ನ್ಯಾಯಾಂಗದಲ್ಲಿ ದಲಿತರಿಗೆ ಮೀಸಲಾತಿಗಾಗಿ ಹೋರಾಟ ನಡೆಯಬೇಕಿದೆ
ಮೈಸೂರು

ನ್ಯಾಯಾಂಗದಲ್ಲಿ ದಲಿತರಿಗೆ ಮೀಸಲಾತಿಗಾಗಿ ಹೋರಾಟ ನಡೆಯಬೇಕಿದೆ

October 1, 2018

ಮೈಸೂರು: ದೇಶದ ನ್ಯಾಯಾಂಗ ವ್ಯವಸ್ಥೆಯ ನ್ಯಾಯಮೂರ್ತಿ ಸ್ಥಾನದಲ್ಲಿ ದಲಿತರಿಗೆ ಮೀಸಲಾತಿ ಕಲ್ಪಿ ಸಲು ಒತ್ತಾಯ ಮಾಡಬೇಕಿದ್ದು, ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್‍ಗಳಲ್ಲಿ ಖಾಲಿ ಇರುವ ನ್ಯಾಯಮೂರ್ತಿ ಹುದ್ದೆ ಗಳಿಗೆ ದಲಿತ ಸಮುದಾಯಕ್ಕೆ ಪ್ರಾತಿನಿಧ್ಯ ನೀಡುವಂತೆ ಹೋರಾಟ ಆರಂಭಿಸಬೇಕು ಎಂದು ಹಿರಿಯ ನ್ಯಾಯವಾದಿ ಪ್ರೊ. ರವಿವರ್ಮ ಕುಮಾರ್ ಕರೆ ನೀಡಿದರು.

ಮೈಸೂರು ವಿವಿ ಮಾನಸಗಂಗೋ ತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ದಲಿತ ಸಂಘರ್ಷ ಸಮಿತಿ ವತಿಯಿಂದ `ದಲಿತ ಅಸ್ಮಿತೆ: ಅಭಿವ್ಯಕ್ತಿ, ದೌರ್ಜನ್ಯ, ಮೀಸಲಾತಿ ಮತ್ತು ಪ್ರಸ್ತುತ ಸವಾಲುಗಳು’ ಕುರಿತು ಭಾನು ವಾರ ಹಮ್ಮಿಕೊಂಡಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

2019ರ ಲೋಕಸಭೆ ಚುನಾವಣೆಗೆ ದೇಶ ಸಜ್ಜಾಗುತ್ತಿದ್ದು, ಈ ಚುನಾವಣೆ ಪೂರ್ವ ದಲ್ಲಿ ನ್ಯಾಯಾಂಗದಲ್ಲಿ ಮೀಸಲಾತಿಗಾಗಿ ಹೋರಾಟ ನಡೆಯಬೇಕಿದೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ನ್ಯಾಯಮೂರ್ತಿ ಹುದ್ದೆಗಳಿಗೆ ದಲಿತರಿಗೆ ಮೀಸಲಾತಿ ದೊರೆಯದ ಹೊರತು ದಲಿತರ ಅಸ್ಮಿತೆ ಕಾಣಲಾಗದು. ಈ ಕೂಡಲೇ ಇದಕ್ಕಾಗಿ ಒತ್ತಾಯಗಳು, ಹೋರಾಟಗಳು ರೂಪು ಗೊಳ್ಳಬೇಕಿವೆ ಎಂದು ತಿಳಿಸಿದರು.

