ಜನ್ಮಕೊಟ್ಟ ಮಗುವನ್ನೇ ಹತ್ಯೆಗೈದ ಪಾಪಿ ತಂದೆಗೆ ಜೀವಾವಧಿ ಶಿಕ್ಷೆ
ಮೈಸೂರು

ಜನ್ಮಕೊಟ್ಟ ಮಗುವನ್ನೇ ಹತ್ಯೆಗೈದ ಪಾಪಿ ತಂದೆಗೆ ಜೀವಾವಧಿ ಶಿಕ್ಷೆ

September 1, 2019

ಮೈಸೂರು,ಆ.31(ಎಸ್‍ಬಿಡಿ)-ಪತ್ನಿ ಮೇಲಿನ ಕೋಪಕ್ಕೆ ಏನೂ ಅರಿಯದ ತನ್ನ ಎರಡೂವರೆ ವರ್ಷದ ಮಗುವನ್ನು ಬ್ಲೇಡ್‍ನಿಂದ ಕೊಯ್ದು ಹತ್ಯೆ ಮಾಡಿದ್ದ ಪಾಪಿ ತಂದೆಗೆ ಮೈಸೂರಿನ 4ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾ ವಧಿ ಶಿಕ್ಷೆ ವಿಧಿಸಿದೆ.

ತಿ.ನರಸೀಪುರ ತಾಲೂಕು ತಲಕಾಡು ಗ್ರಾಮದ ಹೇಮಂತ್ ಕುಮಾರ್ ತಾನು ಜನ್ಮ ನೀಡಿದ ಮಗಳನ್ನೇ ಕೊಂದ ಪಾಪಿ. ಈತ ಪತ್ನಿ ಪವಿತ್ರಾ ಹಾಗೂ ಮಗಳು ರಿತ್ಯನ್ಯಾಳೊಂದಿಗೆ ಮೈಸೂರಿನ ಹೂಟಗಳ್ಳಿ ಹೊನ್ನೇಗೌಡ ಬ್ಲಾಕ್‍ನಲ್ಲಿ ವಾಸವಿದ್ದ. ಸಂಸಾರದಲ್ಲಿ ಅನ್ಯೊನ್ಯತೆ ಇರಲಿಲ್ಲ. ಸಣ್ಣ ವಿಚಾರಕ್ಕೂ ದಂಪತಿ ನಡುವೆ ಗಲಾಟೆ ನಡೆಯುತ್ತಿತ್ತು. 2016 ನವೆಂಬರ್ 20 ರಂದು ಚನ್ನರಾಯಪಟ್ಟಣದಲ್ಲಿ ನಡೆದ ಸಂಬಂಧಿಕರೊಬ್ಬರ ವಿವಾಹಕ್ಕೆ ಹೋಗುವ ವಿಚಾರಕ್ಕೆ ಜಗಳವಾಗಿತ್ತು. ಮದುವೆ ಛತ್ರದ ಬಳಿಯೂ ದಂಪತಿ ಮಾತಿನ ಚಕಮಕಿ ನಡೆಸಿದ್ದರು. ಇದರಿಂದ ಕುಪಿತಗೊಂಡ ಹೇಮಂತ್‍ಕುಮಾರ್ ಆತ್ಮಹತ್ಯೆ ಮಾಡಿ ಕೊಳ್ಳಲು ನಿರ್ಧರಿಸಿ, ಯಾರಿಗೂ ತಿಳಿಸದೆ ಮಗಳು ರಿತ್ಯನ್ಯಾಳನ್ನು ಕರೆದುಕೊಂಡು ಮೈಸೂರಿಗೆ ಬಂದಿದ್ದ.

ಹೂಟಗಳ್ಳಿಯಲ್ಲಿರುವ ಪರಿಚಿತರೊಬ್ಬರ ಮನೆಯಲ್ಲಿ ಡೆತ್‍ನೋಟ್ ಬರೆದು ಕೊಂಡು ಮಗಳೊಂದಿಗೆ ಹೊರ ಹೋಗಿದ್ದ ಹೇಮಂತ್‍ಕುಮಾರ್, ಕೈಗಾ ರಿಕಾ ಪ್ರದೇಶದಲ್ಲಿ ಮುಚ್ಚಿರುವ ಕಾರ್ಖಾನೆ ಯೊಂದರ ಆವರಣದೊಳಗೆ ಹೋಗಿ, ಪೂರ್ವ ನಿಯೋಜಿತವಾಗಿ ಜೇಬಿನಲ್ಲಿ ಇಟ್ಟುಕೊಂಡಿದ್ದ ಬ್ಲೇಡ್‍ನಿಂದ ತನ್ನ 2 ಕೈಗಳನ್ನು ಕೊಯ್ದುಕೊಂಡಿದ್ದಾನೆ. ಬಳಿಕ ಏನೂ ಅರಿಯದ ಪುಟ್ಟ ಮಗುವಿನ ಮುಂಗೈ ಅನ್ನು 2 ಬಾರಿ ಕೊಯ್ದು ಹತ್ಯೆ ಮಾಡಿ, ಮೃತದೇಹವನ್ನು ಕಟ್ಟೆಯ ಮೇಲೆ ಮಲಗಿಸಿ, ಎಲೆಗಳು ಹಾಗೂ ಬಟ್ಟೆ ಯಿಂದ ಮುಚ್ಚಿ, ಅಲ್ಲಿಂದ ತೆರಳಿದ್ದಾನೆ. ಮಗುವನ್ನು ಹತ್ಯೆಗೈದ ಬ್ಲೇಡ್ ಅನ್ನು ಕೂರ್ಗಳ್ಳಿ ಕೆಆರ್‍ಎಸ್ ರಸ್ತೆ, ಗ್ರಾಪಂ ಹಳೇ ಕಟ್ಟಡದ ಬಳಿ ಎಸೆದು ಸಾಕ್ಷಿ ನಾಶಕ್ಕೆ ಯತ್ನಿಸಿದ್ದ.

ಈ ಸಂಬಂಧ ಪ್ರಕರಣ ದಾಖಲಿಸಿ ಕೊಂಡು ತನಿಖೆ ನಡೆಸಿದ್ದ ವಿಜಯನಗರ ಠಾಣೆ ಪೊಲೀಸರು, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಮೈಸೂ ರಿನ 4ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹೊಸಮನಿ ಪುಂಡಲಿಕ ಅವರು, ಹೇಮಂತ್‍ಕುಮಾರ್ ವಿರುದ್ಧದ ಆರೋಪ ಸಾಭೀತಾದ ಹಿನ್ನೆಲೆಯಲ್ಲಿ ಆತನಿಗೆ ಜೀವಾವಧಿ ಶಿಕ್ಷೆ ಮತ್ತು 10 ಸಾವಿರ ರೂ. ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾ ರದ ಪರವಾಗಿ ಸರ್ಕಾರಿ ಅಭಿಯೋಜಕ ರಾದ ಪಿ.ಬಿ.ಧರಣ್ಣೆವರ್ ಹಾಗೂ ಎಲï.ನಾಗರಾಜ್ ವಾದ ಮಂಡಿಸಿದ್ದರು.

Translate »