ದಸರಾ, ಪ್ರವಾಸಿ ತಾಣಗಳ ವ್ಯಾಪಕ ಪ್ರಚಾರಕ್ಕೆ ಅಧಿಕಾರಿಗಳಿಗೆ ಸಚಿವ ಸಿ.ಟಿ.ರವಿ ತಾಕೀತು
ಮೈಸೂರು

ದಸರಾ, ಪ್ರವಾಸಿ ತಾಣಗಳ ವ್ಯಾಪಕ ಪ್ರಚಾರಕ್ಕೆ ಅಧಿಕಾರಿಗಳಿಗೆ ಸಚಿವ ಸಿ.ಟಿ.ರವಿ ತಾಕೀತು

September 12, 2019

ಮೈಸೂರು, ಸೆ. 11(ಆರ್‍ಕೆ)- 2019ರ ದಸರಾ ಮಹೋತ್ಸವ ಮತ್ತು ಪ್ರವಾಸೀ ತಾಣಗಳ ಬಗ್ಗೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಪ್ರಚಾರ ಮಾಡಿ ಎಂದು ಪ್ರವಾ ಸೋದ್ಯಮ ಸಚಿವ ಸಿ.ಟಿ.ರವಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ದಸರಾ ಮಹೋತ್ಸವದ ಕಾರ್ಯಕ್ರಮಗಳು, ಪ್ರವಾಸಿ ತಾಣಗಳು, ಕಲ್ಪಿಸಿ ರುವ ಸೌಲಭ್ಯಗಳು, ಮಾರ್ಗದರ್ಶಿ ಗಳು, ಪ್ರವೇಶ ವೇಳಾಪಟ್ಟಿಗಳ ಬಗ್ಗೆ ವ್ಯಾಪಕ ಪ್ರಚಾರ ನೀಡಿ ಮೈಸೂರು ಸುತ್ತಮುತ್ತಲಿನ ಪ್ರವಾಸೋದ್ಯಮ ಅಭಿವೃದ್ಧಿಗೆ ಕಾರ್ಯ ಕ್ರಮ ರೂಪಿಸಿ ಎಂದೂ ಸಚಿವರು ಅಧಿಕಾರಿಗಳಿಗೆ ತಿಳಿಸಿದರು.

ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ರಮೇಶ್ ಅವರು ಮಾತ ನಾಡಿ, ರಾಜ್ಯ ಮತ್ತು ರಾಷ್ಟ್ರಮಟ್ಟದ ಮ್ಯಾಗ್‍ಜಿನ್‍ಗಳು, ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳು, ಇ- ಪೇಪರ್, ಸಾಮಾಜಿಕ ಜಾಲತಾಣಗಳು, ವೆಬ್‍ಸೈಟ್‍ಗಳಲ್ಲಿ ಜಾಹೀರಾತು ನೀಡುವುದು, ಬಸ್, ರೈಲು ಹಾಗೂ ವಿಮಾನ ನಿಲ್ದಾಣಗಳಲ್ಲಿ ಹೋರ್ಡಿಂಗ್ಸ್ ಹಾಕುವುದು, ಬಸ್ಸು-ರೈಲು ಬೋಗಿಗಳಲ್ಲಿ ಜಾಹೀರಾತು ಪೋಸ್ಟರ್ ಅಂಟಿಸಲು ತಾವು ಸಕಲ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದರು.

ಅಲ್ಪಾವಧಿ ಹಾಗೂ ದೀರ್ಘಾವಧಿಗೆ ಪ್ರವಾಸೋದ್ಯಮ ಅಭಿ ವೃದ್ಧಿಪಡಿಸಲು ಯೋಜನೆ ತಯಾರಿಸಿ ಈಗಿನಿಂದಲೇ ತಯಾರಿ ನಡೆಸುವಂತೆ ಸಚಿವ ಸಿ.ಟಿ.ರವಿ ಸಲಹೆ ನೀಡಿದ್ದು, ಟೆಂಡರ್ ಪ್ರಕ್ರಿಯೆಯನ್ನು ಪ್ರಾರಂಭಿಸಿ ಪಾರದರ್ಶಕವಾಗಿ ಕಾರ್ಯಕ್ರಮ ಅನುಷ್ಠಾನಗೊಳಿಸಿ ಎಂದು ಸೂಚನೆ ನೀಡಿದರು.

