ಪರಿಶಿಷ್ಟ ನೌಕರರ ಬಡ್ತಿ ಮೀಸಲಾತಿ ಮುಂದುವರಿಕೆ
ಮೈಸೂರು

ಪರಿಶಿಷ್ಟ ನೌಕರರ ಬಡ್ತಿ ಮೀಸಲಾತಿ ಮುಂದುವರಿಕೆ

February 28, 2019

ಬೆಂಗಳೂರು: ಪ್ರಸ್ತುತ ಹುದ್ದೆ ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಯಾವುದೇ ವರ್ಗಕ್ಕೆ ಸೇರಿದ ಅಧಿಕಾರಿ ಹಾಗೂ ನೌಕರರನ್ನು ಹಿಂಬಡ್ತಿ ಮಾಡದೆ, ಪರಿಶಿಷ್ಟ ಸಮುದಾಯದ ಬಡ್ತಿ ಮೀಸಲಾತಿಯನ್ನು ಮುಂದುವರಿಸಿ ಮಹತ್ವದ ಆದೇಶವನ್ನು ಸರ್ಕಾರ ಇಂದು ಹೊರಡಿಸಿದೆ. ಕಳೆದ ಸೋಮವಾರ ಬಡ್ತಿ ಮೀಸಲಾತಿಗೆ ಸಂಬಂಧಿಸಿ ದಂತೆ ಸಂಪುಟ ಸಭೆ ನಿರ್ಧಾರ ಕೈಗೊಂಡ ಹಿನ್ನೆಲೆ ಯಲ್ಲಿ ಕೆಲವು ಷರತ್ತುಗಳೊಂದಿಗೆ ಆದೇಶ ಜಾರಿ ಮಾಡಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸುಮಾರು 3,799 ಮಂದಿ ಅಧಿಕಾರಿ, ನೌಕರರಿಗೆ ಈ ಆದೇಶ ನಿರಾಳತೆ ಉಂಟು ಮಾಡಿದೆ.

ಅಧಿಕಾರ ಕಳೆದುಕೊಂಡವರು ಮತ್ತೆ ಹಿಂದಿನ ಹುದ್ದೆ ಮತ್ತು ವೇತನದೊಂದಿಗೆ ಸೂಪರ್ ನ್ಯೂ ಮರರಿ ಹುದ್ದೆಯಲ್ಲಿ ಮುಂದುವರೆಯಲಿದ್ದಾರೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ನೌಕರರಿಗೆ ರಾಜ್ಯ ಸಿವಿಲ್ ಸೇವೆಗಳಲ್ಲಿ ಮುಂಬಡ್ತಿ ಮೀಸ ಲಾತಿ ನೀತಿಯನ್ನು 1978 ಏಪ್ರಿಲ್ 27ರಿಂದ ಜಾರಿಗೆ ತರಲಾಗಿದ್ದು, ಈ ನಿಯಮ ಪಾಲನೆಗೆ 33 ಅಂಶಗಳ ರೋಸ್ಟರ್‍ನೊಂದಿಗೆ ಸುದೀರ್ಘ ವಾದ ಸೂಚನೆಯನ್ನು ನೀಡಲಾಗಿದೆ. ಆದೇಶ ಅನುಷ್ಠಾನಕ್ಕೆ ಸ್ಪಷ್ಟೀಕರಣ ಮತ್ತು ಮಾರ್ಗಸೂಚಿ ನೀಡಲಾಗಿದ್ದು, ಅವುಗಳಲ್ಲಿನ ಇತರ ಅಂಶಗ ಳೊಂದಿಗೆ ಮೀಸಲಾತಿ ನೀತಿ ಅನ್ವಯ ಮುಂಬಡ್ತಿ ಹೊಂದಿದ ಅಧಿಕಾರಿ, ನೌಕರರಿಗೆ ಸರ್ಕಾರಿ ಹುದ್ದೆ ಗಳಲ್ಲಿ ಸಾಮಾನ್ಯ ವರ್ಗದವರಂತೆ ಜೇಷ್ಠತೆಯನ್ನು ಮುಂಬಡ್ತಿ ಹೊಂದಿದ ಉನ್ನತ ವೃಂದಕ್ಕೂ ನಿರ್ಧರಿ ಸುವ ವಿಧಾನವನ್ನು ಇದರಲ್ಲಿ ನಿಗದಿಪಡಿಸಲಾಗಿದೆ.
ಪರಿಶಿಷ್ಟ ಸಮುದಾಯಕ್ಕೆ ಸೇರಿದ ಸರ್ಕಾರಿ ನೌಕರರ ಜೇಷ್ಠತೆಯನ್ನು ಮಾರ್ಪಡಿಸಿ ಅವರ ಮುಂಬಡ್ತಿಯನ್ನು ಪುನರಾವಲೋಕಿಸಿ, ಬಡ್ತಿಯ ಅರ್ಹತಾ ದಿನಾಂಕಗಳನ್ನು ನೀಡಿ, ಅದರ ಆಧಾರದ ಮೇಲೆ ಕೆಳಹಂತದ ವೃಂದಕ್ಕೆ ಹಿಂಬಡ್ತಿಗೊಳಿಸಿದ್ದಲ್ಲಿ, ಅಂತಹ ನೌಕರರನ್ನು ನಿಕಟ ಪೂರ್ವದಲ್ಲಿ ಮಾಡಿದ್ದ ವೃಂದಕ್ಕೆ ಪೂರ್ವಾನ್ವಯವಾಗುವಂತೆ ಮರು ಸ್ಥಳ ನಿಯುಕ್ತಿಗೊಳಿಸತಕ್ಕದ್ದು.

