ಮೈಸೂರು, ಜ.7(ಪಿಎಂ)- ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಸ್ವಚ್ಛ ಸರ್ವೇಕ್ಷಣಾ ಅಂಗವಾಗಿ ಜ.8ರಂದು ನಿಗದಿಯಾಗಿದ್ದ `ಸ್ವಚ್ಛ ಭಾರತ ಅಭಿಯಾನ ಹಾಗೂ ವನ್ಯಜೀವಿ ಸಂರಕ್ಷಣೆ’ ಕುರಿತ `ಗೋಡೆ ಚಿತ್ರಕಲೆ’ ಸ್ಪರ್ಧೆಯನ್ನು ಜ.9ಕ್ಕೆ ಮುಂದೂಡಲಾಗಿದೆ.
ಮುಷ್ಕರದ ಹಿನ್ನೆಲೆಯಲ್ಲಿ ಜ.9ಕ್ಕೆ ಮುಂದೂಡಲಾಗಿದ್ದು, ಉಳಿದಂತೆ ಸ್ಥಳ ಮತ್ತು ಸಮಯದಲ್ಲಿ ಬದಲಾವಣೆ ಇಲ್ಲವಾಗಿದೆ. `ಸ್ವಚ್ಛತಾ-ಪೈಂಟಿಂಗ್ ಹೀರೋ’ ಕಾರ್ಯಕ್ರಮದಡಿ ಡಿಕೆ ಕನ್ಸ್‍ಟ್ರಕ್ಷನ್, ನಮ್ಮ ಮೈಸೂರು ಫೌಂಡೇಶನ್ ಸಹಯೋಗದೊಂದಿಗೆ ಮೈಸೂರು ಮಹಾನಗರ ಪಾಲಿಕೆ ಗೋಡೆ ಚಿತ್ರಕಲೆ ಸ್ಪರ್ಧೆ ಏರ್ಪಡಿಸಿದೆ.
ಚಿತ್ರಕಲೆ, ವನ್ಯಜೀವಿ ಪ್ರೇಮಿಗಳು ಹಾಗೂ ಆಸಕ್ತರು ಭಾಗವಹಿಸಬಹುದು. ಚಿತ್ರಕಲೆಗೆ ಬೇಕಾದ ಎಲ್ಲಾ ಸಾಮಗ್ರಿಗಳನ್ನು ಸ್ಪರ್ಧಿಗಳೇ ತರಬೇಕು. ಲಲಿತ ಮಹಲ್ ರಸ್ತೆಯ ಮೃಗಾಲಯದ ದ್ವಾರದ ಬಳಿಯಲ್ಲಿ ಅಂದು ಬೆಳಿಗ್ಗೆ 7.30ಕ್ಕೆ ಸ್ಪರ್ಧೆ ಆರಂಭವಾಗಲಿದೆ. ಕ್ರಮವಾಗಿ ಎರಡು ಬಹುಮಾನಗಳಿದ್ದು, ಪ್ರಥಮ 10 ಸಾವಿರ ರೂ. ಹಾಗೂ ದ್ವಿತೀಯ 5 ಸಾವಿರ ರೂ. ನಗದು ಬಹುಮಾನ ದೊರೆಯಲಿದೆ.
14 ವರ್ಷ ಮೇಲ್ಪಟ್ಟ ಆಸಕ್ತರು https://docs.google.com/ ಮೂಲಕ ಆನ್‍ಲೈನ್‍ನಲ್ಲಿ ಹಾಗೂ ಸ್ಥಳದಲ್ಲೂ ಉಚಿತವಾಗಿ ನೋಂದಣಿ ಮಾಡಿಕೊಳ್ಳಬಹುದು. ಮೊದಲು ನೋಂದಾಯಿಸಿದ 50 ಸ್ಪರ್ಧಿಗಳಿಗೆ ಭಾಗವಹಿಸಲು ಅವಕಾಶ ಇರಲಿದೆ. ವಿವರಗಳಿಗೆ ಮೊ. ಸಂ.8105739384, 9513614491 ಅನ್ನು ಸಂಪರ್ಕಿಸಬಹುದು.