ವೈದ್ಯರೇ ಆಡಳಿತದಲ್ಲಿದ್ದರೆ ವೈದ್ಯಕೀಯ ಕ್ಷೇತ್ರ ಅಭಿವೃದ್ಧಿ
ಮೈಸೂರು

ವೈದ್ಯರೇ ಆಡಳಿತದಲ್ಲಿದ್ದರೆ ವೈದ್ಯಕೀಯ ಕ್ಷೇತ್ರ ಅಭಿವೃದ್ಧಿ

December 17, 2019

ಮೈಸೂರು, ಡಿ.16(ಎಂಕೆ)- ವೈದ್ಯಕೀಯ ಕ್ಷೇತ್ರದ ಸಮಸ್ಯೆಗಳಿಗೆ ಡಾಕ್ಟರ್‍ಗಳು ಕಾರಣರಲ್ಲ. ಆಡಳಿತ ವ್ಯವಸ್ಥೆ ಉತ್ತಮವಾಗಿದ್ದರೆ ಎಲ್ಲವೂ ಸರಿಯಾಗಿರುತ್ತದೆ ಎಂದು ಬೆಂಗಳೂರು ಅಪರಾಧ ಮತ್ತು ತಾಂತ್ರಿಕ ವಿಭಾಗದ ಎಡಿಜಿಪಿ ಡಾ.ಎಸ್.ಪರಮ ಶಿವಮೂರ್ತಿ ಅಭಿಪ್ರಾಯಪಟ್ಟರು.

ಇಲ್ಲಿನ ಜೆ.ಕೆ.ಮೈದಾನದಲ್ಲಿರುವ ಅಮೃತ ಮಹೋತ್ಸವ ಸಭಾಂ ಗಣದಲ್ಲಿ ಮೈಸೂರು ವೈದ್ಯಕೀಯ ಅಲುಮ್ನಿ ಅಸೋಸಿಯೇಷನ್ ಆಯೋಜಿಸಿದ್ದ ‘ಮಾ ಉತ್ಸವ-2019’ ಉದ್ಘಾಟಿಸಿ ಮಾತನಾಡಿದರು.ಎಲ್ಲಾ ದೇಶದಲ್ಲೂ ಬದಲಾವಣೆಯಾಗುತ್ತಿದೆ. ಆದರೆ ನಮ್ಮಲ್ಲಿ ಮಾತ್ರ ಬದಲಾವಣೆಯ ಗಾಳಿಯೂ ಬೀಸುತ್ತಿಲ್ಲ. ಆಯಾ ಕ್ಷೇತ್ರದ ಲ್ಲಿನ ಪರಿಣತರು ಆಡಳಿತ ನಡೆಸುವ ಸ್ಥಾನದಲ್ಲಿ ಕೂರುವಂತಾ ದಾಗ ಬದಲಾವಣೆ ಸಾಧ್ಯವಾಗುತ್ತದೆ. ವೈದ್ಯಕೀಯ ಕ್ಷೇತ್ರದಲ್ಲಿ ವೈದ್ಯರೇ ಆಡಳಿತ ನಡೆಸಿದರೆ, ಅಭಿವೃದ್ಧಿಯಾಗುತ್ತದೆ ಎಂದರು.

ಇದೇ ವೇಳೆ ಹಿರಿಯ ವೈದ್ಯರಾದ ಡಾ.ಟಿ.ಬಾಲಕೃಷ್ಣ ಅಚಾರ್, ಡಾ.ಎನ್.ಕೆ.ಭಗವಾನ್, ಡಾ.ಎಸ್.ಚಂದ್ರಶೇಖರ್ ಶೆಟ್ಟಿ, ಡಾ.ಬ್ರಿಜ್ ಮೋಹನ್‍ಕುಮಾರ್, ಡಾ.ದೇವಕುಮಾರ್ ಇಂದ್ರ, ಡಾ.ಪಿ.ಎಲ್. ಗಂಗಾಧರ್, ಡಾ.ಕಾಳ ಬೋರಯ್ಯ, ಡಾ.ಕೀರ್ತಿಕುಮಾರ್, ಡಾ. ಕಮಲಮ್ಮ, ಡಾ.ಕೆ.ನಾಗರಾಜು, ಡಾ.ಎನ್.ಡಿ.ಮುಕುಂದ, ಡಾ.ಬಿ.ಎನ್. ಪ್ರಕಾಶ್, ಡಾ.ಪಾಂಡುರಂಗೇಗೌಡ, ಡಾ.ಪ್ರಮೀಳ, ಡಾ.ಎಂ. ಪಶುಪತಿ, ಡಾ.ಟಿ.ಎ.ರಾಮಾನುಜಾಚಾರ್, ಡಾ.ಟಿ.ಎಂ.ಶಂಕರ್, ಡಾ.ಪಿ.ಸುರೇಶ್, ಡಾ.ಪಿ.ಕೆ.ಉತ್ತಪ್ಪ ಮತ್ತು ಡಾ.ಕೆ.ಎಂ.ಶ್ರೀನಿವಾಸÀ ಮೂರ್ತಿ ಅವರನ್ನು ಸನ್ಮಾನಿಸಲಾಯಿತು. ಬಳಿಕ ಸಾಂಸ್ಕøತಿಕ ಕಾರ್ಯ ಕ್ರಮದಲ್ಲಿ ವೈದ್ಯರು ಕನ್ನಡ, ಹಿಂದಿ ಚಿತ್ರಗೀತೆಗಳನ್ನು ಹಾಡಿ ರಂಜಿಸಿ ದರು. ವೇದಿಕೆಯಲ್ಲಿ ಆದಿಚುಂಚನಗಿರಿ ವಿವಿ ಕುಲಪತಿ ಡಾ.ಎಸ್. ಚಂದ್ರಶೇಖರ್ ಶೆಟ್ಟಿ, ಎಂಎಂಸಿ ಮತ್ತು ಆರ್‍ಐನ ಡೀನ್ ಡಾ.ಸಿ.ಪಿ. ನಾಗರಾಜು, ಪ್ರಾಂಶುಪಾಲರಾದ ಡಾ.ಕೆ.ಆರ್.ದಾಕ್ಷಾಯಿಣಿ, ಮಾ ಅಧ್ಯಕ್ಷ ಡಾ.ಎಂ.ಶ್ರೀನಿವಾಸ, ಡಾ.ಎಂ.ಎ.ಶೇಖರ್, ಡಾ.ಮಹ ದೇವಪ್ಪ, ಡಾ.ಎಂ.ಬ್ರಹ್ಮೇಂದ್ರ, ಡಾ.ಎಸ್.ಚಂದ್ರಶೇಖರ್ ಉಪಸ್ಥಿತರಿದ್ದರು

Translate »