ಮೈಸೂರು ಜಿಲ್ಲಾ ದಸರಾ ತಾಲೂಕು ಮಟ್ಟದ ಕ್ರೀಡಾಕೂಟ
ಮೈಸೂರು

ಮೈಸೂರು ಜಿಲ್ಲಾ ದಸರಾ ತಾಲೂಕು ಮಟ್ಟದ ಕ್ರೀಡಾಕೂಟ

September 12, 2019

ಮೈಸೂರು, ಸೆ.11-ಯುವ ಸಬಲೀಕರÀಣ ಮತ್ತು ಕ್ರೀಡಾ ಇಲಾಖೆ ಮತ್ತು ಕರ್ನಾಟಕ ಕ್ರೀಡಾ ಪ್ರಾಧಿಕಾರ ಇವರ ಸಂಯಕ್ತಾಶ್ರಯದಲ್ಲಿ 2019-20ನೇ ಸಾಲಿನ ಮೈಸೂರು ಜಿಲ್ಲೆಯ ಹುಣಸೂರು, ಹೆಚ್.ಡಿ.ಕೋಟೆ, ಮೈಸೂರು, ನಂಜನ ಗೂಡು ಮತ್ತು ಟಿ.ನರಸೀಪುರ ತಾಲೂಕುಗಳಲ್ಲಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ಏರ್ಪ ಡಿಸಲಾಗಿದೆ. ಸೆ.14 ರಂದು ಹುಣಸೂರು ತಾಲೂಕಿನ ಗಾವಡಗೆರೆ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನಡೆಯಲಿದ್ದು, ಇದರ ಸಂಚಾಲಕರಾಗಿ ಲೋಕೇಶ್ ಬಿ. ಜಿಮ್ನಾಸ್ಟಿಕ್ ತರಬೇತು ದಾರರು-9449175644, ಗೋವಿಂದನಾಯಕ ಜಿ.ಕೆ-8197428751 ಇವರನ್ನು ನೇಮಿಸಲಾಗಿದೆ. ಸೆ.15 ರಂದು ಹೆಚ್.ಡಿ.ಕೋಟೆ ತಾಲೂಕಿನ ಚಾಮಹಳ್ಳಿ ಗ್ರಾಮದ ಸೆಂಟ್‍ಪಲ್ಸ್ ಸ್ಕೂಲ್‍ನಲ್ಲಿ ನಡೆಯಲಿದ್ದು, ಇದರಸಂಚಾಲಕರಾಗಿ ನರಸಿಂಹರಾಜು-9901349549 ಇವರನ್ನು ನೇಮಿಸಲಾಗಿದೆ. ಸೆ.16ರಂದು ಮೈಸೂರು ತಾಲೂಕಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಇದರ ಸಂಚಾಲಕರಾಗಿ ಬಾಲು ಬಿ. ಜಿಮ್ನಾಸ್ಟಿಕ್ ತರಬೇತುದಾರರು-9731934937 ಹಾಗೂ ಡಾ.ನವೀನ್‍ಕುಮಾರ್ ಸಿ.-9113948696 ಇವರನ್ನು ನೇಮಿಸಲಾಗಿದೆ. ಸೆ.18ರಂದು ನಂಜನಗೂಡು ತಾಲೂಕು ಕ್ರೀಡಾಂಗಣದಲ್ಲಿ ನಡೆಯಲಿದ್ದು, ಇದರ ಸಂಚಾಲಕರಾಗಿ ಬಾಲರಾಜು ಎಂ.ಪಿ. ಇವರನ್ನು ನೇಮಿಸಲಾಗಿದೆ. ಹಾಗೂ ಟಿ.ನರಸೀಪುರ ತಾಲೂಕಿನ ತುಂಬಲ ಗ್ರಾಮದ ನವಚೇತನ ಸ್ಪೋಟ್ರ್ಸ್ ಕ್ಲಬ್ ಆವರಣದಲ್ಲಿ ನಡೆಯಲಿದ್ದು, ಇದರ ಸಂಚಾಲಕರಾಗಿ ರೇವಣ್ಣ 9241416003 ಇವರನ್ನು ನೇಮಿಸಲಾಗಿದೆ.

ತಾಲೂಕು ಮಟ್ಟದಲ್ಲಿ ಆಯೋಜಿಸಲಾಗುತ್ತಿರುವ ಕ್ರೀಡೆಗಳ ವಿವರ ಇಂತಿದೆ: ಅಥ್ಲೆಟಿಕ್ಸ್ ಪುರುಷರು ಹಾಗೂ ಮಹಿಳೆಯರಿಗೆ 100 ಮೀ, 200 ಮೀ, 400 ಮೀ, 800 ಮೀ, 1500 ಮೀ, 5000 ಮೀ, ಓಟ, ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು ಎಸೆತ, ಟ್ರಿಪಲ್ ಜಂಪ್, ಜಾವಲಿನ್ ಥ್ರೋ, ಡಿಸ್ಕಸ್ ಥ್ರೋ, 110 ಮೀ. ಹರ್ಡಲ್ಸ್, 4ಘಿ100 ಮೀ. ರಿಲೇ, 4ಘಿ400 ಮೀ. ರಿಲೇ, ವಾಲಿಬಾಲ್, ಫುಟ್‍ಬಾಲ್, ಖೋ-ಖೋ ಹಾಗೂ ಕಬಡ್ಡಿ ಪಂದ್ಯಗಳನ್ನು ಆಯೋಜಿಸಲಾಗಿದೆ. ದಸರಾ ಕ್ರೀಡಾ ಉಪಸಮಿತಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Translate »