ಗಡಿ ಗ್ರಾಮ ಕರಿಕೆಯಲ್ಲಿ ‘ಕನ್ನಡ ಕಲರವ’
ಕೊಡಗು

ಗಡಿ ಗ್ರಾಮ ಕರಿಕೆಯಲ್ಲಿ ‘ಕನ್ನಡ ಕಲರವ’

December 17, 2019

ಮಡಿಕೇರಿ, ಡಿ.16- ಮಲೆಯಾಳಿ ಭಾಷಾ ಪ್ರಭಾವ ಹೆಚ್ಚಿರುವ ಕೊಡಗಿನ ಗಡಿ ಪ್ರದೇಶ ಕರಿಕೆಯಲ್ಲಿ ಕನ್ನಡ ಹಬ್ಬ ಆಚರಿಸುವ ಮೂಲಕ ಕನ್ನಡ ಜಾಗೃತಿ ಮೂಡಿಸುವ ಮತ್ತು ಕನ್ನಡ ನಾಡು ನುಡಿ, ಸಂಸ್ಕøತಿಯನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಶ್ಲಾಘನೀಯ ವಾದದ್ದು ಎಂದು ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ನುಡಿದರು.

ಕರಿಕೆ ಗ್ರಾಮದ ರಾಷ್ಟ್ರೀಯ ಹಬ್ಬಗಳ ಆಚ ರಣಾ ಸಮಿತಿ ಮತ್ತು ಕರಿಕೆ ಗ್ರಾಮ ಪಂಚಾ ಯಿತಿ ಸಂಯುಕ್ತ ಆಶ್ರಯದಲ್ಲಿ ನಡೆದÀ ‘ಕನ್ನಡ ಹಬ್ಬ- ಕರಿಕೆಯಲ್ಲಿ ಕನ್ನಡ ಕಲರವ’ ಕಾರ್ಯ ಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈ ಕಾರ್ಯಕ್ರಮ ಭಾಷೆ ಉಳಿಸಿ ಬೆಳೆಸಲು, ಭಾಷೆಯ ಬಗ್ಗೆ ಪ್ರೀತಿ ತೋರಲು ಮತ್ತು ಕನ್ನಡ ಬೆಳೆಸಲು ಸೂಕ್ತವಾಗಿದೆ ಎಂದರು.

ಗ್ರಾಮದಲ್ಲಿ ಸ್ಥಳೀಯವಾಗಿರುವ ಸಮಸ್ಯೆ ಗಳನ್ನು ಮತ್ತು ರಸ್ತೆಯ ದುಸ್ಥಿತಿಯನ್ನು ನಾನು ಗಮನಿಸಿದ್ದೇನೆ, ಸರ್ಕಾರದೊಂದಿಗೆ ವ್ಯವಹರಿಸಿ ಸಮಸ್ಯೆ ನಿವಾರಣೆಗೆ ಶ್ರಮಿಸಲಾಗು ವುದು ಎಂದು ಭರವಸೆ ನೀಡಿದರು.

