ಸಿಬಿಐ ತನಿಖೆಗೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆ
ಮೈಸೂರು

ಸಿಬಿಐ ತನಿಖೆಗೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆ

December 17, 2019

ಮೈಸೂರು, ಡಿ.16(ಪಿಎಂ)- ಮೈಸೂರು ವಿವಿಯಲ್ಲಿ ಹಲವು ಅಕ್ರಮಗಳು ನಡೆದಿದ್ದು, ಈ ಸಂಬಂಧ ಸಿಬಿಐ ತನಿಖೆ ನಡೆಸು ವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಮೈಸೂರು ವಿವಿಯ ಮುಖ್ಯ ದ್ವಾರದ ಕುವೆಂಪು ಪ್ರತಿಮೆ ಬಳಿ ಜಮಾಯಿಸಿದ ಪ್ರತಿಭಟನಾಕಾರರು, ಮೈಸೂರು ವಿಶ್ವವಿದ್ಯಾಲಯ ದಲ್ಲಿ 2018-19ನೇ ಸಾಲಿನಲ್ಲಿ 80 ಸಾವಿರಕ್ಕಿಂತ ಹೆಚ್ಚು ಮಂದಿ ಕೆ-ಸೆಟ್ ಪರೀಕ್ಷೆ ಬರೆದಿದ್ದಾರೆ. ಇದರಲ್ಲಿ ನೂರಾರು ಅಭ್ಯರ್ಥಿಗಳಿಗೆ ಅರ್ಹತೆ ಇಲ್ಲದಿದ್ದರೂ, ಅರ್ಹತೆ ನೀಡಿ ಅವರನ್ನು ಆಯ್ಕೆ ಮಾಡ ಲಾಗಿದೆ. ಅಲ್ಲದೆ, ರಾಜ್ಯಪಾಲರ ಆದೇಶ ಧಿಕ್ಕರಿಸಿ ನೂರಾರು ಅಭ್ಯರ್ಥಿಗಳನ್ನು ಅಕ್ರಮವಾಗಿ ನೇಮಕಾತಿ ಮಾಡಲಾಗಿದೆ ಎಂದು ಆರೋಪಿಸಿದರು. ಕ್ರೀಡಾ ಸಾಮಗ್ರಿಗಳ ಖರೀದಿ, ವಿಜ್ಞಾನ ಪ್ರಯೋ ಗಾಲಯದ ವಸ್ತುಗಳ ಖರೀದಿ, ಟೆಂಡರ್ ಪ್ರಕ್ರಿಯೆ ಸೇರಿದಂತೆ ಅನೇಕ ವಿಷಯಗಳಲ್ಲಿ ಅಕ್ರಮ ನಡೆದಿದೆ. ಉತ್ತಮವಾಗಿರುವಂತಹ ವಸ್ತು ಗಳನ್ನು ಹದಗೆಟ್ಟಿವೆ ಎಂದು ಹರಾಜು ಮಾಡಲು ಮುಂದಾಗಿದ್ದಾರೆ. 2013ರಿಂದ ಇಲ್ಲಿವರೆಗೂ ಅಕ್ರಮಗಳು ನಡೆದಿದ್ದು, ಈ ಎಲ್ಲ ವನ್ನೂ ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು. ವೇದಿಕೆ ಜಿಲ್ಲಾಧ್ಯಕ್ಷ ಪ್ರವೀಣ್‍ಕುಮಾರ್, ಕಾರ್ಯಕರ್ತರಾದ ಲೋಕೇಶ್, ರಘು, ಹೇಮಂತ್, ಲಾಲು, ಸ್ವಾಮಿ, ಶ್ರೀನಿವಾಸ, ಚಂದ್ರು, ರಮೇಶ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Translate »