ಸಂಖ್ಯಾತ್ಮಕವಾಗಿ ಗುಮಾಸ್ತರ ಹುದ್ದೆಗಳನ್ನು ನೀಡಿ ಮೀಸಲಾತಿ ಕೊಟ್ಟಿದ್ದೇವೆ ಎಂದರೆ ಅದ ರಿಂದ ಯಾವುದೇ ಪ್ರಯೋಜನವಿಲ್ಲ. ನ್ಯಾಯ ಮೂರ್ತಿಗಳ ನೇಮಕ ಸೇರಿದಂತೆ ಸರ್ಕಾರ ದಲ್ಲಿ ಎಷ್ಟು ದಲಿತ ಸಮುದಾಯದ ಕಾರ್ಯ ದರ್ಶಿಗಳು, ಜಂಟಿ ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳು ಇದ್ದಾರೆ ಎಂಬುದು ಮುಖ್ಯವಾಗುತ್ತದೆ. ಆದರೆ ದೇಶದಲ್ಲಿ ನಿರ್ಣಾಯಕ ಹಂತಗಳಲ್ಲಿ ಪ್ರಾತಿನಿಧ್ಯ ಕೊಟ್ಟಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸುಪ್ರೀಂನಲ್ಲಿಲ್ಲ ದಲಿತ ನ್ಯಾಯಮೂರ್ತಿ: ಸುಪ್ರೀಂಕೋರ್ಟ್‍ನಲ್ಲಿ ಒಬ್ಬ ದಲಿತ ಸಮು ದಾಯದ ನ್ಯಾಯಮೂರ್ತಿ ಇಲ್ಲ. ನ್ಯಾಯ ಮೂರ್ತಿಗಳನ್ನು ನೇಮಕ ಮಾಡಿಕೊಳ್ಳುವ ಅಧಿಕಾರ ಇರುವುದು ಹಾಲಿ ನ್ಯಾಯ ಮೂರ್ತಿಗೆ ಮಾತ್ರ. ಅವರನ್ನು ದಲಿತರ ನ್ನೇಕೆ ನೇಮಕ ಮಾಡಿಲ್ಲ ಎಂದು ಪ್ರಶ್ನೆ ಕೇಳುವಂತೆಯೂ ಇಲ್ಲ ಎಂದು ವಿಷಾದಿ ಸಿದ ಅವರು, ಜ್ಯೋತಿಬಸು ಸಂಪುಟದಲ್ಲಿ ಒಬ್ಬರೂ ದಲಿತರು ಇರಲಿಲ್ಲ. ಇದಕ್ಕೆ ಅವರು ನಾನೇ ಇದ್ದೇನೆ, ದಲಿತ ಸಮುದಾಯದ ಯೋಗಕ್ಷೇಮ ನೋಡಿಕೊಳ್ಳುತ್ತೇನೆ ಎನ್ನು ತ್ತಿದ್ದರು. ಹಾಗಾದರೆ ಬ್ರಿಟಿಷರು ಆಡಳಿತ ವನ್ನು ಸುಸೂತ್ರವಾಗಿ ನಡೆಸುತ್ತಿದ್ದರೂ ಸ್ವರಾಜ್ಯಕ್ಕಾಗಿ ಏಕೆ ಹೋರಾಟ ನಡೆಯಿತು ಎಂದು ಪ್ರಶ್ನಿಸಿದ ಅವರು, ಎಲ್ಲಾ ಹಂತ ಗಳಲ್ಲೂ ನಮ್ಮ ಪ್ರತಿನಿಧಿಗಳು ಇರಬೇಕೆಂ ಬುದು ಸ್ವರಾಜ್ಯ ಕಲ್ಪನೆಯ ಉದ್ದೇಶ ವಾಗಿದೆ ಎಂದು ತಿಳಿಸಿದರು.

