ಬುದ್ಧನ ಸಂದೇಶ ಕಡೆಗಣಿಸಿದರೆ ವಿನಾಶ ತಪ್ಪದು
ಮೈಸೂರು

ಬುದ್ಧನ ಸಂದೇಶ ಕಡೆಗಣಿಸಿದರೆ ವಿನಾಶ ತಪ್ಪದು

October 1, 2018

ಮೈಸೂರು:  ವಿಶ್ವಕ್ಕೆ ಯುದ್ಧ ಬೇಕಾಗಿಲ್ಲ, ಬುದ್ಧ ಮಾರ್ಗಬೇಕು ಎಂದು ಮೈಸೂರಿನ ಗಾಂಧಿನಗರದ ಉರಿಲಿಂಗಿಪೆದ್ದಿ ಮಠದ e್ಞÁನಪ್ರಕಾಶ್ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ಜೆಎಲ್‍ಬಿ ರಸ್ತೆಯ ನಾದಬ್ರಹ್ಮ ಸಂಗೀತ ಸಭಾಂಗಣದಲ್ಲಿ ತನುಮನ ಸಂಸ್ಥೆ ವತಿಯಿಂದ `ಜಗ ನಡೆಯಲಿ ಬುದ್ಧನ ಕಡೆ’ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಮಾತ ನಾಡಿದ ಅವರು, ಬುದ್ಧನ ಸಂದೇಶಗಳು ಎಲ್ಲರ ಮನಸ್ಸನ್ನು ಶುದ್ಧಗೊಳಿಸಬೇಕು. ಇಲ್ಲ ದಿದ್ದಲ್ಲಿ ವಿನಾಶ ತಪ್ಪಿದ್ದಲ್ಲ ಎಂದು ಎಚ್ಚರಿಸಿದರು.

ಯುದ್ಧ ಸಾಮಗ್ರಿಗಳನ್ನು ಖರೀದಿಸುವ ಯಾವ ದೇಶವೂ ಸುಭದ್ರವಾಗಿರಲು ಸಾಧ್ಯವೇ ಇಲ್ಲ. ಬುದ್ಧ ಹೇಳಿದಂತೆ ಪ್ರತಿಯೊಬ್ಬರು ಧ್ಯಾನದ ಕಡೆ ಹೊರಳಿ, ಒತ್ತಡ ಕಡಿಮೆ ಮಾಡಿಕೊಳ್ಳಬೇಕು. ಇಲ್ಲದಿದ್ದಲ್ಲಿ ಬಿಪಿ, ಶುಗರ್ ಮತ್ತಿತರ ರೋಗಗಳು ಬರುತ್ತವೆ.
ಬಟ್ಟೆ ಮಲಿನವಾದರೆ ಸೋಪು ಬಳಸಿ ಶುದ್ಧ ಮಾಡಬಹುದು. ಮನಸ್ಸು ಶುದ್ಧ ಮಾಡಬೇಕಾದರೆ ಇಂಥ ಕಾರ್ಯಕ್ರಮ ಗಳಿಂದ ಮಾತ್ರ ಸಾಧ್ಯ. ಶುದ್ಧ ಮನಸ್ಸು ಅಂಗಡಿಯಲ್ಲಿ ಸಿಗುವ ವಸ್ತುವಲ್ಲ. ಪ್ರೀತಿ, ಕರುಣೆ, ಮೈತ್ರಿ, ಪ್ರಜ್ಞೆಗೆ ಜಾಗವಿಲ್ಲದಿ ದ್ದಲ್ಲಿ ಅದು ಮನೆಯೇ ಅಲ್ಲ ಎಂದರು.

ನಂತರ ಲಕ್ಷ್ಮಿರಾಮ್ ನಾಡಪ್ಪನಹಳ್ಳಿ ಅವರ ಪರಿಕಲ್ಪನೆ, ಸಂಗೀತ ಸಂಯೋ ಜನೆ ಮತ್ತು ಸಾರಥ್ಯದಲ್ಲಿ ಲಕ್ಷ್ಮೀರಾಮ್, ಎಸ್, ಲಾಸ್ಯ, ಸಿ. ಸಾಗರ್ ಚಕ್ರವರ್ತಿ, ಮಂಜುಳಾ ರಘುನಂದನ್, ಪಿ.ಮಹ ದೇವಸ್ವಾಮಿ, ಎಲ್.ವಿಶ್ವನಾಥ್, ಎಚ್. ಆರ್.ಕೀರ್ತಿ ಪ್ರಸಾದ್, ಎಂ.ಭಾರ್ಗವಿ, ಎಂ. ಶಶಿಧರ್, ಕುಮಾರ್ ಉದ್ಬೂರು, ಸಿ.ಪಿ.ಕೇಶವಮೂರ್ತಿ ಅವರು ಜಾನ ಪದ ಮತ್ತು ಬುದ್ಧನ ಹಾಡುಗಳನ್ನು ಹಾಡಿದರು. ವಿ.ಶರಕತ್, ಎಸ್. ರೋಶನ್, ಸೂರ್ಯ, ಎನ್. ಕಿರಣ್ ವಾದ್ಯ ಸಹಕಾರ ನೀಡಿದರು.

ಯೋಜನಾ ಇಲಾಖೆ ಜಂಟಿ ನಿರ್ದೇ ಶಕ ಡಿ.ಚಂದ್ರಶೇಖರಯ್ಯ, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ವಕೀಲ ಎಸ್.ಉಮೇಶ್, ರಾಜ್ಯ ನಾಯಕರ ಹಿತ ರಕ್ಷಣಾ ವೇದಿಕೆ ಅಧ್ಯಕ್ಷ ದ್ಯಾವಪ್ಪ ನಾಯಕ, ಎಚ್.ಡಿ.ಕೋಟೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಥಮ ದರ್ಜೆ ಸಹಾಯಕಿ ಚಂದ್ರಕಲಾ, ಸಿದ್ದರಾಮ ಶಿವಯೋಗಿ ಸ್ವಾಮೀಜಿ, ಸೋಮಯ್ಯ ಮಲೆಯೂರು, ಸಿದ್ದಸ್ವಾಮಿ ಮೊದಲಾ ದವರು ಉಪಸ್ಥಿತರಿದ್ದರು.

Translate »