ಸಾಲಿಗ್ರಾಮದಲ್ಲಿ ದಲಿತರ ಮೇಲೆ ದೌರ್ಜನ್ಯ ಆರೋಪ:   ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿ ದಸಂಸ ಪ್ರತಿಭಟನೆ
ಮೈಸೂರು

ಸಾಲಿಗ್ರಾಮದಲ್ಲಿ ದಲಿತರ ಮೇಲೆ ದೌರ್ಜನ್ಯ ಆರೋಪ:  ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿ ದಸಂಸ ಪ್ರತಿಭಟನೆ

December 17, 2019

ಮೈಸೂರು, ಡಿ.16(ಪಿಎಂ)- ಕೆ.ಆರ್.ನಗರ ತಾಲೂಕಿನ ಸಾಲಿಗ್ರಾಮದಲ್ಲಿ ದಲಿತ ಸಮುದಾಯದ ಮೇಲೆ ದೌರ್ಜನ್ಯ ನಡೆಸಿದ್ದು, ಈ ಸಂಬಂಧ ಕಠಿಣ ಕಾನೂನು ಕ್ರಮ ಜರುಗಿಸು ವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ (ದಸಂಸ) ಜಿಲ್ಲಾ ಶಾಖೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿ ಸಿದ ಪ್ರತಿಭಟನಾಕಾರರು, ಸಾಲಿಗ್ರಾಮದಲ್ಲಿ ಕ್ಷುಲ್ಲಕ ಕಾರ ಣಕ್ಕೆ ದಲಿತರ ಬಡಾವಣೆಗೆ ನುಗ್ಗಿ ಮನೆಗಳ ಮೇಲೆ ಕಲ್ಲು ಗಳನ್ನು ತೂರಲಾಗಿದೆ. ಮಹಿಳೆಯರು ಮತ್ತು ಮಕ್ಕಳನ್ನು ಎಳೆದಾಡಿ ಮನೆಯಲ್ಲಿದ್ದ ದಿನಬಳಕೆ ವಸ್ತುಗಳನ್ನು ಧ್ವಂಸ ಮಾಡಿ ಅಮಾನವೀಯವಾಗಿ ನಡೆದುಕೊಳ್ಳಲಾಗಿದೆ ಎಂದು ಖಂಡಿಸಿದರು. ಶತಶತಮಾನಗಳಿಂದ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ವಂಚಿತವಾದ ದಲಿತ ಸಮುದಾಯದ ಮೇಲೆ ಜಿಲ್ಲೆಯಾದ್ಯಂತ ಸವರ್ಣೀಯರಿಂದ ದೌರ್ಜನ್ಯ ನಡೆಯುತ್ತಲೇ ಇದೆ. ಸ್ಥಳೀಯ ಪೆÇಲೀಸ್ ಅಧಿಕಾರಿಗಳು ದೌರ್ಜನ್ಯದ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳದ ಕಾರಣಕ್ಕಾಗಿ ಇಂತಹ ಪ್ರಕರಣಗಳು ನಿರಂತರವಾಗಿ ನಡೆಯುತ್ತಿವೆ ಎಂದು ಆರೋಪಿಸಿದರು.

ಸಾಲಿಗ್ರಾಮದಲ್ಲಿ ಈ ಹಿಂದೆಯೂ 2 ಬಾರಿ ದಲಿತರ ಮೇಲೆ ದೌರ್ಜನ್ಯ ಪ್ರಕರಣಗಳು ನಡೆದಿದ್ದು, ಇದೀಗ 3ನೇ ಬಾರಿಯೂ ಮರುಕಳಿಸಿದೆ. ಗ್ರಾಮದವರಾದ ಸಾ.ರಾ. ಮಹೇಶ್ ಸ್ಥಳೀಯ ಶಾಸಕರಾದ ಹಿನ್ನೆಲೆಯಲ್ಲಿ ರಾಜಕೀಯ ಪ್ರಭಾವ ಬಳಸಿಕೊಂಡು ಇವರ ಸಹೋದರ ಸಾ.ರಾ.ರವೀಶ್ ಗುಂಪು ಕಟ್ಟಿಕೊಂಡು ಡಿ.12ರಂದು ದಲಿತರ ಬೀದಿಗೆ ನುಗ್ಗಿ ದೌರ್ಜನ್ಯ ನಡೆಸಿದ್ದಾರೆ ಎಂದು ಆಪಾದಿಸಿದರು.

