ಡ್ರಾಪ್ಲೆಟ್ಸ್ ಮೂಲಕ ಕೊರೊನಾ ವೈರಸ್ ಹರಡುತ್ತದೆ
ಮೈಸೂರು

ಡ್ರಾಪ್ಲೆಟ್ಸ್ ಮೂಲಕ ಕೊರೊನಾ ವೈರಸ್ ಹರಡುತ್ತದೆ

March 21, 2020

ಮೈಸೂರು, ಮಾ.20(ಎಂಟಿವೈ)-ಕೊರೊನಾ ವೈರಸ್ ಡ್ರಾಪ್ಲೆಟ್ಸ್‍ಗಳಿಂದ ಹರ ಡುತ್ತಿದೆ. ಹಾಗಾಗಿ ಕೆಮ್ಮು, ಸೀನು ಬಂದಾಗ ತಪ್ಪದೇ ಕರವಸ್ತ್ರ ಬಳಸಬೇಕು ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಪಿ.ಚಿದಂಬರ ಸಲಹೆ ನೀಡಿದ್ದಾರೆ.

ಕೃಷ್ಣಮೂರ್ತಿಪುರಂನಲ್ಲಿರುವ ಮೈಸೂರು ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಆವರಣದಲ್ಲಿ ಶುಕ್ರವಾರ `ಕೊರೊನಾ ವೈರಸ್ ಜಾಗೃತಿ’ ಕಾರ್ಯಕ್ರಮದಲ್ಲಿ ಮಾತ ನಾಡಿದ ಅವರು, ಈವರೆಗೆ ಕಾಣಿಸಿಕೊಂಡಿ ರುವ ಬಹಳಷ್ಟು ವೈರಸ್‍ಗಳಿಂದಲೂ ಸಾವು ಸಂಭವಿಸಿದೆ. ಆದರೆ ಚಿಕೂನ್‍ಗುನ್ಯಾ ದಿಂದ ಸಾವು ಸಂಭವಿಸಿಲ್ಲ. ಕೊರೊನಾ ವೈರಸ್ ಈ ಬಾರಿ ಹೊಸ ರೂಪ ತಳೆದು ಮನುಷ್ಯರ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ ಎಂದು ತಿಳಿಸಿದರು.

ಅಸ್ತಮಾ, ರಕ್ತದೊತ್ತಡ ಮತ್ತಿತರ ಆರೋಗ್ಯ ಸಮಸ್ಯೆ ಇರುವವರು, 60 ವರ್ಷ ಮೇಲ್ಪಟ್ಟವರು, 5 ವರ್ಷಕ್ಕಿಂತ ಚಿಕ್ಕವ ರಾದ ಮಕ್ಕಳ ಆರೋಗ್ಯದ ಮೇಲೆ ವೈರಸ್ ಗಳು ತೀಕ್ಷ್ಣ ಪರಿಣಾಮ ಬೀರುತ್ತವೆ. ಕೊರೊನಾ ವೈರಸ್‍ನಿಂದ ಜ್ವರ, ನೆಗಡಿ, ಕೆಮ್ಮು, ತೀವ್ರ ಉಸಿರಾಟದ ತೊಂದರೆ ಕಾಣಿಸಿ ಕೊಳ್ಳುತ್ತಿದೆ. ಸಕಾಲದಲ್ಲಿ ದಿಗ್ಭಂಧನ (ಐಸೋ ಲೇಷನ್)ದಲ್ಲಿಟ್ಟು ಚಿಕಿತ್ಸೆ ಆರಂಭಿಸದಿದ್ದರೆ ಸಮಸ್ಯೆ ಆಗುತ್ತದೆ ಎಂದು ಎಚ್ಚರಿಸಿದರು.

15 ದಿನದ ಹಿಂದೆ ವಿದೇಶದಿಂದ ಬಂದವರಲ್ಲಿ ಮತ್ತು ಅವರ ಸಂಪರ್ಕಕ್ಕೆ ಬಂದವರಲ್ಲಿ ಕೆಮ್ಮು, ನೆಗಡಿ, ಜ್ವರ ಕಾಣಿಸಿ ಕೊಂಡರೆ ತಕ್ಷಣ ಸರ್ಕಾರಿ ಆಸ್ಪತ್ರೆಗೆ ತೆರಳಿ ತಪಾಸಣೆಗೊಳಗಾಗಬೇಕು. ಸೋಂಕು ಶಂಕಿತರನ್ನು ದಿಗ್ಬಂಧನದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತದೆ. 14 ದಿನದಲ್ಲಿ ಆರೋಗ್ಯ ಸುಧಾರಿಸುತ್ತದೆ. ಆದರೂ 28 ದಿನಗಳ ಬಳಿಕವಷ್ಟೇ ಡಿಸ್ಚಾರ್ಚ್ ಮಾಡಲಾಗುತ್ತದೆ ಎಂದು ವಿವರಿಸಿದರು.

ಈ ವೈರಸ್ ಗಾಳಿಯಲ್ಲಿ ಹರಡು ವುದಿಲ್ಲ. ಎಲ್ಲರೂ ಮಾಸ್ಕ್ ಧರಿಸಬೇಕಿಲ್ಲ. ಆದರೆ, ಕೆಮ್ಮು, ನೆಗಡಿ ಕಾಣಿಸಿಕೊಳ್ಳುತ್ತಿ ದ್ದಂತೆ ಮಾಸ್ಕ್ ಧರಿಸಬೇಕು ಎಂದರು.

