ಮೈಸೂರಲ್ಲಿ ಮಹಿಳಾ ಜೈಲು ವೀಕ್ಷಕರ ನಿರ್ಗಮನ ಪಥಸಂಚಲನ
ಮೈಸೂರು

ಮೈಸೂರಲ್ಲಿ ಮಹಿಳಾ ಜೈಲು ವೀಕ್ಷಕರ ನಿರ್ಗಮನ ಪಥಸಂಚಲನ

June 18, 2019

ಮೈಸೂರು: ಮೈಸೂರಿನ ಕಾರಾಗೃಹ ಸಿಬ್ಬಂದಿ ತರಬೇತಿ ಸಂಸ್ಥೆಯಲ್ಲಿ 9 ತಿಂಗಳ ಬುನಾದಿ ತರಬೇತಿ ಪಡೆದ 170 ಮಹಿಳಾ ಜೈಲು ವೀಕ್ಷಕರ ಆಕರ್ಷಕ ನಿರ್ಗಮನ ಪಥ ಸಂಚಲನ ಸೋಮವಾರ ನಡೆಯಿತು.

ಅಶೋಕ ರಸ್ತೆಯಲ್ಲಿರುವ ಫೌಂಟನ್ ಸರ್ಕಲ್ ಬಳಿಯ ಕೇಂದ್ರ ಕಾರಾಗೃಹದ ಆವರಣದಲ್ಲಿ ನಡೆದ ಕಾರಾಗೃಹ ಸಿಬ್ಬಂದಿ ತರಬೇತಿ ಸಂಸ್ಥೆಯ 52ನೇ ಪ್ರಶಿಕ್ಷಣಾ ರ್ಥಿಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಗೃಹ ಸಚಿವ ಎಂ.ಬಿ. ಪಾಟೀಲ್ ಅವರು ಭಾಗವಹಿಸಿ ಗೌರವ ವಂದನೆ ಸ್ವೀಕರಿಸಿದರು.

ನಂತರ ಮಹಿಳಾ ಜೈಲು ವೀಕ್ಷಕ ಪ್ರಶಿಕ್ಷ ಣಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು, ದಿನದ 12ರಿಂದ 24 ಗಂಟೆ ಕಾಲ ಬಿಸಿಲನ್ನೂ ಲೆಕ್ಕಿಸದೆ ಕೆಲಸ ಮಾಡುವ ಪೊಲೀಸರ ಕಾರ್ಯಕ್ಷಮತೆ ಬಗ್ಗೆ ಸರ್ಕಾ ರದ ಮೆಚ್ಚುಗೆ ಇದೆ. ಅದಕ್ಕಾಗಿಯೇ ತಮ್ಮ ಎಲ್ಲಾ ಬೇಡಿಕೆಗಳನ್ನು ಒಂದೊಂದಾಗಿ ಈಡೇರಿಸುತ್ತಿದ್ದೇವೆ ಎಂದರು.

ಜೈಲು ಸಿಬ್ಬಂದಿಗಳ ನೇಮಕ, ಹೊಸ ಜೈಲುಗಳ ನಿರ್ಮಾಣ, ಮೂಲ ಸೌಲಭ್ಯ ಗಳ ಪೂರೈಕೆಗೆ ಒತ್ತು ನೀಡಲಾಗಿದ್ದು, ಕರ್ನಾಟಕ ರಾಜ್ಯ ಕಾರಾಗೃಹಗಳ ಅಭಿ ವೃದ್ಧಿ ಪ್ರಾಧಿಕಾರ ರಚನೆಗೂ ಚಿಂತನೆ ನಡೆಸಲಾಗಿದೆ ಎಂದ ಸಚಿವರು, ಬಂಧಿ ಗಳ ಮನ ಪರಿವರ್ತನೆ ಮಾಡಿ ಮುಖ್ಯ ವಾಹಿನಿಗೆ ತಂದು ಸಮಾಜದಲ್ಲಿ ಎಲ್ಲ ರಂತೆ ಗೌರವಯುತವಾಗಿ ಬದುಕುವಂತೆ ಮಾಡುವಲ್ಲಿ ಜೈಲು ಸಿಬ್ಬಂದಿಗಳ ಪಾತ್ರ ಪ್ರಮುಖವಾದುದು ಎಂದರು.

