ಸೆ.29ರಿಂದ 15 ದಿನ ದಸರಾ ಫಲಪುಷ್ಪ ಪ್ರದರ್ಶನ
ಮೈಸೂರು

ಸೆ.29ರಿಂದ 15 ದಿನ ದಸರಾ ಫಲಪುಷ್ಪ ಪ್ರದರ್ಶನ

September 20, 2019

ಮೈಸೂರು, ಸೆ.19(ಎಂಟಿವೈ)-ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಮೈಸೂರಿನ ಕುಪ್ಪಣ್ಣ ಪಾರ್ಕ್‍ನಲ್ಲಿ ಸೆ.29ರಿಂದ ಅ.13 ರವರೆಗೆ 15 ದಿನ ನಡೆಯಲಿರುವ ಫಲ ಪುಷ್ಪ ಪ್ರದರ್ಶನದಲ್ಲಿ ಕಣ್ಮನ ಸೆಳೆಯುವ ಸಸ್ಯಕಾಶಿಯೊಂದಿಗೆ ಮಕ್ಕಳಿಗೆ ಅಮ್ಯೂಸ್ ಮೆಂಟ್ ಪಾರ್ಕ್ ಮುದ ನೀಡಲಿದೆ. ಬಾಂಬೆ ಮೂಲದ ಸಂಸ್ಥೆ ಸುರಕ್ಷತೆಗೆ ಆದ್ಯತೆ ನೀಡಿ ಆಟಿಕೆಗಳ ಜೋಡಣಾ ಕಾರ್ಯ ಈಗಾಗಲೇ ಆರಂಭಿಸಿದೆ.

ದಸರಾ ಮಹೋತ್ಸವದ ಆರಂಭಕ್ಕೆ ಕೇವಲ 9 ದಿನ ಮಾತ್ರ ಬಾಕಿ ಇರುವುದರಿಂದ ಈ ಬಾರಿ ನವರಾತ್ರಿ ವೇಳೆ ವಿವಿಧೆಡೆಯಿಂದ ಬರುವ ಪ್ರವಾಸಿಗರಿಗೆ ಆಟೋಟ, ಫಲಪುಷ್ಪ ಪ್ರದರ್ಶನದಲ್ಲಿ ಮಾತ್ರ ಅಮ್ಯೂಸ್‍ಮೆಂಟ್ ಪಾರ್ಕ್ ಪೂರ್ಣ ಪ್ರಮಾಣದಲ್ಲಿ ಲಭ್ಯ ವಾಗಲಿದೆ. ಇದೇ ಮೊದಲ ಬಾರಿಗೆ ಜಂಬೂ ಸವಾರಿ ಮುಗಿದ ನಂತರ ಐದು ದಿನ ದಸರಾ ಫಲಪುಷ್ಪ ಪ್ರದರ್ಶನ ವೀಕ್ಷಣೆಗೆ ಲಭ್ಯವಿರಲಿದೆ. ಈ ಬಾರಿ ದಾಖಲೆಯ ಮೊತ್ತ 1.13 ಕೋಟಿ ರೂ.ಗೆ ಬಿಡ್ ಕೂಗಿ ರುವ ಮೈಸೂರಿನ ಅಲಿಫ್ ಟ್ರೇಡರ್ಸ್ ಸಂಸ್ಥೆ ಫಲಪುಷ್ಪ ಪ್ರದರ್ಶನದ ಟೆಂಡರ್‍ವಹಿಸಿ ಕೊಂಡಿದೆ. ಪ್ರವೇಶ ದ್ವಾರ, ಅಮ್ಯೂಸ್ ಮೆಂಟ್ ಪಾರ್ಕ್, ಮಳಿಗೆಗಳ ನಿರ್ವಹಣೆ ಈ ಸಂಸ್ಥೆಗೆ ಸೇರಿದೆ. ಈ ಹಿನ್ನೆಲೆಯಲ್ಲಿ ಸಿದ್ಧತಾ ಕೆಲಸ ತ್ವರಿತಗತಿಯಲ್ಲಿ ಸಾಗುತ್ತಿದೆ.

