ದಸರಾವನ್ನು ಜನಸಾಮಾನ್ಯರ ಹಬ್ಬವಾಗಿಸಲು ಸಹಕರಿಸಿ: ವಿ.ಸೋಮಣ್ಣ
ಮೈಸೂರು

ದಸರಾವನ್ನು ಜನಸಾಮಾನ್ಯರ ಹಬ್ಬವಾಗಿಸಲು ಸಹಕರಿಸಿ: ವಿ.ಸೋಮಣ್ಣ

September 13, 2019

ಮೈಸೂರು,ಸೆ.12(ಆರ್‍ಕೆ)- ವಿಶ್ವವಿಖ್ಯಾತ ದಸರಾ ವನ್ನು ಜನಸಾಮಾನ್ಯರ ಹಬ್ಬವಾಗಿಸಲು ಸಹಕರಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಅಧಿಕಾರಿಗಳ ಸಹಕಾರ ಕೋರಿದ್ದಾರೆ.

ಮುಡಾ ಕಚೇರಿ ಸಭಾಂಗಣದಲ್ಲಿ ಗುರುವಾರ ಮಧ್ಯಾಹ್ನ ದಸರಾ ಸಿದ್ಧತೆ ಕುರಿತಂತೆ ಸಿದ್ಧತಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ನಾಡಹಬ್ಬ ನಮ್ಮ ಮನೆಯ ಸ್ವತ್ತು ಆಗಬಾರದು. ದಸರಾ ಪಾಸ್ ಪಡೆದ ಜನಸಾಮಾನ್ಯರು, ವಿದೇಶಿ ಗರು ದಸರಾ ವೀಕ್ಷಣೆ ಮಾಡಲು ಅಧಿಕಾರಿಗಳು ಸಹಕರಿಸಬೇಕು. ಆ ಮೂಲಕ ಈ ಬಾರಿಯ ದಸರಾದಲ್ಲಿ ವಿಶ್ವಕ್ಕೆ ಹೊಸ ಸಂದೇಶ ರವಾನೆ ಯಾಗಬೇಕು ಎಂದರು.

ಪ್ರತಿಯೊಂದು ಇಲಾಖೆ ಅಧಿಕಾರಿಗಳು ಪರಸ್ಪರ ಸಮನ್ವಯ ಸಾಧಿಸಿ ಎಲ್ಲಾ ಕಾರ್ಯಕ್ರಮಗಳನ್ನೂ ಯಾವುದೇ ದೋಷವಿಲ್ಲದಂತೆ ಆಯೋಜಿಸಿ ಈ ಬಾರಿಯ ದಸರಾ ಮಹೋತ್ಸವವನ್ನು ಯಶಸ್ವಿ ಗೊಳಿಸಬೇಕು. ಮೈಸೂರಿನ ಸಾಂಸ್ಕøತಿಕ ಪರಂ ಪರೆಯನ್ನು ಮುಂದಿನ ಪೀಳಿಗೆಗೆ ನೀಡಬೇಕೆಂದು ಸಚಿವರು ಇದೇ ಸಂದರ್ಭ ಪುನರುಚ್ಚರಿಸಿದರು.

ದಸರಾ ದೀಪಾಲಂಕಾರ, ಕ್ರೀಡೆ, ಸಾಹಸ ಕ್ರೀಡೆ, ಸಾಂಸ್ಕøತಿಕ ಕಾರ್ಯಕ್ರಮ, ಯೋಗ, ಆಹಾರ ಮೇಳ, ಫಲಪುಷ್ಪ ಪ್ರದರ್ಶನ, ದಸರಾ ವಸ್ತು ಪ್ರದರ್ಶನದಂತಹ ಎಲ್ಲಾ ಕಾರ್ಯಕ್ರಮಗಳನ್ನು ಸೆಪ್ಟೆಂಬರ್ 19ರೊಳಗಾಗಿ ಅಂತಿಮ ಗೊಳಿಸ ಬೇಕಾಗಿದೆ. ಈ ಕುರಿತು ತಾವು ಮುಖ್ಯ ಮಂತ್ರಿ ಗಳೊಂದಿಗೆ ಚರ್ಚಿಸಿ ನಂತರ ಹೇಳುತ್ತೇವೆ ಎಂದೂ ಸೋಮಣ್ಣ ಅವರು ಅಧಿಕಾರಿಗಳಿಗೆ ತಿಳಿಸಿದರು.

