ರಾಜಮಾರ್ಗದ ಕಲ್ಲಿನ ಬ್ಯಾರಿಕೇಡ್ ಕಳಚಿಬಿದ್ದು ವ್ಯಕ್ತಿಗೆ ಗಾಯ:  ಅಂದಗೆಟ್ಟು ಅನಾಹುತಕ್ಕೆ ಆಸ್ಪದ ಮಾಡಿಕೊಡುತ್ತಿದೆ ರಾಜಬೀದಿ
ಮೈಸೂರು

ರಾಜಮಾರ್ಗದ ಕಲ್ಲಿನ ಬ್ಯಾರಿಕೇಡ್ ಕಳಚಿಬಿದ್ದು ವ್ಯಕ್ತಿಗೆ ಗಾಯ: ಅಂದಗೆಟ್ಟು ಅನಾಹುತಕ್ಕೆ ಆಸ್ಪದ ಮಾಡಿಕೊಡುತ್ತಿದೆ ರಾಜಬೀದಿ

December 17, 2019

ಮೈಸೂರು, ಡಿ.16(ಎಸ್‍ಬಿಡಿ)- ಮೈಸೂರಿನ ರಾಜಮಾರ್ಗದ ಕಲ್ಲಿನ ಬ್ಯಾರಿಕೇಡ್ ಕಳಚಿ ಬಿದ್ದು, ವ್ಯಕ್ತಿಯೊಬ್ಬರು ಗಾಯಗೊಂಡಿರುವ ಘಟನೆ ಸೋಮ ವಾರ ಸಂಜೆ ನಡೆದಿದೆ.

ಗುಂಡ್ಲುಪೇಟೆ ನಿವಾಸಿ ಮಹದೇವು ಗಾಯಗೊಂಡವರು. ಪಾನಿಪುರಿ ವ್ಯಾಪಾರಿ ಯಾಗಿರುವ ಇವರು, ಅಗತ್ಯ ವಸ್ತುಗಳ ಕೊಳ್ಳಲು ಸೋಮವಾರ ಮೈಸೂರಿಗೆ ಬಂದಿ ದ್ದರು. ಕೆ.ಆರ್.ವೃತ್ತದ ಸಮೀಪ ತಾತಯ್ಯ ಉದ್ಯಾನದ ಬಳಿ ವ್ಯಕ್ತಿಯೊಬ್ಬರು ಕಲ್ಲಿನ ಬ್ಯಾರಿಕೇಡ್ ಹಿಡಿದುಕೊಳ್ಳುತ್ತಿದ್ದಂತೆ ಅಲಂಕಾರಿಕ ಕಂಬಗಳು ಕಳಚಿ ಬಿದ್ದು, ತುಂಡಾಗಿವೆ. ಈ ವೇಳೆ ಕಳಚಿದ ಕಂಬ ವೊಂದು ಪಕ್ಕದಲ್ಲೇ ನಡೆದು ಹೋಗುತ್ತಿದ್ದ ಮಹದೇವು ಅವರ ಕೈಗೆ ತಗುಲಿ, ಗಾಯ ಗೊಂಡಿದ್ದಾರೆ. ತಕ್ಷಣ ಹಿಂದಕ್ಕೆ ಸರಿದಿದ್ದ ರಿಂದ ಹೆಚ್ಚಿನ ಅಪಾಯದಿಂದ ಪಾರಾಗಿದ್ದಾರೆ.

ಯಾರೋ ಒಬ್ಬರು ಮುಟ್ಟಿದ್ದಕ್ಕೆ ಆರೇಳು ಕಂಬಗಳು ಹಾಗೂ ಮೇಲ್ಬಾಗದ ಇಂಟರ್ ಲಾಕ್ ಒಟ್ಟಿಗೆ ಕಳಚಿಬಿದ್ದವು. ವಿವಿಧ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಸಿಟಿ ಬಸ್ ನಿಲ್ದಾಣಕ್ಕೆ ಹೋಗಲು ಇದೇ ಸ್ಥಳದಲ್ಲಿ ರಸ್ತೆ ದಾಟು ತ್ತಾರೆ. ಸದ್ಯ ಘಟನೆ ಸಂಭವಿಸಿದಾಗ ಹೆಚ್ಚು ಜನ ಇರಲಿಲ್ಲ. ಮಕ್ಕಳು, ವೃದ್ಧರ ಕೈ-ಕಾಲುಗಳ ಮೇಲೆ ಈ ಕಲ್ಲಿನ ಕಂಬಗಳು ಬಿದ್ದರೆ ಮೂಳೆ ಮುರಿಯು ತ್ತದೆ. ಸಂಬಂಧಪಟ್ಟ ವರು ಈ ಬಗ್ಗೆ ಎಚ್ಚ ರಿಕೆ ವಹಿ ಸಬೇಕೆಂದು ಗಾಯಾಳು ಮಹದೇವು ಮನವಿ ಮಾಡಿದರು.