ಮುಖಂಡ ರಾಮನಾಥ್ ಮಾತನಾಡಿ, ಕೊಡಗಿನ ಗಡಿ ಕರಿಕೆ ಎಂಬ ಕುಗ್ರಾಮ ಕೇವಲ 5 ಸಾವಿರ ಜನಸಂಖ್ಯೆ ಹೊಂದಿದೆ. ಆದರೆ ಎಲ್ಲರ ಸಹಕಾರದಿಂದ ಈ ಊರನ್ನು ಗ್ರಾಮ ಪಂಚಾಯಿತಿಯನ್ನಾಗಿಸಿ, ಪ್ರಾಥಮಿಕ, ಪ್ರೌಢಶಾಲೆಗಳನ್ನು ಪ್ರಾರಂಭಿಸಿ ಶಿಕ್ಷಣ ದೊಂದಿಗೆ ಗ್ರಾಮವನ್ನು ಬೆಳೆಸಿದ ಹಿರಿಯರನ್ನು ಸ್ಮರಿಸಿದರು. ಅವರ ಪ್ರಯತ್ನದಿಂದಾಗಿ ನಮ್ಮ ಊರಿನ ಮಕ್ಕಳು ಉನ್ನತ ವಿದ್ಯಾಭ್ಯಾಸ ಮಾಡಿ ಉನ್ನತ ಸರ್ಕಾರಿ ಮತ್ತು ಸರಕಾರೇತರ ಉದ್ಯೋಗದಲ್ಲಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ನೆರೆ ಗ್ರಾಮ ಕೇರಳದ ಪನತ್ತಡಿ ಗ್ರಾಪಂ ಅಧ್ಯಕ್ಷ ಪಿ.ಜಿ.ಮೋಹನ್ ಮಾತನಾಡಿ, ಕರಿಕೆಯಲ್ಲಿ ನಡೆಸುತ್ತಿರುವ ಕನ್ನಡ ಹಬ್ಬ ಮತ್ತು ನಾವು ಆಚರಿಸುವ ಕೇರಳ ಉತ್ಸವ ಎಲ್ಲವೂ ಭಾರತದ ಏಕತೆಯ ಸಂದೇಶವಾಗಿದೆ. ನಾವು ಎರಡು ಅಕ್ಕ ಪಕ್ಕದ ಗ್ರಾಮದ ಜನರು ಜನ ಪ್ರತಿನಿಧಿಗಳು ಪರಸ್ಪರ ಸಹೋದರರಂತೆ ಬಾಳುತ್ತಿದ್ದೇವೆ ಎಂದು ನುಡಿದರು. ಕಾರ್ಯಕ್ರಮಕ್ಕೂ ಮುನ್ನ ಧ್ವಜಾ ರೋಹಣ ನೆರವೇರಿಸಿದ ಗ್ರಾಮದ ಹಿರಿಯ ಬೇಕಲ್ ಸಿ.ಜಯರಾಮ್ ಮಾತನಾಡಿದರು.

