ಜೆಎಸ್‍ಎಸ್ ಮೆಡಿಕಲ್ ಕಾಲೇಜು ಹೌಸ್ ಸರ್ಜನ್ ಡಾ.ಸಾಲ್ವಿಯಾಗೆ ಚಿತ್ರಕಲೆಯಲ್ಲಿ ಅಂತಾರಾಷ್ಟ್ರೀಯ ಪ್ರಶಸ್ತಿ
ಮೈಸೂರು

ಜೆಎಸ್‍ಎಸ್ ಮೆಡಿಕಲ್ ಕಾಲೇಜು ಹೌಸ್ ಸರ್ಜನ್ ಡಾ.ಸಾಲ್ವಿಯಾಗೆ ಚಿತ್ರಕಲೆಯಲ್ಲಿ ಅಂತಾರಾಷ್ಟ್ರೀಯ ಪ್ರಶಸ್ತಿ

December 17, 2019

ಮೈಸೂರು,ಡಿ.16(ಎಸ್‍ಪಿಎನ್)-ಜೆಎಸ್‍ಎಸ್ ಮೆಡಿಕಲ್ ಕಾಲೇ ಜಿನ ಹೌಸ್ ಸರ್ಜನ್ ಆಗಿರುವ ಡಾ.ಸಾಲ್ವಿಯಾ ಎಸ್.ರಾಜ್ ಅವರ ‘ಮೇಘಾಲಯದ ಡಬಲ್ ಡೆಕ್ಕರ್ ರೂಟ್ ಬ್ರಿಡ್ಜ್’ ಚಿತ್ರಕಲೆಗೆ ಅಂತರ ರಾಷ್ಟ್ರೀಯ ವಿಶೇಷ ಬಹುಮಾನ ಲಭಿಸಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿರುವ ದುಷ್ಯಂತ್ ಆರ್ಟ್ ಗ್ಯಾಲರಿ ವತಿಯಿಂದ ಆಯೋಜಿಸಿದ್ದ ಅಂತ ರಾಷ್ಟ್ರೀಯ ಮಟ್ಟದ ಆನ್‍ಲೈನ್ ಚಿತ್ರ ಕಲಾ (ಲ್ಯಾಂಡ್‍ಸ್ಕೇಫ್ ಚಿತ್ರಕಲೆ) ಸ್ಪರ್ಧೆಯಲ್ಲಿ ಭಾಗವಹಿಸಿ, ಉದಯೋನ್ಮುಖ ಕಲಾವಿದೆ -2019 ಬಿರುದು ಪಡೆದುಕೊಂಡಿದ್ದಾರೆ.

ಈ ಆನ್‍ಲೈನ್ ಸ್ಪರ್ಧೆಯಲ್ಲಿ ವಿವಿಧ ದೇಶಗಳಿಂದ 795 ಮಂದಿ ಚಿತ್ರಕಲಾ ವಿದರು ಭಾಗವಹಿಸಿ ದ್ದರು. ಇದರಲ್ಲಿ 21 ಮಂದಿ ಚಿತ್ರ ಕಲಾವಿದರ ಪೇಟಿಂಗ್ಸ್‍ಗಳು ಮಾತ್ರ ಸ್ಪರ್ಧೆಯಲ್ಲಿ ಉಳಿದಿದ್ದವು. ಈ ಪೈಕಿ ಕಲಾವಿದೆ ಡಾ. ಸಾಲ್ವಿಯಾ ಅವರು ರಚಿಸಿದ್ದ ಮೇಘಾಲಯದ `ಡಬಲ್ ಡಕ್ಕರ್ ರೂಟ್ ಬ್ರಿಡ್ಜ್’ ಪೇಟಿಂಗ್ಸ್ ಅನ್ನು ಪರಿಗ ಣಿಸಿರುವ ತೀರ್ಪುಗಾರರು ವಿಶೇಷ ಬಹುಮಾನ ಘೋಷಿಸಿ ಟ್ರೋಫಿ ಮತ್ತು ಪ್ರಮಾಣ ಪತ್ರ ನೀಡಿದ್ದಾರೆ. ಚಿತ್ರಕಲೆಯಲ್ಲಿ ಅಭೂತ ಪೂರ್ವ ಸಾಧನೆ ಮಾಡಿರುವ ಡಾ. ಸಾಲ್ವಿಯಾ ಅಂತರರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಬಹುಮಾನಗಳನ್ನು ತಮ್ಮದಾಗಿಸಿಕೊಂಡಿ ದ್ದಾರೆ. 2018ನೇ ಸಾಲಿನ 9ನೇ ಅಂತ ರಾಷ್ಟ್ರೀಯ ವಾರ್ಷಿಕ ಕಲಾಸ್ಪರ್ಧೆಯಲ್ಲಿ 100 ಅತ್ಯುತ್ತಮ ಚಿತ್ರಕಲೆಗಳಲ್ಲಿ ಡಾ.ಸಾಲ್ವಿಯಾ ಅವರ ಪೇಟಿಂಗ್ಸ್ ಕೂಡ ಒಳಪಟ್ಟಿದೆ.

2016ರಲ್ಲಿ ಥೈಲ್ಯಾಂಡ್‍ನ ಸುರೇಂದ್ರ ರಾಜಾಭಟ್ ವಿವಿಯಲ್ಲಿ ನಡೆದ ಅಂತ ರಾಷ್ಟ್ರೀಯ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ.ಶಿಮ್ಲಾದ ದೇವ್‍ಭೂಮಿ ಫೌಂಡೇ ಷನ್ ಆಯೋಜಿಸಿದ್ದ ಅಂತರರಾಷ್ಟ್ರೀಯ ಚಿತ್ರಕಲಾ ಸ್ಪರ್ಧೆಯಲ್ಲಿ 2011, 2013 ಮತ್ತು 2015ನೇ ಸಾಲಿನಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿ ದ್ದಾರೆ. 2010ರಲ್ಲಿ ರಾಜೀವ್ ಗಾಂಧಿ ಅಂತರ ರಾಷ್ಟ್ರೀಯ ಚಿತ್ರಕಲಾ ಸ್ಪರ್ಧೆ ಯಲ್ಲಿ ಪ್ರಥಮ ಸ್ಥಾನ ಹಾಗೂ 2009ರಲ್ಲಿ ಫೆಡಲೈಟ್ ಇಂಡಸ್ಟ್ರಿಸ್ ಲಿಮಿಟೆಡ್ ವತಿ ಯಿಂದ ಆಯೋಜಿಸಿದ್ದ ಆರ್ಟ್ ಅಂಡ್ ಕ್ರಾಫ್ಟ್ ಸ್ಪರ್ಧೆಯಲ್ಲಿ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಡಾ.ಸಾಲ್ವಿಯಾ ಅವರು ಪ್ರಥಮ ಸ್ಥಾನ ಗಳಿಸುವ ಮೂಲಕ ವೈದ್ಯ ವೃತ್ತಿಯ ಜೊತೆಗೆ ಚಿತ್ರಕಲೆಯಲ್ಲಿಯೂ ಗಣನೀಯ ಸಾಧನೆ ಮಾಡಿದ್ದಾರೆ.

Translate »