ಜಾಗತಿಕ ಸಮಸ್ಯೆಯಾಗಿ ಉಲ್ಬಣಿಸಿರುವ ಸೈಬರ್ ಕ್ರೈಂ
ಮೈಸೂರು

ಜಾಗತಿಕ ಸಮಸ್ಯೆಯಾಗಿ ಉಲ್ಬಣಿಸಿರುವ ಸೈಬರ್ ಕ್ರೈಂ

March 3, 2020

ಮೈಸೂರು,ಮಾ.2(ಎಂಟಿವೈ)- ಸೈಬರ್ ಅಪರಾಧ ಜಾಗತಿಕ ಸಮಸ್ಯೆಯಾಗಿ ಉಲ್ಬಣಿ ಸಿದ್ದು, ಅಹಿಂಸೆ, ಅಶ್ಲೀಲತೆ, ಆನ್‍ಲೈನ್ ವಂಚನೆ ಮೂಲಕ ವಿಶ್ವದ ಬಹುತೇಕ ರಾಷ್ಟ್ರ ಗಳ ಜನರನ್ನು ಕಾಡುತ್ತಿದೆ ಎಂದು ಶಿವಮೊಗ್ಗ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಪೆÇ್ರ. ಪಿ.ವೆಂಕಟರಾಮಯ್ಯ ವಿಷಾದಿಸಿದರು.

ಮೈಸೂರು ಮಾನಸಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಸೋಮವಾರ ಮೈಸೂರು ವಿವಿ ಸ್ಕೂಲ್ ಆಫ್ ಲಾ ಆಯೋ ಜಿಸಿದ್ದ `ವಿಶ್ವಸಂಸ್ಥೆ ಮಾದರಿ ಸಮ್ಮೇಳನ ಸಮಾರಂಭ ಹಾಗೂ ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆ ಮೇಲೆ ಸೈಬರ್ ಕ್ರೈಂ ಪ್ರಭಾವ’ ಕುರಿತ ಒಂದು ದಿನದ ಸಮಾ ವೇಶ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ವರ್ಷಗಳಲ್ಲಿ ಸೈಬರ್ ಕ್ರೈಂ ವ್ಯಾಪಕವಾಗುತ್ತಿದೆ.  ಹಲವು ರಾಷ್ಟ್ರಗಳಲ್ಲಿ ದೊಡ್ಡ ಸಮಸ್ಯೆಯಾಗಿ ರೂಪುಗೊಂಡಿದೆ. ಜಾಗತಿಕ ಸಮಸ್ಯೆಯಾಗಿರುವ ಈ ಅಪ ರಾಧ ಸಾಕಷ್ಟು ಜನರ ನೆಮ್ಮದಿ ಕೆಡಿಸಿದೆ. ಅಲ್ಲದೆ ಅಹಿಂಸೆ, ಅಶ್ಲೀಲತೆಗೆ ಒತ್ತು ನೀಡು ವಂತೆ ಮಾಡುತ್ತಿದೆ. ಯುವ ಜನರನ್ನೇ ಗುರಿ ಯಾಗಿಸಿಕೊಂಡು ಈ ಕೃತ್ಯ ನಡೆಸಲಾ ಗುತ್ತಿದೆ. ಇದರೊಂದಿಗೆ ಆನ್‍ಲೈನ್ ವಂಚನೆ ತೀವ್ರಗೊಳ್ಳುತ್ತಿದೆ ಎಂದರು.

