ಸೆಲೆಬ್ರೇಟ್ ಲೈಫ್! ಮೈಸೂರು ಹಾಫ್ ಮ್ಯಾರಥಾನ್, 10ಏ, 6ಏ ಓಟ, ನಡಿಗೆ ಸ್ಪರ್ಧೆ
ಮೈಸೂರು

ಸೆಲೆಬ್ರೇಟ್ ಲೈಫ್! ಮೈಸೂರು ಹಾಫ್ ಮ್ಯಾರಥಾನ್, 10ಏ, 6ಏ ಓಟ, ನಡಿಗೆ ಸ್ಪರ್ಧೆ

September 1, 2019

ಮೈಸೂರು,ಆ.31-ಮೈಸೂರಿನಲ್ಲಿ ಸೆಪ್ಟೆಂಬರ್ 29ರಿಂದ ನವ ರಾತ್ರಿ ಹಬ್ಬದ ಸಂಭ್ರಮ ಆರಂಭಕ್ಕೆ ಸಿದ್ಧವಾಗುತ್ತಿರುವ ಸಂದರ್ಭ ದಲ್ಲೇ ರೇಡಿಯಂಟ್ ಸ್ಪೋಟ್ರ್ಸ್ ಆಯೋಜಿಸಿ ರುವ ‘ಸೆಲೆಬ್ರೇಟ್ ಲೈಫ್’ ಮೈಸೂರು ಹಾಫ್ ಮ್ಯಾರಥಾನ್ 10ಏ ಮತ್ತು 6ಏ ಓಟ, ನಡಿಗೆ ಸ್ಪರ್ಧೆಯ ಮೊದಲನೆಯ ಆವೃತ್ತಿಯು ಸೆ.8ರಂದು 10 ಗಂಟೆಗೆ ಮೈಸೂರು ಅರಮನೆ ಉತ್ತರ ದ್ವಾರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಆರಂಭಗೊಳ್ಳಲಿದೆ. ಇನ್ನು ಮುಂದೆ ಪ್ರತೀ ವರ್ಷ ಏರ್ಪಡಿಸಲಿ ರುವ ಈ ಕಾರ್ಯಕ್ರಮವು ಓಟ ಮತ್ತು ನಡಿಗೆಯನ್ನು ದಿನನಿತ್ಯದ ಚಟುವಟಿಕೆಗಳ ಒಂದು ಭಾಗವಾಗಿಸಿಕೊಳ್ಳಲು ಜನರನ್ನು ಪೆÇ್ರೀತ್ಸಾಹಿಸುವ ಗುರಿಯನ್ನು ಹೊಂದಿದೆ.

ಈ ಸೆಲೆಬ್ರೇಟ್ ಲೈಫ್! ಮೈಸೂರು ಕಾರ್ಯಕ್ರಮದಲ್ಲಿ ಹಾಫ್ ಮ್ಯಾರಥಾನ್ (21.097 ಕಿ.ಮೀ) ಮತ್ತು 10ಏ ಮ್ಯಾರಥಾನ್ ಓಟದ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು ದೇಹಕ್ಷಮತೆಗಾಗಿ ನಿತ್ಯವೂ ಓಟವನ್ನು ರೂಢಿಸಿಕೊಂಡ ಎಲ್ಲಾ ಜನಸಾಮಾನ್ಯರೂ ಇವುಗಳಲ್ಲಿ ಭಾಗವಹಿಸಬಹುದಾಗಿದೆ. ವಯೋಮಿತಿ ಅನುಸಾರ ಗುಂಪುಗಳಾಗಿ ವಿಂಗಡಿಸಿದ್ದು, ಪ್ರತಿ ವಿಭಾಗಗಳಿಗೆ ಅನುಗುಣ ವಾಗಿ ಹಾಫ್ ಮ್ಯಾರಥಾನ್ ಮತ್ತು 10ಏ ಓಟದಲ್ಲಿ ವಿಜೇತರಾದ ಸ್ಪರ್ಧಿಗಳಿಗೆ ಟ್ರೋಫಿಗಳನ್ನು ನೀಡಲಾಗುತ್ತದೆ: 18-25 ವರ್ಷಗಳು, 26-35 ವರ್ಷಗಳು, 36-45 ವರ್ಷಗಳು, 46-60 ವರ್ಷ ಗಳು, 61 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಪುರುಷ ಮತ್ತು ಮಹಿಳಾ ಸ್ಪರ್ಧಿಗಳು ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು.

ಮ್ಯಾರಥಾನಿನಲ್ಲಿ ಭಾಗವಹಿಸಿ ಓಟವನ್ನು ಪೂರ್ಣಗೊಳಿಸುವ ಎಲ್ಲಾ ಸ್ಪರ್ಧಿಗಳಿಗೆ ಪದಕಗಳು ಮತ್ತು ಎಷ್ಟು ಸಮಯದಲ್ಲಿ ಓಟ ವನ್ನು ಪೂರ್ಣಗೊಳಿಸಿದರು ಎಂಬುದನ್ನು ಉಲ್ಲೇಖಿಸಿ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ. ಕರ್ನಾಟಕ ಅಥ್ಲೆಟಿಕ್ ಅಸೋಸಿ ಯೇಷನ್ (ಕೆಎಎ) ಆಶ್ರಯದಲ್ಲಿ ಆಯೋಜನೆಗೊಂಡಿರುವ ಈ ಮ್ಯಾರಥಾನಿನಲ್ಲಿ ಭಾಗವಹಿಸುವ ಆಸಕ್ತ ಸ್ಪರ್ಧಿಗಳು ದೇಶದ ಇತರೇ ಮ್ಯಾರಥಾನ್ ಇವೆಂಟ್‍ಗಳಲ್ಲಿ ಪ್ರವೇಶ ಪಡೆಯಲು ಈ ಪ್ರಮಾಣಪತ್ರವು ನೆರವಾಗಲಿದೆ. ಈ ಮ್ಯಾರಥಾನಿನಲ್ಲಿ ಭಾಗವಹಿ ಸಲು ಬೆಂಗಳೂರು, ಚೆನ್ನೈ, ನವದೆಹಲಿ ಮತ್ತು ಇತರ ನಗರಗಳಿಂ ದಲೂ ಸ್ಪರ್ಧಿಗಳು ಬಂದು ಪಾಲ್ಗೊಳ್ಳುವ ನಿರೀಕ್ಷೆ ಇದೆ.