ಹಲ್ಲೆಗೊಳಗಾದ ದಲಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಕೊಂಡು ನೋವಿನಿಂದ ಬಳಲುತ್ತಿದ್ದು, ಕೂಲಿಗೂ ಹೋಗ ಲಾಗದೆ ಸಂಕಷ್ಟದ ಜೀವನ ನಡೆಸುವಂತಾಗಿದೆ. ದೌರ್ಜನ್ಯ ಸಂಬಂಧ ಸಾಲಿಗ್ರಾಮ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣ ನಡೆದು ವಾರ ಕಳೆದರೂ ಶಾಸಕರ ಪ್ರಭಾವಕ್ಕೆ ಮಣಿದಿರುವ ಸ್ಥಳೀಯ ಪೆÇಲೀಸರು ಪ್ರಮುಖ ಆರೋಪಿ ಸಾ.ರಾ.ರವೀಶ್ ಹಾಗೂ ಇತರರನ್ನು ಬಂಧಿಸಿಲ್ಲ. ಈಗಲಾದರೂ ಎಲ್ಲಾ ಆರೋಪಿಗಳನ್ನು ಬಂಧಿಸಿ ದೌರ್ಜನ್ಯ ಕ್ಕೊಳಗಾದವರಿಗೆ ಸೂಕ್ತ ರಕ್ಷಣೆ ಮತ್ತು ಪರಿಹಾರ ನೀಡಬೇ ಕೆಂದು ಒತ್ತಾಯಿಸಿದರು. ಇದೇ ವೇಳೆ ಕೇಂದ್ರ ಸರ್ಕಾರದ `ಪೌರತ್ವ ತಿದ್ದುಪಡಿ ಕಾಯ್ದೆ’ ಹಾಗೂ `ರಾಷ್ಟ್ರೀಯ ಪೌರತ್ವ ನೋಂದಣಿ’ ವಿರೋಧಿಸಿ ಆಕ್ರೋಶ ವ್ಯಕ್ತಪಡಿಸಿದರು. ದಸಂಸ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ, ಜಿಲ್ಲಾ ಸಂಘಟನಾ ಸಂಚಾಲಕ ಕೆ.ವಿ.ದೇವೇಂದ್ರ, ದೇವನೂರು ಪುಟ್ಟನಂಜಯ್ಯ, ಹಾರೋಹಳ್ಳಿ ನಟರಾಜು, ಲಕ್ಕೂರು ಸಣ್ಣಯ್ಯ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಮೈಸೂರು ವಿವಿ ಸಂಶೋಧಕರ ಸಂಘದಿಂದಲೂ ಪ್ರತಿಭಟನೆ

ಮೈಸೂರು,ಡಿ.16(ಪಿಎಂ)-ಕೆ.ಆರ್ ನಗರ ತಾಲೂಕಿನ ಸಾಲಿಗ್ರಾಮದಲ್ಲಿ ದಲಿತ ಸಮುದಾಯದ ಮೇಲೆ ದೌರ್ಜನ್ಯ ನಡೆಸಿದ್ದು, ಈ ಸಂಬಂಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಮೈಸೂರು ವಿಶ್ವವಿದ್ಯಾನಿಲಯದ ಸಂಶೋ ಧಕರ ಸಂಘದ ವತಿಯಿಂದ ಸೋಮ ವಾರ ಪ್ರತಿಭಟನೆ ನಡೆಸಲಾಯಿತು.

ಮೈಸೂರು ವಿಶ್ವವಿದ್ಯಾನಿಲಯದ ಗ್ರಂಥಾಲಯ ಎದುರಿನ ಡಾ.ಅಂಬೇ ಡ್ಕರ್ ಪ್ರತಿಮೆ ಬಳಿ ಜಮಾಯಿಸಿದ ಪ್ರತಿಭಟನಾಕಾರರು, ಸಾಲಿಗ್ರಾಮದಲ್ಲಿ ಬಹುತೇಕ ದಲಿತರು ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದಾರೆ. ಅಂತಹವರ ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿ ಹಲ್ಲೆ ಮಾಡಿದ್ದು, ಇದು ಅಮಾನವೀಯ. ಈ ಗಲಭೆಗೆ ಪ್ರಮುಖ ಕಾರಣವಾ ದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳ ಬೇಕು ಎಂದು ಒತ್ತಾಯಿಸಿದರು. ಸಂಘದ ಸದಸ್ಯರಾದ ಗುರುಮೂರ್ತಿ, ವಿನಯ್, ರಘು, ಮರಿದೇವಯ್ಯ, ಮಹೇಶ್ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

 

Translate »