ಮೈಸೂರಲ್ಲಿ ಹೆಚ್.ಡಿ.ಕುಮಾರಸ್ವಾಮಿ, ಹೆಚ್.ಡಿ.ರೇವಣ್ಣ ಹುಟ್ಟುಹಬ್ಬ ಆಚರಣೆ
ಮೈಸೂರು

ಮೈಸೂರಲ್ಲಿ ಹೆಚ್.ಡಿ.ಕುಮಾರಸ್ವಾಮಿ, ಹೆಚ್.ಡಿ.ರೇವಣ್ಣ ಹುಟ್ಟುಹಬ್ಬ ಆಚರಣೆ

December 17, 2019

ಮೈಸೂರು,ಡಿ.16(ಪಿಎಂ)-ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರ ಹುಟ್ಟುಹಬ್ಬವನ್ನು ಜೆಡಿಎಸ್ ಮೈಸೂರು ನಗರ ಮತ್ತು ಜಿಲ್ಲಾ ಘಟಕದ ವತಿಯಿಂದ ಸೋಮವಾರ ಆಚರಿಸಲಾಯಿತು.

ಮೈಸೂರಿನ ಶೇಷಾದ್ರಿ ಐಯ್ಯರ್ ರಸ್ತೆಯ ಪಕ್ಷದ ಕಚೇರಿಯಲ್ಲಿ ಜೆಡಿಎಸ್ ಮುಖಂ ಡರು ಹಾಗೂ ಕಾರ್ಯಕರ್ತರು ಕೇಕ್ ಕತ್ತರಿಸಿ ಹಂಚುವ ಮೂಲಕ ಸಂಭ್ರಮಿಸಿ ದರಲ್ಲದೆ, ತಮ್ಮ ಇಬ್ಬರು ವರಿಷ್ಠರಿಗೂ ಆಯಸ್ಸು, ಆರೋಗ್ಯ ಕರುಣಿಸಲು ಹಾಗೂ ಹೆಚ್.ಡಿ.ಕುಮಾರಸ್ವಾಮಿ ಅವರು ಮತ್ತೆ ಸಿಎಂ ಆಗಲೆಂದು ದೇವರಲ್ಲಿ ಪ್ರಾರ್ಥಿಸಿದರು.

ಮಾಜಿ ಮೇಯರ್ ಆರ್.ಲಿಂಗಪ್ಪ ಮಾತ ನಾಡಿ, ನಮ್ಮ ನಾಯಕರಾದ ಕುಮಾರ ಸ್ವಾಮಿ ಮತ್ತೆ ಸಿಎಂ ಆಗಬೇಕು. ಈ ನಿಟ್ಟಿನಲ್ಲಿ ಅವರು ಯಶಸ್ಸು ಗಳಿಸಲೆಂದು ಪ್ರಾರ್ಥಿಸುತ್ತೇನೆ. ಮೈಸೂರಿನಲ್ಲಿ ಪಕ್ಷ ಸಂಘಟನೆಗೆ ನಾವು ಹೆಚ್ಚು ಒತ್ತು ನೀಡ ಬೇಕಿದೆ. ಮೇಯರ್ ಚುನಾವಣೆ ಸಮೀಪ ದಲ್ಲಿದ್ದು, ಪಕ್ಷಕ್ಕೆ ಆ ಸ್ಥಾನ ಒಲಿದು ಬರಲಿದೆ. ಮೇಯರ್ ಆಗುವವರು ನಗರದಲ್ಲಿ ಪಕ್ಷ ಬಲಪಡಿಸಲು ಹೆಚ್ಚು ಒತ್ತು ನೀಡಬೇಕು ಎಂದು ಮನವಿ ಮಾಡಿದರು.

