ಶಾಶ್ವತ ಮೈಸೂರು ದಸರಾ ಪ್ರಾಧಿಕಾರ ರಚಿಸಿ
ಮೈಸೂರು

ಶಾಶ್ವತ ಮೈಸೂರು ದಸರಾ ಪ್ರಾಧಿಕಾರ ರಚಿಸಿ

September 12, 2019

ಮೈಸೂರು, ಸೆ.11(ಆರ್‍ಕೆಬಿ)- ನಾಡ ಹಬ್ಬ ದಸರಾ ಆಚರಣೆಗೆ ಸಂಬಂಧಿಸಿದಂತೆ ಶಾಶ್ವತ ದಸರಾ ಪ್ರಾಧಿಕಾರ ರಚಿಸುವಂತೆ ಬುಧವಾರ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರಿಗೆ ಮೈಸೂರಿನ ಮಾಜಿ ಮೇಯರ್‍ಗಳು ಸಲಹೆ ನೀಡಿದರು.

ದಸರಾ ಮಹೋತ್ಸವ ಆಚರಣೆ ಕುರಿ ತಂತೆ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿ ರುವ ವಸತಿ ಸಚಿವ ವಿ.ಸೋಮಣ್ಣ ಅವರು ಜಲದರ್ಶಿನಿ ಅತಿಥಿಗೃಹದಲ್ಲಿ ಕರೆದಿದ್ದ ಮಾಜಿ ಮೇಯರ್‍ಗಳ ಸಭೆಯಲ್ಲಿ ಈ ಒತ್ತಾಯ ಕೇಳಿಬಂದಿತು.

ದಸರಾ ಪ್ರಾಧಿಕಾರ ರಚನೆ ಮಾಡು ವಂತೆ ಬಹಳ ವರ್ಷಗಳಿಂದ ಬೇಡಿಕೆ ಇದೆ. ಆದರೆ ಅದರ ರಚನೆ ಬಗ್ಗೆ ಯಾರೂ ಆಸಕ್ತಿ ತೋರದ ಬಗ್ಗೆ ಮಾಜಿ ಮೇಯರ್‍ಗಳು ಸಚಿವರ ಗಮನ ಸೆಳೆದರು. ದಸರಾ ಶಾಶ್ವತ ಸಮಿತಿ ರಚಿಸಿ ಜಿಲ್ಲಾಧಿಕಾರಿಗಳನ್ನು ಕಾರ್ಯಾ ಧ್ಯಕ್ಷರನ್ನಾಗಿ ಮಾಡಬೇಕು. ದಸರಾ ಮಹೋ ತ್ಸವದ 2 ತಿಂಗಳ ಮೊದಲೇ ದಸರಾ ಕೆಲಸಗಳು ಆರಂಭವಾಗಬೇಕು. ಇಲ್ಲಿ ಸ್ವಾಗತ ಸಮಿತಿ ಬಹಳ ಮುಖ್ಯವಾದದ್ದು ಎಂದು ಮಾಜಿ ಮೇಯರ್ ಆರ್.ಜಿ.ನರಸಿಂಹ ಅಯ್ಯಂಗಾರ್ ಸಲಹೆ ನೀಡಿದರು.

ಇದಕ್ಕೆ ಪೂರಕವಾಗಿ ಮಾತನಾಡಿದ ಮಾಜಿ ಮೇಯರ್ ಶ್ರೀಕಂಠಯ್ಯ, ಶಾಶ್ವತ ಪ್ರಾಧಿಕಾರ ರಚನೆಗೆ ಸರ್ಕಾರ ಒತ್ತು ನೀಡ ಬೇಕು ಎಂದು ಹೇಳಿದರು.

ಪಾಸ್ ಗೊಂದಲ ನಿವಾರಿಸಿ: ಮಾಜಿ ಮೇಯರ್ ಎಂ.ನಾರಾಯಣ ಮಾತನಾಡಿ, ದಸರಾದಲ್ಲಿ ಸಾಮಾನ್ಯವಾಗಿ ಕಂಡು ಬರುವ ಗೊಂದಲವೆಂದರೆ ಪಾಸ್‍ಗಳದ್ದು. ದುಡ್ಡು ಕೊಟ್ಟು ಪಾಸ್ ಖರೀದಿಸಿದವರಿಗೆ ಜಂಬೂ ಸವಾರಿ ವೀಕ್ಷಣೆಗೆ ಜಾಗವೇ ಇರುವುದಿಲ್ಲ ಎಂದರು. ಮಾಡಿದ್ದನ್ನೇ ಮಾಡುವ ಬದಲು ದಸರಾ ಮಹೋತ್ಸವ ವಿಭಿನ್ನತೆಯಿಂದ ಇರಲಿ ಎಂದು ಮಾಜಿ ಮೇಯರ್ ಮೋದಾಮಣಿ ಸಲಹೆ ನೀಡಿದರು.

