- ನೋಂದಣಿಗೆ ಬಂದ ಜನರಿಗಾಗಿ ಸ್ಯಾನಿಟೈಜರ್, ಟಿಷ್ಯೂ ಪೇಪರ್ ಇಲ್ಲ
- ಕೊರೊನಾ ಭಯದಲ್ಲಿ ಹೇರ್‍ಕಟಿಂಗ್ ಸಲೂನ್‍ಗಳಿಗೂ ಗ್ರಾಹಕರ ಕೊರತೆ
ಮೈಸೂರು,ಮಾ.17(ಆರ್‍ಕೆಬಿ)- ಕೊರೊನಾ ಸೋಂಕು ಹರಡದಂತೆ ತಡೆಯಲು ದೇಶ ದೆಲ್ಲೆಡೆ ಸಾಕಷ್ಟು ಮುಂಜಾಗ್ರತಾ ಕ್ರಮ ಗಳನ್ನು ಕೈಗೊಂಡಿದ್ದರೆ, ಮೈಸೂರಿನ ಸಬ್ ರಿಜಿಸ್ಟ್ರಾರ್(ಉಪ ನೋಂದಣಾಧಿಕಾರಿ) ಕಚೇರಿಗಳಲ್ಲಿ ಮಾತ್ರ ಅಂತಹ ಯಾವುದೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿಲ್ಲ ದಿರುವುದು ಆತಂಕಕ್ಕೆ ಕಾರಣವಾಗಿದೆ. ನಿತ್ಯವೂ ನೂರಾರು ಮಂದಿ ಸೇರುವ ಈ ಕಚೇರಿಯಲ್ಲೇ ರಾಜ್ಯ ಸರ್ಕಾರದ, ಆರೋಗ್ಯ ಇಲಾಖೆಯ ಸೂಚನೆಗಳ ಪಾಲನೆ ಆಗಿಲ್ಲದಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ನಗರದಲ್ಲಿನ ಕೆಲ ಉಪ ನೋಂದಣಾಧಿ ಕಾರಿ ಕಚೇರಿಗಳಿಗೆ `ಮೈಸೂರು ಮಿತ್ರ’ ಮಂಗಳವಾರ ಭೇಟಿ ನೀಡಿದ ವೇಳೆ ಅಲ್ಲಿ ಜನಜಂಗುಳಿಯೇನೋ ಇತ್ತು. ಆಸ್ತಿ, ವಿವಾಹ ಮತ್ತಿತರೆ ನೋಂದಣಿ ಕೆಲಸಗಳಿಗೆ ಜನ ಭಾರೀ ಸಂಖ್ಯೆಯಲ್ಲೇ ಜಮಾವಣೆಗೊಂಡಿ ದ್ದರು. ಆದರೆ ಕೊರೊನಾ ಸೋಂಕು ಹರಡ ದಂತೆ ತಡೆಯಲು ಸ್ಯಾನಿಟೈಜರ್ ಆಗಲೀ, ಟಿಷ್ಯೂ ಪೇಪರನ್ನಾಗಲೀ ಇಟ್ಟಿರಲಿಲ್ಲ. ಅಲ್ಲದೇ, ಕೊರೊನಾ ಸೋಂಕು ತಡೆಗೆ ಯಾವುದೇ ಮುಂಜಾಗ್ರತಾ ಕ್ರಮಗಳನ್ನೂ ಕೈಗೊಂಡಿ ರದೇ ಇರುವುದು ಎದ್ದು ಕಂಡಿತು.
ರಾಮಕೃಷ್ಣ ನಗರದಲ್ಲಿರುವ `ಮೈಸೂರು ದಕ್ಷಿಣ ಸಬ್ ರಿಜಿಸ್ಟ್ರಾರ್ ಕಚೇರಿ’ಯಲ್ಲಿಯೂ ಮಂಗಳವಾರ ಬೆಳಿಗ್ಗೆ ಜನ ಗುಂಪು ಗುಂಪಾಗಿ ನೋಂದಣಿಗಾಗಿ ಕಾದಿದ್ದರು. ಬಯೋಮೆಟ್ರಿಕ್ ಸ್ಥಳದಲ್ಲಿ ಸ್ಯಾನಿಟೈಜರ್, ಟಿಷ್ಯೂ ಪೇಪರ್ ಇರಲೇ ಇಲ್ಲ. ಕೊರೊನಾ ಭಯದಲ್ಲೇ ಜನ ನೋಂದಣಿ ಕಾರ್ಯಕ್ಕೆ ಮುಂದಾಗಿದ್ದರು.
