ಕೇಂದ್ರ ತಂಡದಿಂದ ಮೈಸೂರಲ್ಲಿ ಸ್ವಚ್ಛತೆ ಪರಿಶೀಲನೆ
ಮೈಸೂರು

ಕೇಂದ್ರ ತಂಡದಿಂದ ಮೈಸೂರಲ್ಲಿ ಸ್ವಚ್ಛತೆ ಪರಿಶೀಲನೆ

January 20, 2020

ಮೈಸೂರು,ಜ.19(ಎಂಟಿವೈ)- ಸ್ವಚ್ಛ ಸರ್ವೇಕ್ಷಣೆ ಹಿನ್ನೆಲೆಯಲ್ಲಿ 7 ಜನರಿರುವ ಕೇಂದ್ರದ ತಂಡ ಮೈಸೂ ರಿಗೆ ಆಗಮಿಸಿದ್ದು, ನಗರದ ವಿವಿಧೆಡೆ ಸ್ವಚ್ಛತೆ ಕುರಿತು ಪರಿಶೀಲನೆ ನಡೆಸುತ್ತಿದೆ. ಖುದ್ದು ಪರಿಶೀಲನೆ ಜೊತೆಗೆ ಸ್ಥಳೀಯರೊಂದಿಗೆ ಸಂವಾದ ನಡೆಸಿ, ಸ್ವಚ್ಛತೆ ಕುರಿತಂತೆ ಮಾಹಿತಿ ಪಡೆಯುತ್ತಿದ್ದಾರೆ.

ಸ್ವಚ್ಛ ಸರ್ವೇಕ್ಷಣೆ ನಿಯಮದಂತೆ ಕೇಂದ್ರ ತಂಡ ಗೌಪ್ಯವಾಗಿ 2 ದಿನಗಳ ಹಿಂದಷ್ಟೇ ಮೈಸೂರಿಗೆ ಆಗ ಮಿಸಿದ್ದು, ಶನಿವಾರದಿಂದ ಸರ್ವೆ ಆರಂಭಿಸಿದೆ.

ಸ್ವಚ್ಛ ನಗರಿ ಬಿರುದನ್ನು ಸಾಂಸ್ಕøತಿಕ ನಗರಿ ಮೈಸೂ ರಿಗೆ ಪಡೆದುಕೊಳ್ಳಲು ಮೈಸೂರು ನಗರಪಾಲಿಕೆ ಪಣ ತೊಟ್ಟಿದ್ದು, ಸರ್ವೇಕ್ಷಣೆಯಲ್ಲಿ ಇತರೆ ನಗರಗಳಿಗೆ ಮೈಸೂರು ತೀವ್ರ ಪೈಪೋಟಿ ನೀಡುತ್ತಿದೆ. ಜ.4ರಿಂದ 31ರವರೆಗೆ ಸ್ವಚ್ಛ ಸರ್ವೇಕ್ಷಣೆ ನಡೆಯುತ್ತಿದ್ದು, 6000 ಅಂಕಗಳನ್ನು ಪಡೆದರೆ ಸ್ವಚ್ಛ ನಗರಿ ಎಂಬ ಬಿರುದು ಪಡೆದುಕೊಳ್ಳಬಹುದು. ಕೇಂದ್ರದ ತಂಡ 1500 ಅಂಕ ನೀಡಲು ಖುದ್ದು ಸಮೀಕ್ಷೆ ಮಾಡಿದರೆ, ಕಸ ವಿಂಗ ಡಣೆ, ವಿಲೇವಾರಿ ದಾಖಲೀಕರಣ ಹಾಗೂ ಸಾರ್ವ ಜನಿಕರ ಸಹಭಾಗಿತ್ವದಿಂದ ಪಡೆಯಬಹುದಾಗಿದೆ. ಈ ಹಿನ್ನೆಲೆಯಲ್ಲಿ ಸರ್ವೇಕ್ಷಣೆಯಲ್ಲಿ ಭಾಗಿಯಾಗಿ ರುವ ಎಲ್ಲಾ ನಗರಗಳಿಗೂ ಕೇಂದ್ರ ತಂಡ ಭೇಟಿ ನೀಡಿ ಪರಿಶೀಲಿಸುತ್ತಿದೆ. ಸ್ವಚ್ಛತೆ ಕುರಿತಂತೆ ಸರ್ವೆ ಮಾಡಲು ಕೇಂದ್ರದ ವಿವಿಧ ಇಲಾಖೆಗಳ ಅಧಿಕಾರಿಗಳಾದ ಮನು, ಸಿದ್ದರಾಜು, ಶ್ವೇತ, ನಾಗೇಂದ್ರ, ರಾಜೇಶ್, ಶಿವಕುಮಾರ್ ಹಾಗೂ ಚಂದ್ರು ಎಂಬುವರು ಮೈಸೂರಿಗೆ ಆಗಮಿಸಿದ್ದಾರೆ. ಪರಿ ಸ್ಥಿತಿಯ ನೈಜತೆ ಪರಿಶೀಲಿಸಿ ಅಂಕ ನೀಡುವುದರೊಂದಿಗೆ ತಾವು ಪರಿಶೀಲನೆಗೆ ತೆರಳಿದಾಗ ಕಂಡು ಬರುವ ನೈರ್ಮಲ್ಯತೆ ಹಾಗೂ ಅನೈರ್ಮಲ್ಯತೆ ಕುರಿತ ಫೋಟೋ ತೆಗೆದು ಲೊಕೇಷನ್‍ನೊಂದಿಗೆ ಅಪ್‍ಲೋಡ್ ಮಾಡುತ್ತಾರೆ. ಆ ನಂತರವಷ್ಟೆ ಎಷ್ಟು ಅಂಕ ನೀಡಬೇಕೆಂದು ತಂಡ ನಿರ್ಧರಿಸಲಿದೆ.