ಕಾರಾಗೃಹ ಎಡಿಜಿಪಿ ಎನ್.ಎಸ್. ಮೇಘ ರಿಕ್, ಐಜಿಪಿ ಹೆಚ್.ಎಸ್.ರೇವಣ್ಣ, ಮೈಸೂರು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎಸ್.ಕೆ. ಒಂಟಿಗೋಡಿ, ನಗರ ಪೊಲೀಸ್ ಕಮೀಷ್ನರ್ ಕೆ.ಟಿ.ಬಾಲಕೃಷ್ಣ, ಎಸ್ಪಿ ಅಮಿತ್ ಸಿಂಗ್, ಡಿಸಿಪಿ ಎಂ.ಮುತ್ತುರಾಜ್, ಕಾರಾ ಗೃಹ ಸಿಬ್ಬಂದಿ ತರಬೇತಿ ಸಂಸ್ಥೆ ಪ್ರಾಂಶು ಪಾಲ ಮಹೇಶ್‍ಕುಮಾರ್ ಎಸ್.ಜಿಗಣಿ ಸೇರಿದಂತೆ ಹಲವು ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಬುನಾದಿ ತರಬೇತಿ ಪಡೆದ 170 ಮಂದಿ ಮಹಿಳಾ ಜೈಲು ವೀಕ್ಷಕರ ಪೈಕಿ ನಾಲ್ವರು ಇಂಜಿನಿಯರಿಂಗ್ ಪದವೀಧ ರರು, 24 ಮಂದಿ ಸ್ನಾತಕೋತ್ತರ ಪದವೀಧರರು, 110 ಪದವೀಧರರು, 10 ಡಿಪ್ಲೊಮಾ ಪಡೆದವರಿದ್ದಾರೆ.

ತರಬೇತಿ ವೇಳೆ ಒಳಾಂಗಣ ವಿಭಾಗ ದಲ್ಲಿ ಡಿ.ಟಿ.ಯುವರಾಣಿ, ಅಕ್ಷತಾ ಮುಗಳ ಕೋಡ, ಹೊರಾಂಗಣದಲ್ಲಿ ಜಿ.ಜಿ. ಹೇಮಾ ವತಿ, ರಾಧಾ ಸುರೇಶ್ ಡೊಣ್ಣಿ, ಫೈರಿಂಗ್ ನಲ್ಲಿ ಜಿ.ಲಾವಣ್ಯ, ಪಿ.ಪಿ.ಸವಿತಾ ಅವರು ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಬಹುಮಾನ ಪಡೆದಿದ್ದಾರೆ.

ಪ್ರತಿಭಾ ಪಾಟೀಲ (ಉತ್ತಮ ನಡತೆ), ದೀಪಾ ಬಾ. ನಿಂಬೋಜಿ (Best Participant), ಭಾರತಿ ಜನಾರ್ಧನ ನಾಯ್ಕ (ಪಿಟಿಪಿ ಕಪ್), ಸಿ. ಅಹಲ್ಯ (ಐಜಿಪಿ ಕಪ್), ಶ್ರೀದೇವಿ ಬಿ. ಹಿಟ್ಟಣಗಿ (ಎಡಿಜಿಪಿ ಮತ್ತು ಐಜಿಪಿ ಕಪ್) ಹಾಗೂ ಶ್ವೇತಾ ಬನ್ನಪ್ಪ ದಳವಾಯಿ ಅವರು ಸರ್ವೋ ತ್ತಮ ಪ್ರಶಸ್ತಿ ಗಳಿಸಿದ್ದಾರೆ.

ಗೃಹ ಸಚಿವ ಎಂ.ಬಿ.ಪಾಟೀಲ್ ಅವರು ಸಾಧಕರಿಗೆ ಪ್ರಶಸ್ತಿ ಹಾಗೂ ಬಹು ಮಾನಗಳನ್ನು ವಿತರಿಸಿದರು. ಶ್ವಾನದಳದ ಎಎಸ್‍ಐ ಬಾಬು ಅವರು ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ನಿರೂಪಣೆ ಮಾಡಿದರು.

ಜಿಂದಾಲ್ ವಿಚಾರದಲ್ಲಿ ತಕರಾರಿದ್ದರೆ ಕಮಿಟಿ ಮುಂದೆ ಹೋಗಲಿ
ಮೈಸೂರು: ಜಿಂದಾಲ್ ಕಂಪನಿಗೆ ಸರ್ಕಾರಿ ಭೂಮಿ ಪರಭಾರೆ ವಿಚಾರದಲ್ಲಿ ತಕರಾ ರಿದ್ದರೆ ಕಮಿಟಿ ಮುಂದೆ ಹೋಗಲಿ ಎಂದು ಗೃಹ ಸಚಿವ ಎಂ.ಬಿ. ಪಾಟೀಲ್ ಅವರು ಸಂಸದೆ ಶೋಭಾ ಕರಂ ದ್ಲಾಜೆಗೆ ತಿರುಗೇಟು ನೀಡಿದ್ದಾರೆ.
ಮೈಸೂರಿನ ಕೇಂದ್ರ ಕಾರಾಗೃಹದ ಆವರಣದಲ್ಲಿ ನಡೆದ ಮಹಿಳಾ ಜೈಲು ವೀಕ್ಷಕ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಶೋಭಕ್ಕ ಸ್ವಲ್ಪ ತಾಳ್ಮೆಯಿಂದಿ ರಬೇಕು, ಹೆಣ್ಣು ಮಗಳು ಅಂತ ನಾನು ಯಾವ ಪದಗಳನ್ನೂ ಪ್ರಯೋಗಿಸುತ್ತಿಲ್ಲ ಎಂದರು. ನಾವು ಬಿಜಾಪುರದವರು. ನಮಗೆ ಬೇರೆ ಪದಗಳೇ ಗೊತ್ತಿದೆ. ಶೋಭಾ ಕರಂದ್ಲಾಜೆ ಬಾಯಲ್ಲಿ ಅಂಥ ಪದ ಬರಬಾರದು. ಅವರ ಹಿನ್ನೆಲೆ, ಸಂಸ್ಕಾರ, ಸಂಸ್ಕøತಿ ಜನರಿಗೆ ಗೊತ್ತಿದೆ. ನಮ್ಮ ಸಂಸ್ಕಾರ-ಸಂಸ್ಕøತಿಯೂ ಜನರಿಗೆ ಗೊತ್ತಿದೆ ಎಂದು ಎಂ.ಬಿ.ಪಾಟೀಲ್ ಕಿಡಿಕಾರಿದರು.

