ದಿನಸಿ ಮಳಿಗೆ, ಸೂಪರ್ ಮಾರ್ಕೆಟ್‍ಗಳಿಗೆ ಕಟ್ಟುನಿಟ್ಟಿನ ಸೂಚನೆ ಹಾಸ್ಟೆಲ್ ವ್ಯವಸ್ಥಾಪಕರು, ಪಿಜಿ ಮಾಲೀಕರು, ವಿದ್ಯಾರ್ಥಿಗಳಿಗೆ ಸಲಹೆ
ಮೈಸೂರು

ದಿನಸಿ ಮಳಿಗೆ, ಸೂಪರ್ ಮಾರ್ಕೆಟ್‍ಗಳಿಗೆ ಕಟ್ಟುನಿಟ್ಟಿನ ಸೂಚನೆ ಹಾಸ್ಟೆಲ್ ವ್ಯವಸ್ಥಾಪಕರು, ಪಿಜಿ ಮಾಲೀಕರು, ವಿದ್ಯಾರ್ಥಿಗಳಿಗೆ ಸಲಹೆ

March 18, 2020

ಮೈಸೂರು,ಮಾ.17(ವೈಡಿಎಸ್)- ಕೊರೊನಾ ಹರಡ ದಂತೆ ತಡೆಯುವ ಸಲುವಾಗಿ ಈಗಾಗಲೇ ಹಲವು ಮುಂಜಾ ಗ್ರತಾ ಕ್ರಮಗಳನ್ನು ಕೈಗೊಂಡಿರುವ ಜಿಲ್ಲಾಡಳಿತ, ದಿನಸಿ ಮಾರಾಟ ಮಳಿಗೆ, ಸೂಪರ್ ಮಾರ್ಕೆಟ್, ಉದ್ಯಾನವನ, ಬಸ್ ಸ್ಟ್ಯಾಂಡ್ ಮೊದಲಾದ ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸೂಚನಾಪತ್ರ ಹೊರಡಿಸಿದೆ. ಖಾಸಗಿ ಪಿಜಿಗಳು, ವಸತಿ ನಿಲಯಗಳು ಮತ್ತು ಹಾಸ್ಟೆಲ್‍ಗಳಲ್ಲಿಯೂ ಅಳವಡಿಸಿಕೊಳ್ಳ ಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗೆಗೂ ವ್ಯವಸ್ಥಾಪಕರು ಮತ್ತು ವಿದ್ಯಾರ್ಥಿಗಳಿಗೆ ಸಲಹೆ-ಸೂಚನೆಗಳನ್ನು ನೀಡಿದೆ.

