ಭ್ರಷ್ಟಾಚಾರ ಮುಕ್ತ ರಾಜ್ಯಕ್ಕೆ ಸಾರ್ವಜನಿಕರ ಸಹಭಾಗಿತ್ವ ಅವಶ್ಯ
ಮೈಸೂರು

ಭ್ರಷ್ಟಾಚಾರ ಮುಕ್ತ ರಾಜ್ಯಕ್ಕೆ ಸಾರ್ವಜನಿಕರ ಸಹಭಾಗಿತ್ವ ಅವಶ್ಯ

January 9, 2019

ಮೈಸೂರು: ಭ್ರಷ್ಟಾಚಾರ ರಹಿತ ರಾಜ್ಯವನ್ನಾಗಿಸಲು ಸಾರ್ವಜನಿಕರ ಸಹಭಾಗಿತ್ವ ಮುಖ್ಯವಾಗಿದ್ದು, ಭ್ರಷ್ಟಾಚಾರಕ್ಕೆ ಜನರು ಸಹಕಾರ ನೀಡಬಾರದು ಎಂದು ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥಶೆಟ್ಟಿ ಇಂದಿಲ್ಲಿ ಮನವಿ ಮಾಡಿದರು.

ಮೈಸೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಜನರು ಆಮಿಷ ಒಡ್ಡಿ ಕೆಲಸ ಮಾಡಿಸಿಕೊಳ್ಳುವುದು ನಡೆ ದರೆ ಇದು ಭ್ರಷ್ಟಾಚಾರಕ್ಕೆ ಇಂಬುಕೊಟ್ಟಂತೆ. ಅಧಿಕಾರಿ ವರ್ಗದವರನ್ನು ವಿಶ್ವಾಸಕ್ಕೆ ತೆಗೆದು ಕೊಂಡು, ಸಮಾಜಕ್ಕೆ ಅವರು ನಿಷ್ಠೆಯಿಂದ ಕೆಲಸ ಮಾಡುವುದು ನಮ್ಮ ಕರ್ತವ್ಯ ಎಂಬುದಾಗಿ ಜನರು ಅರಿತುಕೊಳ್ಳಬೇಕು ಎಂದರು.

ಪಾರದರ್ಶಕ ಆಡಳಿತ ನೀಡಲು ಶ್ರಮಿ ಸುತ್ತಿದ್ದೇನೆ. ದೇಶದ ಆಡಳಿತ ಸುಧಾರಣೆಗೆ ಮಾಧ್ಯಮದ ಸಹಕಾರ ಕೇಳುತ್ತಿದ್ದೇನೆ. ಲೋಕಾಯುಕ್ತದಲ್ಲಿ ಜನ ನಂಬಿಕೆ ಕಳೆದು ಕೊಳ್ಳುವುದು ಬೇಡ ಎಂದು ಅಭಿಪ್ರಾಯ ಪಟ್ಟರು. ಲೋಕಾಯುಕ್ತ ಬಲಪಡಿಸುವುದು ನನ್ನ ಕೈಯಲ್ಲಿ ಇಲ್ಲ. ಲೋಕಾಯುಕ್ತ ದುರ್ಬಲ ಗೊಂಡಿಲ್ಲ. ತನ್ನ ಕೆಲಸವನ್ನು ನಿರ್ವಹಿಸು ತ್ತಿದೆ. ಅಧಿಕಾರಿಗಳಿಂದ ತೊಂದರೆಯಾ ದರೆ ನನಗೆ ದೂರು ನೀಡಿ ಎಂದು ಜನ ರಲ್ಲಿ ಮನವಿ ಮಾಡಿದರು.

ಮೈಸೂರು ಜಿಲ್ಲೆಯಲ್ಲಿ ಭ್ರಷ್ಠಾಚಾರಕ್ಕೆ ಕಡಿವಾಣ ಹಾಕುವುದಕ್ಕಾಗಿಯೇ ಲೋಕಾಯುಕ್ತ ಶ್ರಮಿಸುತ್ತಿದ್ದು, ಹಾಲಿ ಉಳಿದಿರುವ ಕೇಸ್‍ಗಳನ್ನು ಕಡಿಮೆ ಮಾಡಬೇಕು, ಇದು ನನ್ನ ಗುರಿಯೂ ಹೌದು ಎಂದ ಅವರು, ಹೀಗಾಗಿ ಇಡೀ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಸುತ್ತಾಡಿ, ಅಧಿಕಾರಿ ಗಳ ಸಭೆನಡೆಸಿ, ಇದೀಗ ಮೈಸೂರಿನಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ದ್ದೇನೆ. ನೀವು ನಿಮ್ಮ ಕೆಲಸ ಮಾಡದೇ ಇದ್ದರೆ ನಾವು ಕಾನೂನು ಪ್ರಕಾರ ಕೆಲಸ ಮಾಡಬೇಕಾಗುತ್ತದೆ. ಹೀಗಾಗಿ ಆಡಳಿತ ಸುಧಾ ರಣೆ ಹೇಗೆ ಮಾಡಬೇಕು ಎಂಬು ದಾಗಿ ಅಧಿಕಾರಿಗಳಿಗೆ ಮನವರಿಕೆ ಮಾಡಿ ದ್ದೇನೆ ಎಂದು ತಿಳಿಸಿದರು.

ಅಧಿಕಾರಿಗಳ ಕೊರತೆ ಇದೆ. ಸಕಾಲ ದಲ್ಲಿ ಕೆಲಸ ಆಗುತ್ತಿಲ್ಲ. ಇಲಾಖೆಯಲ್ಲಿ ಕಾರ್ಖಾನೆ ಮಾದರಿ ಕೆಲಸ ನಡೆಯುತ್ತಿದೆ ಎಂದರು. ನನ್ನ ಮೇಲೆ ಹಲ್ಲೆ ನಂತರ ಭಯ ಗೊಂಡಿಲ್ಲ. ಇನ್ನಷ್ಟು ಉತ್ಸಾಹ ದಿಂದ ಕೆಲಸ ಮಾಡುತ್ತಿದ್ದೇನೆ. ಮಾಧ್ಯಮ ಗಳ ಮೂಲಕ ಅದಿಕಾರಿಗಳನ್ನು ಎಚ್ಚರಿಸು ವುದಿಲ್ಲ. ಪ್ರಕರಣಗಳನ್ನು ಬೇಗ ಇತ್ಯರ್ಥ ಪಡಿಸಬೇಕು. ತಪ್ಪು ಮಾಡಿದವರಿಗೆ ಬೇಗ ಶಿಕ್ಷೆ ಕೊಡಿಸಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ಲೋಕಾಯುಕ್ತ ಎಡಿಜಿಪಿ ಎ.ಎಸ್.ಎನ್.ಮೂರ್ತಿ, ಮೈಸೂರು ಡಿಸಿ ಅಭಿರಾಂ ಜಿ.ಶಂಕರ್, ಮೈಸೂರು ನಗರ ಪೊಲೀಸ್ ಆಯುಕ್ತ ಸುಬ್ರಹ್ಮಣ್ಣೇಶ್ವರ ರಾವ್, ಜಿಪಂ ಸಿಇಓ ಕೆ.ಜ್ಯೋತಿ, ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿ ಅಮಿತ್‍ಸಿಂಗ್ ಉಪಸ್ಥಿತರಿದ್ದರು.

Translate »