ನಾಳೆ ಸೈಬರ್ ಭದ್ರತೆ ಕುರಿತ ಸಮ್ಮೇಳನ
ಮೈಸೂರು

ನಾಳೆ ಸೈಬರ್ ಭದ್ರತೆ ಕುರಿತ ಸಮ್ಮೇಳನ

December 17, 2019

ಮೈಸೂರು, ಡಿ.16(ಆರ್‍ಕೆಬಿ)- `ಸೈಬರ್ ಸೆಕ್ಯುರಿಟಿ ಮತ್ತು ಐಒಟಿ- ಡೆಸ್ಟಿನೇಷನ್ ಮೈಸೂರು’ ಕುರಿತ ಸಿಐಐ ವಾರ್ಷಿಕ ಐಟಿ/ಐಟಿಇಎಸ್ ಸಮ್ಮೇಳನ ಡಿ.18ರಂದು ಬೆಳಿಗ್ಗೆ 10 ಗಂಟೆಗೆ ಹೆಬ್ಬಾಳದ ಇನ್ಫೋಸಿಸ್ ಬಳಿಯ ಹೋಟೆಲ್ ಕಂಟ್ರಿ ಇನ್‍ನಲ್ಲಿ ಏರ್ಪಡಿಸಲಾಗಿದೆ ಎಂದು ಸಮ್ಮೇಳನದ sಸಂಚಾಲಕ ಶಂಕರಪ್ರಸಾದ್ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೈಸೂರನ್ನು ಸೈಬರ್ ಸಿಟಿಯಾಗಿ ಮಾಡಿ ಸೈಬರ್ ಸೆಕ್ಯುರಿಟಿ ಪಾಲಿಸಿ ಯನ್ನು ತರಬೇಕು. ದೇಶದಲ್ಲಿ ಸೈಬರ್ ಸಿಟಿ ಎಂದರೆ ಅದು ಮೈಸೂರು ಎಂಬಂತಾಗಬೇಕು. ಸಾಮಾಜಿಕ ಜಾಲತಾಣಗಳಲ್ಲಿ ನಾವು ಹಾಕುವ ಭಾವಚಿತ್ರಗಳು ದುರುಪಯೋಗ ಬಹಳ ಆಗುತ್ತಿದ್ದು, ಸೈಬರ್ ಕ್ರೈಂ ಹೆಚ್ಚುತ್ತಿದೆ. ಹೀಗಾಗಿ ಮಾಹಿತಿ ತಂತ್ರಜ್ಞಾನದ ಸುರಕ್ಷತೆ ಜೊತೆಗೆ ಸೈಬರ್ ಭದ್ರತೆಗೆ ಸಂಬಂಧಿಸಿದಂತೆಯೂ ಸಮ್ಮೇಳನದಲ್ಲಿ ಚರ್ಚೆ ನಡೆಸ ಲಾಗುವುದು. ಕಂಪೆನಿಗಳು ಮತ್ತು ಸರ್ಕಾರದ ವತಿಯಿಂದ ಸೈಬರ್ ಸುರಕ್ಷತೆಗೆ ಕೈಗೊಳ್ಳ ಲಾಗುತ್ತಿರುವ ಕ್ರಮಗಳ ಕುರಿತು ಸಮ್ಮೇಳನದಲ್ಲಿ ಬಹಳಷ್ಟು ಚರ್ಚೆಗಳು ನಡೆಯಲಿವೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಸಮ್ಮೇಳನದ ಸಹ ಸಂಚಾಲಕ ರಾಘವ ನಿಂಗೇಗೌಡ, ಸುಧೀರ್, ನಾರಾಯಣಸ್ವಾಮಿ, ಅಗಸ್ಟಿನ್ ಉಪಸ್ಥಿತರಿದ್ದರು.

Translate »