ರಂಗಕರ್ಮಿ ಮುದ್ದುಕೃಷ್ಣ ದಂಪತಿ ಅಂತ್ಯಕ್ರಿಯೆ
ಮೈಸೂರು

ರಂಗಕರ್ಮಿ ಮುದ್ದುಕೃಷ್ಣ ದಂಪತಿ ಅಂತ್ಯಕ್ರಿಯೆ

ಮೈಸೂರು,ಜು.10(ಎಂಟಿವೈ)- ಲಕ್ನೋದಲ್ಲಿ ಸಂಭವಿಸಿದ ರಸ್ತೆ ಅಪಘಾತ ದಲ್ಲಿ ಮೃತಪಟ್ಟಿದ್ದ ರಂಗಕರ್ಮಿ ಮುದ್ದು ಕೃಷ್ಣ ಹಾಗೂ ಅವರ ಪತ್ನಿ, ಸಿಎಫ್ ಟಿಆರ್‍ಐ ವಿಜ್ಞಾನಿ ಡಾ. ಇಂದ್ರಾಣಿ ಅವರ ಅಂತ್ಯಕ್ರಿಯೆ ಅಪಾರ ಸಂಖ್ಯೆಯ ಹಿತೈಷಿ ಗಳು ಹಾಗೂ ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಚಾಮುಂಡಿಬೆಟ್ಟದ ತಪ್ಪಲಿ ನಲ್ಲಿರುವ ಅನಿಲ ಚಿತಾಗಾರದಲ್ಲಿ ಬುಧವಾರ ಮದ್ಯಾಹ್ನ ನೆರವೇರಿತು.

ಮೈಸೂರಿನ ರಾಮಕೃಷ್ಣನಗರದಲ್ಲಿರುವ ಮುದ್ದುಕೃಷ್ಣ ಅವರ ಸ್ವಗೃಹದಿಂದ ದಂಪತಿಗಳ ಮೃತದೇಹವನ್ನು ಇಂದು ಬೆಳಿಗ್ಗೆ 9ಕ್ಕೆ ಕಲಾಮಂದಿರದ ಆವರಣ ದಲ್ಲಿರುವ ಕಿಂದರಜೋಗಿ ಪ್ರತಿಮೆ ಮುಂದೆ 11.30ರವರೆಗೂ ಸಾರ್ವಜನಿಕ ದರ್ಶನಕ್ಕಿಡಲಾಗಿತ್ತು. ಈ ವೇಳೆ ಸಾಹಿತಿಗಳು, ರಂಗಕರ್ಮಿಗಳು, ರಂಗಶಿಕ್ಷಣಾರ್ಥಿಗಳು, ವಿದ್ಯಾರ್ಥಿಗಳು, ಸಿಎಫ್‍ಟಿಆರ್‍ಐ ಉದ್ಯೋಗಿ ಗಳು ಹಾಗೂ ಮುದ್ದುಕೃಷ್ಣ ಅವರ ಸಂಬಂಧಿಗಳು ಮತ್ತು ಒಡನಾಡಿಗಳು ಅಂತಿಮ ದರ್ಶನ ಪಡೆದು ಗೌರವ ಸಮರ್ಪಿಸಿದರು.

ಸಾಹಿತಿಗಳಾದ ದೇವನೂರ ಮಹದೇವ, ಪ್ರೊ.ಕೆ.ಎಸ್.ಭಗವಾನ್, ಮಾಜಿ ಶಾಸಕ ವಾಸು, ಪ್ರಗತಿಪರ ಚಿಂತಕ ಪ.ಮಲ್ಲೇಶ್, ಪ್ರೊ.ಚ.ಸರ್ವಮಂಗಳ, ರಂಗಕರ್ಮಿ ಬಸವಲಿಂಗಯ್ಯ, ಜನಾರ್ಧನ್(ಜನ್ನಿ), ಸಿಎಫ್‍ಟಿಆರ್‍ಐ ನಿರ್ದೇಶಕ ಡಾ.ರಂಗ ರಾವ್, ರೈತ ಮುಖಂಡ ಬಡಗಲಪುರ ನಾಗೇಂದ್ರ, ಪ್ರೊ.ಕಾಳಚನ್ನೇಗೌಡ, ರಂಗಾ ಯಣದ ನಿರ್ದೇಶಕಿ ಭಾಗಿರಥೀ ಬಾಯಿ ಕದಂ, ಜಂಟಿ ನಿರ್ದೇಕ ಮಲ್ಲಿಕಾರ್ಜುನ ಸ್ವಾಮಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಹೆಚ್.ಚನ್ನಪ್ಪ, ಪ್ರೊ.ಜಿ.ಬಿ.ಬಸವರಾಜು, ಚಿತ್ರನಟ ಡಾಲಿ ಧನಂಜಯ, ಮಂಡ್ಯರಮೇಶ್, ರಾಜಶೇಖರ್ ಕದಂಬ, ಎಲ್.ಜಗನ್ನಾಥ್, ಕಲಾವಿದ ಬಾದಲ್ ನಂಜುಂಡಸ್ವಾಮಿ, ನೃಪತುಂಗ ಶಾಲೆಯ ನೂರಾರು ವಿದ್ಯಾರ್ಥಿಗಳು ಅಂತಿಮ ದರ್ಶನ ಪಡೆದರು. ಈ ವೇಳೆ ಮುದ್ದುಕೃಷ್ಣ ದಂಪತಿಯ ಪುತ್ರರಾದ ಅಲೋಕ್ ಮತ್ತು ಅನನ್ಯ ಅವರು ಉಪಸ್ಥಿತರಿದ್ದರು.

ನಂತರ ಮದ್ಯಾಹ್ನ 12ಕ್ಕೆ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಅನಿಲ ಚಿತಾ ಗಾರಕ್ಕೆ ಕೊಂಡೊಯ್ದು ಅಂತ್ಯಕ್ರಿಯೆ ನೆರ ವೇರಿಸಲಾಯಿತು. ಯಾವುದೇ ಸಂಪ್ರ ದಾಯಗಳಿಲ್ಲದೆ ಮೊದಲು ಇಂದ್ರಾಣಿ ಮೃತದೇಹವನ್ನು ಅಂತ್ಯಸಂಸ್ಕಾರ ನೆರವೇರಿಸಿ, ಬಳಿಕ ಮುದ್ದುಕೃಷ್ಣ ಅವರ ಮೃತದೇಹ ವನ್ನು ಅಂತ್ಯಸಂಸ್ಕಾರ ಮಾಡಲಾಯಿತು.

July 11, 2019

Leave a Reply

Your email address will not be published. Required fields are marked *