ಮೈಸೂರಲ್ಲಿ ಇ-ವಾಹನ ಚಾರ್ಜಿಂಗ್ ಘಟಕ ತೆರೆಯಲು ಚೆಸ್ಕಾಂ ಸಿದ್ಧತೆ
ಮೈಸೂರು

ಮೈಸೂರಲ್ಲಿ ಇ-ವಾಹನ ಚಾರ್ಜಿಂಗ್ ಘಟಕ ತೆರೆಯಲು ಚೆಸ್ಕಾಂ ಸಿದ್ಧತೆ

June 18, 2019

ಮೈಸೂರು: ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ನಗರದ ಪ್ರಮುಖ ಸ್ಥಳಗಳಲ್ಲಿ ಇ-ವಾಹನಗಳ ಚಾರ್ಜಿಂಗ್ ಘಟಕಗಳನ್ನು ತೆರೆಯಲು ಚೆಸ್ಕಾಂ ಸಿದ್ಧತೆ ನಡೆಸಿದೆ.

ಪೆಟ್ರೋಲಿಯಂ ಉತ್ಪನ್ನಗಳ ಉಳಿ ತಾಯ ಹಾಗೂ ಪರಿಸರ ಮಾಲಿನ್ಯವನ್ನು ನಿಯಂತ್ರಣಗೊಳಿಸುವ ಜತೆಗೆ ಇ-ವಾಹನಗಳ ಬಳಕೆಗೆ ಹೆಚ್ಚಿನ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಮೈಸೂರು-ಬೆಂಗ ಳೂರು ಹೆದ್ದಾರಿಯಲ್ಲಿನ 6 ಸ್ಥಳಗಳಲ್ಲಿ ಚಾರ್ಜಿಂಗ್ ಘಟಕ ಸ್ಥಾಪಿಸಲು ಮುಂದಾಗಿದೆ.

ಈಗಾಗಲೇ ಮೈಸೂರು ಪಶ್ಚಿಮ (ಲಕ್ಷ್ಮಿ ಪುರಂ) ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಸುಮಾರು 110 ಇ-ವಾಹನಗಳು ನೋಂದಣಿಯಾಗಿವೆ. ಇವುಗಳಲ್ಲಿ 7 ಇ-ರಿಕ್ಷಾ, 5 ಕಾರು ಹಾಗೂ ಉಳಿದಂತೆ ದ್ವಿಚಕ್ರ ವಾಹನಗಳು ನೋಂದಣಿಯಾ ಗಿವೆ. ವಿದ್ಯುತ್ ಚಾರ್ಜಿಂಗ್ ಪಾಯಿಂಟ್ ವ್ಯವಸ್ಥೆ ಇಲ್ಲದಿರುವುದರಿಂದ ಇ-ವಾಹನ ಗಳ ಖರೀದಿಗೆ ಜನ ಮನಸ್ಸು ಮಾಡು ತ್ತಿಲ್ಲ. ಸೂಕ್ತ ವ್ಯವಸ್ಥೆ ಇದ್ದರೆ ವಾಹನಗಳ ಪ್ರಮಾಣವೂ ತಂತಾನೆ ಹೆಚ್ಚುತ್ತದೆ. ಈ ನಿಟ್ಟಿನಲ್ಲಿ ಇ-ವಾಹನ ಸವಾರರಿಗೆ ಹೆಚ್ಚಿನ ಅವಕಾಶ ಕಲ್ಪಿಸಿಕೊಡುವ ಉದ್ದೇಶದಿಂದ ಚಾರ್ಜಿಂಗ್ ಘಟಕಗಳನ್ನು ಕಲ್ಪಿಸಲು ಕಾರ್ಯಪ್ರವೃತ್ತರಾಗಿದ್ದೇವೆ ಎಂದು ಚೆಸ್ಕಾಂನ ಪ್ರಧಾನ ವ್ಯವಸ್ಥಾಪಕ(ತಾಂತ್ರಿಕ) ವಿ.ಪ್ರಕಾಶ್ ಹೇಳಿದರು.

ಚಾರ್ಜಿಂಗ್ ಘಟಕ ಸ್ಥಾಪನೆಗೆ ಈಗಾ ಗಲೇ ಸ್ಥಳ ಗುರುತಿಸಿ, ಪರಿಶೀಲನೆ ನಡೆ ಸಿದ್ದು, ಈ ಸಂಬಂಧ ಈಗಾಗಲೇ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಕೇಂದ್ರ ದಿಂದ ಅಂಗೀಕಾರ ದೊರೆಯುತ್ತಿದ್ದಂತೆ ಶೀಘ್ರವೇ ಕಾರ್ಯ ಆರಂಭಿಸಲಾಗುವುದು ಎಂದು ತಿಳಿಸಿದರು.