ತೋಟಗಾರಿಕಾ ಇಲಾಖೆ ಫಲಪುಷ್ಪ ಪ್ರದರ್ಶನಕ್ಕೆ ಅಗತ್ಯ ಸಿದ್ಧತೆ ಮಾಡಿಕೊಂ ಡಿದ್ದು, ಇನ್ನೆರಡು ದಿನದಲ್ಲಿ ಹೂವಿನ ಕುಂಡಗಳನ್ನು ಜೋಡಿಸುವ ಕೆಲಸ ಆರಂ ಭಿಸಲಿದೆ. ಮೈದಾನದಲ್ಲಿ ಬೆಳೆದುಕೊಂಡಿದ್ದ ಕಳೆಯನ್ನು ಕೀಳುವ ಕೆಲಸ ನಡೆಸುತ್ತಿದ್ದು, ಅಂತಿಮ ಹಂತಕ್ಕೆ ಬಂದಿದೆ. ಐದು ನರ್ಸರಿ ಯಲ್ಲಿ 75 ಸಾವಿರ ಪಾಟ್‍ಗಳಲ್ಲಿ ವಿವಿಧ ಬಗೆಯ ಹೂವಿನ ಗಿಡವನ್ನು ಬೆಳೆಸ ಲಾಗಿದ್ದು, ಬಣ್ಣ ಬಣ್ಣದ ಹೂವುಗಳು ಕಂಗೊ ಳಿಸುತ್ತಿವೆ. ಹಣ್ಣುಗಳ ಮನೆ, ಜನ್ಮ ಶತಮಾ ನೋತ್ಸವದ ಹಿನ್ನೆಲೆಯಲ್ಲಿ ಜಯಚಾಮ ರಾಜ ಒಡೆಯರ್ ಅವರ ಆಕೃತಿ ಹೂವಿ ಗಳಿಂದಲೇ ಮೂಡಿ ಬರಲಿದೆ. ಎಲ್ಲಾ ಆಕೃತಿಗಳಿಗೂ ಎರಡು ಬಾರಿ ಹೂವು ಬದ ಲಿಸಿ ಕೊನೆ ದಿನದವರೆಗೂ ತಾಜಾತನ ಕಾಪಾಡಲು ಕ್ರಮ ಕೈಗೊಳ್ಳಲಾಗಿದೆ.

ಆಕರ್ಷಣೆಯಾಗಲಿದೆ: ಫಲಪುಷ್ಪ ಪ್ರದರ್ಶನದಲ್ಲಿ ಅಮ್ಯೂಸ್‍ಮೆಂಟ್ ಪಾರ್ಕ್‍ಗೂ ಆದ್ಯತೆ ನೀಡಲಾಗುತ್ತಿದೆ. ಮಕ್ಕಳು ಹಾಗೂ ವಯಸ್ಕರೂ ಆಟವಾಡ ಬಹುದಾದ ಟೈಟಾನಿಕ್, ಬ್ರೇಕ್ ಡ್ಯಾನ್ಸ್ ಆಟಿಕೆ, ಮಕ್ಕಳಿಗಾಗಿ ಛೋಟಾ ಭೀಮ್, ಕ್ಯಾಟರೆಟ್ ಫಿಲ್ಲರ್, ಹೆಲಿಕಾಪ್ಟರ್ ರೈಡ್ (ಆಟಿಕೆ), ಬೋಟಿಂಗ್ ಸೇರಿದಂತೆ ವಿವಿಧ ಆಟಿಕೆಗಳನ್ನು ಅಳವಡಿಸಲಾಗುತ್ತಿದೆ. ಬಾಂಬೆ ಮೂಲದ ಸಂಸ್ಥೆಯಿಂದ ಆಟಿಕೆ ಜೋಡಣಾ ಕಾರ್ಯ ಆರಂಭವಾಗಿದ್ದು, ಇನ್ನೆರಡು ದಿನದಲ್ಲಿ ಸಂಪೂರ್ಣವಾಗಿ ಜೋಡಿಸಲಾಗುತ್ತದೆ ಎಂದು ಆಲಿಫ್ ಟ್ರೇಡರ್ಸ್ ಸಂಸ್ಥೆಯ ಸುಹೇಲ್ ಖಿಲ್ಜಿ ಹಾಗೂ ರಾಜೇಶ್ ತಿಳಿಸಿದ್ದಾರೆ.

Translate »