ಆನೆ ತಾಲೀಮಿನ ವೇಳೆ ಪಕ್ಕಕ್ಕೆ ಬಂದು ಹಾರನ್ ಹೊಡೆಯಬೇಡಿ
ಮೈಸೂರು

ಆನೆ ತಾಲೀಮಿನ ವೇಳೆ ಪಕ್ಕಕ್ಕೆ ಬಂದು ಹಾರನ್ ಹೊಡೆಯಬೇಡಿ

September 13, 2019

ಮೈಸೂರು, ಸೆ.12(ಎಂಟಿವೈ)- ದಸರಾ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಗಜಪಡೆಗೆ ಪೂರ್ಣ ಪ್ರಮಾಣದ ತಾಲೀಮು ಆರಂಭಿಸಲಾಗಿದ್ದು, ಮಾರ್ಗದುದ್ದಕ್ಕೂ ವಾಹನ ಸವಾರರು ಆನೆಗಳ ಸಮೀಪ ಬಂದು ಹಾರನ್ ಹೊಡೆಯದಂತೆ ಅರಣ್ಯ ಇಲಾಖೆ ಮನವಿ ಮಾಡಿದೆ.

ಮಂಗಳವಾರ ನಗರ ಬಸ್ ನಿಲ್ದಾಣದ ಬಳಿ ಬಸ್ ಚಾಲಕ ಹಾಗೂ ದ್ವಿಚಕ್ರ ವಾಹನಗಳ ಸವಾ ರರು ತಾಲೀಮಿನಲ್ಲಿ ತೊಡಗಿದ್ದ ಆನೆಗಳ ಸಮೀಪ ಬಂದು ಜೋರಾಗಿ ಹಾರನ್ ಬಾರಿಸಿದ್ದರಿಂದ ಅರ್ಜುನ ಸೇರಿದಂತೆ ಮೂರು ಆನೆ ಅಡ್ಡಲಾಗಿ ನಿಂತವು. ಇದರಿಂದ ಕೆಲಕಾಲ ಆತಂಕದ ಪರಿ ಸ್ಥಿತಿ ಉಂಟಾಗಿತ್ತು. ಇದನ್ನು ಗಂಭೀರವಾಗಿ ಪರಿ ಗಣಿಸಿರುವ ಅರಣ್ಯ ಇಲಾಖೆ ಸಿಬ್ಬಂದಿ, ಆನೆಗಳು ಚಾಮರಾಜ ವೃತ್ತದಿಂದ ಕೆ.ಆರ್.ವೃತ್ತ ದಾಟುವವ ರೆಗೂ ವಾಹನಗಳನ್ನು ಬಳಿ ಬಿಡದಂತೆ ಪೊಲೀ ಸರಿಗೆ ಸೂಚನೆ ನೀಡಿದ್ದಾರೆ. ಕೆ.ಆರ್.ವೃತ್ತದಿಂದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದವ ರೆಗೆ ದಾರಿಯುದ್ದಕ್ಕೂ ಎರಡು ಬದಿ ಬರುವ ವಾಹನ ಗಳ ಸವಾರರು ಹಾರನ್ ಹೊಡೆಯದಂತೆ ಕೋರ ಲಾಗಿದೆ. ಸ್ವಯಂ ಪ್ರೇರಣೆಯಿಂದ ಆನೆಗಳಿಗೆ ಸಹಕಾರ ನೀಡಿ, ದಸರಾ ಮಹೋತ್ಸವದ ಯಶಸ್ಸಿಗೆ ಸಹಕರಿಸುವಂತೆ ಕೋರಿದ್ದಾರೆ.

ರಸ್ತೆಗಿಳಿದ 11 ಆನೆ: ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಎರಡು ತಂಡಗಳಿಂದ 13 ಆನೆ ಗಳನ್ನು ಕರೆತರಲಾಗಿದೆ. ಅದರಲ್ಲಿ ಗೋಪಿ ಆನೆಗೆ ಭೇದಿ ಕಾಣಿಸಿಕೊಂಡಿದ್ದರಿಂದ ಇಂದು ತಾಲೀಮಿ ನಿಂದ ವಿನಾಯಿತಿ ನೀಡಲಾಗಿತ್ತು. ಬಂಡೀ ಪುರದ ಕಾಡಂಚಿನ ಗ್ರಾಮಗಳಲ್ಲಿ ಹಸುಗಳ ಮೇಲೆ ದಾಳಿ ನಡೆಸಿ ಭಯದ ವಾತಾವರಣ ಸೃಷ್ಟಿಸಿರುವ ಹುಲಿ ಸೆರೆಗೆ ಇಂದು ಮುಂಜಾನೆ ಅಭಿಮನ್ಯು ಆನೆ ಕಳು ಹಿಸಲಾಗಿದೆ. ಇದರಿಂದಾಗಿ ಇಂದು ನಡೆದ ತಾಲೀಮಿ ನಲ್ಲಿ 11 ಆನೆಯನ್ನು ಮಾತ್ರ ಕಳುಹಿಸಲಾಯಿತು.

ಈಶ್ವರ ತಾಲೀಮಿನಲ್ಲಿ ಶಾಂತ ರೀತಿಯಲ್ಲಿ ಪಾಲ್ಗೊಂಡು ಗಮನ ಸೆಳೆದ. ಸಣ್ಣ ಪ್ರಮಾಣದ ಅಂಜಿಕೆಯಿಂದಾಗಿ ಈಶ್ವರನನ್ನೂ ಸಚಿವರ ಸೂಚನೆ ಮೇರೆಗೆ ಶಿಬಿರಕ್ಕೆ ವಾಪಸ್ಸು ಕಳುಹಿಸಲು ಉದ್ದೇ ಶಿಸಲಾಗಿದೆಯಾದರೂ, ಆತನ ವರ್ತನೆ ಮತ್ತೊಮ್ಮೆ ಗಮನಿಸಿ ಅರಮನೆಯಲ್ಲಿಯೇ ಇರಿಸಿಕೊಳ್ಳುವ ಆಲೋಚನೆಯೂ ಅಧಿಕಾರಿ ವರ್ಗದಲ್ಲಿದೆ. ಭವಿ ಷ್ಯದ ಅಂಬಾರಿ ಆನೆಯಾಗಿ ಬಳಸಿಕೊಳ್ಳಬೇಕಾಗಿ ರುವುದರಿಂದ ಈಶ್ವರ ಆನೆಗೆ ತರಬೇತಿ ಮುಂದು ವರಿಕೆ ಅನಿವಾರ್ಯ ಎಂಬ ಮಾಹಿತಿಯನ್ನು ಸಚಿವರಿಗೆ ಮನವರಿಕೆ ಮಾಡಿಕೊಡಲು ನಿರ್ಧ ರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Translate »