ಒಂದು ವೇಳೆ ಹಿಂಬಡ್ತಿಗೊಳ್ಳುವ ನಿಕಟಪೂರ್ವ ದಲ್ಲಿ ಅವರು ಹೊಂದಿದ್ದ ವೃಂದದಲ್ಲಿ ಹುದ್ದೆಗಳು ಪ್ರಸ್ತುತ ಖಾಲಿ ಇಲ್ಲದಿದ್ದಲ್ಲಿ, ಹಣಕಾಸು ಇಲಾ ಖೆಯ ಸಹಮತಿ ಇದೆ ಎಂದು ಭಾವಿಸಿ, ಸೂಪರ್ ನ್ಯೂಮರರಿ ಹುದ್ದೆಯನ್ನು ಸೃಷ್ಟಿಸಿ ಸ್ಥಳ ನಿಯುಕ್ತಿ ಗೊಳಿಸತಕ್ಕದ್ದು. ಈ ಪ್ರಕ್ರಿಯೆಯಲ್ಲಿ ಪ್ರಸ್ತುತ ಸದರಿ ವೃಂದಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಯಾವುದೇ ವರ್ಗಕ್ಕೆ ಸೇರಿದ ಅಧಿಕಾರಿ, ನೌಕರರನ್ನು ಆ ವೃಂದಗಳಿಂದ ಹಿಂಬಡ್ತಿ ಗೊಳಿಸತಕ್ಕದ್ದಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ. ಸರ್ಕಾರ ನೌಕರರನ್ನು ಮಂಜೂರಾದ ಹುದ್ದೆಗಳಿಗೆ ಎದು ರಾಗಿ ಸರಿದೂಗಿಸಿದ ನಂತರ ಸೃಜಿಸಲಾದ ಸೂಪರ್ ನ್ಯೂಮರರಿ ಹುದ್ದೆಗಳು ಖಾಲಿ ಆಗುತ್ತಿದ್ದಂತೆ ತಾನಾಗಿ ರದ್ದಾಗುತ್ತವೆ ಎಂದು ಆದೇಶದಲ್ಲಿ ತಿಳಿಸಲಾ ಗಿದೆ. ಬಡ್ತಿ ಮೀಸಲಾತಿ ನೀತಿಯನ್ವಯ ಮುಂಬಡ್ತಿ ನೀಡಲಾದ ಪ್ರಕರಣಗಳಲ್ಲಿ ಪರಿಶಿಷ್ಟ ಸಮುದಾಯ ಗಳಿಗೆ ಸೇರಿದ ನೌಕರರು ಹಾಗೂ ಸಾಮಾನ್ಯ ವರ್ಗಕ್ಕೆ ಸೇರಿದ ನೌಕರರ ಅಂತರ ಜೇಷ್ಠತೆಯನ್ನು ನಿರ್ಧರಿಸುವ ವಿಧಾನವನ್ನು 2017ರ ಅಧಿನಿಯ ಮದ ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದ್ದು, ಜೇಷ್ಠತಾ ಪಟ್ಟಿಯನ್ನು ಪುನರಾವಲೋಕಿಸುವ ಸಂದರ್ಭದಲ್ಲಿ ಇದರ ಬಗ್ಗೆ ಗಮನಹರಿಸತಕ್ಕದ್ದು ಎಂದು ಸೂಚಿಸಲಾಗಿದೆ.
ಪರಿಷ್ಕೃತ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಿದ ನಂತರವೇ ಆ ಜೇಷ್ಠತಾ ಪಟ್ಟಿಯನ್ನು ಆಧಾರವಾ ಗಿಟ್ಟುಕೊಂಡು ಮುಂಬಡ್ತಿ ನೀಡುವ ಪ್ರಕ್ರಿಯೆಯನ್ನು ಪ್ರಾರಂಭಿಸಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಸರ್ವೋಚ್ಛ ನ್ಯಾಯಾಲಯದಲ್ಲಿ ಬಾಕಿ ಇರುವ ಮೂಲ ದಾವೆ ಮತ್ತು ಮೇಲ್ಮನವಿಗೆ ಸಂಬಂಧಿತ ಪ್ರಕರಣಗಳಲ್ಲಿನ ತೀರ್ಪಿಗೆ ಈ ಆದೇಶ ಒಳಪಟ್ಟಿ ರುತ್ತದೆ ಎಂದು ಸರ್ಕಾರ ಹೊರಡಿಸಿರುವ ಅಧಿ ಸೂಚನೆಯಲ್ಲಿ ಉಲ್ಲೇಖಿಸಿದೆ.

Translate »