ವಿದ್ಯುತ್ ಸ್ಪರ್ಶದಿಂದ ಲೈನ್‍ಮನ್ ಸಾವು
ಕೊಡಗು

ವಿದ್ಯುತ್ ಸ್ಪರ್ಶದಿಂದ ಲೈನ್‍ಮನ್ ಸಾವು

December 17, 2019

ಮಡಿಕೇರಿ, ಡಿ.16- ವಿದ್ಯುತ್ ಕಂಬದಲ್ಲಿ ಲೈನ್ ದುರಸ್ತಿ ಕಾರ್ಯ ನಿರ್ವಹಿಸುತ್ತಿದ್ದ ಸಂದರ್ಭ ಏಕಾಏಕಿ ವಿದ್ಯುತ್ ಹರಿದು ಲೈನ್ ಮನ್ ಓರ್ವರು ಸ್ಥಳದಲ್ಲೇ ಸಾವನಪ್ಪಿದ ಘಟನೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಸಂಪಾಜೆ ಸಮೀಪದ ಚೆಂಬು ಗ್ರಾಮದಲ್ಲಿ ನಡೆದಿದೆ.

ಮಡಿಕೇರಿ ಚೆಸ್ಕಾಂ ವಿಭಾಗದಲ್ಲಿ ಲೈನ್ ಮನ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಮೂಲತಃ ಅರಸೀಕೆರೆ ಸಮೀಪದ ಕಡೂರು ನಿವಾಸಿ ಯಾದ ಯೋಗೇಶ್(24) ಮೃತ ದುರ್ದೈವಿ ಯಾಗಿದ್ದಾರೆ. ಘಟನೆ ಕುರಿತು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.

ಘಟನೆ ವಿವರ: ಕಳೆದ 4 ವರ್ಷ ಗಳಿಂದ ಸಂಪಾಜೆಯ ಚೆಂಬು ಗ್ರಾಮದ ಲೈನ್‍ಮನ್ ಆಗಿ ಯೋಗೇಶ್ ಕಾರ್ಯ ನಿರ್ವಹಿಸು ತ್ತಿದ್ದರು. ಇಂದು ಬೆಳಿಗ್ಗೆ 9 ಗಂಟೆಯ ಸಮಯದಲ್ಲಿ ಅಲ್ಲಿನ ಗ್ರಾಮ ಸ್ಥರು ವಿದ್ಯುತ್ ಸಮಸ್ಯೆಯ ಬಗ್ಗೆ ಯೋಗೇಶ್‍ಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದರು. ಈ ಹಿನೆÀ್ನಲೆಯಲ್ಲಿ ಚೆಂಬುವಿಗೆ ತೆರಳಿದ ಯೋಗೇಶ್ ಅಲ್ಲಿನ ಆನೆಹಳ್ಳ ಸಮೀಪದ ಗೋಪಾಲಕೃಷ್ಣ ಎಂಬುವವರ ತೋಟದ ಸಮೀಪವಿದ್ದ ಟ್ರಾನ್ಸ್‍ಫಾರ್ಮರ್‍ನಲ್ಲಿ ವಿದ್ಯುತ್ ದುರಸ್ಥಿ ಕಾರ್ಯನಿರ್ವಹಿಸುತ್ತಿದ್ದರು. ಈ ಸಂದರ್ಭ ಹೈಟೆನ್ಶನ್ ಲೈನ್‍ನಲ್ಲಿ ಏಕಾಏಕಿ ವಿದ್ಯುತ್ ಹರಿದಿದೆ. ಇದರಿಂದಾಗಿ ಟ್ರಾನ್ಸ್‍ಫಾರ್ಮರ್ ಕಂಬದ ಮೇಲಿದ್ದ ಯೋಗೇಶ್ ಅವರಿಗೆ ವಿದ್ಯುತ್ ಸ್ಪರ್ಶವಾಗಿದ್ದು ಕ್ಷಣಾರ್ಧದಲ್ಲೇ ಕೆಳಗೆ ಬಿದ್ದಿದ್ದಾರೆ. ಮಾಹಿತಿ ಅರಿತ ಸ್ಥಳೀಯರು ತಕ್ಷಣವೇ ಅವರನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ಕರೆತಂದಿದ್ದಾರೆ. ಆದರೆ, ಆ ಹೊತ್ತಿಗಾಗಲೇ ಅವರು ಸಾವನ್ನಪ್ಪಿದ್ದರು.  ಸ್ಥಳೀಯ ಗ್ರಾಮಸ್ಥರು ಪೊಲೀಸರು ಮತ್ತು ಮಡಿಕೇರಿ ಚೆಸ್ಕಾಂ ಇಲಾಖೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ತೆರಳಿದ ಸಂಪಾಜೆ ಪೊಲೀಸರು ಮತ್ತು ಚೆಸ್ಕಾಂ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಗಳು ಸ್ಥಳ ಮಹಜರು ನಡೆಸಿದರು. ಕೊಡಗು ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ಪೋಷಕರಿಗೆ ಹಸ್ತಾಂತರಿಸಲಾಯಿತು.

ಯೋಗೇಶ್ ಜನಾನುರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರಲ್ಲದೇ, ಜನರ ಸಮಸ್ಯೆ ಗಳಿಗೆ ತಕ್ಷಣವೇ ಸ್ಪಂದಿಸುತ್ತಿದ್ದರು. ಇಂತಹ ಯುವ ಉತ್ಸಾಹಿ ಸಿಬ್ಬಂದಿ ಕಳೆದುಕೊಂಡ ದ್ದಕ್ಕೆ ಚೆಂಬು ಗ್ರಾಮಸ್ಥರು ಕಂಬನಿ ಮಿಡಿದಿ ದ್ದಾರೆ. ಚೆಸ್ಕಾಂ ಇಲಾಖೆ ಇಂತಹ ಘಟನೆ ಗಳನ್ನು ತಡೆಯಲು ಅಗತ್ಯ ಸುರಕ್ಷಾ ಕವಚ ಗಳನ್ನು ತಮ್ಮ ಸಿಬ್ಬಂದಿಗಳಿಗೆ ನೀಡಬೇಕು. ಯೋಗೇಶ್ ಕುಟುಂಬಕ್ಕೆ ಇಲಾಖೆಯಿಂದ ತಕ್ಷಣವೇ ಪರಿಹಾರ  ನೀಡಬೇಕು ಎಂದು ಚೆಂಬು ಗ್ರಾಮದ ಹೊಸೂರು ಸೂರಜ್ ಮತ್ತು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

 

Translate »