`ರಾಜಮಾರ್ಗ’ಕ್ಕೆ ಅಪಮಾನ: ಅರಮನೆ ಸುತ್ತಲಿನ ಹಾಗೂ ಜಂಬೂಸವಾರಿ ಸಾಗುವ ರಸ್ತೆಯನ್ನು `ರಾಜಮಾರ್ಗ’ ಎಂದು ಕರೆದು, ಅಭಿವೃದ್ಧಿಪಡಿಸಿದರು. ಆದರೆ ಕಾಮಗಾರಿ ಜೊತೆಗೆ ಆರಂಭ ವಾದ ಸಮಸ್ಯೆಗಳು ಇಂದಿಗೂ ಮುಗಿ ದಿಲ್ಲ. ರಸ್ತೆ ಇಕ್ಕೆಲಗಳಲ್ಲಿ ಫುಟ್‍ಪಾತ್‍ಗೆ ಅಳವಡಿಸಿರುವ ಕಲ್ಲಿನ ಬ್ಯಾರಿಕೇಡ್ ಆಗಾಗ್ಗೆ ಕಳಚಿ ಬಿದ್ದು, ಪುಡಿಯಾಗುತ್ತಿವೆ. ಅದನ್ನೆಲ್ಲಾ ಪಾಲಿಕೆಯವರು ತೆಗೆದು ಕೊಂಡು ಹೋಗಿ, ಒಂದೆಡೆ ಗುಡ್ಡೆ ಹಾಕುತ್ತಿದ್ದಾರೆ. ಸರಿಪಡಿಸುವ ಪ್ರಯತ್ನ ವನ್ನು ಮಾತ್ರ ಮಾಡುತ್ತಿಲ್ಲ.

ಬ್ಯಾರಿಕೇಡ್‍ನ ಅಲಂಕಾರಿಕ ಕಲ್ಲು ಕಂಬಗಳು ಅಲ್ಲಲ್ಲೇ ಕಳಚಿರುವುದರಿಂದ ಅಸಹ್ಯವಾಗಿ ಕಾಣುತ್ತದೆ. ಇದರಿಂದ `ರಾಜಮಾರ್ಗ’ ಎಂಬ ಹೆಸರಿಗೂ ಅಪ ಮಾನವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣನವರು ರಾಜಮಾರ್ಗದಲ್ಲಿ ಪಾದಯಾತ್ರೆ ನಡೆಸಿ, ಸಮಸ್ಯೆಗಳನ್ನು ಕಣ್ಣಾರೆ ಕಂಡು, ಸರಿಪಡಿಸಲು ಅಧಿಕಾರಿ ಗಳಿಗೆ ಗಡುವು ನೀಡಿದ್ದರು. ಅದಾಗಿ 3 ತಿಂಗಳೇ ಕಳೆಯಿತು. ಯಾವ ಬದಲಾ ವಣೆಯೂ ಇಲ್ಲ. ಕಲ್ಲಿನ ಬ್ಯಾರಿಕೇಡ್ ಭದ್ರವಾಗಿಲ್ಲ. ಯಾವಾಗಲಾದರೂ ಕಳಚಿ, ಪಾದಚಾರಿಗಳು ಹಾಗೂ ದ್ವಿಚಕ್ರ ವಾಹನ ಸವಾರರಿಗೆ ಸಂಚಕಾರವಾಗಬಹುದು. ಆದರೆ ಪಾಲಿಕೆ ಅಧಿಕಾರಿಗಳು ಬಹಳ ಹಗುರವಾಗಿ ಪರಿಗಣಿಸಿದ್ದಾರೆ. ಕಳಚಿರುವ ಸ್ಥಳಗಳಲ್ಲಿ ಅದೇ ಮಾದರಿ ಕಂಬಗಳನ್ನು ಅಳವಡಿಸುವ ಹಾಗೂ ಕಳಚುವ ಸ್ಥಿತಿ ಯಲ್ಲಿರುವ ಕಂಬಗಳನ್ನು ಭದ್ರಗೊಳಿಸುವ ಕೆಲಸ ಮಾಡುತ್ತಿಲ್ಲ. ಇದು ಸಾಧ್ಯವಾಗು ವುದೇ ಇಲ್ಲ ಎಂದಾದರೆ ರಸ್ತೆಗೆ ಅವ ಲಕ್ಷಣವಾಗದಂತೆ ಪರ್ಯಾಯ ಕ್ರಮ ಕ್ಕಾದರೂ ಮುಂದಾಗಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Translate »