ಬೆಂಗಳೂರು,ಸೆ.12- 10 ರಾಷ್ಟ್ರೀ ಕೃತ ಬ್ಯಾಂಕ್‍ಗಳ ಮಹಾ ವಿಲೀನವನ್ನು ಖಂಡಿಸಿ ನಾಲ್ಕು ಬ್ಯಾಂಕ್ ನೌಕರರ ಸಂಘಗಳು ಸೆಪ್ಟೆಂಬರ್ 25ರ ಮಧ್ಯ ರಾತ್ರಿಯಿಂದ ಎರಡು ದಿನಗಳ ಕಾಲ ಮುಷ್ಕರ ಹಮ್ಮಿಕೊಂಡಿವೆ. ಈ ಕುರಿತು ಗುರುವಾರ ಸಂಘಟನೆಯ ಮುಖ್ಯ ಸ್ಥರು ಸ್ಪಷ್ಟಪಡಿಸಿದ್ದು, ಸೆಪ್ಟೆಂಬರ್ 25ರ ಮಧ್ಯರಾತ್ರಿಯಿಂದ ಎರಡು ದಿನಗಳ ಕಾಲ ಮುಷ್ಕರ ನಡೆಸಲಾಗುವುದು. ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯದಿದ್ದಲ್ಲಿ. ನವೆಂಬರ್ ಎರಡನೇ ವಾರದಿಂದ ಅನಿರ್ದಿಷ್ಟಾವಧಿ ಮುಷ್ಕ ರಕ್ಕೆ ಕರೆ ನೀಡಲಾಗುವುದು ಎಂದು ಎಚ್ಚರಿಸಿದ್ದಾರೆ. 10 ರಾಷ್ಟ್ರೀಕೃತ ಬ್ಯಾಂಕ್ ಗಳ ವಿಲೀನ ತಡೆಯುವುದು ಹಾಗೂ ಸಿಬ್ಬಂದಿಯ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬ್ಯಾಂಕ್ ನೌಕರರ ಒಕ್ಕೂಟಗಳು ಮುಷ್ಕರಕ್ಕೆ ಕರೆ ನೀಡಿವೆ ಎಂದು ಅಖಿಲ ಭಾರ ತೀಯ ಬ್ಯಾಂಕ್ ಅಧಿಕಾರಿಗಳ ಕಾನ್ಫೆಡ ರೇಶನ್(ಎಐಬಿಓಸಿ)ನ ಪ್ರಧಾನ ಕಾರ್ಯದರ್ಶಿ ದೀಪಲ್ ಕುಮಾರ್ ಶರ್ಮಾ ತಿಳಿಸಿದ್ದಾರೆ.