ಐಎಂಎ ವಂಚನೆ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿದ ಸಚಿವರು, ಇದರಲ್ಲಿ ಯಾರೇ ಭಾಗಿಯಾಗಿದ್ದರೂ ಕ್ಷಮಿಸುವ ಪ್ರಶ್ನೆಯೇ ಇಲ್ಲ. ಅವರು ಸಚಿವರಾಗಲೀ, ಶಾಸಕ ರಾಗಲೀ ನುಣುಚಿಕೊಳ್ಳಲು ಬಿಡುವುದಿಲ್ಲ. ನಮ್ಮ ಇಲಾಖೆ ಅಧಿಕಾರಿಗಳ ಮೇಲೆ ನಮಗೆ ವಿಶ್ವಾಸವಿದೆ ಎಂದರು.

ವಿಶೇಷ ತನಿಖಾ ತಂಡ (ಎಸ್‍ಐಟಿ) ಪ್ರಕರಣವನ್ನು ಸಮರ್ಪಕವಾಗಿ ನಿಭಾಯಿ ಸಲಿದೆ. ಸಿಬಿಐಗೆ ಕೊಟ್ಟ ಕೇಸ್‍ಗಳು ಏನಾ ಗಿವೆ ಎಂಬುದು ಎಲ್ಲರಿಗೂ ಗೊತ್ತಿದೆ. ಬಿಜೆಪಿಯವರಿಗೆ ಈಗ ದಿಢೀರ್ ಸಿಬಿಐ ಮೇಲೆ ನಂಬಿಕೆ ಬಂದು ಬಿಟ್ಟಿದೆ ಎಂದ ಪಾಟೀಲ್, ನಮ್ಮ ಮುಂದೆ ಇರೋದು ಹಣ ಕಳೆದುಕೊಂಡವರಿಗೆ ಹಣ ವಾಪಸ್ ಕೊಡಿಸುವುದು ಎಂದರು.

ವಂಚನೆಕೋರ ಸಂಸ್ಥೆ ಆಸ್ತಿ ಜಪ್ತಿ ಮಾಡಬೇಕು. ಈ ವಿಷಯದಲ್ಲಿ ನೋಂದಣಿ ಇಲಾಖೆ, ಸಹಕಾರ ಸಂಘ ಗಳ ರಿಜಿಸ್ಟ್ರಾರ್, ಆದಾಯ ತೆರಿಗೆ ಅಧಿ ಕಾರಿಗಳು ಹಾಗೂ ಆಡಿಟ್ ವಿಭಾಗದ ಅಧಿಕಾರಿಗಳಿಂದ ಪರಿಶೀಲಿಸಿ ಮಾಹಿತಿ ಸಂಗ್ರಹಿಸಬೇಕು. ಅನಗತ್ಯವಾಗಿ ಯಾರ್ಯಾರ ಹೆಸರನ್ನು ಹೇಳುವುದು ಈ ಹಂತದಲ್ಲಿ ಸರಿಯಲ್ಲ ಎಂದೂ ಅವರು ತಿಳಿಸಿದರು.

ಗುಂಡ್ಲುಪೇಟೆಯ ಯುವಕನ ಬೆತ್ತಲೆ ಸೇವೆ ಪ್ರಕರಣ ಸಂಬಂಧ ತಾವು ಈಗಾಗಲೇ ದಕ್ಷಿಣ ವಲಯ ಐಜಿಪಿ ಜೊತೆ ಮಾತನಾಡಿದ್ದೇನೆ. ದಲಿತರು, ಬಡವರು, ಮಹಿಳೆಯರ ಪರ ಸರ್ಕಾರ ವಿದೆ. ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕಾನೂನು ಕ್ರಮ ಜರುಗಿಸುತ್ತೇವೆ ಎಂದು ಸಚಿವರು ಇದೇ ವೇಳೆ ನುಡಿದರು.

Translate »