ಈ ಬಾರಿಯ ದಸರಾಗೆ ಮಾಡಿರುವ ಸಿದ್ಧತೆಗಳ ಬಗ್ಗೆ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಹೆಚ್. ಜನಾರ್ಧನ ಸಭೆಗೆ ಮಾಹಿತಿ ನೀಡಿ, ಸೆಪ್ಟೆಂಬರ್ 28ರಂದು ಬೆಂಗಳೂರಿನಿಂದ ವಿಂಟೇಜ್ ಕಾರ್ ರ್ಯಾಲಿ ಮೈಸೂರಿಗೆ ಬರಲಿದೆ, ಪಾರಂಪರಿಕ ಕ್ರೀಡೆ, ದೇಶೀ ಆಟ, ಚಿತ್ರ ಸಂತೆ, ಟ್ರೆಷರ್ ಹಂಟ್, ಆಟೋ ಟ್ರ್ಯಾಕ್, ಸಾಹಸ ಕ್ರೀಡೆ, ಗಾಳಿ ಪಟ ಸ್ಪರ್ಧೆ, 10 ಟೂರಿಸಂ ಸಕ್ರ್ಯೂಟ್‍ನಂತಹ ಹಲವು ಕಾರ್ಯ ಕ್ರಮಗಳನ್ನು ಆಯೋಜಿಸಲು ತಯಾರಿ ಮಾಡಿಕೊಂಡಿದ್ದೇವೆ ಎಂದರು. ಕಳೆದ ವರ್ಷದಂತೆ ಈ ಬಾರಿಯೂ ಬೆಂಗಳೂರು ಬಿಎಂಟಿಸಿಯಿಂದ ಒಂದು ಓಪನ್ ಬಸ್ ಪಡೆಯುವ ಜತೆಗೆ ಮೈಸೂರು ನಗರ ಘಟಕದಿಂದ 6 ಕೆಎಸ್‍ಆರ್‍ಟಿಸಿ ವೋಲ್ವೋ ಬಸ್ಸುಗಳನ್ನು ಬಾಡಿಗೆಗೆ ಪಡೆದು ದಸರಾ ವೇಳೆ ಸ್ಥಳೀಯ ಪ್ರವಾಸಿ ತಾಣಗಳಿಗೆ ಜನರನ್ನು ಕರೆದೊಯ್ಯುಲು ವ್ಯವಸ್ಥೆ ಮಾಡುತ್ತಿರುವುದÁಗಿ ಕೆಎಸ್‍ಟಿಡಿಸಿ ಎಂ.ಡಿ.ಕುಮಾರ್ ಪುಷ್ಕರ್ ಸಚಿವರಿಗೆ ಮಾಹಿತಿ ನೀಡಿದರು.

ಪ್ರವಾಸೋದ್ಯಮದ ಬಗ್ಗೆ 3ಡಿ ಮ್ಯಾಪಿಂಗ್ ಮಾಡಿಸಲು ಕಳೆದ ವರ್ಷ ದಸರಾ ವೇಳೆ 11 ನಿಮಿಷಕ್ಕೆ 50 ಲಕ್ಷ ರೂ. ಖರ್ಚಾ ಗಿತ್ತು ಎಂದು ಹೇಳಿದ ಪ್ರವಾಸೋದ್ಯಮ ಇಲಾಖೆ ಅಧಿಕಾರಿ ಗಳನ್ನು ತರಾಟೆಗೆ ತೆಗೆದುಕೊಂಡ ಸಚಿವ ಸಿ.ಟಿ.ರವಿ, 50 ಲಕ್ಷ ರೂ. ಕೊಟ್ಟರೆ ನಾನು 10 ನಿಮಿಷದ ಹಾಲಿವುಡ್ ಸಿನಿಮಾನೇ ತೆಗೆಸಿಕೊಡ್ತೀನಿ, ಸಾರ್ವಜನಿಕರ ತೆರಿಗೆ ಹಣವನ್ನು ಮನಸ್ಸೋ ಇಚ್ಛೆ ಖರ್ಚು ಮಾಡಬೇಡಿ ಎಂದು ತಾಕೀತು ಮಾಡಿದರು

Translate »