ಬಡಜನರ ಅಭಿವೃದ್ಧಿಗೆ ಕಾಂಗ್ರೆಸ್ ಆದ್ಯತೆ
ಕೊಡಗು

ಬಡಜನರ ಅಭಿವೃದ್ಧಿಗೆ ಕಾಂಗ್ರೆಸ್ ಆದ್ಯತೆ

December 18, 2018

ವಿರಾಜಪೇಟೆ: ಕಾಂಗ್ರೆಸ್ ಪಕ್ಷ ಅನೇಕ ಜನಪರ ಯೋಜನೆಗಳನ್ನು ರೂಪಿಸಿ ಬಡ ಜನರ ಅಭಿವೃದ್ಧಿಗೆ ಹೆಚ್ಚಿನ ಮಹತ್ವ ನೀಡಿರುವುದರೊಂದಿಗೆ ಗ್ರಾಮೀಣ ಮಟ್ಟದ ಸದಸ್ಯರನ್ನು ಗುರುತಿಸುವಂತ ಕಾರ್ಯ ಮಾಡುತ್ತಿರುವುದಾಗಿ ಮಾಜಿ ಎಂಎಲ್‍ಸಿ ಪಕ್ಷದ ಶಕ್ತಿ ಕಾರ್ಯಕ್ರಮದ ಸಂಯೋಜಕ ಅರುಣ್ ಮಾಚಯ್ಯ ಹೇಳದರು.

ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ವತಿ ಯಿಂದ ಸ್ಥಳಿಯ ಪುರಭವನದಲ್ಲಿ ಆಯೋ ಜಿಸಲಾಗಿದ್ದ ಪಕ್ಷಕ್ಕೆ ನೂತನ ಸದಸ್ಯರ ನೋಂದಣಿ ಶಕ್ತಿ ಚಾಲನ ಕಾರ್ಯಕ್ರಮ ದಲ್ಲಿ ಮಾತನಾಡಿದ ಅರುಣ್ ಮಾಚಯ್ಯ, ಪಕ್ಷದ ಶಕ್ತಿ ಕಾರ್ಯಕ್ರಮದ ಮೂಲಕ ದೆಹಲಿ ಯಲ್ಲಿ ಇಂದು ಪ್ರಮುಖರು ಗ್ರಾಮೀಣ ಪ್ರದೇಶದ ಸದಸ್ಯರುಗಳನ್ನು ಗುರುತಿಸು ವಂತ ಕಾರ್ಯ ನಡೆಯುತ್ತಿದೆ. ಶೇ.70ರಷ್ಟು ಗ್ರಾಮೀಣ ಪ್ರದೇಶದ ಜನರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿರುವುದರಿಂದ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ. ಕಾಂಗ್ರೆಸ್ ನೀಡಿದ ಉತ್ತಮ ಯೋಜನೆಗಳು ಜನರಿಗೆ ತಲುಪಿರುವುದ ರಿಂದ ಜನರು ಕಾಂಗ್ರೆಸ್‍ನತ್ತ ಒಲವು ತೋರಿ ದ್ದಾರೆ. ಡಿ.30ರೊಳಗೆ ಈ ಕಾರ್ಯಕ್ರಮ ಮುಗಿಸಬೇಕಾಗಿದ್ದು, ಜೋನಲ್ ಅಧ್ಯಕ್ಷರು ಹೆಚ್ಚಿನ ಕಾಳಜಿ ವಹಿಸುವುದರೊಂದಿಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೂ ಸಭೆ ಕರೆದು ಜನರ ಸಲಹೆ ಪಡೆಯಬೇಕು ಎಂದರು.

ಕಾಂಗ್ರೆಸ್ ಪಕ್ಷದ ಜಿಲ್ಲಾ ಸಮಿತಿ ಅಧ್ಯಕ್ಷ ಮುಕ್ಕಾಟಿರ ಶಿವುಮಾದಪ್ಪ ಕಾರ್ಯ ಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಕಳೆದ ಪಟ್ಟಣ ಪಂಚಾಯಿತಿ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷ ಜಿಲ್ಲೆಯಲ್ಲಿ ಉತ್ತಮ ಸಾಧನೆ ತೋರಿದೆ. ವಿರಾಜಪೇಟೆ, ಸೋಮವಾರ ಪೇಟೆ ಮತ್ತು ಕುಶಾಲನಗರ ಸೇರಿದಂತೆ ಮೂರು ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿಯುವ ವಿಶ್ವಾಸವಿದ್ದು, ವಿರಾಜಪೇಟೆಯಲ್ಲಿ ಪಕ್ಷೇತರ ಅಭ್ಯರ್ಥಿ ಗಳು ಕಾಂಗ್ರೆಸನ್ನು ಬೆಂಬಲಿಸಸಲಿದ್ದಾರೆ. ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಅವರ ಮಹತ್ವದ ಯೋಜನೆಯಾದ ಪಕ್ಷದ ಶಕ್ತಿ ಕಾರ್ಯಕ್ರಮ ಇದೇ ತಿಂಗಳು ಮುಗಿ ಸುವ ಸಂಕಲ್ಪದಿಂದ ವೆಂಕಟಪ್ಪಗೌಡ ಅವ ರನ್ನು ವೀಕ್ಷಕರನ್ನು ನೇಮಕ ಮಾಡ ಲಾಗಿದೆ ಎಂದ ಶಿವುಮಾದಪ್ಪ ಮಧ್ಯ ಪ್ರದೇಶ, ಛತ್ತೀಶ್‍ಗಡ, ರಾಜಸ್ಥಾನ ಗಳಲ್ಲಿ ಗೆಲುವು ಸಾಧಿಸಿರುವ ಕಾಂಗ್ರೆಸ್ ಪಕ್ಷಕ್ಕೆ ಮರು ಚೈತನ್ಯ ಬಂದಂತಾಗಿದೆ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಸಲಾಂ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆ ಯಲ್ಲಿ ಪಕ್ಷದ ಮುಖಂಡರಾದ ಎಂ.ಎಸ್. ಪೂವಯ್ಯ, ಚಿಲ್ಲವಂಡ ಕಾವೇರಪ್ಪ, ಎಂ.ಎಲ್. ಸೈನುದ್ಧಿನ್, ನಗರ ಕಾಂಗ್ರೆಸ್ ಅಧ್ಯಕ್ಷ ಜಿ.ಜಿ. ಮೋಹನ್, ಕಾರ್ಯದರ್ಶಿ ಶಶೀದರನ್, ನಗರ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಅನೀಫ್, ಪಟ್ಟಣ ಪಂಚಾಯಿತಿ ಸದಸ್ಯರಾದ ಪಿ.ರಂಜಿ ಪೂಣಚ್ಚ, ಡಿ.ಪಿ. ರಾಜೇಶ್, ಮೊಹ್ಮದ್ ರಾಫಿ, ಸಿ.ಕೆ.ಪೃಥ್ವಿನಾಥ್, ಅಗಸ್ಟೀನ್ ಬೆನ್ನಿ ಇತರರು ಉಪಸ್ಥಿತರಿದ್ದರು.

Translate »