ಜೆಡಿಎಸ್ ಮಾಜಿ ನಗರಾಧ್ಯಕ್ಷ ರಾಜಣ್ಣ ಮಾತನಾಡಿ, ಇಂದು ಕುಮಾರಸ್ವಾಮಿ ಅವರ ಹುಟ್ಟುಹಬ್ಬ ಹಾಗೂ ನಾಳೆ ರೇವ ಣ್ಣರ ಹುಟ್ಟುಹಬ್ಬವಾಗಿದ್ದು, ನಮ್ಮ ಈ ಇಬ್ಬರೂ ನಾಯಕರಿಗೆ ಶುಭವಾಗಲಿ. ಕಾರ್ಯ ಕರ್ತರನ್ನು ಉಳಿಸಿಕೊಂಡರೆ ಪಕ್ಷ ತಂತಾನೆ ಬಲಗೊಳ್ಳಲಿದೆ. ಪಕ್ಷದಲ್ಲಿ ಪ್ರಾಮಾಣಿಕವಾಗಿ ದುಡಿಯುವವರಿಗೆ ಸ್ಥಾನಮಾನ ಇಲ್ಲದಂತೆ ಆಗುತ್ತಿದ್ದು, ನಿಷ್ಠಾವಂತ ಕಾರ್ಯಕರ್ತರಿಗೆ ಸೂಕ್ತ ಸ್ಥಾನಮಾನ ನೀಡಬೇಕಿದೆ. ಹೆಚ್.ಡಿ. ದೇವೇಗೌಡ ಹಾಗೂ ಕುಮಾರಸ್ವಾಮಿ ಅವರು ಮೈಸೂರಿಗೆ ಬರುವುದಾಗಲೀ, ಮರಳಿ ಹೋಗುವುದಾಗಲೀ ಕಾರ್ಯಕರ್ತರ ಗಮನಕ್ಕೆ ಬಾರದಂತೆ ಆಗಿದ್ದು, ಇದು ಬದಲಾಗಬೇಕು. ಕುಮಾರಸ್ವಾಮಿಯವರು ಕಾರ್ಯಕರ್ತರೊಂದಿಗೆ ಸಮಾಲೋಚಿಸಿ, ಆ ಮೂಲಕ ಅವರನ್ನು ಹುರಿದುಂಬಿಸುವ ಕೆಲಸ ಮಾಡಬೇಕೆಂದು ಕೋರಿದರು.

ಮಾಜಿ ಮೇಯರ್ ಎಂ.ಜೆ.ರವಿಕುಮಾರ್ ಮಾತನಾಡಿ, ರೈತರ ಸಾಲ ಮನ್ನಾ ಮಾಡಿದ ಧೀಮಂತ ನಾಯಕರು ನಮ್ಮ ಹೆಚ್.ಡಿ.ಕುಮಾರಸ್ವಾಮಿ. ಅವರ ನೇತೃತ್ವ ದಲ್ಲಿ ಪಕ್ಷ ಬಲಪಡಿಸುವತ್ತ ಹೆಚ್ಚು ಗಮನ ನೀಡಬೇಕಿದ್ದು, ಸಣ್ಣಪುಟ್ಟ ಭಿನ್ನಾಭಿಪ್ರಾಯ ಗಳನ್ನು ಬೆಳೆಯಲು ಬಿಡದೇ ಪಕ್ಷದ ಹಿತ ಕಾಯಲು ಮುಂದಾಗಬೇಕು. ಆಂತರಿಕ ವಿಚಾರಗಳನ್ನು ಬಹಿರಂಗಗೊಳಿಸದೇ ಆಂತರಿಕವಾಗಿಯೇ ಬಗೆಹರಿಸಿಕೊಂಡರೆ ಪಕ್ಷದ ಸಂಘಟನೆ ಸಾಧ್ಯ ಎಂಬುದನ್ನು ನಾವು ಮನಗಾಣಬೇಕು ಎಂದರು.

ಇದಕ್ಕೂ ಮುನ್ನ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಚಾಮುಂಡಿಬೆಟ್ಟ ದಲ್ಲಿ ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದರು. ಪಾಲಿಕೆ ಸದಸ್ಯರಾದ ಪ್ರೇಮ ಶಂಕರೇಗೌಡ, ಎಸ್‍ಬಿಎಂ ಮಂಜು, ಶೋಭಾ, ಭಾಗ್ಯ, ಅಶ್ವಿನಿ, ಜಿಲ್ಲಾಧ್ಯಕ್ಷ ನರ ಸಿಂಹಸ್ವಾಮಿ, ಜೆಡಿಎಸ್ ನಗರಾಧ್ಯಕ್ಷ ಕೆ.ಟಿ. ಚೆಲುವೇಗೌಡ, ಕೆ.ಆರ್.ಮಿಲ್ ಶಿವಣ್ಣ, ಹಿರಿಯ ಉಪಾಧ್ಯಕ್ಷ ಫಾಲ್ಕನ್ ಬೋರೇಗೌಡ, ಉಪಾಧ್ಯಕ್ಷ ರಿಜ್ವಾನ್ ಅಹ ಮ್ಮದ್, ಎನ್‍ಆರ್ ಕ್ಷೇತ್ರದ ಅಧ್ಯಕ್ಷ ರಾಮು, ಚಾಮರಾಜ ಕ್ಷೇತ್ರದ ಅಧ್ಯಕ್ಷ ಪಿ.ಮಂಜು ನಾಥ್ ಮತ್ತಿತರರು ಹಾಜರಿದ್ದರು.

Translate »