ಕೈಗೊಳ್ಳಲೇಬೇಕಾದ ಕ್ರಮಗಳು

 • ಹೆಚ್ಚಿನ ಜನರನ್ನು ಸೆಳೆಯಲು ವಾಣಿಜ್ಯ ಮಳಿಗೆ ಗಳಲ್ಲಿ ಸೇಲ್ಸ್ ಪ್ರೊಮೋಷನ್ ಆಫರ್‍ಗಳನ್ನು ಪ್ರಕಟಿಸ ಬಾರದು.
 • ಮಾರಾಟ ಮಳಿಗೆಗಳ ಒಳಗೆ ಜನದಟ್ಟಣೆ ಕಡಿಮೆ ಮಾಡಲು ಸಮಯ ನಿಗದಿಪಡಿಸಿದ ಟೋಕನ್ ವ್ಯವಸ್ಥೆ ಜಾರಿಗೆ ತರಬೇಕು.
 • ಶಾಪಿಂಗ್ ಮಳಿಗೆಗಳಲ್ಲಿ ಆಲ್ಕೋಹಾಲ್ ಆಧಾರಿತ ಹ್ಯಾಂಡ್ ಸ್ಯಾನಿಟೈಸರ್ ಅನ್ನು ಅಲ್ಲಲ್ಲಿ ಸುಲಭಕ್ಕೆ ಲಭ್ಯವಾಗುವಂತೆ ಇರಿಸಬೇಕು.
 • ರೇಲಿಂಗ್ಸ್, ಡೋರ್, ಹ್ಯಾಂಡಲ್ಸ್, ನೆಲಹಾಸುಗಳು, ಬಿಲ್ಲಿಂಗ್ ಟೇಬಲ್ ಕೌಂಟರ್ ಮತ್ತು ಜನರು ಸ್ಪರ್ಶಿಸುವ ಜಾಗ ಗಳನ್ನು ನಿಯಮಿತವಾಗಿ ಸೋಡಿಯಂ ಹೈಫೋಕ್ಲೋ ರೈಟ್/ಬ್ಲೀಚಿಂಗ್ ಪೌಡರ್ ಅಥವಾ ಇನ್ನಾವುದೇ ಸೋಂಕು ನಿವಾರಕದಿಂದ ಸ್ವಚ್ಛಗೊಳಿಸಬೇಕು. ಮಳಿಗೆಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ಕೈಗಳನ್ನು ಸ್ವಚ್ಛವಾಗಿಟ್ಟು ಕೊಳ್ಳುವ ಬಗ್ಗೆ ತರಬೇತಿ ನೀಡಬೇಕು.
 • ಜ್ವರ, ಕೆಮ್ಮು, ಶೀತ, ಉಸಿರಾಟದ ತೊಂದರೆ ಕಾಣಿಸಿಕೊಂಡ ಸಿಬ್ಬಂದಿಗೆ ತಕ್ಷಣವೇ ರಜೆ ನೀಡಿ ವೈದ್ಯಕೀಯ ಚಿಕಿತ್ಸೆ ಪಡೆಯಲು ಸಲಹೆ ನೀಡಬೇಕು.
 • ಗ್ರಾಹಕರು ಎಲ್ಲಾ ಉತ್ಪನ್ನಗಳನ್ನು ಸಾಧ್ಯವಾದಷ್ಟು ಮುಟ್ಟದಂತೆ ಎಚ್ಚರ ವಹಿಸಬೇಕು ಗ್ರಾಹಕರಿಗೆ ಅಗತ್ಯ ಉತ್ಪನ್ನಗಳನ್ನು ತೆಗೆದುಕೊಡಲು ಸಹಾಯಕರನ್ನು  ನಿಯೋಜಿಸಿಕೊಳ್ಳಬೇಕು.
 • ಬಿಲ್ಲಿಂಗ್ ಕೌಂಟರ್‍ಗಳಲ್ಲಿ ಜನಸಂದಣಿ ಉಂಟಾಗದಂತೆ ಕ್ರಮವಹಿಸ ಬೇಕು. ಪ್ರತಿ ಕೌಂಟರ್‍ನಲ್ಲಿಯೂ ಸಾಕಷ್ಟು ಸಂಖ್ಯೆಯ ಸಿಬ್ಬಂದಿ ನಿಯೋಜಿಸಬೇಕು.
 • ಮಳಿಗೆಗಳಲ್ಲಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸಲು ಮುಂಜಾಗ್ರತಾ ಕ್ರಮಗಳ ಮಾಹಿತಿ ಮುದ್ರಿಸಿ ಪ್ರದರ್ಶಿಸಬೇಕು.

ಸಾರ್ವಜನಿಕ ಸ್ಥಳಗಳಲ್ಲಿ: ನಗರದಲ್ಲಿ ಜಿಮ್, ಕ್ರೀಡಾ ಚಟುವಟಿಕೆ ಸ್ಥಗಿತಗೊಂಡಿರುವುದರಿಂದ ಸಾರ್ವಜನಿಕರಿಗೆ ಅನಾನುಕೂಲ ಉಂಟಾಗಿದೆ. ಆದರೂ ಜಿಲ್ಲಾಡಳಿತವು ಕೋವಿಡ್-19 ವೈರಾಣುವಿನಿಂದ ಆಗಬಹುದಾದ ತೊಂದರೆಗಳನ್ನು ತಡೆಗಟ್ಟಲು ಕ್ರಮಗಳನ್ನು ಕೈಗೊಂಡಿದ್ದು, ನಗರದ ಜವಾಬ್ದಾರಿಯುತ ಪ್ರಜೆಯಾಗಿ ಅವನ್ನು ಪಾಲಿಸಬೇಕು.

