ್ನು ಹಂತ ಹಂತವಾಗಿ ಪ್ರಕಟಣೆಯಲ್ಲಿ ತಿಳಿಸಿದ್ದು, ಆದಾಯ ತೆರಿಗೆ ಪಾವತಿಸುತ್ತಿರುವ ಮತ್ತು 1000 ಚದುರಡಿಗಿಂತ ದೊಡ್ಡದಾದ ಪಕ್ಕಾ ಮನೆ ಹೊಂದಿರುವ ಕೆಲವು ಕುಟುಂಬಗಳು ಬಿಪಿಎಲ್ ಕಾರ್ಡ್ ಪಡೆದು ವಂಚಿಸಿದ್ದಾರೆ.
ಶಿಕ್ಷಣ, ಸಾರಿಗೆ, ವಿದ್ಯುತ್, ರೈಲ್ವೆ, ಪೆÇಲೀಸ್ ಮೊದಲಾದ ಇಲಾಖೆಗಳಲ್ಲಿ ಸರ್ಕಾರಿ ನೌಕರಿ ಮಾಡುತ್ತಿರುವ ಕೆಲವರು, ತಮ್ಮ ಹೆಸರನ್ನು ಹೊರತುಪಡಿಸಿ, ಕುಟುಂಬದ ಇತರರ ಹೆಸರಿನಲ್ಲಿ ಬಿಪಿಎಲ್ ಕಾರ್ಡ್ ಪಡೆದು ವಂಚಿಸಿದ್ದಾರೆ.
ಸಹಕಾರ ಸಂಘಗಳ ಖಾಯಂ ನೌಕರರು, ಸ್ವಾಯತ್ತ ಸಂಸ್ಥೆ, ಮಂಡಳಿಗಳ ನೌಕರರು, ಬ್ಯಾಂಕ್ ನೌಕರರು, ಆಸ್ಪತ್ರೆ ನೌಕರರು, ವಕೀಲರು, ಆಡಿಟರ್ಸ್, ದೊಡ್ಡ ಅಂಗಡಿ, ಹೋಟೆಲ್ ವರ್ತ ಕರು ಬಿಪಿಎಲ್ ಪಡೆದು ವಂಚಿಸಿದ್ದಾರೆ. ಸ್ವಂತ ಕಾರು, ಲಾರಿ, ಜೆಸಿಬಿ ಮೊದಲಾದ ವಾಹನ ಹೊಂದಿರುವವರು, ಅನುದಾನಿತ ಶಾಲಾ-ಕಾಲೇಜು ನೌಕರರು, ಗುತ್ತಿಗೆದಾರರು, ಕಮಿಷನ್ ಏಜೆಂಟ್‍ಗಳು, ಮನೆ, ಮಳಿಗೆ, ಕಟ್ಟಡಗಳನ್ನು ಬಾಡಿಗೆಗೆ ನೀಡಿ ವರಮಾನ ಪಡೆಯುತ್ತಿರುವವರು, ಬಹುರಾಷ್ಟ್ರೀಯ ಕಂಪನಿ ಉದ್ದಿಮೆದಾರರು, ನಿವೃತ್ತಿ ವೇತನ ಪಡೆಯುತ್ತಿರುವ ಸರ್ಕಾರಿ ನೌಕರರು ಬಿಪಿಎಲ್ ಪಡೆದು ವಂಚಿಸಿದ್ದಾರೆ.
ಸರ್ಕಾರವು ಬಿಪಿಎಲ್ ಪಡಿತರ ಚೀಟಿ ಪಡೆಯಲು ರೂ.1.20 ಲಕ್ಷ ರೂಗಳೊಳಗೆ ಕುಟುಂಬದ ಆದಾಯ ನಿಗದಿಪಡಿಸಲಾ ಗಿದ್ದು, ಈ ಆದಾಯವನ್ನು ಮೀರಿದ ಕುಟುಂಬಗಳು ಬಿಪಿಎಲ್ ಪಡೆದು ವಂಚಿಸಿದ್ದಾರೆ. ಹೀಗಾಗಿ, ಈ ವಂಚಕರನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಪತ್ತೆ ಮಾಡುತ್ತಿದೆ. ಒಂದು ವೇಳೆ ಇಂತಹ ಬಿಪಿಎಲ್ ಕಾರ್ಡ್ ಪಡೆದುಕೊಂಡಿದ್ದು ದೃಢವಾದರೆ, ಸೆಪ್ಟೆಂಬರ್ 30, 2019ರ ಒಳಗಾಗಿ ಕೂಡಲೇ ಕಚೇರಿಗೆ ತಲುಪಿ ಸಬೇಕಿದೆ. ಇಲ್ಲವಾದಲ್ಲಿ, ಅಂತಹ ಪಡಿತರದಾರರು ಪತ್ತೆಯಾದರೆ ಎಲ್ಲಿಂದ ಕಾರ್ಡ್ ಪಡೆದು, ಆಹಾರ ಪಡಿತರ ಪಡೆದಿದ್ದಾರೋ ಅಲ್ಲಿಂದಲೂ ಅವರಿಂದ ವಸೂಲಿ ಮಾಡಲಾಗುತ್ತದೆ ಎಂದು ಖಡಕ್ ಆಗೇ ಪ್ರಕಟಣೆಯಲ್ಲಿ ತಿಳಿಸಿದೆ. ಅಕ್ರಮವಾಗಿ ಬಿಪಿಎಲ್ ಕಾರ್ಡ್ ಪಡೆದು, ಪಡಿತರ ಪಡೆಯುತ್ತಿರುವ ಸಬಲರು, ಸದೃಢರು, ಸೆ.30, 2019ರ ಒಳಗಾಗಿ ತಾವಾಗಿಯೇ ಹಿಂದುರುಗಿಸದೇ ಹೋದರೆ, ಸಿಕ್ಕಿಬಿದ್ದಾಗ, ಕಠಿಣ ಕ್ರಮಕ್ಕೆ ಗುರಿಯಾಗುವುದು ಗ್ಯಾರಂಟಿಯಾಗಿದೆ.