ಮೈಸೂರು ಮಹಾರಾಜರು ನಿರ್ಮಿಸಿದ್ದ ಲಲಿತಾಮಹಲ್ ಪ್ಯಾಲೇಸ್ ಆರ್ಚ್ ಗೇಟ್‍ನ ದುಸ್ಥಿತಿ
ಮೈಸೂರು

ಮೈಸೂರು ಮಹಾರಾಜರು ನಿರ್ಮಿಸಿದ್ದ ಲಲಿತಾಮಹಲ್ ಪ್ಯಾಲೇಸ್ ಆರ್ಚ್ ಗೇಟ್‍ನ ದುಸ್ಥಿತಿ

July 11, 2019

ಮೈಸೂರು,ಜು.10(ಪಿಎಂ)- ಮೈಸೂರು ಮಹಾರಾಜರ ಕಾಲದ ಪರಂಪರೆ ಬಿಂಬಿ ಸುವ ಆ `ಸ್ವಾಗತ ಕಮಾನು’ ಸೂಕ್ತ ನಿರ್ವಹಣೆ ಇಲ್ಲದೆ ದುಸ್ಥಿತಿಗೆ ತಲುಪಿದ್ದು, ಪಾರಂಪರಿಕ ಹಿನ್ನೆಲೆ ಹೊಂದಿದ ಅದರ ಮಹತ್ವ ಅದೇಕೊ ಸ್ಥಳೀಯ ಆಡಳಿತಕ್ಕೆ ಅರ್ಥವೇ ಆಗುತ್ತಿಲ್ಲ ಎಂಬುದನ್ನು ಅರ್ಥೈಸಿ ಕೊಳ್ಳಲು ಅದನ್ನೊಮ್ಮೆ ನೋಡಿದರೆ ಸಾಕು.

ಹೌದು, ಮೈಸೂರಿನ ತಿ.ನರಸೀಪುರ ರಸ್ತೆಯ ತೂಗುದೀಪ ಶ್ರೀನಿವಾಸ ವೃತ್ತದ ಬಳಿಯಿರುವ `ಸ್ವಾಗತ ಕಮಾನು’ ನಿರ್ವ ಹಣೆ ಇಲ್ಲದೆ, ಅಳಿವಿನಂಚಿಗೆ ತಲುಪು ತ್ತಿದ್ದು, ಗಿಡ-ಗಂಟಿಗಳು ಕಮಾನಿಗೆ ಹಬ್ಬಿರುವುದು ಮಾತ್ರವಲ್ಲದೆ, ಕಮಾನಿನ ಗೋಡೆ ಯಲ್ಲೂ ಬೇರು ಬಿಟ್ಟು ಬೆಳೆಯಲಾರಂಭಿ ಸಿವೆ. ಇದರ ಪರಿಣಾಮ ಐತಿಹಾಸಿಕ ಸ್ಮಾರಕ ವೊಂದು ಅವನತಿಯತ್ತ ಸಾಗುವಂತಾಗಿದೆ.

ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲ ದಲ್ಲಿ ನಿರ್ಮಿಸಿರುವ ಈ `ಸ್ವಾಗತ ಕಮಾನು’ ಬೇಕಾಬಿಟ್ಟಿಯಾಗಿ ಜಾಹೀ ರಾತು ಬಿತ್ತಿಪತ್ರಗಳನ್ನು ಅಂಟಿಸಲೂ ಬಳಕೆ ಯಾಗುತ್ತಿದೆ. ಶತಮಾನದ ಅಂಚಿನಲ್ಲಿ ರುವ ಇದು ಮಳೆ-ಗಾಳಿಯ ನಡೆಯೂ ಸಾಕಷ್ಟು ಸದೃಢವಾಗಿರುವುದನ್ನು ಕಾಣ ಬಹುದು. ಇನ್ನು ಸೂಕ್ತ ನಿರ್ವಹಣೆ ಇದ್ದರೆ ಇದರ ಅಂದ-ಚಂದ ಕಣ್ಮನ ಸೆಳೆಯುತ್ತಿತ್ತು. ಆದರೆ ಅದೇಕೋ ಅಂತಹ ಕಾಳಜಿ ವ್ಯಕ್ತವಾದಂತೆ ಕಾಣುತ್ತಿಲ್ಲ.