ವಿಶ್ವಸಂಸ್ಥೆ ಮಾದರಿ ಸಮ್ಮೇಳನಕ್ಕೆ  ವಿವಿಧ ದೇಶಗಳಿಂದ ವಿದ್ಯಾರ್ಥಿಗಳು ಆಗಮಿಸಿರು ವುದು ಶ್ಲಾಘನೀಯ. ವಿಶ್ವವಿದ್ಯಾನಿಲಯಗಳು ಉನ್ನತ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿರುವುದು ಉತ್ತಮ ಬೆಳವಣಿಗೆ. ಇದರೊಂದಿಗೆ ಕೌಶಲ್ಯ ವೃದ್ಧಿಗೂ ಕಾರ್ಯಕ್ರಮ ರೂಪಿಸಬೇಕು. ವಿದ್ಯಾರ್ಥಿಗಳು ವಿಷಯ ಜ್ಞಾನ ಸಂಪಾದಿ ಸುವುದರೊಂದಿಗೆ ಸಂವಹನ ಕೌಶಲ್ಯತೆ ಕರ ಗತ ಮಾಡಿಕೊಳ್ಳಲು ಗಮನಹರಿಸಬೇಕು. ಆಗ ಮಾತ್ರ ನಾಯಕತ್ವ ಗುಣ ಬೆಳೆಯು ತ್ತದೆ. ಈ ಸಮ್ಮೇಳನದಲ್ಲಿ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳನ್ನು ಆಹ್ವಾನಿಸಿ ಕಾರ್ಯಕ್ರಮ ಮಾಡುವುದರಿಂದ ಸಹೋದರತೆ ಹಾಗೂ ಸ್ನೇಹಪರತೆ ದ್ವಿಗುಣಗೊಳಿಸಲು ಸಹಕಾರಿ ಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಇದೇ ವೇಳೆ ಅಂತಾರಾಷ್ಟ್ರೀಯ ಕಾನೂನು ತಜ್ಞ  ಪೆÇ್ರ.ಎಂ.ಕೆ.ರಮೇಶ್ ಮಾತನಾಡಿ, ಸೈಬರ್ ಅಪರಾಧವು ಇತರೆ ಅಪರಾಧ ಪ್ರಕ ರಣಗಳಂತೆ ಒಂದೇ ಸ್ಥಳ ಅಥವಾ ಪ್ರದೇಶ ದಲ್ಲಿ ನಡೆಯುವುದಿಲ್ಲ. ಯಾವುದೋ ದೇಶ ದಲ್ಲಿ ಕುಳಿತ ವ್ಯಕ್ತಿ ಮತ್ತೆಲ್ಲೋ ಅಪರಾಧ  ಮಾಡಿ, ಕ್ಷಣ ಮಾತ್ರದಲ್ಲಿ ಹಣ ಲಪಟಾ ಯಿಸುತ್ತಿದ್ದಾರೆ. ಬೇರೆ ವ್ಯಕ್ತಿಗಳ ಬ್ಯಾಂಕ್ ಖಾತೆಗೆ ಕನ್ನ ಹಾಕಿ ಹಣ ಲಪಟಾಯಿಸುವ ಅಥವಾ ಸಂಸ್ಥೆಗಳ ವೆಬ್‍ಸೈಟ್‍ಗೆ ಕನ್ನ ಹಾಕಿ ಅತ್ಯಮೂಲ್ಯ ಮಾಹಿತಿ ಕಳವು ಮಾಡುತ್ತಿ ರುವ ಪ್ರಕರಣ ಹೆಚ್ಚಾಗುತ್ತಿದೆ. ಸೈಬರ್ ಅಪ ರಾಧ ತಡೆಗೆ ಹಲವು ಕಾನೂನುಗಳಿವೆ. ಸೈಬರ್ ಕ್ರೈಂ ಎನ್ನುವುದು ಗಂಭೀರವಾದ ಅಪರಾಧವಾಗಿದೆ. ಇವುಗಳ ಕಡಿವಾಣ ಕ್ಕಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚಿಸಿ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ ಎಂದರು. ಕಾರ್ಯಕ್ರಮದಲ್ಲಿ ವಿದೇಶಾಂಗ ವ್ಯವಹಾರ ಇಲಾಖೆ ಸಾಂಸ್ಕøತಿಕ ಸಂಬಂಧ ಗಳ ಕೇಂದ್ರದ ಪ್ರಾದೇಶಿಕ ನಿರ್ದೇಶಕ ಪಿ.ವೇಣುಗೋಪಾಲ್ ಮಾತನಾಡಿದರು. ಕಾನೂನು ವಿಭಾಗದ ಅಧÀ್ಯಕ್ಷರಾದ ಪೆÇ್ರ. ಸಿ.ಬಸವರಾಜು, ಮಾಡೆಲ್ ಯುನಿಟೆಡ್ ನೇಶನ್ಸ್ ಕಾನ್ಫರೆನ್ಸ್‍ನ ಸಾಮಾನ್ಯ ಕಾರ್ಯ ದರ್ಶಿ ಸಯದ್ ಕುದ್ರತ್ ಹಾಗೂ ಇನ್ನಿ ತರರು ಉಪಸ್ಥಿತರಿದ್ದರು.

 

Translate »