ಈ ವಿಚಾರವಾಗಿ ಹಿರಿಯ ಉಪ ನೋಂದಣಾಧಿಕಾರಿ ಸಂತೋಷ್ ಕುಮಾರ್ ಅವರನ್ನು `ಮೈಸೂರು ಮಿತ್ರ’ ಪ್ರಶ್ನಿಸಿದಾಗ, `ಸದ್ಯ ನಮ್ಮ ಬಳಿ ಸ್ಯಾನಿಟೈಸರ್, ಟಿಷ್ಯೂ ಪೇಪರ್ ಯಾವುದೂ ಇಲ್ಲ. ಈ ಬಗ್ಗೆ ಜಿಲ್ಲಾ ನೋಂದಣಾಧಿಕಾರಿ (ಡಿಆರ್) ಕಚೇರಿಗೆ ಪತ್ರ ಬರೆದಿದ್ದೇವೆ’ ಎಂದಷ್ಟೇ ಹೇಳಿದರು.
`ಕೊರೊನಾ ಸೋಂಕು ಹರಡದಂತೆ ತಡೆಯಲು ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಯಾವ ರೀತಿಯ ಮುಂಜಾಗ್ರತಾ ಕ್ರಮ ಗಳನ್ನು ಕೈಗೊಂಡಿದ್ದೀರಿ?’ ಎಂದು ಜಿಲ್ಲಾ ನೋಂದಣಾಧಿಕಾರಿ ವಿಜಯಲಕ್ಷ್ಮಿ ಇನಾಂ ದಾರ್ (ಡಿಆರ್) ಅವರನ್ನು ಪ್ರಶ್ನಿಸಿದಾಗ, `ಕೊರೊನಾ ಹರಡದಂತೆ ಕಚೇರಿಯನ್ನು ಶುದ್ಧವಾಗಿಟ್ಟುಕೊಳ್ಳಿ ಎಂಬ ಸೂಚನೆಯೇನೋ ಹಿರಿಯ ಅಧಿಕಾರಿಗಳಿಂದ ಬಂದಿದೆ. ಆದರೆ ಸ್ಯಾನಿಟೈಜರ್, ಟಿಷ್ಯೂ ಪೇಪರ್ ಸರಬ ರಾಜು ಮಾಡಿಲ್ಲ. ಈ ಬಗ್ಗೆ ಇಲಾಖೆಯ ಹಿರಿಯ ಅಧಿಕಾರಿಗಳ ಗಮನ ಸೆಳೆದಿ ದ್ದೇವೆ’ ಎಂದರು.
ಸಲೂನ್‍ಗೂ ಗ್ರಾಹಕರ ಕೊರತೆ: ಕೊರೊನಾ ಸೋಂಕು ಹರಡದಂತೆ ಮುನ್ನೆಚ್ಚರಿಕೆಯಾಗಿ ಸ್ಯಾನಿಟೈಸರ್ ಬಳಸುತ್ತಿದ್ದೇವೆ. ಸಲೂನ್‍ಗೆ ಬರುವವರ ಕೈಗಳಿಗೆ ಮೊದಲಿಗೆ ಸ್ಯಾನಿಟೈ ಸರ್ ಹಾಕಲಾಗುತ್ತಿದೆ. ವಾರದ ಹಿಂದೆ 1 ದಿನಕ್ಕೆ 30-40 ಮಂದಿ ಸಲೂನ್‍ಗೆ ಬರುತ್ತಿ ದ್ದರು. ಆದರೆ, ಮೂರ್ನಾಲ್ಕು ದಿನದಿಂದ ಸಲೂನ್‍ಗೆ ಬರುವವರ ಸಂಖ್ಯೆ ತುಂಬಾ ಕಡಿಮೆಯಾಗಿದೆ. ಕಾಲೇಜುಗಳಿಗೆ ರಜೆ ನೀಡಿದ್ದರಿಂದ ವಿದ್ಯಾರ್ಥಿಗಳೂ ಸ್ವಗ್ರಾಮಕ್ಕೆ ತೆರಳಿದ್ದಾರೆ. ಇನ್ನಷ್ಟು ದಿನ ಇದೇ ಕಥೆ ಮುಂದುವರಿದರೆ ನಮಗೆ ಜೀವನ ನಡೆಸಲು ಕಷ್ಟವಾಗುತ್ತದೆ ಎಂದು ವಿನಾಯಕನಗರ 6ನೇ ಮುಖ್ಯ ರಸ್ತೆಯಲ್ಲಿನ ಅಲಂಕಾರ್ ಹೇರ್ ಡ್ರೆಸಸ್‍ನ ನೌಕರ ಮನು ಕಳವಳ ವ್ಯಕ್ತಪಡಿಸಿದರು.