ಮಾಜಿ ಮೇಯರ್ ಪುರುಷೋತ್ತಮ್ ಮಾತನಾಡಿ, ದಸರೆಗೆ ಬರುವವರಿಗೆ ವಾಹನ ಪಾರ್ಕಿಂಗ್ ದೊಡ್ಡ ಸಮಸ್ಯೆ. ಚಾಮುಂಡಿಬೆಟ್ಟದಲ್ಲಿ ಅಲ್ಲಿಯ ವ್ಯಾಪಾರ ಸ್ಥರಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕು. ನಿಮ್ಮ ಉಸ್ತುವಾರಿಯಲ್ಲಿ ಯಾವೊಂದು ಕಪ್ಪು ಚುಕ್ಕೆಯೂ ಆಗಬಾರದು. ಮಳೆಯಿಂದ ನಗರದ ಎಲ್ಲಾ ರಸ್ತೆಗಳು ಹಾಳಾಗಿವೆ. ಗುಣ ಮಟ್ಟವಿಲ್ಲದ ಡಾಂಬರು ಬಳಕೆಯಿಂದ ರಸ್ತೆ ಗಳು ಹಾಳಾಗುತ್ತಿವೆ. ಈ ಬಾರಿ ದಸರೆಗೆ ರಸ್ತೆಗಳ ದುರಸ್ತಿ ಕೈಗೊಂಡರೆ ಕನಿಷ್ಠ ಅವು 10 ವರ್ಷಗಳಾದರೂ ಬಾಳಿಕೆ ಬರುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ದಸರಾ ಜಂಬೂಸವಾರಿಯಲ್ಲಿ ಪಾಲಿಕೆ ಸದಸ್ಯರು ಯಾವುದೋ ಮೂಲೆಯಲ್ಲಿ ಕುಳಿತು ನೋವು ಅನುಭವಿಸುವುದು ಬೇಡ. ಅಧಿಕಾರಿಗಳು ಪಾಲಿಕೆ ಸದಸ್ಯರನ್ನು ಬಹಳ ತುಚ್ಛವಾಗಿ ಕಾಣುತ್ತಿದ್ದಾರೆ. ಇದು ತಪ್ಪ ಬೇಕು ಎಂದು ಮನವಿ ಮಾಡಿದರು.

ಮತ್ತೊಬ್ಬ ಮಾಜಿ ಮೇಯರ್ ಆರ್. ಲಿಂಗಪ್ಪ ಮಾತನಾಡಿ, ದಸರಾ ಮೆರ ವಣಿಗೆಯಲ್ಲಿ ಸದಾ ಗೊಂದಲವಿದ್ದೇ ಇರು ತ್ತದೆ. ಕೆಲವು ಕಾರ್ಯಕರ್ತರು ಮೆರವ ಣಿಗೆ ಮಧ್ಯೆ ನುಗ್ಗುವುದು, ಗೊಂದಲ ಆಗುವುದು ಆಗುತ್ತಿದೆ. ಪ್ರತಿಯೊಂದರ ಮಧ್ಯೆ ಕನಿಷ್ಠ 50 ಅಡಿ ಅಂತರ ಇರು ವಂತೆ ನೋಡಿಕೊಳ್ಳಬೇಕು ಎಂದರು.

ಮಾಜಿ ಮೇಯರ್ ಬಿ.ಎಲ್.ಭೈರಪ್ಪ ಅವರು, ದಸರಾ ಸಂದರ್ಭದಲ್ಲಿ ನಗರದೊಳಗೆ ಕಸ ವಿಲೇವಾರಿ ನಡೆಯುತ್ತದೆ. ಆದರೆ ರಿಂಗ್ ರಸ್ತೆ ಮತ್ತು ಹೊರವಲಯದಲ್ಲಿ ಕಸ ವಿಲೇ ವಾರಿ ಆಗುತ್ತಿಲ್ಲ. ನಗರದ ಹೊರವಲಯ ದಲ್ಲಿ ಕಸ ವಿಲೇವಾರಿ ಆಗಿ, ಆ ಭಾಗದ ಜನರೂ ಮನೆ ಮನೆ ದಸರಾ ನಡೆಯು ವಂತಾಗಬೇಕು. ಹೆಚ್ಚಿನ ಅನುದಾನ ಕೇವಲ ನಗರಕ್ಕಷ್ಟೇ ನೀಡದೆ ಹೊರ ವಲಯಕ್ಕೂ ನೀಡಬೇಕು ಎಂದರು. ಸಭೆಯಲ್ಲಿ ಶಾಸಕ ಎಲ್.ನಾಗೇಂದ್ರ, ಮಾಜಿ ಶಾಸಕ ತೋಂಟ ದಾರ್ಯ, ಮೇಯರ್ ಪುಷ್ಪಲತಾ ಜಗ ನ್ನಾಥ್, ಮಾಜಿ ಮೇಯರ್‍ಗಳಾದ ಸಂದೇಶ್ ಸ್ವಾಮಿ, ಭಾಗ್ಯವತಿ, ಅಯೂಬ್‍ಖಾನ್, ದಕ್ಷಿಣಾ ಮೂರ್ತಿ, ಬಿಜೆಪಿ ಮುಖಂಡ ಹೆಚ್.ವಿ. ರಾಜೀವ್, ಯಶಸ್ವಿನಿ ಸೋಮಶೇಖರ್ ಇನ್ನಿತರರು ಉಪಸ್ಥಿತರಿದ್ದರು.

Translate »