ಕಾಂಗ್ರೆಸ್ ಶಾಸಕರಿಗೂ ರೆಸಾರ್ಟ್ ಭಾಗ್ಯ
ಮೈಸೂರು

ಕಾಂಗ್ರೆಸ್ ಶಾಸಕರಿಗೂ ರೆಸಾರ್ಟ್ ಭಾಗ್ಯ

January 19, 2019

ಬೆಂಗಳೂರು: ಬಿಜೆಪಿ ಶಾಸಕರ ರೆಸಾರ್ಟ್ ವಾಸ್ತವ್ಯದ ಬಗ್ಗೆ ಟೀಕಾ ಪ್ರಹಾರ ನಡೆಸಿದ್ದ ಕಾಂಗ್ರೆಸ್ ಮುಖಂಡರು ಇಂದು ತಮ್ಮ ಪಕ್ಷದ ಶಾಸಕರಿಗೂ ರೆಸಾರ್ಟ್ ವಾಸ್ತವ್ಯದ ಭಾಗ್ಯ ಕಲ್ಪಿಸಿದ್ದಾರೆ. ಕಾಂಗ್ರೆಸ್ ಶಾಸ ಕಾಂಗ ಪಕ್ಷದ ಸಭೆ ಮುಗಿಯುತ್ತಿ ದ್ದಂತೆಯೇ ಕಾಂಗ್ರೆಸ್‍ನ ಎಲ್ಲಾ ಶಾಸಕ ರನ್ನೂ 2 ವಿಶೇಷ ಬಸ್‍ಗಳಲ್ಲಿ ರೆಸಾರ್ಟ್‍ಗೆ ಕರೆದೊಯ್ಯಲಾಯಿತು. ಕೆಲ ಶಾಸಕರು ಬಸ್‍ನಲ್ಲಿ ತೆರಳದೇ ತಮ್ಮ ಕಾರುಗಳಲ್ಲೇ ರೆಸಾರ್ಟ್‍ಗೆ ತೆರಳಿದರು. ಶಾಸಕರ ವಾಸ್ತವ್ಯಕ್ಕಾಗಿ ಬಿಡದಿಯಲ್ಲಿರುವ ಈಗಲ್ಟನ್ ಮತ್ತು ವಂಡರ್‍ಲಾಗಳಲ್ಲಿ ತಲಾ 30 ಕೊಠಡಿಗಳನ್ನು ಕಾಯ್ದಿರಿಸ ಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಎಲ್ಲಾ ಶಾಸಕರಿಗೂ ಈಗಲ್ ಟನ್ ರೆಸಾರ್ಟ್‍ನಲ್ಲಿ ಔತಣಕೂಟ ಏರ್ಪಡಿಸಿದ್ದ ಸಿಎಂ ಹೆಚ್.ಡಿ.ಕುಮಾರ ಸ್ವಾಮಿ ಅವರು, ಔತಣಕೂಟದ ನಂತರ ಕೊಲ್ಕತ್ತಾಗೆ ಪ್ರಯಾಣ ಬೆಳೆಸಿದರು.

Translate »