ಎಲ್ಲೆಲ್ಲಿ ಸರ್ವೆ: ಮೈಸೂರು ನಗರ ಪಾಲಿಕೆ ಸ್ವಚ್ಛ ಸರ್ವೇಕ್ಷಣಾ ಪ್ರಕ್ರಿಯೆಯಲ್ಲಿ ಪಾಲ್ಗೊ ಳ್ಳಲು ದಾಖಲೆಗಳಲ್ಲಿ ನೀಡಿರುವ ಮಾಹಿತಿಯಂತೆ ಸಾರ್ವಜನಿಕ ಶೌಚಾಲಯ, ಸಮುದಾಯ ಶೌಚಾಲಯ, ಕಸ ನಿರ್ವಹಣಾ ಘಟಕ, ಉದ್ಯಾನವನ ಸೇರಿದಂತೆ ವಿವಿಧೆಡೆ ತೆರಳಿ ಸ್ವಚ್ಛತೆ ಪರಿಶೀಲಿಸುತ್ತಿದ್ದಾರೆ. ಅಲ್ಲದೆ ಮನೆ ಮನೆಯಿಂದ ಪೌರ ಕಾರ್ಮಿಕರು ಕಸ ಸಂಗ್ರಹ ಮಾಡುವ ವಿಧಾನ, ಜನರು ಹಸಿ ಮತ್ತು ಒಣಕಸ ಬೇರ್ಪಡಿಸಿ ನೀಡುವ ಬಗೆ, ಚರಂಡಿ ಸ್ವಚ್ಛತೆ, ರಸ್ತೆ ಬದಿ, ಉದ್ಯಾನವನಗಳ ನಿರ್ವಹಣೆ ಕುರಿತು ಪರಿಶೀಲಿ ಸುತ್ತಿದ್ದಾರೆ. ಅದರಲ್ಲೂ ಸಾರ್ವಜನಿಕರ ಹಾಗೂ ಸಮುದಾಯ ಶೌಚಾಲಯಗಳ ನಿರ್ವಹಣೆ, ಸ್ವಚ್ಛತೆ ಬಗ್ಗೆ ಸೂಕ್ಷ್ಮವಾಗಿ ಪರಿಶೀಲನೆ ನಡೆಸಿ ಅಂಕ ನೀಡಲಿದ್ದಾರೆ.

Translate »