ಆರೋಗ್ಯಕರ ಜೀವನಶೈಲಿಯನ್ನು ಅಳ ವಡಿಸಿಕೊಳ್ಳುವಂತೆ ಮಕ್ಕಳನ್ನು ಪ್ರೇರೇಪಿ ಸಲು ಸ್ಪರ್ಧಾತ್ಮಕವಲ್ಲದ 6ಏ ಓಟ, ನಡಿಗೆಯನ್ನು ಕೂಡ ಏರ್ಪಡಿಸಲಾಗಿದೆ.

ಈ ವಿಭಾಗವು 10 ವರ್ಷ ಮತ್ತು ಮೇಲ್ಪಟ್ಟ ಎಲ್ಲರಿಗೂ ಮುಕ್ತವಾಗಿದೆ. ಓಟದ ಅನು ಭವವಿಲ್ಲದ ಎಲ್ಲಾ ವಯಸ್ಸಿನ ಕುಟುಂಬ ಸದಸ್ಯರೂ ಭಾಗ ವಹಿಸಿ ಅವಿಸ್ಮರಣೀಯ ಅನುಭವವನ್ನು ಪಡೆಯಬಹು ದಾಗಿದೆ. ಭಾಗವಹಿಸುವವರೆಲ್ಲರಿಗೂ ಟೀ ಶರ್ಟ್ ಹಾಗೂ ಇನ್ನಿತರೆ ಪದಾರ್ಥಗಳಿರುವ ಕಿಟ್ ಅನ್ನು ನಗರದ ಬಂಬೂ ಬಜಾರಿನ ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿರುವ ಹೋಟೆಲ್ ರಿಯೊ ಮೆರಿಡಿಯನ್‍ನಲ್ಲಿ ಸೆಪ್ಟೆಂಬರ್ 6 (ಮಧ್ಯಾಹ್ನ 1ರಿಂದ ಸಂಜೆ 7ರವರೆಗೆ) ಮತ್ತು ಸೆಪ್ಟೆಂಬರ್ 7ರಂದು (ಬೆಳಿಗ್ಗೆ 11ರಿಂದ ಸಂಜೆ 7ರವರೆಗೆ) ವಿತರಿಸಲಾಗುವುದು.

ಎಲ್ಲಾ ನೋಂದಾಯಿತ ಸ್ಪರ್ಧಿಗಳು ತಮ್ಮ ನೋಂದಾಯಿತ ಮೇಲ್ ಅಥವಾ ಸ್ವೀಕೃತಿಯನ್ನು ಖಚಿತಪಡಿಸಿ, ಕಿಟ್‍ಗಳನ್ನು ಪಡೆದುಕೊಳ್ಳಬಹುದಾಗಿದೆ. ಸ್ಥಳದಲ್ಲೇ ಸೀಮಿತ ನೋಂದಣಿ ಸಾಧ್ಯವಿದೆ. ರನ್ ಮತ್ತು ನಡಿಗೆ ಎಲ್ಲಾ ಸ್ಪರ್ಧಿಗಳು ಅಂತ್ಯ ಗೊಳಿಸಿದ್ದಕ್ಕೆ ಪದಕವನ್ನು ಪಡೆಯಬಹುದಾಗಿದೆ. ಸಮಯ ಪ್ರಮಾಣಪತ್ರವನ್ನು (ಹಾಫ್ ಮ್ಯಾರಥಾನ್ ಮತ್ತು 10ಏ) www.raadiantsports.comಗೆ ಲಾಗಿನ್ ಆಗುವ ಮೂಲಕ ಪಡೆದುಕೊಳ್ಳಬಹುದಾಗಿದೆ. 10ಏ ಓಟ ಮತ್ತು ನಡಿಗೆಯಲ್ಲಿ ಪಾಲ್ಗೊಂಡವರಿಗೆ ಪ್ರಮಾಣಪತ್ರದ ಜೊತೆಗೆ ಎಲ್ಲರಿಗೂ ಉಪಹಾರದ ವ್ಯವಸ್ಥೆ ಮಾಡಲಾಗಿದೆ. ಓಟಕ್ಕೂ ಮುನ್ನ ಆಹ್ಲಾದಕರ ವಾತಾವರಣ ಕಲ್ಪಿಸುವುದರೊಂದಿಗೆ ಸ್ಥಳದಲ್ಲಿ ಮನರಂಜನೆ ಉದ್ದೇಶದಿಂದ ಸಂಗೀತದ ಜೊತೆಗೆ ಮನೋಲ್ಲಾಸಿತ ಮೆರಗು ಕಲ್ಪಿಸಲಾಗುವುದು.

Translate »