ಗ್ರಾಮ ಮಟ್ಟದಿಂದಲೇ ಸ್ವಚ್ಛತೆ ಪ್ರಾರಂಭ ಅಗತ್ಯ
ಕೊಡಗು

ಗ್ರಾಮ ಮಟ್ಟದಿಂದಲೇ ಸ್ವಚ್ಛತೆ ಪ್ರಾರಂಭ ಅಗತ್ಯ

December 17, 2019

ವಿರಾಜಪೇಟೆ, ಡಿ.16- ಸ್ವಚ್ಛ ಭಾರತವೆಂಬುವುದು ಗ್ರಾಮ ಮಟ್ಟದಿಂದಲೇ ಪ್ರಾರಂಭ ವಾಗಬೇಕು. ಪರಿಸರ ಸ್ವಚ್ಛವಾದರೆ ಕಾಯಿಲೆಗಳು ಹರಡಲು ಸಾಧ್ಯವಿಲ್ಲ ಎಂದು ಅಮ್ಮತ್ತಿ ಕಾರ್ಮಾಡು ಗ್ರಾಪಂ ಅಧ್ಯಕ್ಷೆ ರೋನಾ ಭೀಮಯ್ಯ ಹೇಳಿದರು.

ವೀರಾಜಪೇಟೆ ಸಂತ ಅನ್ನಮ್ಮ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ದಿಂದ ಸಮೀಪದ ಅಮ್ಮತ್ತಿಯ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ ವಾರ್ಷಿಕ ಶಿಬಿರದಲ್ಲಿ ಗ್ರಾಮ ಸ್ವಚ್ಛತಾ ಅಭಿ ಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸ್ವಚ್ಛ ಭಾರತ ವೆಂಬುವುದು ದೇಶದ ಪ್ರಧಾನಮಂತ್ರಿಗಳ ಕನಸಾಗಿದ್ದು, ಅದನ್ನು ನನಸು ಮಾಡಲು ಗ್ರಾಮ ಮಟ್ಟದಿಂದಲೇ ಸ್ವಚ್ಛತಾ ಜಾಗೃತಿ ಪ್ರಾರಂಭ ವಾಗಬೇಕು. ವಿದ್ಯಾರ್ಥಿಗಳು ಪ್ರಾರಂಭಿಕ ಹಂತದಿಂದಲೇ ಸ್ವಚ್ಛತಾ ಜಾಗೃತಿ ಹೊಂದಬೇಕು. ಗ್ರಾಮೀಣಾ ಭಿವೃದ್ಧಿಯೊಂದಿಗೆ ಪರಿಸರ ಸ್ವಚ್ಛವಾದರೆ ಆರೋಗ್ಯ ರಕ್ಷಣೆಗೆ ಸ್ವಚ್ಚತೆಯೇ ಮೂಲ ಎಂದು ತಿಳಿಸಿದರು. ಈ ವೇಳೆ ವಿದ್ಯಾರ್ಥಿಗಳು ವಿರಾಜಪೇಟೆ ರಸ್ತೆ, ಪಾಲಿಬೆಟ್ಟ ರಸ್ತೆ, ಹೊಸೂರು ಹಾಗೂ ಸಿದ್ದಾಪುರ ರಸ್ತೆಗಳಲ್ಲಿ ಸ್ವಚ್ಛತೆ ಮಾಡಿದರು. ಎನ್‍ಎಸ್‍ಎಸ್ ಅಧಿಕಾರಿ ಅರ್ಜುನ್, ಗಾಪಂ ಸದಸ್ಯರಾದ ಜಯಮ್ಮ, ಹಂಸ ಹಾಗೂ ಇತರರು ಭಾಗವಹಿಸಿದ್ದರು.

Translate »