ಹಾಸನ, ಮಂಡ್ಯ, ತುಮಕೂರು ಸೇರಿದಂತೆ ಎಂಟು ಲೋಕಸಭಾ ಕ್ಷೇತ್ರ ಜೆಡಿಎಸ್ ಪಾಲಿಗೆ
ಮೈಸೂರು

ಹಾಸನ, ಮಂಡ್ಯ, ತುಮಕೂರು ಸೇರಿದಂತೆ ಎಂಟು ಲೋಕಸಭಾ ಕ್ಷೇತ್ರ ಜೆಡಿಎಸ್ ಪಾಲಿಗೆ

March 14, 2019

ಬೆಂಗಳೂರು: ಹಾಸನ, ಮಂಡ್ಯ, ತುಮಕೂರು ಸೇರಿದಂತೆ ಎಂಟು ಲೋಕಸಭಾ ಕ್ಷೇತ್ರ ಜೆಡಿಎಸ್ ಪಾಲಿಗೆ ಬಂದಿವೆ. ಇಂದು ಆ ಕ್ಷೇತ್ರಗಳಿಗೆ ಸಚಿವರು, ಶಾಸಕರು, ಮುಖಂಡರಿಗೆ ಉಸ್ತು ವಾರಿ ಹೊಣೆಗಾರಿಕೆಯನ್ನು ಜೆಡಿಎಸ್ ವರಿಷ್ಠರು ಹೊರಿಸಿದ್ದಾರೆ.

ಜೆಡಿಎಸ್‍ಗೆ ಉತ್ತರ ಕನ್ನಡ, ಚಿಕ್ಕಮಗಳೂರು-ಉಡುಪಿ, ಶಿವಮೊಗ್ಗ, ತುಮಕೂರು, ಮಂಡ್ಯ, ಹಾಸನ, ಬೆಂಗ ಳೂರು ಉತ್ತರ ಹಾಗೂ ವಿಜಯಪುರ ದಕ್ಕಿವೆ. ಕೊಚ್ಚಿನ್ ನಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್‍ಗಾಂಧಿ ಭೇಟಿಯಾದ ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡ್ಯಾನಿಷ್ ಅಲಿಗೆ ಇದನ್ನು ದೃಢಪಡಿಸಿದ್ದಾರೆ. ಬೆಂಗಳೂರು ಉತ್ತರ ದಿಂದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಹಾಸನದಲ್ಲಿ ಪ್ರಜ್ವಲ್ ರೇವಣ್ಣ, ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ, ಶಿವಮೊಗ್ಗ ದಿಂದ ಮಧು ಬಂಗಾರಪ್ಪ ಹಾಗೂ ಉತ್ತರ ಕನ್ನಡದಿಂದ ಆನಂದ್ ಅಸ್ನೋಟಿಕರ್ ಸ್ಪರ್ಧಿಸುವುದು ಖಚಿತವಾಗಿದೆ. ಕಾಂಗ್ರೆಸ್‍ನಿಂದ ತುಮಕೂರು ಕಿತ್ತುಕೊಂಡಿ ರುವುದರಿಂದ ಹಾಲಿ ಸಂಸದ ಮುದ್ದುಹನುಮೇಗೌಡ ಸ್ಥಾನ ವಂಚಿತ ರಾಗಿದ್ದಾರೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡ, ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಭೆಯಲ್ಲಿ ಎಂಟು ಕ್ಷೇತ್ರಗಳಲ್ಲಿ ಕನಿಷ್ಠ 5 ರಿಂದ 6 ಕ್ಷೇತ್ರಗಳಲ್ಲಿ ಗೆಲ್ಲಲೇಬೇಕೆಂದು ಪಕ್ಷ ಪಣ ತೊಟ್ಟಿದೆ. ಈ ಮಧ್ಯೆ ಪಕ್ಷದ ಸಚಿವರು, ಶಾಸಕರು, ಮುಖಂಡರ ಜೊತೆ ಸುದೀರ್ಘ ಸಮಾಲೋಚನೆ ನಡೆಸಿದ ಗೌಡರು ಆಯಾ ಭಾಗದ ಸಚಿವರು, ಶಾಸಕರು ಮತ್ತು ಮುಖಂಡ ರಿಗೆ ಹೊಣೆಗಾರಿಕೆ ಮಾಡಿ, ಜವಾಬ್ದಾರಿ ನೀಡಿದ್ದಾರೆ.