ಈ ಕಮಾನು ದೀಪಾಲಂಕಾರದಿಂದ ಕಂಗೊಳಿಸಬೇಕಿತ್ತು. ಆದರೀಗ ಕಮಾನಿನ ವಿದ್ಯುತ್ ದೀಪಗಳು ಬೆಳಗದಾಗಿವೆ. ಚೌಕಾ ಕಾರದಲ್ಲಿ ನಾಲ್ಕು ಕಂಬಗಳನ್ನು ಗೋಡೆ ಮಾದರಿಯಲ್ಲಿ ಕಟ್ಟಲಾಗಿದ್ದು, ಎರಡೂ ಬದಿಯಲ್ಲೂ ಒಂದೊಂದು ಕೊಠಡಿ ಸಹ ಹೊಂದಿದೆ ಈ ಕಮಾನು. ಒಂದು ಕೊಠಡಿಯ ಕಬ್ಬಿಣದ ಗೇಟ್ ಮುರಿದು ಬಿದ್ದಿದ್ದರೆ, ಮತ್ತೊಂದು ಕೊಠಡಿ ಕಮಾನಿ ನಲ್ಲಿ ಇಲ್ಲಿಯೇ ಕ್ಯಾಂಟಿನ್ ನಡೆಸುತ್ತಿರುವ ವ್ಯಕ್ತಿಯ ಬಳಕೆಗೆ ಮುಕ್ತವಾಗಿದೆ ಎನ್ನಲಾಗಿದೆ.

ಸುತ್ತಲು ಉದ್ಯಾನ ಹಾಗೂ ಕಾರಂಜಿ ಯಿಂದ ಶೃಂಗಾರಗೊಳ್ಳಬೇಕಿದ್ದ `ಸ್ವಾಗತ ಕಮಾನು’ ಸುಣ್ಣ-ಬಣ್ಣವಿಲ್ಲದೆ ಸೊರಗು ವಂತಾಗಿದೆ. ಕಬ್ಬಿಣದ ಸಲಾಕೆ ಬಳಸಿ ಕೊಂಡು ಚೌಕಾಕಾರದ ನಾಲ್ಕು ಕಂಬ ಗಳು ಹಾಗೂ ಕೊಠಡಿಗಳಿಗೆ ಬೇಲಿ ನಿರ್ಮಿಸ ಲಾಗಿದೆ. ಈ ಕಬ್ಬಿಣದ ಬೇಲಿಗೆ ಅಂತಹ ಹಾನಿ ಆಗಿಲ್ಲವಾದರೂ ಕಮಾನಿನ ಮುಖ್ಯ ಗೇಟ್ ಜಖಂಗೊಂಡು ಅದೆಷ್ಟೋ ದಿನ ಗಳು ಕಳೆದಿವೆ ಎಂಬುದು ನೋಡುತ್ತಿ ದ್ದಂತೆ ಅರಿವಿಗೆ ಬರುತ್ತದೆ.

ಕಮಾನಿನ ಒಂದು ಕೊಠಡಿ ಹಿಂಭಾಗ ಗಿಡ-ಗಂಟಿಗಳು ಬೆಳೆದು ನಿಂತಿದ್ದು, ಪ್ಲಾಸ್ಟಿಕ್ ತ್ಯಾಜ್ಯದ ರಾಶಿಯೂ ಅಶುಚಿತ್ವಕ್ಕೆ ನಾಂದಿ ಹಾಡಿದೆ. ಕಸ-ಕಡ್ಡಿಯ ಜೊತೆಗೆ ಮಲ-ಮೂತ್ರದ ದುರ್ವಾಸನೆಯೂ ಅನೈರ್ಮಲ್ಯ ಉಂಟು ಮಾಡಿದೆ. ಸ್ವಚ್ಛ ನಗರಿ ಮೈಸೂರು ಎಂಬ ಖ್ಯಾತಿಗೆ ಇದೊಂದು ಅಪಖ್ಯಾತಿ ಅಲ್ಲವೇ ಎಂಬ ಪ್ರಶ್ನೆ ಮೂಡುವಂತಾಗಿದೆ.

ವಾಯುವಿಹಾರಿಗಳ ಅಳಲು: ಸೂಕ್ತ ನಿರ್ವಹಣೆ ಇಲ್ಲದ ಹಿನ್ನೆಲೆಯಲ್ಲಿ ಪಾರಂ ಪರಿಕ ಕಟ್ಟಡವಾದ ಕಮಾನಿನ ಆಸು ಪಾಸು ಜಾಗ ಮೂತ್ರ ವಿಸರ್ಜನೆ ತಾಣ ವಾಗಿದೆ ಎಂದು ಸ್ಥಳೀಯರು ಹಾಗೂ ವಾಯು ವಿಹಾರಿಗಳು ದೂರುತ್ತಾರೆ. ಒಂದೆಡೆ ಮೂತ್ರದ ದುರ್ನಾತ ಮೂಗಿಗೆ ಬಡಿದರೆ, ಧೂಮಪಾನಿಗಳು ಉಗುಳುವ ಹೊಗೆ ಉಸಿರುಗಟ್ಟಿಸುತ್ತದೆ. ಹಿರಿಯ ನಾಗರಿಕರು, ಮಕ್ಕಳು ಹಾಗೂ ಮಹಿಳೆಯರು ಇತ್ತ ವಾಯು ವಿಹಾರಕ್ಕೆ ಬರಲು ಮುಜುಗರ ಉಂಟಾಗಿದೆ ಎಂದು ಆಪಾದಿಸುತ್ತಾರೆ.