ಭುವನೇಶ್ವರಿ ದೇವಿಯ ವರ್ಣರಂಜಿತ ಭವ್ಯ ಮೆರವಣಿಗೆಯನ್ನು ಉದ್ಘಾಟಿಸಿದ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಕೋಡಿ ಕೆ.ಪೊನ್ನಪ್ಪ ಮಾತನಾಡಿ, ಕನ್ನಡ ಹಬ್ಬ ವಿವಿಧತೆಯಲ್ಲಿ ಏಕತೆ ಮೂಡಿಸುವ ಹಬ್ಬವಾಗಬೇಕು. ಇಂದು ಕರಿಕೆ ಎಲ್ಲಾ ರೀತಿ ಯಲ್ಲೂ ಅಭಿವೃಧ್ಧಿ ಹೊಂದಿದೆ. ಹಿಂದೆ ಇಲ್ಲಿ ಪ್ರಾಥಮಿಕ ಶಾಲೆ ಬಿಟ್ಟರೆ ಯಾವುದೇ ಹೆಚ್ಚಿನ ವಿದ್ಯಾಭ್ಯಾಸಕ್ಕೆ ವ್ಯವಸ್ಥೆ ಇರಲಿಲ್ಲ. ನಮ್ಮ ಮಕ್ಕಳು ಮುವತ್ತರಿಂದ ನಲವತ್ತು ಕಿಮೀ. ಗಳಷ್ಟು ದೂರ ಪ್ರಯಾಣಿಸ ಬೇಕಿತ್ತು. ಅಂದಿನ ಜಿಲ್ಲಾ ಪರಿಷತ್ತು ಅಧ್ಯಕ್ಷ ಜಮ್ಮಡ ಕರುಂಬಯ್ಯ ಅವರ ಸಹಕಾರ ದಿಂದ ಪ್ರೌಢಶಾಲೆ ಮತ್ತು ಪ್ರವಾಸಿ ಮಂದಿರ ನಿರ್ಮಿಸಲು ಸಾಧ್ಯವಾಯಿತು ಎಂದು ನೆನಪಿಸಿಕೊಂಡರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕೊಡಗು ಜಿಲ್ಲಾ ಲೇಖಕ ಮತ್ತು ಕಲಾ ವಿದರ ಬಳಗದ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್, ಗ್ರಾಪಂ ಮಾಜಿ ಅಧ್ಯಕ್ಷ ಹೊಸಮನೆ ಬಿ.ಚಂಗಪ್ಪ, ಭಾಗ ಮಂಡಲ ಪೊಲೀಸ್ ನಿರೀಕ್ಷಕ ಹೆಚ್.ಕೆ. ಮಹದೇವ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರಿಕೆ ಗ್ರಾಮದ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ಕರಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್.ಬಾಲಚಂದ್ರ ನಾಯರ್ ವಹಿ ಸಿದ್ದರು. ಗ್ರಾಪಂ ಉಪಾಧ್ಯಕ್ಷೆ ಶೋಲಿ ಜಾರ್ಜ್, ಕರಿಕೆ ಸಹಕಾರ ಸಂಘದ ಅಧ್ಯಕ್ಷ ಬಿ.ಜಿ. ಶರಣ್ ಕುಮಾರ್, ಉಪಾಧ್ಯಕ್ಷೆ ಮೀನಾಕ್ಷಿ ಬಲರಾಮ್, ಪಂಚಾಯಿತಿ ಸದಸ್ಯರಾದ ವೀಣಾಕುಮಾರಿ, ಆಯಿಷಾ, ಉಷಾಕುಮಾರಿ, ರಾಜೇಶ್ವರಿ, ಜಯಂತಿ, ಹರಿಪ್ರಸಾದ್, ವಿ.ಕೆ. ಪುರು ಷೋತ್ತಮ್, ಕೆ.ಸಿ.ಬಾಲಕೃಷ್ಣ, ಪಂಚಾ ಯಿತಿ ಅಭಿವೃದ್ಧಿ ಅಧಿಕಾರಿ ಕುದುಪಜೆ ಬಿಪಿನ್, ಕರಿಕೆ ಸಹಕಾರಿ ಸಂಘದ ಮಾಜಿ ಅಧ್ಯಕ್ಷರು ಮತ್ತು ಕರ್ನಾಟಕ ಅರೆಭಾಷೆ ಸಾಹಿತ್ಯ ಅಕಾ ಡೆಮಿಯ ಸದಸ್ಯ ದೇವರಾಜ್ ಉಪಸ್ಥಿತರಿದ್ದರು.

ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಸಾರ್ವ ಜನಿಕರಿಗೆ ಛದ್ಮವೇಷ ಸ್ಪರ್ಧೆ, ಕನ್ನಡ ನಾಡ ಗೀತೆ ಸ್ಪರ್ಧೆ, ಭಾಷಣ ಸ್ಪರ್ಧೆ, ಚರ್ಚಾ ಸ್ಪರ್ಧೆ, ವಿಷಯ ಹೆಕ್ಕಿ ಭಾಷಣ ಸ್ಪರ್ಧೆ, ಸಾಮಾನ್ಯ ಜ್ಞಾನ ಸ್ಪರ್ಧೆ, ದೇಶಭಕ್ತಿ ಗೀತಾ ಸ್ಪರ್ಧೆ, ಕನ್ನಡ ನಾಡಗೀತಾ ಸ್ಪರ್ಧೆ, ಭಾವ ಗೀತೆ ಸ್ಪರ್ಧೆ, ಸಂಗೀತ ಕುರ್ಚಿ ಸ್ಪರ್ಧೆ, ಹಗ್ಗ ಜಗ್ಗಾಟ ಸ್ಪರ್ಧೆ ಏರ್ಪಡಿಸಲಾಗಿತ್ತು.

Translate »