ನವದೆಹಲಿ, ಆ.31-ಎಟಿಎಂ ಕಾರ್ಡ್‍ಗಳು ಮತ್ತು ಪಿನ್‍ಗಳನ್ನು ಕದ್ದು ಅವು ಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 1ರಿಂದ ಹೊಸ ನಿಯಮ ಜಾರಿಗೆ ಬರಲಿದೆ. ಎಟಿಎಂನಲ್ಲಿ 5 ಸಾವಿರ ರೂ. ಗಿಂತ ಹೆಚ್ಚು ಹಣ ಡ್ರಾ ಮಾಡುವುದಾದರೆ ನೀವು ರಿಜಿಸ್ಟರ್ ಮಾಡಿಸಿರುವ ಮೊಬೈಲ್ ನಂಬರ್‍ಗೆ ಒಂದು ಒಟಿಪಿ ಬರಲಿದೆ. ಆ ಒಟಿಪಿ ನಂಬರ್‍ನ್ನು ಎಟಿಎಂನಲ್ಲಿ ನಮೂದಿಸಿದರೆ ಮಾತ್ರ ಹಣ ವಿತ್ ಡ್ರಾ ಮಾಡಲು ಸಾಧ್ಯ. ಇಲ್ಲದಿದ್ದರೆ ಹಣ ವಿತ್ ಡ್ರಾ ಮಾಡಲು ಸಾಧ್ಯವಿಲ್ಲ. ಸೆಪ್ಟೆಂಬರ್ 1ರಿಂದ ಈ ನಿಯಮ ಜಾರಿಗೆ ಬರಲಿದ್ದು, ಮೊದಲು ಕೆನರಾ ಬ್ಯಾಂಕ್ ಎಟಿಎಂಗಳಲ್ಲಿ ಈ ನಿಯಮ ವನ್ನು ಪರಿಚಯಿಸಲಾಗುತ್ತಿದೆ. ನಂತರ ಎಲ್ಲ ಬ್ಯಾಂಕ್‍ಗಳು ಈ ನಿಯಮ ಅನುಸರಿಸಲಿವೆ.