 • ಜನನಿಬಿಡ ಪ್ರದೇಶಗಳಿಗೆ ಹೋದಾಗ ಜನರಿಂದ ಅಂತರ ಕಾಯ್ದುಕೊಳ್ಳಬೇಕು.

ಪಿಜಿ, ಹಾಸ್ಟೆಲ್ ವ್ಯವಸ್ಥಾಪಕರು-ವಿದ್ಯಾರ್ಥಿಗಳಿಗೆ ಸಲಹೆ: ಪಿಜಿ ಹಾಗೂ ಹಾಸ್ಟೆಲ್‍ನಲ್ಲಿ ವಾಸಿಸುತ್ತಿರುವ ವಿದ್ಯಾರ್ಥಿಗಳಿಗೆ ಶಿಕ್ಷಣ ಸಂಸ್ಥೆಗಳು ರಜೆ ಘೋಷಿಸಿದ್ದರೆ ಅಂತಹ ವಿದ್ಯಾರ್ಥಿಗಳು ಮನೆಗೆ ತೆರಳುವುದು ಸೂಕ್ತ.

 • ಒಂದು ವೇಳೆ ವಿದ್ಯಾರ್ಥಿ ಪಿಜಿ/ಹಾಸ್ಟೆಲ್‍ನಲ್ಲಿ ಉಳಿ ಯಲು ಇಚ್ಛಿಸಿದರೆ ಸರ್ಕಾರದ ಸಲಹೆಯಂತೆ ವೈಯಕ್ತಿಕ ನೈರ್ಮಲ್ಯ ಕ್ರಮಗಳನ್ನು ಪಾಲಿಸಬೇಕು.
 • ಪಿಜಿಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು.
 • ಕೊಠಡಿಗಳಲ್ಲಿ ಹೆಚ್ಚಿನ ಸಂದಣಿ ಇರಬಾರದು. ಇದ್ದಲ್ಲಿ ವೈರಾಣು ಹರಡಲು ಅವಕಾಶ ನೀಡಿದಂತಾಗುತ್ತದೆ, ಎಚ್ಚರವಹಿಸಬೇಕು.
 • ಪಿಜಿ/ಹಾಸ್ಟೆಲ್ ವ್ಯವಸ್ಥಾಪಕರು/ಮಾಲೀಕರು ವಿದ್ಯಾರ್ಥಿಗಳು ವಾಸಕ್ಕೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವವರೆಗೂ ಹಾಗೂ ಸಾಕಷ್ಟು ಕಾಲಾವಕಾಶ ನೀಡದೆ ಬಲವಂತವಾಗಿ ಹೊರ ಹಾಕಬಾರದು.
 • ಹಾಸ್ಟೆಲ್ ಆವರಣದಲ್ಲಿ ಕೋವಿಡ್-19 ಹರಡುವಿಕೆ ತಡೆಗಟ್ಟಲು ನೈರ್ಮಲ್ಯಕ್ಕೆ ಸಂಬಂಧಿಸಿದ ನಿರ್ದೇಶನಗಳನ್ನು ಪಾಲಿಸದಿದ್ದರೆ ಅಂತಹ ಹಾಸ್ಟೆಲ್/ಪಿಜಿ ಮಾಲೀಕರ ವಿರುದ್ಧ ಕ್ರಮಕೈಗೊಳ್ಳಲಾಗುತ್ತದೆ.

Translate »