ಅಧಿಕಾರಿಗಳು ಅಕ್ಟೋಬರ್ 7ರಂದು ನಡೆ ಯುವ ಪಂಜಿನ ಕವಾಯತು ರಿಹರ್ಸಲ್‍ಗೆ ತಮ್ಮ ಸಂಬಂಧಿಕರು, ಕುಟುಂಬದವರನ್ನು ಕರೆ ತಂದು ತೋರಿಸಿ. ಆದರೆ ಅಕ್ಟೋಬರ್ 8ರಂದು ಮಾತ್ರ ಸಾರ್ವಜನಿಕರು, ಪ್ರವಾಸಿಗರು ಹಾಗೂ ವಿದೇಶಿಗರಿಗೆ ಅವಕಾಶ ಮಾಡಿಕೊಡಿ ಎಂದು ಸಚಿವರು ಮನವಿ ಮಾಡಿದರು.

ದಸರಾ ಕ್ರೀಡಾ ಲೋಗೋವನ್ನು ಪ್ರತ್ಯೇಕವಾಗಿ ಮಾಡುವ ಸಚಿವರ ಸಲಹೆಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್, ಕೆಲ ಕಾಲೇಜು ವಿದ್ಯಾರ್ಥಿಗಳು ಹಾಗೂ ಕಲಾವಿದರಿಂದ ದಸರಾ ಕ್ರೀಡಾ ಲೋಗೋ ಸಿದ್ಧಪಡಿಸಲು ಆಹ್ವಾನಿಸಿದಲ್ಲಿ ಸೃಜನಾತ್ಮಕ ಲಾಂಛನ ಸಿಗುತ್ತದೆ ಎಂದರು. ಅಕ್ಟೋ ಬರ್ 1ರಂದು ಕ್ರೀಡಾಕೂಟ ಹಾಗೂ ಯುವ ದಸರಾ ಉದ್ಘಾಟನೆಗೆ ಅಂತಾರಾಷ್ಟ್ರೀಯ ಕ್ರೀಡಾ ಪಟು ಪಿ.ವಿ.ಸಿಂಧು ಅವರನ್ನು ಕರೆತರಬೇಕೆಂ ಬುದು ಜಿಲ್ಲಾಡಳಿತದ ಬಯಕೆಯಾಗಿರುವುದ ರಿಂದ ಆ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುತ್ತಿದೆ. ಶನಿವಾರದ ನಂತರ ಈ ಬಗ್ಗೆ ಸ್ಪಷ್ಟ ಮಾಹಿತಿ ದೊರೆಯಲಿದೆ ಎಂದೂ ಸಚಿವ ಸೋಮಣ್ಣ ನುಡಿದರು. ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಪ್ರಧಾನ ಕಾರ್ಯದರ್ಶಿಗಳಾದ ಮೈಸೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಜಿ. ಕಲ್ಪನಾ, ನಗರ ಪೊಲೀಸ್ ಆಯುಕ್ತ ಕೆ.ಟಿ. ಬಾಲ ಕೃಷ್ಣ, ಎಸ್‍ಪಿ ರಿಷ್ಯಂತ್, ಎಎಸ್‍ಪಿ ಸ್ನೇಹಾ, ಅಡಿ ಷನಲ್ ಡಿಸಿ ಬಿ.ಆರ್. ಪೂರ್ಣಿಮಾ, ಜಿಲ್ಲಾ ಪಂಚಾಯ್ತಿ ಸಿಇಓ ಕೆ.ಜ್ಯೋತಿ, ಮುಡಾ ಆಯುಕ್ತ ಪಿ.ಎಸ್.ಕಾಂತರಾಜು, ಸೂಪರಿಂಟೆಂಡಿಂಗ್ ಇಂಜಿನಿಯರ್ ಬಿ.ಕೆ.ಸುರೇಶ್ ಬಾಬು, ನಗರ ಯೋಜಕ ಸದಸ್ಯ ಬಿ.ಎನ್.ಗಿರೀಶ್, ಚೆಸ್ಕಾಂ ವ್ಯವ ಸ್ಥಾಪಕ ನಿರ್ದೇಶಕ ಗೋಪಾಲಕೃಷ್ಣ ಸೇರಿದಂತೆ ಹಲವು ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು. ಇದೇ ವೇಳೆ ಎಸ್‍ಎಂಪಿ ಬಿಲ್ಡರ್ಸ್ ವತಿಯಿಂದ ಶಿವಪ್ರಕಾಶ್ ಅವರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರಿಗೆ 5 ಲಕ್ಷ ರೂ.ಗಳ ದೇಣಿಗೆ ಚೆಕ್ ಅನ್ನು ದಸರಾಗೆ ಹಸ್ತಾಂತರಿಸಿದರು.

Translate »