ಎಲ್ಲೆಲ್ಲಿ ಚಾರ್ಜಿಂಗ್ ಘಟಕ : ಮೊದಲ ಹಂತದಲ್ಲಿ ಮದ್ದೂರು, ಮಂಡ್ಯದಲ್ಲಿ ಎರಡು ಕಡೆ, ಶ್ರೀರಂಗಪಟ್ಟಣ ಹಾಗೂ ಮೈಸೂರು ನಗರದಲ್ಲಿ ತಲಾ ಒಂದು ಚಾರ್ಜಿಂಗ್ ಘಟಕ ಸ್ಥಾಪಿಸಲು ನಿರ್ಧ ರಿಸಲಾಗಿದೆ.

ಎರಡನೇ ಹಂತದಲ್ಲಿ ಮೈಸೂರು ನಗರದ ಒಳಗಡೆ ಸಾರ್ವ ಜನಿಕ ಮತ್ತು ಖಾಸಗಿ ಚಾರ್ಜಿಂಗ್ ಸ್ಟೇಷನ್ ತೆರೆಯುವ ಚಿಂತನೆ ಇದೆ. ಅಲ್ಲದೇ, ಚೆಸ್ಕಾಂನ ಕಾರ್ಪೊರೇಟ್ ಕಚೇರಿ ಯಲ್ಲೂ ಒಂದು ಚಾರ್ಜಿಂಗ್ ಘಟಕ ತೆರೆಯಲು ಸಿದ್ಧತೆ ನಡೆಸಿದ್ದೇವೆ ಎಂದರು.

ರಸ್ತೆಯ ಎರಡೂ ಬದಿಯಲ್ಲಿ ಸುಮಾರು 35 ರಿಂದ 40 ಕಿ.ಮಿ ವ್ಯಾಪ್ತಿ ಅಂತರದಲ್ಲಿ ಅಳವಡಿಸಲಾಗುವ ಚಾರ್ಜಿಂಗ್ ಘಟಕದಲ್ಲಿ ಒಂದೇ ಅವದಿ üಯಲ್ಲಿ 2 ವಾಹನಗಳಿಗೆ ವಿದ್ಯುತ್ ಚಾರ್ಜ್ ಒದಗಿಸುವ ಸಾಮಥ್ರ್ಯವಿದ್ದು, 25 ನಿಮಿಷ ಚಾರ್ಜ್ ಮಾಡಿದರೆ ಸಾಕು ಸುಮಾರು 40 ಕಿ.ಮೀ. ಸಂಚರಿಸಬಹು ದಾಗಿದೆ. ಇ-ವಾಹನಗಳ ಸಂಖ್ಯೆ ನಗರದಲ್ಲಿ ಹೆಚ್ಚುತ್ತಿದ್ದಂತೆ ಸೋಲಾರ್ ವ್ಯವಸ್ಥೆಯ ಮೂಲಕ ವಿದ್ಯುತ್ ಸರಬರಾಜು ಮಾಡಲು ಕ್ರಮಕೈಗೊಳ್ಳಲು ತೀರ್ಮಾ ನಿಸಲಾಗಿದೆ ಎಂದು ತಿಳಿಸಿದರು.

ಕಡಿಮೆ ಖರ್ಚು ಮತ್ತು ಉದ್ಯೋಗ ಸೃಷ್ಟಿ: ಇ-ವಾಹನಗಳ ಚಾರ್ಜಿಂಗ್ ಘಟಕಗಳನ್ನು ಸ್ಥಾಪಿಸಲು ಸಾಕಷ್ಟು ಖರ್ಚಾಗುವುದಿಲ್ಲ. 8*20 ಜಾಗದಲ್ಲಿ ಚಾರ್ಜಿಂಗ್ ಪಾಯಿಂಟ್‍ಗಳನ್ನು ಸ್ಥಾಪಿಸ ಲಾಗುವುದು. ಪ್ರತಿ ಘಟಕದಲ್ಲಿ ವಾಹನ ಗಳಿಗೆ ಚಾರ್ಜ್ ಮಾಡಲು ಇಬ್ಬರು ಕೆಲಸಗಾರರು ಬೇಕಾಗುತ್ತದೆ. ಇದರಿಂದ ಸ್ವಲ್ಪ ಮಟ್ಟಿನ ಉದ್ಯೋಗಗಳು ಸೃಷ್ಟಿ ಯಾಗುತ್ತದೆ ಎಂದರು.

ಬೆಂಗಳೂರಿನ ಹಲವೆಡೆ ಚಾರ್ಜಿಂಗ್ ಘಟಕ: ಬೆಂಗಳೂರು ನಗರದ ಹಲವೆಡೆ ಚಾರ್ಜಿಂಗ್ ಘಟಕಗಳನ್ನು ಸ್ಥಾಪಿಸ ಲಾಗಿದ್ದು, ನಿತ್ಯ 9 ಸಾವಿರಕ್ಕೂ ಹೆಚ್ಚು ಇ-ವಾಹನಗಳು ಸಂಚರಿಸುತ್ತಿವೆ. ಬೆಂಗಳೂರಿನಲ್ಲಿ ಯಶಸ್ವಿಯಾಗಿರುವ ಈ ಘಟಕಗಳನ್ನು ಅದೇ ಮಾದರಿಯಲ್ಲಿ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಸ್ಥಾಪಿಸಲು ನಿರ್ಧರಿಸಲಾಗಿದೆ.

Translate »