ಮಂಡ್ಯ ಲೋಕಸಭಾ ಕ್ಷೇತ್ರದ ಹೊಣೆಗಾರಿಕೆ ಸಚಿವ ರಾದ ಸಿ.ಎಸ್. ಪುಟ್ಟರಾಜು, ಡಿ.ಸಿ. ತಮ್ಮಣ್ಣ ಹಾಗೂ ಸಾ.ರಾ. ಮಹೇಶ್ ಮತ್ತು ಪಕ್ಷದ ಶಾಸಕರಿಗೆ ಬಿಡಲಾಗಿದೆ. ಹಾಸನ ಕ್ಷೇತ್ರಕ್ಕೆ ಸಚಿವ ಹೆಚ್.ಡಿ. ರೇವಣ್ಣ ಮತ್ತು ಜಿಲ್ಲಾ ಶಾಸಕರು, ಕಾಂಗ್ರೆಸ್ ತೆಕ್ಕೆಯಿಂದ ತೆಗೆದುಕೊಂಡಿರುವ ತುಮಕೂರಿಗೆ ಸಣ್ಣ ಕೈಗಾರಿಕೆ ಸಚಿವ ಶ್ರೀನಿವಾಸು ಹಾಗೂ ಪಕ್ಷದ ಪ್ರಧಾನ ಕಾರ್ಯದರ್ಶಿ ಚಿಕ್ಕನಾಯಕನಹಳ್ಳಿ ಸುರೇಶ್‍ಬಾಬು ಅವರ ಹೆಗಲಿಗೆ ಬಿಡಲಾಗಿದೆ. ರಾಜ್ಯಸಭಾ ಸದಸ್ಯ ಕುಪ್ಪೇಂದ್ರ ರೆಡ್ಡಿ, ಶಾಸಕರಾದ ಗೋಪಾಲಯ್ಯ, ಮಂಜುನಾಥ್ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಉಸ್ತುವಾರಿ ನೋಡಿಕೊಳ್ಳುತ್ತಾರೆ. ಶಿವಮೊಗ್ಗ ಕ್ಷೇತ್ರದ ಅಭ್ಯರ್ಥಿ ಮಧು ಬಂಗಾರಪ್ಪ ಎಂದು ಈಗಾಗಲೇ ಪ್ರಕಟವಾಗಿದೆ. ಅದರ ಹೊಣೆಗಾರಿಕೆಯನ್ನು ಕ್ಷೇತ್ರದ ಎಲ್ಲಾ ನಾಯಕರಿಗೆ ನೀಡಿದೆ. ವಿಜಯಪುರ ಕ್ಷೇತ್ರಕ್ಕೆ ಮಾಜಿ ಸಚಿವ ಆರ್.ಕೆ. ರಾಥೋಡ್ ಪುತ್ರ ಎಂದು ಹೇಳಲಾಗುತ್ತಿದ್ದು, ಇದರ ಹೊಣೆಗಾರಿಕೆಯನ್ನು ತೋಟಗಾರಿಕೆ ಸಚಿವ ಮನುಗೂಳಿ ಹಾಗೂ ಪಶುಸಂಗೋಪನಾ ಸಚಿವ ವೆಂಕಟರಾವ್ ನಾಡಗೌಡ. ಹಾಗೆ ಉಡುಪಿ-ಚಿಕ್ಕಮಗಳೂರು ಹಾಗೂ ಉತ್ತರ ಕನ್ನಡಕ್ಕೂ ಪಕ್ಷದ ಸಚಿವರು, ಶಾಸಕರಿಗೆ ಜವಾಬ್ದಾರಿ ವಹಿಸಲಾಗಿದೆ.

Translate »