ಹಾಳಾದ ಪೇಡ ಮಾರಾಟ: ದೂರು
ಕೊಡಗು

ಹಾಳಾದ ಪೇಡ ಮಾರಾಟ: ದೂರು

July 2, 2018

ಮಡಿಕೇರಿ:  ಗ್ರಾಹಕರೊಬ್ಬರು ನಗರದಲ್ಲಿರುವ ನಂದಿನಿ ಹಾಲಿನ ಉತ್ಪನ್ನ ಮತ್ತು ಮಾರಾಟ ಕೇಂದ್ರದ ವಿರುದ್ಧ ಹಾಳಾದ ಪೇಡಾ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

ನಗರದ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ನಂದಿನಿ ಹಾಲಿನ ಉತ್ಪನ್ನ ಮತ್ತು ಮಾರಾಟ ಕೇಂದ್ರದಿಂದ ಪಾಲೂರು ಗ್ರಾಮದ ಸೂದನ ಎಸ್. ಈರಪ್ಪ ಅವರ ಪುತ್ರಿ ಶುಕ್ರವಾರ ನೂರು ಗ್ರಾಂ. ತೂಕದ ನಂದಿನಿ ಪೇಡಾವನ್ನು ಖರೀದಿಸಿದ್ದು, ಮನೆಗೆ ತಂದು ತಿನ್ನಲು ತೆರೆದಾಗ ಪೇಡಾ ಪಾಚಿ ಕಟ್ಟಿ ಹಾಳಾಗಿರುವುದನ್ನು ಗಮನಿಸಿದ್ದಾರೆ.

ಈ ಸಂಬಂಧ ಸೂದನ ಈರಪ್ಪ ಅವರು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಅಧಿಕಾರಿಗಳಿಗೆ ಪುಕಾರು ನೀಡಿದ್ದಾರೆ. ಈ ರೀತಿ ಹಾಳಾದ ಪೇಡಾವನ್ನು ಮಾರಾಟ ಮಾಡುತ್ತಿರುವುದು ಗ್ರಾಹಕರ ಹಿತದೃಷ್ಟಿಯಿಂದ ಸೂಕ್ತವಲ್ಲವೆಂದು ಅವರು ತಿಳಿಸಿದ್ದಾರೆ.

Translate »