ಕೈ ಬಂಡಾಯ ನಾಯಕರಿಗೆ ಡಿಸಿಎಂ ಪರಮೇಶ್ವರ್ ಖಡಕ್ ವಾರ್ನಿಂಗ್
ಮಂಡ್ಯ

ಕೈ ಬಂಡಾಯ ನಾಯಕರಿಗೆ ಡಿಸಿಎಂ ಪರಮೇಶ್ವರ್ ಖಡಕ್ ವಾರ್ನಿಂಗ್

April 15, 2019
  • ಮೈತ್ರಿ ಅಭ್ಯರ್ಥಿ ಪರ ಕೆಲಸ ಮಾಡದಿದ್ದರೆ ಶಿಸ್ತು ಕ್ರಮ
  • ನರೇಂದ್ರಸ್ವಾಮಿ, ಚಲುವರಾಯಸ್ವಾಮಿ, ರಮೇಶ್‍ಬಾಬು ಬಂಡಿಸಿದ್ದೇಗೌಡರ ಉಚ್ಚಾಟನೆಗೆ ಆಗ್ರಹ

ಮಂಡ್ಯ: ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಕೆಲಸ ಮಾಡದಿದ್ದರೆ ಕಾಂಗ್ರೆಸ್ ಬಂಡಾಯ ನಾಯಕರ ವಿರುದ್ದ ಶಿಸ್ತುಕ್ರಮ ಕೈಗೊಳ್ಳಲಾಗು ವುದು ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಖಡಕ್ ಎಚ್ಚರಿಕೆ ನೀಡಿದರು.
ನಗರದ ಎ.ಸಿ.ಮಾದೇಗೌಡ ಸಮುದಾಯ ಭವನದಲ್ಲಿಂದು ದೋಸ್ತಿ ಪಕ್ಷಗಳು ಜಂಟಿ ಯಾಗಿ ಆಯೋಜಿಸಿದ್ದ ದಲಿತ ರಾಜ ಕೀಯ ಜಾಗೃತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಕೋಮುವಾದಿ ಬಿಜೆಪಿಯನ್ನು ಅಧಿಕಾರ ದಿಂದ ದೂರವಿಡುವ ಏಕೈಕ ಉದ್ದೇಶದಿಂದ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳಲಾಗಿದೆ. ಆದ್ದರಿಂದ ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್ ಜೊತೆ ಒಗ್ಗಟ್ಟಾಗಿ ಮೈತ್ರಿ ಅಭ್ಯರ್ಥಿ ಗಳನ್ನು ಗೆಲ್ಲಿಸುವ ನಿಟ್ಟಿನಲ್ಲಿ ಕೆಲಸ ಮಾಡ ಬೇಕು, ಈಗಾಗಲೇ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕೂಡ ಹೇಳಿದ್ದಾರೆ ಎಂದರು.
ಪಕ್ಷದ ತೀರ್ಮಾನಕ್ಕೆ ವಿರುದ್ಧವಾಗಿ ನಡೆದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು, ಯಾರೇ ಆದರೂ ಪಕ್ಷ ವಿರೋಧಿ ಚಟು ವಟಿಕೆ ಮಾಡಿದರೆ ಅವರನ್ನು ಕ್ಷಮಿಸೋ ದಿಲ್ಲ ಎಂದು ಎಚ್ಚರಿಸಿದರು. ಇಲ್ಲಿ ಬಿಜೆಪಿ ಯವರು ಅಭ್ಯರ್ಥಿಯನ್ನು ಹಾಕಿಲ್ಲ, ಪಕ್ಷೇತರ ಅಭ್ಯರ್ಥಿಗೆ ಬಿಜೆಪಿ ಬೆಂಬಲ ಕೊಟ್ಟಿದ್ದಾರೆ. ಯಾವುದೇ ಕಾರಣಕ್ಕೂ ಪಕ್ಷೇತರ ಅಭ್ಯರ್ಥಿಗೆ ಮತ ಹಾಕಬೇಡಿ ಎಂದರು. ಈ ನಡುವೆ ಪರಮೇಶ್ವರ್ ಭಾಷಣಕ್ಕೆ ಅಡ್ಡಿಪಡಿಸಿದ ಅಂಬಿ ಆಪ್ತ ಅಮರಾವತಿ ಚಂದ್ರಶೇಖರ್, ಅವರು ಬಿಜೆಪಿ ಅಭ್ಯರ್ಥಿಯೇ ಸಾರ್… ಬೆಂಬಲಿತ ಅಭ್ಯರ್ಥಿ ಅಲ್ಲ. ಎಂದು ಏರುದನಿ ಯಲ್ಲಿ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಪರಮೇಶ್ವರ್ ಪಕ್ಷೇತರ ಅಭ್ಯರ್ಥಿ ಬೆಂಬಲಿಸ ಬೇಡಿ. ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರ ಸ್ವಾಮಿಯನ್ನು ಬೆಂಬಲಿಸಿ ಎಂದು ತಿಳಿಸಿದರು.

