ಗಣೇಶ ಚತುರ್ಥಿ, ಮೊಹರಂ ಹಿನ್ನೆಲೆ: ಮೈಸೂರಲ್ಲಿ ಪೊಲೀಸರಿಗೆ ಸೌಹಾರ್ದ ಸಭೆ
ಮೈಸೂರು

ಗಣೇಶ ಚತುರ್ಥಿ, ಮೊಹರಂ ಹಿನ್ನೆಲೆ: ಮೈಸೂರಲ್ಲಿ ಪೊಲೀಸರಿಗೆ ಸೌಹಾರ್ದ ಸಭೆ

September 1, 2019

ಮೈಸೂರು,ಆ.31(ಆರ್‍ಕೆ)- ಗೌರಿ-ಗಣೇಶ ಹಾಗೂ ಮೊಹರಂ ಹಬ್ಬದ ಹಿನ್ನೆಲೆಯಲ್ಲಿ ಮೈಸೂರು ನಗರ ಪೊಲೀ ಸರು ಶನಿವಾರ ಸೌಹಾರ್ದ ಶಾಂತಿ ಸಭೆ ನಡೆಸಿದರು. ಮೈಸೂರಿನ ಲಲಿತ ಮಹಲ್ ರಸ್ತೆಯಲ್ಲಿರುವ ಪೊಲೀಸ್ ಭವನದಲ್ಲಿ ಏರ್ಪಡಿಸಿದ್ದ ಶಾಂತಿ ಸಭೆಯ ಅಧ್ಯಕ್ಷತೆ ವಹಿ ಸಿದ್ದ ಕಾನೂನು ಸುವ್ಯವಸ್ಥೆ ಡಿಸಿಪಿ ಎಂ.ಮುತ್ತುರಾಜ್ ಅವರು, ಗೌರಿ-ಗಣೇಶ ಪ್ರತಿಷ್ಠಾಪಿಸಿ ವಿಸರ್ಜನೆ ಮೆರ ವಣಿಗೆ ವೇಳೆ ಶಾಂತಿ-ಸುವ್ಯವಸ್ಥೆ ಕಾಪಾಡಬೇಕು ಎಂದರು.

ಗಣಪತಿ ಪ್ರತಿಷ್ಠಾಪನೆ, ಪೂಜೆ ನೆಪದಲ್ಲಿ ಚಂದಾ ವಸೂಲಿ, ಬಲವಂತ ಮಾಡುವುದು ಅಪರಾಧವಾಗಿದ್ದು, ರಾತ್ರಿ 10 ಗಂಟೆ ನಂತರ ಧ್ವನಿವರ್ಧಕ ಬಳಸುವುದು, ಮೆರವಣಿಗೆ ವೇಳೆ ಸಾರ್ವಜನಿಕರ ಶಾಂತಿಗೆ ಭಂಗ ತರುವುದು ಕಂಡುಬಂದಲ್ಲಿ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಅದೇ ರೀತಿ ಮೊಹರಂ ಆಚರಣೆ ಸಂಬಂಧ ಯಾವುದೇ ಕಾರ್ಯಕ್ರಮ ಆಯೋಜಿಸಬೇಕಾದರೂ, ಆ ವ್ಯಾಪ್ತಿಯ ಪೊಲೀಸ್ ಠಾಣೆಯಿಂದ ಅನುಮತಿ ಪಡೆಯಬೇಕು. ಆ ವೇಳೆ ಸಾರ್ವಜನಿಕರಿಗೆ ತೊಂದರೆ ಆಗದಂತೆ ಎಚ್ಚರ ವಹಿಸಿ ಸಮಾಜದ ಶಾಂತಿ ಕಾಪಾಡಬೇಕೆಂದು ಅವರು ಇದೇ ವೇಳೆ ಸಲಹೆ ನೀಡಿದರು. ಸಂಚಾರ ಡಿಸಿಪಿ ಬಿ.ಟಿ.ಕವಿತಾ, ಎಸಿಪಿಗಳಾದ ಎಸ್.ಜಿ. ಗಜೇಂದ್ರ ಪ್ರಸಾದ್, ಸಿ. ಗೋಪಾಲ್, ಲೋಕೇಶ್ ಎಲ್ಲಾ ಠಾಣೆಗಳ ಇನ್ಸ್‍ಪೆಕ್ಟರ್‍ಗಳು, ವಿವಿಧ ಸಂಘಟನೆಗಳ ಪ್ರಮುಖರು, ಜನಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

Translate »