ಮೀಸಲಾತಿ ವಿರುದ್ಧ ಸುಪ್ರಿಂನಲ್ಲಿ ಮೊಕದ್ದಮೆ: ಲೋಕಸಭೆಯಲ್ಲಿ ಮೀಸಲಾತಿ ಕೈಬಿಡ ಬೇಕೆಂದು ಸುಪ್ರೀಂ ಕೋರ್ಟ್‍ನಲ್ಲಿ ಈಗಾ ಗಲೇ ಮೊಕದ್ದಮೆ ದಾಖಲಾಗಿದೆ. ಸಂವಿ ಧಾನದ ಪ್ರಕಾರ 1960ರವರೆಗೆ ಮಾತ್ರ ಮೀಸಲಾತಿ ನೀಡಲು ಅವಕಾಶವಿತ್ತು. ಹೀಗಾಗಿ ಲೋಕಸಭೆಯಲ್ಲಿ ದಲಿತರಿಗೆ ಮೀಸಲಾತಿ ನೀಡುವುದನ್ನು ಕೈಬಿಡ ಬೇಕೆಂದು ಮೊಕದ್ದಮೆ ದಾಖಲಿಸಲಾ ಗಿದೆ. ಲೋಕಸಭೆ ಚುನಾವಣೆ ಸಮೀ ಪಿಸುತ್ತಿದ್ದು, ಅಷ್ಟರೊಳಗೆ ವ್ಯತಿರಿಕ್ತ ತೀರ್ಪು ಬಂದಲ್ಲಿ ದೊಡ್ಡ ಅನಾಹುತವೇ ಆಗಲಿದೆ. ಇದರಿಂದ ಮಲ್ಲಿಕಾರ್ಜುನ ಖರ್ಗೆ ಅವರ ಸ್ಥಾನಮಾನಗಳಿಗೆ ಕುತ್ತು ಬರಲಿದೆ ಎಂದು ಪ್ರೊ.ರವಿವರ್ಮ ಕುಮಾರ್ ಎಚ್ಚರಿಸಿದರು.
ದಲಿತ ಪದ ನಿಷೇಧಿಸಲು ಹುನ್ನಾರ: `ದಲಿತ’ ಪದಕ್ಕೆ ನಿಷೇಧ ಏರಲು ಮೋದಿ ಸರ್ಕಾರ ಹುನ್ನಾರ ನಡೆಸುತ್ತಿದೆ. ದಲಿತ ಪದ ದಲಿತ ಸಮುದಾಯದಲ್ಲಿ ಸಂಘಟನೆಗೆ ನಾಂದಿ ಹಾಡಿದ್ದು, ದಲಿತ ಸಮುದಾಯದ ಅಸ್ಮಿತೆ ಯನ್ನು ಎತ್ತಿಹಿಡಿದಿದೆ. ದಲಿತ ಪದದ ಮೂಲಕ ಎಲ್ಲಾ ಅಸ್ಪøಶ್ಯ ಜಾತಿಗಳು ಒಂದಾಗಿ ತಮ್ಮ ಅಸ್ಮಿತೆ ಉಳಿಸಿಕೊಂಡಿದ್ದು, ಇದನ್ನು ಒಡೆಯಲು ಹುನ್ನಾರ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.

ನಿಷ್ಪ್ರಯೋಜಕ ಸರ್ಕಾರ ಕಿತ್ತೊಗೆಯಿರಿ: ಮುಂಬರುವ ಲೋಕಸಭಾ ಚುನಾವಣೆ ಯಲ್ಲಿ ನಿಷ್ಪ್ರಯೋಜಕ ಮೋದಿ ನೇತೃತ್ವದ ಬಿಜೆಪಿ ಸರ್ಕಾರವನ್ನು ಕಿತ್ತೊಗೆದು ನಮ್ಮ ಆಶೋತ್ತರಗಳಿಗೆ ಸ್ಪಂದಿಸುವ ಸರ್ಕಾರ ರಚನೆಗೆ ಅವಕಾಶ ಮಾಡಿಕೊಡಬೇಕಿದೆ. ಮೋದಿಯವರ ಮನ್ ಕಿ ಬಾತ್‍ನಲ್ಲಿ ದಲಿತರು, ರೈತರ ಸಮಸ್ಯೆ ಸೇರಿದಂತೆ ದೇಶವನ್ನು ಕಾಡುತ್ತಿರುವ ಗಂಭೀರ ಸಮಸ್ಯೆ ಗಳು ಚರ್ಚೆಯೇ ಆಗಿಲ್ಲ. ಅಪ್ರಸ್ತುತ ವಿಚಾರ ಗಳನ್ನು ಉತ್ಸಾಹದಿಂದ ಪ್ರಸ್ತಾಪಿಸುವ ಮೋದಿ `ಸ್ವಚ್ಛ ಭಾರತ’ಕ್ಕೆ ಗಾಂಧೀ ಸೀಮಿತ ಗೊಳಿಸಿದ್ದಾರೆ. ಆ ಮೂಲಕ ಗಾಂಧೀ ಅವರ ಗ್ರಾಮ ಸ್ವರಾಜ್ಯ, ವಿಕೇಂದ್ರೀಕರಣದ ತತ್ವ ಗಳನ್ನು ಗಾಳಿಗೆ ತೂರಿದ್ದಾರೆ ಎಂದು ಆಪಾ ದಿಸಿದರು. ವಿಚಾರವಾದಿ ಡಾ.ಬಂಜಗೆರೆ ಜಯಪ್ರಕಾಶ್, ದಸಂಸ ಹಿರಿಯ ಹೋರಾಟಗಾರ ಇಂದೂಧರ ಹೊನ್ನಾ ಪುರ, ಪ್ರಗತಿಪರ ಚಿಂತಕ ಶಿವಸುಂದರ್, ದಸಂಸ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು ಮತ್ತಿತರರು ಹಾಜರಿದ್ದರು.

Translate »