ಪುತ್ರ ನಿಖಿಲ್‍ನೊಂದಿಗೆ ರಾಜಗುರು ದ್ವಾರಕನಾಥ್ ಆಶೀರ್ವಾದ  ಪಡೆದ ಸಿಎಂ ಕುಮಾರಸ್ವಾಮಿ
ಮೈಸೂರು

ಪುತ್ರ ನಿಖಿಲ್‍ನೊಂದಿಗೆ ರಾಜಗುರು ದ್ವಾರಕನಾಥ್ ಆಶೀರ್ವಾದ ಪಡೆದ ಸಿಎಂ ಕುಮಾರಸ್ವಾಮಿ

March 14, 2019

ಬೆಂಗಳೂರು: ಲೋಕಸಭಾ ಚುನಾ ವಣೆಯ ಬೆನ್ನಲ್ಲೇ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಅವರೊಂದಿಗೆ ರಾಜ ಗುರು ದ್ವಾರಕ ನಾಥ್ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ.

ಜ್ಯೋತಿಷಿ ರಾಜಗುರು ದ್ವಾರಕನಾಥ್ ಅವರ ಮನೆಗೆ ನಿನ್ನೆ ರಾತ್ರಿ ಸಿಎಂ ಕುಮಾರಸ್ವಾಮಿ, ನಿಖಿಲ್ ಅವರನ್ನೂ ಕರೆದುಕೊಂಡು ಹೋಗಿ ಆಶೀರ್ವಾದ ಪಡೆದಿ ದ್ದಾರೆ. ಈ ವೇಳೆ ತಮ್ಮ ಮಗನ ರಾಜಕೀಯ ಭವಿಷ್ಯದ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮಾರ್ಚ್ 29ರ ಬಳಿಕ ನಿಖಿಲ್ ಜಾತಕದಲ್ಲಿ ಗುರು ಸ್ಥಾನ ಬದಲಾವಣೆ ಮಾಡುತ್ತಾರೆ. ಒಳ್ಳೆಯ ಗಳಿಗೆಯಲ್ಲಿ ಮಂಡ್ಯ ದಿಂದ ನಾಮಪತ್ರ ಸಲ್ಲಿಸಿ ಎಂದಿದ್ದಾರೆ. ಜ್ಯೋತಿಷಿ ದ್ವಾರಕ ನಾಥ್ ಬಳಿ ಸಾಕಷ್ಟು ನಾಯಕರು ಶಾಸ್ತ್ರ ಕೇಳಿ ಅದರಂತೆ ನಡೆದುಕೊಂಡು ರಾಜಕೀಯದಲ್ಲಿ ಏಳಿಗೆ ಸಾಧಿಸಿದ್ದಾರೆ. ಇದೀಗ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕುಮಾರ ಸ್ವಾಮಿ ಅವರು ಪುತ್ರನಿಗಾಗಿ ಅವರ ಮೊರೆ ಹೋಗಿದ್ದಾರೆ. ಜ್ಯೋತಿಷಿ ದ್ವಾರಕನಾಥ್ ಅವರು ಸಿಎಂಗೆ ಮಂಡ್ಯ ರಾಜ ಕೀಯದಲ್ಲಿ ಏನಾಗಲಿದೆ ಎಂಬುದರ ಕುರಿತು ಹೇಳಿದ್ದಾರೆ ಎನ್ನುವ ಮಾಹಿತಿಯನ್ನು ಸದ್ಯ ಗೌಪ್ಯವಾಗಿಡಲಾಗಿದೆ.

ಕುಮಾರಸ್ವಾಮಿ ಕುಟುಂಬದಲ್ಲಿ ಎಲ್ಲರೂ ದೈವಭಕ್ತರೇ, ಎಲ್ಲರೂ ಜ್ಯೋತಿಷ್ಯವನ್ನು ಸಾಕಷ್ಟು ನಂಬುತ್ತಾರೆ, ಡಿಕೆ ಶಿವಕುಮಾರ್ ಅವರ ಆಪ್ತರಾಗಿರುವ ರಾಜಗುರು ದ್ವಾರಕ ನಾಥ್ ಅವರ ಮನೆಗೆ ಹೋಗಿರುವುದು ರಾಜಕೀಯ ಕುತೂಹಲಕ್ಕೆ ಕಾರಣ. ಕುಮಾರಸ್ವಾಮಿ ಅವರು ಕಳೆದ ವಾರವೇ ಬರಬೇಕಾಗಿತ್ತು. ಅವರು ಶೃಂಗೇರಿಗೆ ಹೋಗಿ ದ್ದರಿಂದ ಬರಲು ಆಗಿರಲಿಲ್ಲ. ವಂಶ ಪಾರಂಪರ್ಯ ರಾಜ ಕಾರಣ ಒಂದು ಕಡೆ ಇರಲಿ, ಯಾರ್ ಯಾರಿಗೆ ಯೋಗ ಇರುತ್ತೊ ಅವರು ಅನುಭವಿಸುತ್ತಾರೆ. ಆ ಹುಡುಗ ಚುನಾ ವಣೆಗೆ ನಿಲ್ಲಬೇಕು ಎಂಬ ಉತ್ಸಾಹದಲ್ಲಿ ದ್ದಾನೆ. ಒಬ್ಬ ಗುರುವಾಗಿ ನಮ್ಮ ಮನೆಗೆ ಯಾರೇ ಬಂದರೂ ಧೈರ್ಯ ತುಂಬಿ ಕಳಿಸುತ್ತೇನೆ, ಅದು ನನ್ನ ಕರ್ತವ್ಯ. ನಿನಗೆ, ನಿಮ್ಮ ಕುಟುಂಬಕ್ಕೆ ಒಳ್ಳೆಯದಾಗಲಿ ಎಂದು ಹೇಳಿದ್ದೇನೆ ಎಂದು ನಂತರ ಸುದ್ದಿಗಾರರಿಗೆ ತಿಳಿಸಿದ್ದಾರೆ. ಅವರಿಗೆ ಶಾರದಾ ಪೀಠದ ಪೂರ್ಣಾನುಗ್ರಹ ಇದೆ. ಕುಮಾರಸ್ವಾಮಿ ಅವರಿಗೆ ಕಂಟಕ ಬಂದಾಗ ಗಾಣಗಾಪುರಕ್ಕೆ ಹೋಗಿ ಸೇವೆ ಮಾಡಿ ಎಂದು ಹೇಳಿದೆ.ಅಲ್ಲಿ ಹೋಗಿ ಪೂಜೆ ಮಾಡಿಕೊಂಡು ಬಂದಿದ್ದಾರೆ. ಈಗ ಅವರಿಗೆ ಒಳ್ಳೆಯ ದಾಗಲಿ ಎಂದು ಆಶೀರ್ವಾದ ಮಾಡಿದ್ದೇನೆ ಎಂದು ದ್ವಾರಕನಾಥ್ ಗುರೂಜಿ ಹೇಳಿದ್ದಾರೆ.

Translate »