ಈ ವೈರಾಣು ಡ್ರಾಪ್ಲೆಟ್ಸ್‍ಗಳಿಂದ ಹರ ಡುತ್ತದೆ. ಸೋಂಕಿತರು ಕೆಮ್ಮುವಾಗ, ಸೀನಿ ದಾಗ, ಉಗುಳುವುದರಿಂದ ವೈರಾಣು ಹರ ಡುತ್ತದೆ. ವೈರಾಣು 8ರಿಂದ 48 ಗಂಟೆ ವರೆಗೂ ಬದುಕಿರುತ್ತದೆ. ಹೋಟೆಲ್‍ಗೆ ಬರುವ ಗ್ರಾಹಕರಲ್ಲಿ ಯಾರಿಗಾದರೂ ಸೋಂಕು ಇದ್ದರೆ, ಸುಲಭದಲ್ಲಿ ಇತರರಿಗೂ ಹರಡುತ್ತದೆ. ಹಾಗಾಗಿ ಎಲ್ಲರೂ ಊಟಕ್ಕೆ ಮೊದಲು, ಊಟದ ನಂತರ ಹಾಗೂ ಆಗ್ಗಿಂದಾಗ್ಗೆ ಸಾಬೂನಿನಿಂದ ಕೈ ತೊಳೆದು ಕೊಳ್ಳುವುದನ್ನು ರೂಢಿ ಮಾಡಿಕೊಳ್ಳಬೇಕು. ಸೋಂಕಿತರು ಮುಟ್ಟಿರುವ ರೇಲಿಂಗ್ಸ್, ಚೇರ್ ಮತ್ತಿತರ ವಸ್ತುಗಳನ್ನು ಆರೋಗ್ಯ ವಂತರು ಮುಟ್ಟಿದಾಗ ಸೋಂಕು ಹರಡು ತ್ತದೆ. ಕೋವಿಡ್-19 ವೈರಸ್ ಅಂಗೈನಲ್ಲೇ ಹೆಚ್ಚು ಸಮಯ ಇರುತ್ತದೆ. ಅದಕ್ಕಾಗಿಯೇ ಪದೇ ಪದೇ ಕೈ ತೊಳೆದುಕೊಳ್ಳಬೇಕೆಂದು ಸೂಚಿಸುತ್ತಿದ್ದೇವೆ. ಯಾವುದೇ ವ್ಯಕ್ತಿ ಯಿಂದ ಅಂತರ ಕಾಯ್ದುಕೊಳ್ಳಬೇಕು. ಹಸ್ತಲಾಘವ ಮಾಡಲೇಬಾರದು ಎಂದು ಅವರು ಸಲಹೆ ನೀಡಿದರು.

ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ಮಾತನಾಡಿ, ಕೊರೊನಾ ವೈರಸ್ ಹರಡದಂತೆ ಎಲ್ಲಾ ಹೋಟೆಲ್‍ಗಳಲ್ಲೂ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಗ್ರಾಹಕರು ಕೈ ತೊಳೆದು ಕೊಳ್ಳಲು ಸೋಪ್ ಅಥವಾ ಸ್ಯಾನಿಟೈಸರ್ ಇಡಲಾಗಿದೆ. ಪ್ರತಿ ದಿನ ಹೋಟೆಲ್ ಆವ ರಣ ಸ್ವಚ್ಛಗೊಳಿಸಲಾಗುತ್ತ್ತಿದೆ. ವಸತಿ ಗೃಹದಲ್ಲಿ ರೂಮ್ ಪಡೆದ ವಿದೇಶಿಯರ ಬಗ್ಗೆ ಆರೋಗ್ಯ ಇಲಾಖೆಗೆ ಮಾಹಿತಿ ನೀಡ ಲಾಗುತ್ತಿದೆ. ಕೊರೊನಾ ವೈರಸ್ ಹರಡುವು ದನ್ನು ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮ ಗಳ ಬಗ್ಗೆ ಎಲ್ಲಾ ಹೋಟೆಲ್ ಮಾಲೀಕ ರಿಗೆ ಅರಿವು ಮೂಡಿಸಲು ಜಾಗೃತಿ ಕಾರ್ಯ ಕ್ರಮ ಆಯೋಜಿಸಲಾಗಿದೆ ಎಂದು ವಿವರಿ ಸಿದರು. ಆರೋಗ್ಯಾಧಿಕಾರಿ ಡಾ.ಪ್ರಕಾಶ್, ಹೋಟೆಲ್ ಮಾಲೀಕರ ಸಂಘದ ಪದಾಧಿ ಕಾರಿಗಳಾದ ಎ.ಆರ್.ರವೀಂದ್ರ ಭಟ್, ಅಶೋಕ್, ಸುರೇಶ್, ರವಿಶಾಸ್ತ್ರಿ, ಸುಬ್ರ ಹ್ಮಣ್ಯ ತಂತ್ರಿ ಮತ್ತಿತರರು ಉಪಸ್ಥಿತರಿದ್ದರು.

Translate »