ರಾಹುಲ್ ಪ್ರಧಾನಿ ಆಗಿ, ನಿಖಿಲ್ ಎಂಪಿ ಆದ್ರೆ ಚನ್ನಾಗಿರುತ್ತೆ. ಇಬ್ಬರು ಅಧಿಕಾರ ದಲ್ಲಿದ್ದರೆ ಮಂಡ್ಯ ಮತ್ತಷ್ಟು ಅಭಿವೃದ್ಧಿ ಆಗುತ್ತೆ. ಇದನ್ನು ಅರಿತು ಕಾರ್ಯಕರ್ತರು ಕೆಲಸ ಮಾಡಬೇಕು ಎಂದು ಅವರು ಹೇಳಿದರು.

ಓಟ್ ಹಾಕುವಾಗ ಕಾಂಗ್ರೆಸ್‍ನವ್ರು ಇವಿಎಂನಲ್ಲಿ ಹಸ್ತ ಹುಡುಕಬೇಡಿ. ಅಲ್ಲಿ ಹಸ್ತ ಇರಲ್ಲ,ಹೊರೆ ಹೊತ್ತ ಮಹಿಳೆಯ ಚಿಹ್ನೆ ಮಾತ್ರ ಇರುತ್ತೆ, ನಮ್ಮ ಪಕ್ಷದ ಚಿಹ್ನೆ ಇಲ್ಲ ಅಂತ ವಾಪಸ್ ಬಂದ್ಬಿಟ್ಟೀರಾ…! ಮಂಡ್ಯ ಕೈ ಕಾರ್ಯಕರ್ತರು ತೆನೆ ಹೊತ್ತ ಮಹಿಳೆಗೆ ಕಣ್ಮುಚ್ಚಿ ಮತ ಹಾಕಿ ಹೊರ ಬನ್ನಿ ಎಂದು ಅವರು ಕರೆ ನೀಡಿದರು.

ಉಚ್ಚಾಟನೆಗೆ ಆಗ್ರಹ: ದಲಿತರ ರಾಜ ಕೀಯ ಜಾಗೃತಿ ಸಮಾವೇಶದಲ್ಲಿ ಕೈ ಬಂಡಾಯ ಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳು ವಂತೆ ಕಾರ್ಯಕರ್ತರು ಆಗ್ರಹಿಸಿದರು.
ಮೈತ್ರಿ ಅಭ್ಯರ್ಥಿ ಪರ ಕೆಲಸ ಮಾಡು ತ್ತಿಲ್ಲಾ, ಮಾಜಿ ಶಾಸಕರಾದ ನರೇಂದ್ರ ಸ್ವಾಮಿ, ಚಲುವ ರಾಯಸ್ವಾಮಿ, ರಮೇಶ್ ಬಾಬು ಬಂಡಿಸಿದ್ದೇಗೌಡ ಸೇರಿದಂತೆ ಕಾಂಗ್ರೆಸ್‍ನ ಹಲವರು ಪಕ್ಷೇತರ ಅಭ್ಯರ್ಥಿ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಉಚ್ಚಾಟನೆ ಮಾಡಬೇಕೆಂದು ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಡಾ.ಜಿ.ಪರಮೇಶ್ವರ್, ಯಾರೇ ಆಗಲಿ ಪಕ್ಷ ವಿರೋಧಿ ಚಟು ವಟಿಕೆ ಮಾಡಿದರೆ ಅವರ ವಿರುದ್ದ ಶಿಸ್ತು ಕ್ರಮ ಕೈಗೊಳ್ಳುತ್ತೇವೆ,ಚಿಂತೆ ಬಿಡಿ ಎಂದು ಕಾರ್ಯಕರ್ತರನ್ನು ಸಮಾಧಾನ ಪಡಿಸಿದರು.

ಸಮಾವೇಶದಲ್ಲಿ ಸಚಿವ ಸಿ.ಎಸ್. ಪುಟ್ಟ ರಾಜು, ಶಾಸಕರಾದ ಅನ್ನದಾನಿ, ಶ್ರೀನಿವಾಸ್, ಮಾಜಿ ಸಚಿವ ಎಂ.ಎಸ್.ಆತ್ಮಾನಂದ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Translate »